ಬಹು ನಿರೀಕ್ಷಿತ ಆಪಲ್‌ ಐಪ್ಯಾಡ್‌ ಮತ್ತು ಆಪಲ್‌ ವಾಚ್‌ ಸಿರೀಸ್‌ 7 ಬಿಡುಗಡೆ!

|

ಆಪಲ್‌ ಕಂಪೆನಿಯ ಬಹು ನಿರೀಕ್ಷಿತ ಕ್ಯಾಲಿಫೋರ್ನಿಯಾ ಸ್ಟ್ರೀಮಿಂಗ್ ಈವೆಂಟ್‌ನಲ್ಲಿ ಆಪಲ್‌ ಕಂಪೆನಿಯ ಐಫೋನ್‌ 13 ಸರಣಿ ಸೇರಿದಂತೆ ಆಪಲ್‌ ಕಂಪೆನಿ ಹಲವು ಪ್ರಾಡಕ್ಟ್‌ಗಳನ್ನು ಲಾಂಚ್‌ ಮಾಡಲಾಗಿದೆ. ಇನ್ನು ಇದೇ ಕಾರ್ಯಕ್ರಮದಲ್ಲಿ ಆಪಲ್ ಐಪ್ಯಾಡ್‌, ಐಪ್ಯಾಡ್‌ ಮಿನಿ, ಆಪಲ್‌ ವಾಚ್ ಸಿರೀಸ್‌ 7 ಅನ್ನು ಸಹ ಪರಿಚಯಿಸಲಾಗಿದೆ. ಇದರಲ್ಲಿ ಹೊಸ ಆಪಲ್ ಐಪ್ಯಾಡ್ A13 ಬಯೋನಿಕ್ ಚಿಪ್‌ಸೆಟ್‌ ಹೊಂದಿದೆ. ಇನ್ನು ಆಪಲ್‌ ವಾಚ್‌ ಸೀರೀಸ್‌ 7 ರೆಟಿನಾ ಡಿಸ್‌ಪ್ಲೇ ಹೊಂದಿರುವುದು ವಿಶೇಷ.

ಆಪಲ್‌

ಹೌದು, ಆಪಲ್‌ ಕಂಪೆನಿ ತನ್ನ ಐಫೋನ್‌ 13 ಸರಣಿ ಜೊತೆಗೆ ಹಲವು ಪ್ರಾಡಕ್ಟ್‌ಗಳನ್ನು ಲಾಂಚ್‌ ಮಾಡಿದೆ. ಇದರಲ್ಲಿ ಬಹು ನಿರೀಕ್ಷಿತ ಆಪಲ್‌ ವಾಚ್‌ ಸೀರೀಸ್‌ 7 ಹಾಗೂ ಐಪ್ಯಾಡ್‌ ಕೂಡ ಸೇರಿದೆ. ಇನ್ನು ಈ ಹೊಸ ಡಿವೈಸ್‌ಗಳು ಆಪಲ್‌ ಕಂಪೆನಿಯ ಹೊಸ ತಂತ್ರಜ್ಞಾನ ಮತ್ತ ವಿನ್ಯಾಸವನ್ನು ಪಡೆದುಕೊಂಡಿವೆ. ಹಿಂದಿನ ಸರಣಿಗಳಿಗಿಂತಲೂ ಶಕ್ತಿಶಾಲಿಯಾಗಿವೆ ಎಂದು ಹೇಳಲಾಗಿದೆ. ಜೊತೆಗೆ ಹೊಸ ಅಪ್ಡೇಟ್‌ ಚಾರ್ಜಿಂಗ್‌ ಅನುಭವವನ್ನು ಸಹ ನೀಡಲಿವೆ. ಹಾಗಾದ್ರೆ ಆಪಲ್‌ ಕಂಪೆನಿಯ ಹೊಸ ಡಿವೈಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್ ಐಪ್ಯಾಡ್‌

ಆಪಲ್ ಐಪ್ಯಾಡ್‌

ಆಪಲ್‌ ಕಂಪೆನಿ 9ನೇ ತಲೆಮಾರಿನ ಹೊಸ ಆಪಲ್ ಐಪ್ಯಾಡ್‌ ಅನ್ನು ಲಾಂಚ್‌ ಮಾಡಿದೆ. ಇದು A13 ಬಯೋನಿಕ್ ಚಿಪ್‌ಸೆಟ್‌ ಅನ್ನು ಪಡೆದುಕೊಂಡಿದ್ದು, 8 ನೇ ತಲೆಮಾರಿನ ಐಪ್ಯಾಡ್‌ಗಿಂತ ಹೆಚ್ಚು ಕಾರ್ಯದಕ್ಷತೆಯನ್ನು ಹೊಂದಿದೆ. ಶಕ್ತಿಶಾಲಿಯಾಗಿದೆ. ಇನ್ನು ಈ 9 ನೇ ತಲೆಮಾರಿನ ಐಪ್ಯಾಡ್ ಹೆಚ್ಚು ಮಾರಾಟವಾಗುವ ಕ್ರೋಮ್‌ಬುಕ್‌ಗಿಂತ 3 ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ ಎಂದು ಹೇಳಲಾಗಿದೆ. ಜೊತೆಗೆ ಈ ಐಪ್ಯಾಡ್‌ 12ಮೆಗಾಪಿಕ್ಸೆಲ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಹೊಸ ಐಪ್ಯಾಡ್ ಸೆಂಟರ್‌ ಸ್ಟೇಜ್‌ ಅನ್ನುಬೆಂಬಲಿಸುತ್ತದೆ. ಇದು ಆಟೋಮ್ಯಾಟಿಕ್‌ ಫ್ರೇಮ್ ಅನ್ನು ಸೆಟ್‌ ಮಾಡಲಿದೆ. ಜೊತೆಗೆ ಅತ್ಯಂತ ಪ್ರೀಮಿಯಂ ವಿಡಿಯೋ ಕಾನ್ಫರೆನ್ಸಿಂಗ್ ಆಪ್‌ಗಳೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದು $ 329 ಬೆಲೆಯನ್ನು ಹೊಂದಿದ್ದು, ವಿದ್ಯಾರ್ಥಿಗಳಿಗೆ ಈ ಐಪ್ಯಾಡ್‌ $ 299 ಗೆ ಖರೀದಿಸಲು ಅವಕಾಶ ನೀಡಲಾಗಿದೆ. ಇಂದಿನಿಂದಲೇ ಈ ಐಪ್ಯಾಡ್‌ ಅನ್ನು ಆರ್ಡರ್‌ ಮಾಡಬಹುದಾಗಿದ್ದು, ಮುಂದಿನ ವಾರ ಶಿಪ್ಪಿಂಗ್ ಪ್ರಾರಂಭವಾಗಲಿದೆ.

ಐಪ್ಯಾಡ್ ಮಿನಿ 6

ಐಪ್ಯಾಡ್ ಮಿನಿ 6

ಆಪಲ್‌ ಕಂಪೆನಿ ಹೊಸದಾಗಿ ಐಪ್ಯಾಡ್‌ ಮಿನಿ 6 ಅನ್ನು ಕೂಡ ಲಾಂಚ್‌ ಮಾಡಿದೆ. ಇದು ನೋಡುವುದಕ್ಕೆ ಥೇಟ್‌ ಐಪ್ಯಾಡ್ ಏರ್ 4 ಮಾದರಿಯಂತೆಯೆ ಕಾಣುತ್ತದೆ. ಏಕೆಂದರೆ ಆಪಲ್ ಐಪ್ಯಾಡ್ ಮಿನಿ 6 ಐಪ್ಯಾಡ್ ಏರ್ 4 ರಂತೆ ಯುಎಸ್‌ಬಿ ಟೈಪ್-ಸಿ ಪೋರ್ಟ್ ಹೊಂದಿರುವ ಮೊದಲ ಐಪ್ಯಾಡ್ ಮಿನಿ ಆಗಿದೆ. ಇನ್ನು ಐಪ್ಯಾಡ್ ಮಿನಿ 6 8.3 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 500 ನಿಟ್ಸ್ ಬ್ರೈಟ್ನೆಸ್ ಅನ್ನು ಬೆಂಬಲಿಸಲಿದೆ. ಈ ಐಪ್ಯಾಡ್ ಮಿನಿ 6 ಟಚ್-ಐಡಿಯನ್ನು ಸಹ ಹೊಂದಿದೆ, ಇದನ್ನು ಪವರ್ ಬಟನ್‌ನಲ್ಲಿ ನಿರ್ಮಿಸಲಾಗಿದೆ. ಯುಎಸ್‌ಬಿ ಟೈಪ್-ಸಿ ಪೋರ್ಟ್ ಮೂಲಕವೇ ಕ್ಯಾಮೆರಾವನ್ನು ಕನೆಕ್ಟ್‌ ಮಾಡಬಹುದಾಗಿದೆ. ಈ ಐಪ್ಯಾಡ್ ಮಿನಿ 6 ಎಲ್ಇಡಿ ಫ್ಲ್ಯಾಷ್ ಜೊತೆಗೆ 12 ಎಂಪಿ ಪ್ರೈಮರಿ ಕ್ಯಾಮೆರಾ ಹೊಂದಿದೆ. ಜೊತೆಗೆ 12MP ಅಲ್ಟ್ರಾ ವೈಡ್ ಆಂಗಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು, ಸೆಂಟರ್‌ ಸ್ಟೇಪ್‌ಗೆ ಬೆಂಬಲವನ್ನು ನೀಡುತ್ತದೆ. ಇದರ ಬೆಲೆ $ 499ರಿಂದ ಆರಂಭವಾಗುತ್ತದೆ.

ಆಪಲ್ ವಾಚ್ ಸೀರೀಸ್ 7

ಆಪಲ್ ವಾಚ್ ಸೀರೀಸ್ 7

ಆಪಲ್‌ ಕಪೆನಿಯ ಬಹು ನಿರೀಕ್ಷಿತ ಆಪಲ್‌ ವಾಚ್‌ ಸೀರೀಸ್‌ 7 ಇದೀಗ ಬಿಡುಗಡೆ ಆಗಿದೆ. ಈ ವಾಚ್‌ ಸೀರೀಸ್ 6ಗಿಂತ ಬಿನ್ನವಾಗಿದೆ. ಇನ್ನು ಆಪಲ್ ವಾಚ್ ಸರಣಿ 7 41mm ಮತ್ತು 45mm ಆಯ್ಕೆಯ ಎರಡು ರೂಪಾಂತರಗಳಲ್ಲಿ ಬರುತ್ತದೆ. ಇದು ರೆಟಿನಾ ಡಿಸ್‌ಪ್ಲೇ ಹೊಂದಿದ್ದು, ಬಾಗಿದ ಮಾದರಿಯ ಡಿಸ್‌ಪ್ಲೇ ಹೊಂದಿದೆ. ಸ್ಮಾರ್ಟ್‌ವಾಚ್‌ನ ಡಿಸ್‌ಪ್ಲೇ ಸುತ್ತಲಿನ ಏರಿಯಾ ಕೇವಲ 1.7 ಮಿಮೀ ದಪ್ಪ ಮತ್ತು ಆಲ್‌ವೇಸ್‌ ಆನ್ ಸ್ಕ್ರೀನ್ ಮೋಡ್ 70%ರಷ್ಟು ಬ್ರೈಟ್‌ನೆಸ್‌ ಅನ್ನು ಒಳಗೊಂಡಿದೆ. ಕಂಪನಿಯ ಪ್ರಕಾರ, ಆಪಲ್ ವಾಚ್ ಸರಣಿ 6 ಕ್ಕೆ ಹೋಲಿಸಿದರೆ ನೀವು ಈ ಡಿಸ್‌ಪ್ಲೇಯಲ್ಲಿ 50% ಹೆಚ್ಚು ಪಠ್ಯವನ್ನು ಕ್ರಾಮ್ ಮಾಡಬಹುದು. ಹಾಗೆಯೇ, ಸ್ವೈಪ್ ಟೈಪಿಂಗ್‌ನೊಂದಿಗೆ ಕಂಪ್ಲೀಟ್‌ ಕೀಬೋರ್ಡ್‌ ಬೆಂಬಲದೊಂದಿಗೆ ಸಂವಹನ ನಡೆಸಲು ಡಿಸ್ಪ್ಲೇ ಹೊಸ ಮಾರ್ಗಗಳನ್ನು ನೀಡುತ್ತದೆ. ಈ ವಾಚ್‌ ಹೊಸ ಫೇಸ್‌ಗಳು, ಐಪಿಎಕ್ಸ್ 6 ಪ್ರಮಾಣೀಕರಣ, ಸುಧಾರಿತ ಚಾರ್ಜಿಂಗ್ ಅನುಭವ, ವೇಗದ ಚಾರ್ಜಿಂಗ್ ಯುಎಸ್‌ಬಿ ಸಿ ಕೇಬಲ್ ಅನ್ನು ಒಳಗೊಂಡಿದೆ. ಆಪಲ್ ವಾಚ್ ಸರಣಿ 7 $ 399 ಬೆಲೆಯಲ್ಲಿ ಪ್ರಾರಂಭವಾಗುತ್ತದೆ.

Best Mobiles in India

English summary
Apple Watch has had an impact on the lives of its users with a slew of features and functionalities including fitness tracking.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X