ಆಪಲ್‌ ವಾಚ್ ಸೀರಿಸ್‌ 6, ವಾಚ್SE, ಆಪಲ್‌ ಐಪ್ಯಾಡ್‌, ಆಪಲ್‌ ಒನ್‌ ಲಾಂಚ್‌!

|

ಜಾಗತಿಕ ಮಾರುಕಟ್ಟೆಯಲ್ಲಿ ಮುಂಚೂಣಿ ಬ್ರಾಂಡ್‌ ಆಗಿರುವ ಆಪಲ್‌ ಕಂಪೆನಿ WWC2020 ನಂತರ ಈ ವರ್ಷ ಆಪಲ್ ತನ್ನ ಎರಡನೇ ಸುತ್ತಿನ ಪ್ರಾಡಕ್ಟ್‌ ಲಾಂಚ್‌ ಮಾಡಿದೆ. ಪ್ರತಿ ಸೆಪ್ಟೆಂಬರ್‌ನಲ್ಲಿ anual affair event ಆಪಲ್ ಈವೆಂಟ್ ನಲ್ಲಿ ಆಪಲ್ ವಾಚ್ ಸರಣಿ 6, ಆಪಲ್ ವಾಚ್ SE, ಐಪ್ಯಾಡ್ 8th gen ಮತ್ತು ಐಪ್ಯಾಡ್ ಏರ್ (2020) ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ಆಪಲ್‌ ಸಂಸ್ಥೆ ತನ್ನ ಆಪಲ್ ಒನ್ ಚಂದಾದಾರಿಕೆ ಬಂಡಲ್ ಸೇವೆಯನ್ನು ಅನಾವರಣಗೊಳಿಸಿದೆ.

ಆಪಲ್‌

ಹೌದು, ಆಪಲ್‌ ಸಂಸ್ಥೆ ತನ್ನ Anual affaire event ನಲ್ಲಿ ತನ್ನ ಹೊಸ ಉತ್ಪನ್ನಗಳನ್ನ ಬಿಡುಗಡೆ ಮಾಡಿದೆ. ಗುಣಮಟ್ಟದ ಹಾಗೂ ಹೊಸ ಮಾದರಿಯ ಟೆಕ್ನಾಲಜಿಗೆ ಹೆಸರುವಾಸಿಯಾದ ಆಪಲ್‌ ಸಂಸ್ಥೆ ಈ ಬಾರಿ ಆಪಲ್ ವಾಚ್ ಸರಣಿ 6, ಆಪಲ್ ವಾಚ್ SE, ಐಪ್ಯಾಡ್ 8th gen ಮತ್ತು ಐಪ್ಯಾಡ್ ಏರ್ (2020) ಅನ್ನು ಪರಿಚಯಿಸಿದೆ. ಹಾಗಾದ್ರೆ ಆಪಲ್‌ ಸಂಸ್ಥೆ ಬಿಡುಗಡೆ ಮಾಡಿರುವ ಈ ಹೊಸ ಪ್ರಾಡಕ್ಟ್‌ಗಳ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್ ಐಪ್ಯಾಡ್ ಏರ್(2020)

ಆಪಲ್ ಐಪ್ಯಾಡ್ ಏರ್(2020)

ಆಪಲ್‌ ಸಂಸ್ಥೆ ಹೊಸದಾಗಿ ಪರಿಯಚಿಸಿರುವ ಆಪಲ್‌ ಐಪ್ಯಾಡ್‌ ಏರ್‌ $599 ಬೆಲೆಯನ್ನು ಹೊಂದಿದೆ. ಇನ್ನು ಈ ಐಪ್ಯಾಡ್‌ 10.9-ಇಂಚಿನ ಲಿಕ್ವಿಡ್ ರೆಟಿನಾ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಐಪ್ಯಾಡ್‌ 7 ಮೆಗಾಪಿಕ್ಸೆಲ್ ಫೇಸ್‌ಟೈಮ್ ಕ್ಯಾಮೆರಾ ಮತ್ತು 12 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ ಇದು 5nm ಟೆಕ್ ಆಧಾರಿತ ಕಂಪನಿಯ A14 ಬಯೋನಿಕ್ ಪ್ರೊಸೆಸರ್ ಅನ್ನು ಒಳಗೊಂಡಿದೆ. ಜೊತೆಗೆ ಜನ್ ಟಚ್‌ಐಡಿಯನ್ನು ಸಹ ಹೊಂದಿದೆ.

8 ನೇ ತಲೆಮಾರಿನ ಆಪಲ್ ಐಪ್ಯಾಡ್

8 ನೇ ತಲೆಮಾರಿನ ಆಪಲ್ ಐಪ್ಯಾಡ್

ಇನ್ನು 8ನೇ ತಲೆಮಾರಿನ ಆಪಲ್‌ ಐಪ್ಯಾಡ್‌ ಇದು 10.2 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಆಪಲ್ ಪೆನ್ಸಿಲ್ ಅನ್ನು ಬೆಂಬಲಿಸುವುದರ ಜೊತೆಗೆ, ಟ್ಯಾಬ್ಲೆಟ್ A12 ಬಯೋನಿಕ್ ಚಿಪ್‌ಸೆಟ್‌ನಿಂದ ಪ್ರೊಸೆಸರ್‌ ಅನ್ನು ಹೊಂದಿದೆ. ಇನ್ನು ಈ ಐಪ್ಯಾಡ್‌ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ರಿಯರ್‌ ಕ್ಯಾಮೆರಾ. 1.2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಐಪ್ಯಾಡ್‌ ಸಿಲ್ವರ್, ಸ್ಪೇಸ್ ಗ್ರೇ ಮತ್ತು ಗೋಲ್ಡ್ ಬಣ್ಣದಲ್ಲಿ ಲಭ್ಯವಾಗಲಿದೆ. ಅಲ್ಲದೆ ಈ ಟ್ಯಾಬ್ಲೆಟ್ ಡಿಸ್‌ಪ್ಲೇ ಕೆಳಗೆ ಟಚ್‌ಐಡಿ ಬಟನ್ ಹೊಂದಿದ್ದು 32GB RAM ಅಥವಾ 128GB ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಾಗಲಿದೆ.

ಆಪಲ್ ವಾಚ್ SE ಮತ್ತು ವಾಚ್ ಸಿರೀಸ್‌6

ಆಪಲ್ ವಾಚ್ SE ಮತ್ತು ವಾಚ್ ಸಿರೀಸ್‌6

ಇನ್ನು ಆಪಲ್‌ ವಾಚ್ SE ಹೊಸ ಮಾದರಿಯ ವಿನ್ಯಾಸವನ್ನು ಹೊಂದಿದ್ದು, ಆಕರ್ಷಕ ಶೈಳಿಯನ್ನ ಹೊಂದಿದೆ. ಇದು ಪತನ ಪತ್ತೆಯಂತಹ ಫೀಚರ್ಸ್‌ ಅನ್ನು ಹೊಂದಿದೆ. ಇನ್ನು ಈ ವಾಚ್‌ S5 ಚಿಪ್‌ಸೆಟ್ ಪ್ರೊಸೆಸರ್‌ ಅನ್ನು ಹೊಂದಿದೆ. ಇದಲ್ಲದೆ ವಾಚ್ ಸರಣಿ 6 ವಾಟರ್ ಪ್ರೂಪ್‌ ವ್ಯವಸ್ಥೆಯನ್ನು ಹೊಂದಿದ್ದು, ಹೆಲ್ತ್‌ ಫೀಚರ್ಸ್‌ಗಳನ್ನು ಹೊಂದಿದೆ. ಜೊತೆಗೆ ಸ್ಪೋರ್ಟ್ಸ್‌ ಫೀಚರ್ಸ್‌ಗಳನ್ನು ಸಹ ಒಳಗೊಂಡಿದೆ. ಅಲ್ಲದೆ ಇದು ‘ಸೋಲೋ' ಲೂಪ್ ಅನ್ನು ಸಹ ಒಳಗೊಂಡಿದೆ, ಇದರಲ್ಲಿ ಯಾವುದೇ ಬಕಲ್ ಇಲ್ಲ ಮತ್ತು ಕೇವಲ ವಿಸ್ತರಿಸಬಹುದಾದ ಸರಳವಾಗಿ ಕಾಣುವ ಬ್ಯಾಂಡ್ ಆಗಿದೆ. ಇನ್ನು ವಾಚ್‌ SE $ 279 ಬೆಲೆಯನ್ನು ಹೊಂದಿದ್ದು, ವಾಚ್ ಸರಣಿ 6 $ 399 ಬೆಲೆಯನ್ನು ಹೊಂದಿದೆ.

ಆಪಲ್ ಒನ್

ಆಪಲ್ ಒನ್

ಆಪಲ್‌ ತನ್ನ ಪ್ರಾಡಕ್ಟ್‌ಗಳ ಜೊತೆಗೆ ಆಪಲ್‌ ಒನ್‌ ಚಂದಾದಾರಿಕೆ ಸೇವೆಯನ್ನು ಸಹ ಪರಿಚಯಿಸಿದೆ.ಇದು ಐಕ್ಲೌಡ್, ಆಪಲ್ ಮ್ಯೂಸಿಕ್, ಟಿವಿ +, ಆರ್ಕೇಡ್, ನ್ಯೂಸ್ + ಮತ್ತು ಫಿಟ್ನೆಸ್ + ಅನ್ನು ಪರ್ಸನಲ್‌ ಮತ್ತು ಪ್ಯಾಮಿಲಿ ಸದಸ್ಯರ ಜೊತೆಗೆ ಜೋಡಿಸುತ್ತದೆ. ಇದಲ್ಲದೆ, ಸಂಸ್ಥೆಯು ಫಿಟ್‌ನೆಸ್ + ಸೇವೆಯನ್ನು ಪರಿಚಯಿಸಿದೆ. ಇದು ಮಾಸಿಕ ಮತ್ತು ವಾರ್ಷಿಕ ಚಂದಾದಾರಿಕೆಗೆ $9.99 ಮತ್ತು $ 79.99 ಬೆಲೆಯನ್ನು ಹೊಂದಿದೆ. ಇನ್ನು ಫಿಟ್‌ನೆಸ್ + ಆಟೋಮ್ಯಾಟಿಕ್‌ ಟೈಮರ್‌ಗಳನ್ನು ಒಳಗೊಂಡಿದೆ. ರಿಯಲ್‌ ಟೈಂ ಮತ್ತು ರಿಯಲ್‌ ಟೈಂ ರಿಂಗ್ ಆಲರ್ಟ್‌ ಅನಿಮೇಷನ್ ಅನ್ನು ನೀಡಲಿದೆ.

Best Mobiles in India

Read more about:
English summary
On the services side of things we saw the launch of Apple One bundle subscription and Apple Fitness+.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X