ಆಪಲ್ 'ಐಓಎಸ್ 13' ರಿಲೀಸ್!..ಬಳಕೆದಾರರು ತಿಳಿಯಲೇಬೇಕಾದ ವಿಷಯಗಳು!

|

ತಂತ್ರಜ್ಞಾನದ ಲೋಕದ ನಿರೀಕ್ಷೆಯಂತೆಯೇ, ನೆನ್ನೆ (ಮಂಗಳವಾರ) ರಾತ್ರಿ ನಡೆದ ಆಪಲ್ ವರ್ಲ್ಡ್ವೈಡ್ ಡೆವೆಲಪರ್ ಕಾನ್ಫರೆನ್ಸ್(WWDC) ನಲ್ಲಿ ನೂತನ ಓಎಸ್ ಅನ್ನು ಅಪಲ್ ಕಂಪೆನಿ ಪರಿಚಯಿಸಿದೆ. ಆಪಲ್‌ನ ನೂತನ ಒಎಸ್ ಆಪಲ್ 'ಐಓಎಸ್ 13' ಬಿಡುಗಡೆಯಾಗಿದ್ದು, ಐಒಎಸ್ 12 ಪ್ರಾರಂಭಿಸಿದ ಹಾದಿಯಲ್ಲಿ ಮತ್ತಷ್ಟು ಅಪ್‌ಡೇಟ್ ಆಗಿ ನೂತನ ಓಎಸ್ ಬಂದಿದೆ.

ಹೌದು, ಆಪಲ್ ಡೆವಲಪರ್ ಕಾನ್ಫರೆನ್ಸ್‌ನಲ್ಲಿ ಹಲವು ಅಪ್‌ಡೇಟ್‌ಗಳನ್ನು ಪಡೆದು ಐಓಎಸ್ 13' ಬಿಡುಗಡೆಯಾಗಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಐಫೋನ್ 6S ನಂತರದ ಆವೃತ್ತಿಗಳಿಗೆ ಅಪ್‌ಡೇಟ್ ಲಭ್ಯವಾಗಲಿದ್ದು, ಈ ಅಪ್‌ಡೇಟ್‌ನಲ್ಲಿ ಡಾರ್ಕ್ಮೋಡ್, ಹೊಸ ಫೋಟೋ ಟೂಲ್ ಸೇರಿದಂತೆ ಐಫೋನ್ ಬಳಕೆದಾರರು ಹೆಚ್ಚು ಖುಷಿಪಡುವಂತಹ ಸುದ್ದಿಯೊಂದನ್ನು ನೀಡಲಾಗಿದೆ.

ಆಪಲ್ 'ಐಓಎಸ್ 13' ರಿಲೀಸ್!..ಬಳಕೆದಾರರು ತಿಳಿಯಲೇಬೇಕಾದ ವಿಷಯಗಳು!

ಈ ಭಾರಿ ಐಫೋನ್ ಬಳಕೆದಾರರು ಹೆಚ್ಚು ಖುಷಿಪಡುವಂತಹ ಸುದ್ದಿ ಎಂದರೆ, ಐಓಎಸ್ 13 ಓಎಸ್ ಐಪೋನ್‌ಗಳ ವೇಗವನ್ನು ಹೆಚ್ಚಿಸಲಿದೆ ಎಂದು ಆಪಲ್ ಹೇಳಿಕೊಂಡಿದೆ. ಐಫೋನ್ ಫೇಸ್‌ಲಾಕ್ ವೇಗ ಶೇ.30 ರಷ್ಟು ಏರಿಕೆಯಾಗಿದೆ. ಹಾಗಾದರೆ, ಆಪಲ್‌ನ ಹೊಸ ಐಓಎಸ್ 13 ನಲ್ಲಿ ಏನೆಲ್ಲಾ ಹೊಸ ಹೊಸ ಅಪ್‌ಡೇಟ್‌ಗಳು ಬಂದಿವೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಐಫೋನ್ 6S ನಂತರದ ಆವೃತ್ತಿಗಳಿಗೆ

ಐಫೋನ್ 6S ನಂತರದ ಆವೃತ್ತಿಗಳಿಗೆ

ಆಪಲ್ 'ಐಓಎಸ್ 13' ಸೆಪ್ಟೆಂಬರ್ ಅಂತ್ಯದ ವೇಳೆಗೆ ಐಫೋನ್ 6S ಮತ್ತು ನಂತರದ ಆವೃತ್ತಿಗಳಿಗೆ ಲಭ್ಯವಾಗಲಿದೆ. ಹಾಗಾಗಿ, ಐಫೋನ್ 6S ಮಾದರಿ ಒಳಗಿನ ಬಳಕೆದಾರರಿಗೆ ಅಪ್‌ಡೇಟ್ ಸಗುವುದಿಲ್ಲ. ಈ ಮೊದಲು ಆಪಲ್ ಐಪ್ಯಾಡ್‌ಗಳಿಗೆ ಕೂಡ ಐಓಎಸ್ ಬಳಸಲಾಗುತ್ತಿತ್ತು. ಆದರೆ ಈ ಬಾರಿ ಆಪಲ್ ಐಪ್ಯಾಡ್ ಓಎಸ್ ಪರಿಚಯಿಸಿದ್ದು, ಪ್ರತ್ಯೇಕವಾಗಿ ಕಾರ್ಯನಿರ್ವಹಿಸಲಿದೆ.

ಮುಖ್ಯ ಅಪ್‌ಡೇಟ್‌ಗಳು ಹೀಗಿವೆ!

ಮುಖ್ಯ ಅಪ್‌ಡೇಟ್‌ಗಳು ಹೀಗಿವೆ!

ಆಪಲ್ ಐಓಎಸ್ 13 ಒಎಸ್ ಮೂಲಕ ಐಫೋನ್‌ಗಳಿಗೆ ಡಾರ್ಕ್‌ ಮೋಡ್, ಹೊಸ ಫೋಟೋ ಟೂಲ್, ಆಕರ್ಷಕ ಮ್ಯಾಪ್ಸ್, ಸ್ವೈಪ್ ಕೀಬೋರ್ಡ್, ಮಿಮೋಜಿ ಮತ್ತು ವೀಡಿಯೋ ಎಡಿಟಿಂಗ್ ಟೂಲ್‌ಗಳು ಲಭ್ಯವಾಗಲಿವೆ. ಜತೆಗೆ ಇ ಮೇಲ್ ಮತ್ತು ಸಾಮಾಜಿಕ ತಾಣಗಳಿಗೆ ಲಾಗಿನ್ ಆಗಲು, ಗರಿಷ್ಟ ಭದ್ರತೆ ಮತ್ತು ಸುರಕ್ಷತೆ ಸೈನ್ ಇನ್ ಅನ್ನು ಕೂಡ ಆಪಲ್ ಪರಿಚಯಿಸಿದೆ.

ಐಫೋನ್ ವೇಗ ಹೆಚ್ಚಳ!

ಐಫೋನ್ ವೇಗ ಹೆಚ್ಚಳ!

ಆಪಲ್ ಐಓಎಸ್ 13 ಅಪ್‌ಡೇಟ್ ಮೂಲಕ ಐಫೋನ್‌ಗಳ ವೇಗ ಹೆಚ್ಚಲಿದೆ ಎಂದು ಆಪಲ್ ಹೇಳಿದೆ. ಮೊಬೈಲ್ ಅಪ್ಲಿಕೇಶನ್‌ಗಳು ಮೊದಲಿಗಿಂತ ಎರಡು ಪಟ್ಟು ವೇಗವಾಗಿ ತೆರೆಯುತ್ತದೆ ಎಂದು ಆಪಲ್ ತಿಳಿಸಿದ್ದು, ವೇಗ ಹೆಚ್ಚುವ ಬಗ್ಗೆ ಮಾಹಿತಿ ನೀಡಿದೆ. ಇನ್ನು ಆಪಲ್ ಫೇಸ್ ಐಡಿಯು ನಿಮ್ಮ ಐಫೋನ್ ಅನ್ನು ಹಿಂದೆಗಿಂತಲೂ 30 ಪ್ರತಿಶತ ವೇಗವಾಗಿ ಅನ್ಲಾಕ್ ಮಾಡುತ್ತದೆ.

ಕೀಬೋರ್ಡ್ ಸ್ವೈಪ್ ಕಾರ್ಯಾಚರಣೆ

ಕೀಬೋರ್ಡ್ ಸ್ವೈಪ್ ಕಾರ್ಯಾಚರಣೆ

ಐಒಎಸ್ 13 ಒಎಸ್‌ನಲ್ಲಿ ಕೀಬೋರ್ಡ್ ಅಪ್ಲಿಕೇಶನ್ ಸ್ವೈಪ್ ಕಾರ್ಯಾಚರಣೆಯನ್ನು ಪಡೆಯುತ್ತದೆ. ಅಂದರೆ, ನೀವು ಈಗ ಪದಗಳನ್ನು ಟೈಪ್ ಮಾಡಲು ಕೀಗಳ ಮೇಲೆ ನಿಮ್ಮ ಬೆರಳುಗಳನ್ನು ಸ್ವೈಪ್ ಮಾಡಿದರೆ ಸಾಕಾಗುತ್ತದೆ. ಪದಗಳ ಮೇಲೆ ಸ್ವೈಪ್ ಮಾಡಿದರೆ ಇದು ವಾಕ್ಯವನ್ನು ಒಟ್ಟಾಗಿ ಸಂಯೋಜಿಸುತ್ತದೆ. ಇದರಿಂದ ಸಂಪೂರ್ಣ ಸಂಭಾಷಣೆಗೆ ಇದು ಸಹಕಾರಿಯಾಗಿದೆ.

ಫೋಟೋ ಎಡಿಟಿಂಗ್ ಇಂಟರ್ಫೇಸ್

ಫೋಟೋ ಎಡಿಟಿಂಗ್ ಇಂಟರ್ಫೇಸ್

ಐಒಎಸ್ 13 ಒಎಸ್‌ನಲ್ಲಿ ಫೋಟೊಗಳ ಟ್ಯಾಬ್ ಅನ್ನು ಘೋಷಿಸಿರುವಂತೆ ಸಂಪೂರ್ಣವಾಗಿ ಹೊಸ ಫೋಟೋ ಎಡಿಟಿಂಗ್ ಇಂಟರ್ಫೇಸ್ ಅನ್ನು ಆಪಲ್ ಕಂಪೆನಿ ಪರಿಚಯಿಸಿದೆ. ಇದು ಸುಧಾರಿತ ಫೋಟೊ ವಿಂಗಡಣೆ ಮತ್ತು ಕೃತಕ ಬುದ್ಧಿಮತ್ತೆ (ಎಐ) ವ್ಯಾಪಕ ಬಳಕೆಯೊಂದಿಗೆ ಫೋಟೋಗಳ ಅಪ್ಲಿಕೇಷನ್ ಅನ್ನು ಪುನರ್ ರಚಿಸಲಾಗಿದೆ ಎಂದು ಆಪಲ್ ಹೇಳಿಕೊಂಡಿದೆ.

ಡಾರ್ಕ್ ಮೂಡ್!

ಡಾರ್ಕ್ ಮೂಡ್!

ಇತ್ತೀಚಿನ ಟ್ರೆಂಡಿಂಗ್ ಫೀಚರ್ ಡಾರ್ಕ್ ಮೋಡ್ ಹೆಚ್ಚು ಕಾಯುವಿಕೆಯ ನಂತರ ಸಿಕ್ಕಿದೆ. ಆಪಲ್‌ನ ಸ್ವಂತ ಆಪ್‌ಗಳ ಜೊತೆಗೆ ಥರ್ಡ್ ಪಾರ್ಟಿಆಪ್‌ಗಳು ಕೂಡ ಡಾರ್ಕ್ ಮೋಡ್ ಆಯ್ಕೆಯನ್ನು ಪಡೆದುಕೊಳ್ಳಲಿವೆ. ಐಓಎಸ್ 13 ಮೂಲಕ ಡಾರ್ಕ್ ಮೋಡ್ ಸಕ್ರಿಯಗೊಳಿಸಿದಾಗ ಅಧಿಸೂಚನೆಗಳು ಸಹ ಗಾಢವಾದ ವರ್ಣಗಳನ್ನು ಸಾಧಿಸುತ್ತವೆ, ಅನುಭವವನ್ನು ಸರಳವಾಗಿ ಸೇರಿಸುತ್ತವೆ.

ಡೆಸ್ಕ್ಟಾಪ್ ಸ್ಟೈಲ್ ಫಾರ್ಮ್ಯಾಟಿಂಗ್

ಡೆಸ್ಕ್ಟಾಪ್ ಸ್ಟೈಲ್ ಫಾರ್ಮ್ಯಾಟಿಂಗ್

ಐಒಎಸ್ 13 ಒಎಸ್ ಮೂಲಕ ಮೇಲ್, ಸಂದೇಶಗಳು, ಟಿಪ್ಪಣಿಗಳು ಮತ್ತು ರಿಮೆಂಬರ್‌ಗಳು ಸೇರಿದಂತೆ ಎಲ್ಲಾ ಅಪ್ಲಿಕೇಶನ್‌ಗಳಲ್ಲಿ ಹೊನವೀಕರಣಗಳನ್ನು ತರಲಾಗಿದೆ.ಉದಾಹರಣೆಗೆ, ಡೆಸ್ಕ್ಟಾಪ್ ಸ್ಟೈಲ್ ಫಾರ್ಮ್ಯಾಟಿಂಗ್ ಹೊಂದಿಸಲಾಗಿದೆ. ಪ್ರತಿ ವೆಬ್ಸೈಟ್ ಅನ್ನು ನೀವು ಹೇಗೆ ವೀಕ್ಷಿಸುತ್ತೀರಿ ಮತ್ತು ಫಾಂಟ್ ಗಾತ್ರದಂತಹ ಸೂಕ್ಷ್ಮ ವಿವರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲಿದೆ.

Best Mobiles in India

English summary
Apple WWDC 2019: iOS 13 Will Make Your iPhone Faster, But That is Not The Only Goodness it Packs in. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X