ಆಪಲ್‌ ಸಂಸ್ಥೆಯಿಂದ ಆಪಲ್ ವಾಚ್ ಸರಣಿ 6 ಬಿಡುಗಡೆ!..ಆಕರ್ಷಕ ವಿನ್ಯಾಸ!

|

ಆಪಲ್‌ ಸಂಸ್ಥೆ ತನ್ನ ವರ್ಚುವಲ್ "ಟೈಮ್ ಫ್ಲೈಸ್" ಕಾರ್ಯಕ್ರಮದಲ್ಲಿ ಆಪಲ್‌ ವಾಚ್‌ ಸರಣಿ 6, ಆಪಲ್‌ ವಾಚ್‌ SE, ಆಪಲ್‌ ಒನ್‌ ಚಂದಾದಾರಿಕೆ ಸೇವೆಯನ್ನು ಲಾಂಚ್‌ ಮಾಡಿದೆ. ಇನ್ನು ಆಪಲ್‌ ಬಿಡುಗಡೆ ಮಾಡಿರುವ ಈ ಪ್ರಾಡಕ್ಟ್‌ಗಳಲ್ಲಿ ಆಪಲ್‌ ವಾಚ್‌ ಸರಣಿ 6 ಸಾಕಷ್ಟು ವಿಶೇಷತೆಯನ್ನು ಹೊಂದಿದೆ. ಈ ಸರಣಿಯ ಸ್ಮಾರ್ಟ್‌ವಾಚ್‌ ಆಪಲ್ ವಾಚ್ ಸರಣಿ 4 ಮತ್ತು ಸರಣಿ 5 ಮಾದರಿಗಳಿಗೆ ಹೋಲುತ್ತದೆ. ಆದಾಗ್ಯೂ, ಆಪಲ್‌ ಸಂಸ್ಥೆಯ ಪ್ರಕಾರ, ಈ ಸ್ಮಾರ್ಟ್‌ವಾಚ್‌ ವೇಗವಾದ ಕಾರ್ಯಕ್ಷಮತೆ, ಉತ್ತಮ ವಾಟರ್‌ಪ್ರೂಪ್‌ ಮತ್ತು ಅತ್ಯುತ್ತಮವಾದ ವಾಯರ್‌ಲೆಸ್‌ ಕನೆಕ್ಟಿವಿಟಿಯನ್ನು ಇದು ಹೊಂದಿದೆ ಎನ್ನಲಾಗಿದೆ.

ಆಪಲ್‌

ಹೌದು, ಆಪಲ್‌ ಸಂಸ್ಥೆ ಬಿಡುಗಡೆ ಮಾಡಿರುವ ಆಪಲ್‌ ವಾಚ್‌ ಸರಣಿ 6 ಹೊಸ ಮಾದರಿಯ ವಿನ್ಯಾಸವನ್ನು ಹೊಂದಿದೆ. ಇನ್ನು ಈ ಆಪಲ್ ವಾಚ್ ಸರಣಿ 6 ರಕ್ತದ ಆಮ್ಲಜನಕದ ಮಟ್ಟವನ್ನು ಅಳೆಯುವ ಸಾಲಿನಲ್ಲಿ ಅತ್ಯುತ್ತಮ ಗುಣಮಟ್ಟದ ಟೆಕ್ನಾಲಜಿಯನ್ನು ಹೊಂದಿದೆ ಎನ್ನಲಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್‌ 40MM ಮತ್ತು 44MM ಕೇಸ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನುಳಿದಂತೆ ಈ ವಾಚ್‌ ಸರಣಿಯ ವಿಶೇತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್ ವಾಚ್ ಸರಣಿ 6

ಆಪಲ್ ವಾಚ್ ಸರಣಿ 6

ಆಪಲ್ ವಾಚ್ ಸರಣಿ 6 ಅತ್ಯುತ್ತಮ ವಿನ್ಯಾಸವನ್ನು ಹೊಂದಿದ್ದು, ಇದು ಆಲ್ವೇಸ್‌ ಆನ್ ಆಗಿರುವ ರೆಟಿನಾ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 60Hz ರಿಫ್ರೆಶ್ ರೇಟ್‌ಅನ್ನು ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇಯು1,000 ನಿಟ್‌ಗಳ ಗರಿಷ್ಠ ಬ್ರೈಟ್‌ ನೆಶ್‌ ಅನ್ನು ಹೊಂದಿದೆ ಎಂದು ಹೇಳಲಾಗ್ತಿದೆ. ಇದರಲ್ಲಿ 40mm ಮಾದರಿಯ ಆಪಲ್ ವಾಚ್ ಸರಣಿ 6 324x394 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಹೊಂದಿದೆ. ಆದರೆ 44mm ಮಾದರಿಯ ವಾಚ್‌ 368x448 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಹೊಂದಿದೆ.

ಸ್ಮಾರ್ಟ್‌ವಾಚ್‌

ಇನ್ನು ಈ ಸ್ಮಾರ್ಟ್‌ವಾಚ್‌ ಸೆರಾಮಿಕ್ ಮತ್ತು sapphire crystal back finish ಹೊಂದಿದ್ದು, ಮತ್ತು ಅಲ್ಯೂಮಿನಿಯಂ, ಸ್ಟೇನ್ಲೆಸ್ ಸ್ಟೀಲ್, ಟೈಟಾನಿಯಂ ಮತ್ತು ಸೆರಾಮಿಕ್ materials ಅನ್ನು ಹೊಂದಿವೆ. ಅಲ್ಲದೆ ಈ ಸ್ಮಾರ್ಟ್ ವಾಚ್ ಹೊಸ ಆಪಲ್ S6CP (ಸಿಸ್ಟಮ್ ಇನ್ ಪ್ಯಾಕೇಜ್) ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಆಪಲ್ ವಾಚ್ ಸರಣಿ 5 ನಲ್ಲಿ ಲಭ್ಯವಿರುವ S5 ಪ್ರೊಸೆಸರ್‌ಗಿಂತ ಎರಡು ಪಟ್ಟು ವೇಗವಾಗಿರುತ್ತದೆ ಎಂದು ಹೇಳಲಾಗಿದೆ. ಇದಲ್ಲದೆ, ಈ ವಾಚ್‌ ಸರಣಿ 6ಯಲ್ಲಿ ಅಲ್ಟ್ರಾ-ವೈಡ್‌ಬ್ಯಾಂಡ್ ಟೆಕ್ನಾಲಜಿ ಮತ್ತು ಯು 1 ಚಿಪ್‌ನೊಂದಿಗೆ ಬಂದಿದ್ದು, ರೇಡಿಯೊ ತರಂಗಗಳನ್ನು ಕಡಿಮೆ ವ್ಯಾಪ್ತಿಯಲ್ಲಿ ಬಳಸಿಕೊಂಡು ಸಂಪರ್ಕವನ್ನು ಶಕ್ತಗೊಳಿಸುತ್ತದೆ.

ಸ್ಮಾರ್ಟ್‌ವಾಚ್‌

ಇದಲ್ಲದೆ ಈ ಸ್ಮಾರ್ಟ್‌ವಾಚ್‌ ಆರೋಗ್ಯ ಮತ್ತು ಕ್ಷೇಮ ಟ್ರ್ಯಾಕಿಂಗ್ ವಿಷಯದಲ್ಲಿ ಸಾಕಷ್ಟು ಆಪ್ಡೇಟ್‌ ಆಗಿದೆ. ಇದು ಬಳಕೆದಾರರಿಗೆ ತಮ್ಮ ರಕ್ತದ ಆಮ್ಲಜನಕದ ಶುದ್ಧತೆಯ ಮಟ್ಟವನ್ನು ಅಳೆಯಲು ಅನುವು ಮಾಡಿಕೊಡುತ್ತದೆ. ಅಲ್ಲದೆ ರಕ್ತದ ಬಣ್ಣವನ್ನು ಕಂಡುಹಿಡಿಯಲು ಅತಿಗೆಂಪು ಬೆಳಕು ಮತ್ತು ಫೋಟೊಡಿಯೋಡ್‌ಗಳನ್ನು ಬಳಸುವ ಹೊಸ ಹೆಲ್ತ್‌ ಸೆನ್ಸಾರ್‌ ಅನ್ನು ಸಹ ಇದು ಒಳಗೊಂಡಿದೆ. ಬಳಕೆದಾರರ ರಕ್ತದಲ್ಲಿ ಆಮ್ಲಜನಕದ ಮಟ್ಟವು 95 ರಿಂದ 100% ಉಲ್ಲೇಖದ ಅಂಕಿ-ಅಂಶಕ್ಕಿಂತ ಕಡಿಮೆಯಾದರೆ ಬಳಕೆದಾರರಿಗೆ ಆಲರ್ಟ್‌ ಮೇಸೆಜ್‌ ಬರಲಿದೆ. ಜೊತೆಗೆ ಇದರಲ್ಲಿ ಎಲೆಕ್ಟ್ರಿಕಲ್ ಹಾರ್ಟ್ ಸೆನ್ಸಾರ್ ಅನ್ನು ಸಹ ನೀಡಲಾಗಿದೆ.

ಆಪಲ್

ಇನ್ನು ಆಪಲ್ ವಾಚ್ ಸರಣಿ 6 mental health tracking ಫೀಚರ್ಸ್‌ ಅನ್ನು ಒಳಗೊಂಡಿದೆ.ಇದರ ಮೂಲಕ ಬಳಕೆದಾರರ ಪ್ಯಾನಿಕ್ ಅಟ್ಯಾಕ್ ಮತ್ತು ಹೆಚ್ಚಿನ ಮಟ್ಟದ ಒತ್ತಡವನ್ನು ಪತ್ತೆ ಮಾಡುತ್ತದೆ. ನಿಮ್ಮ ಒತ್ತಡದ ಮಟ್ಟವನ್ನು ನಿಯಂತ್ರಿಸಲು ಇದು ನಿಯಮಿತವಾಗಿ ಉಸಿರಾಟದ ವ್ಯಾಯಾಮವನ್ನು ಸಹ ನೀಡುತ್ತದೆ. ಇದಲ್ಲದೆ, ವಾಚ್‌ಓಎಸ್ 7 ಮೂಲಕ ಲಭ್ಯವಿರುವ ಅಕ್ಸೆಲೆರೊಮೀಟರ್ ಡೇಟಾ ಮತ್ತು ಸಾಫ್ಟ್‌ವೇರ್ ಟ್ವೀಕ್‌ಗಳ ಸಂಯೋಜನೆಯನ್ನು ಬಳಸಿಕೊಂಡು ಸ್ಮಾರ್ಟ್ ವಾಚ್ ಸ್ಲೀಪ್ ಟ್ರ್ಯಾಕಿಂಗ್ ನೀಡುತ್ತದೆ. ಜೊತೆಗೆ ಆಪಲ್ ವಾಚ್ ಸರಣಿ 6 18 ಗಂಟೆಗಳ ಬ್ಯಾಟರಿ ಅವಧಿಯನ್ನು ಒದಗಿಸುತ್ತದೆ ಎಂದು ಆಪಲ್ ಹೇಳಿಕೊಂಡಿದೆ.

ಆಪಲ್ ವಾಚ್

ಸದ್ಯ ಭಾರತದಲ್ಲಿ ಆಪಲ್ ವಾಚ್ ಸರಣಿ 6 ಇನ್ನು ಬಿಡುಗಡೆ ಆಗಿಲ್ಲ. ಆದರೆ ಆಪಲ್ ವಾಚ್ ಸರಣಿ 6 (ಜಿಪಿಎಸ್ + ಸೆಲ್ಯುಲಾರ್) ಆಯ್ಕೆಯು ರೂ. 49,900 ರೂ.ಗಳಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಇನ್ನು ಯುಎಸ್‌ನಲ್ಲಿ, ಆಪಲ್ ವಾಚ್ ಸರಣಿ 6 (GPS) ಬೆಲೆ $399 ಆಗಿದೆ. ಇನ್ನುಆಪಲ್ ವಾಚ್ ಸರಣಿ 6 (ಜಿಪಿಎಸ್ + ಸೆಲ್ಯುಲಾರ್) $ 499 (ಸುಮಾರು ರೂ. 36,700) ಬೆಲೆಯನ್ನು ಹೊಂದಿದೆ. ಸದ್ಯ ಆಪಲ್ ವಾಚ್ ಸರಣಿ 6 ಗೋಲ್ಡ್, ಸಿಲ್ವರ್ ಅಂಡ್ ಸ್ಪೇಸ್ ಗ್ರೇ, ನ್ಯೂ ಸ್ಟೇನ್ಲೆಸ್ ಸ್ಟೀಲ್ ಗ್ರ್ಯಾಫೈಟ್ ಮಾಡೆಲ್ ಬಣ್ಣಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Apple Watch Series 6 has been unveiled by Apple at its virtual “Time Flies” event.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X