Just In
- 39 min ago
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
- 1 hr ago
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ಏಕಾಏಕಿ ಭಾರೀ ಇಳಿಕೆ!..ಸಖತ್ ಆಫರ್!
- 1 hr ago
ಬ್ಯಾಂಕ್ ಹೆಸರಲ್ಲಿ ಬಂದ SMS ನಲ್ಲಿನ ಲಿಂಕ್ ಕ್ಲಿಕ್ ಮಾಡಿದ ಮಹಿಳೆ; ಮುಂದಾಗಿದ್ದೇನು?
- 3 hrs ago
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
Don't Miss
- Lifestyle
ಸಮಂತಾ ಮಯೋಸೈಟಿಸ್ನಿಂದ ಚೇತರಿಸಿಕೊಳ್ಳಲು ಪಾಲಿಸುತ್ತಿರುವ ಡಯಟ್
- Sports
IND vs NZ: ಯುಜ್ವೇಂದ್ರ ಚಾಹಲ್ ನನ್ನ ಬ್ಯಾಟಿಂಗ್ ಕೋಚ್ ಎಂದ ಸೂರ್ಯಕುಮಾರ್ ಯಾದವ್
- News
Srirangapatna bypass: ಸಂಚಾರಕ್ಕೆ ಮುಕ್ತವಾದ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯ ಶ್ರೀರಂಗಪಟ್ಟಣ ಬೈಪಾಸ್
- Movies
ಮೊದಲ ವೀಕೆಂಡ್ನಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ದಾಖಲೆಯಲ್ಲಿ ಕೆಜಿಎಫ್ 2 ಹಿಂದಿಕ್ಕಿತಾ ಪಠಾಣ್?
- Automobiles
130 km ರೇಂಜ್ ನೀಡುವ 'ecoDryft' ಬೈಕ್ ಬಿಡುಗಡೆ... .ರೂ.99,999ಕ್ಕೆ ಸಿಗುತ್ತೆ!
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಐಫೋನ್ ಹ್ಯಾಕ್ ಮಾಡಿದರೆ ಆಪಲ್ ನೀಡಲಿದೆ 7.2 ಕೋಟಿ!
ಗುರುವಾರ ಲಾಸ್ ವೇಗಾಸ್‌ನಲ್ಲಿ ನಡೆದ ವಾರ್ಷಿಕ ಬ್ಲ್ಯಾಕ್ ಹ್ಯಾಟ್ ಹ್ಯಾಕರ್ ಸಮಾವೇಶದಲ್ಲಿ ಜನಪ್ರಿಯ ಮೊಬೈಲ್ ಸಂಸ್ಥೆ ಆಪಲ್ ಭರ್ಜರಿ ಆಫರ್ ನೀಡಿದೆ. ನೀವೇನಾದರೂ ಐಫೋನ್ ಅನ್ನು ಹ್ಯಾಕ್ ಮಾಡಲು ಸಾಧ್ಯವಾದರೆ ಆಪಲ್ ಕಂಪೆನಿ ಒಂದು ಮಿಲಿಯನ್ ಡಾಲರ್‌ಗಳನ್ನು ನೀಡುವುದಾಗಿ ಹೇಳಿದೆ. ಐಫೋನ್‌ನ ಸಾಫ್ಟ್‌ವೇರ್ ದೋಷಗಳು ಕಪ್ಪು ಮಾರುಕಟ್ಟೆಯಲ್ಲಿ ಎಷ್ಟು ಮೌಲ್ಯಯುತವಾಗಿವೆ ಎಂಬುದರ ಸಂಕೇತವಾಗಿ ಐಫೋನ್ ಹ್ಯಾಕ್ ಮಾಡಲು ಆಪಲ್ ಅತಿದೊಡ್ಡ ಬಹುಮಾನವನ್ನು ಘೋಷಿಸಿದೆ.

ಹೌದು, ಆಪಲ್ ನೀಡಿರುವ ಅತಿದೊಡ್ಡ ಬಹುಮಾನವು ಬಗ್ ಬೌಂಟಿ ಕಾರ್ಯಕ್ರಮದ ಭಾಗವಾಗಿದ್ದು, ತನ್ನ ವ್ಯವಸ್ಥೆಯಲ್ಲಿನ ದೋಷಗಳನ್ನು ಕಂಡುಕೊಳ್ಳಲು ಆಪಲ್ ನೀಡಿರುವ ಚಾಲೆಂಜ್ ಇದಾಗಿದೆ. ಬಗ್ ಬೌಂಟಿ ಕಾರ್ಯಕ್ರಮವನ್ನು ಹೆಸರಾಂತ ಕಂಪನಿಗಳು ತಮ್ಮ ವ್ಯವಸ್ಥೆಗಳಲ್ಲಿ ದೋಷಗಳನ್ನು ಕಂಡುಹಿಡಿಯಲು ಹ್ಯಾಕರ್‌ಗಳನ್ನು ಆಹ್ವಾನಿಸುತ್ತವೆ. ಇತ್ತೀಚಿನ ವರ್ಷಗಳಲ್ಲಿ ಕಂಪೆನಿ ನ್ಯೂನತೆಗಳನ್ನು ಕಂಡುಹಿಡಿಯುವುದನ್ನು ಮತ್ತು ಅಪರಾಧಿಗಳು ಅದನ್ನು ಬಳಸುವುದನ್ನು ತಡೆಯುವ ಮಾರ್ಗವಾಗಿ ಇದು ಹೆಚ್ಚು ಜನಪ್ರಿಯವಾಗಿವೆ.
ಆಪಲ್ ತನ್ನ ಬಗ್ ಬೌಂಟಿ ಪ್ರೋಗ್ರಾಂ ಅನ್ನು ಸ್ನೇಹಪರ ಹ್ಯಾಕರ್‌ಗಳ ನಿರ್ಬಂಧಿತ ಪಟ್ಟಿಗೆ ಸೀಮಿತಗೊಳಿಸಿತ್ತು. ಆದರೆ, ಇದು ಈಗ ಎಲ್ಲರಿಗೂ ತೆರೆದಿದ್ದು, ಒಂದು ನಿರ್ದಿಷ್ಟ ಹ್ಯಾಕ್‌ಗೆ ಮಾತ್ರ ಉನ್ನತ ಬಹುಮಾನವನ್ನು ಮಾತ್ರ ಪಾವತಿಸುವುದಾಗಿ ಆಪಲ್ ತಿಳಿಸಿದೆ. ಐಫೋನ್‌ನ ಬಳಕೆದಾರರ ಅಗತ್ಯವಿಲ್ಲದೇ ಆಪಲ್‌ನ ಐಒಎಸ್ ಸಾಫ್ಟ್‌ವೇರ್‌ನ ಮುಖ್ಯ ಭಾಗಕ್ಕೆ ದೂರಸ್ಥ ಪ್ರವೇಶವನ್ನು ಪಡೆಯಬಹುದು ಎಂಬುದನ್ನು ಹ್ಯಾಕರ್‌ಗಳು ವಿವರವಾಗಿ ತೋರಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ಆಪಲ್ ನೀಡಿರುವ ಅತಿದೊಡ್ಡ ಬಹುಮಾನದ ಘೋಷಣೆಯು ಆಪಲ್ ಐಫೋನ್ ಮತ್ತು ಇತರೆ ಸಾಧನಗಳ ಸುರಕ್ಷತೆಯನ್ನು ಗ್ರಾಹಕರಿಗೆ ತಿಳಿಯಪಡಿಸುವ ಕ್ರಮ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಆಪಲ್ ತಾನು ಎಷ್ಟು ಸುರಕ್ಷಿತ ಎಂದು ವಿಶ್ವದಾದ್ಯಂತ ಗ್ರಾಹಕರಿಗೆ ತಿಳಿಸಲು ಈ ರೀತಿಯ ಹೆಚ್ಚು ಬಹುಮಾನದ ಬಗ್ ಬೌಂಟಿ ಟ್ರಿಕ್ಸ್ ಉಪಯೋಗಿಸುತ್ತದೆ. ಇದರಲ್ಲೇನು ವಿಶೇಷವಿಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಮತ್ತೆ ಕೆಲ ವರದಿಗಳು ಬೇರೆಯದೇ ರೀತಿ ಹೇಳುತ್ತಿವೆ.
ವಿಶ್ವದ ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್‌ನಲ್ಲಿನ ಇಂತಹ ದುರ್ಬಲತೆಗಳು ಮಾರುಕಟ್ಟೆಯಲ್ಲಿ ಹೆಚ್ಚು ಮೌಲ್ಯಯುತವಾಗಿವೆ. ಖಾಸಗಿ ಕಂಪನಿಗಳಾದ ಇಸ್ರೇಲ್‌ನ ರಹಸ್ಯ ಸೈಬರ್ ಸೆಕ್ಯುರಿಟಿ ಕಂಪನಿ ಎನ್‌ಎಸ್‌ಒ ಗ್ರೂಪ್ ಮತ್ತು ಸರ್ಕಾರಿ ಸಂಸ್ಥೆಗಳು ಐಫೋನ್ ಅನ್ನು ದೂರದಿಂದಲೇ ಪ್ರವೇಶಿಸಬಹುದಾದ ಸಾಧನಕ್ಕಾಗಿ 2 ಮಿಲಿಯನ್ ಡಾಲರ್ ಪಾವತಿಸಿವೆ ಎಂದು ಇತ್ತೀಚಿಗಷ್ಟೇ ಹೇಳಲಾಗಿತ್ತು. ಹಾಗಾಗಿಯೇ, ಆಪಲ್ ತನ್ನ ಬಗ್ ಬೌಂಟಿ ಕಾರ್ಯಕ್ರಮದ ಬಹುಮಾನವನ್ನು ಹೆಚ್ಚಿಸಿದೆ ಎಂದು ಹೇಳಲಾಗುತ್ತಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470