Home
ಸುದ್ದಿಜಾಲ

Apple iPadOS 17: Apple WWDC 2023 ರಲ್ಲಿ iPadOS 17 ಅನಾವರಣ! ವಿಶೇಷತೆ ಏನು?

ಆಪಲ್‌ WWDC 2023ರಲ್ಲಿ ಹಲವು ಹೊಸ ಡಿವೈಸ್‌ಗಳ ಜೊತೆಗೆ ಹೊಸ ಒಎಸ್‌ಗಳನ್ನು ಕೂಡ ಅನಾವರಣಗೊಳಿಸಿದೆ. ಇದರಲ್ಲಿ ಬಹು ನಿರೀಕ್ಷಿತ iPadOS 17 ಕೂಡ ಸೇರಿದೆ. ಈಗಾಗಲೇ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದ್ದ iPadOS 17 ಹಲವು ಅರ್ಶರ್ಯಕರ ಫೀಚರ್ಸ್‌ಗಳೊಂದಿಗೆ ಬಿಡುಗಡೆಯಾಗಿದೆ.

ಹೌದು, ಆಪಲ್‌ iPadOS 17 ಅನ್ನು ಪರಿಚಯಿಸಿದೆ. ಇನ್ನು iPadOS 17 ಆರೋಗ್ಯ, ಸೃಜನಶೀಲತೆ ಮತ್ತು ಮಲ್ಟಿ ಫಂಕ್ಷನ್‌ ನೀಡುವ ಫೀಚರ್ಸ್‌ಗಳನ್ನು ಒಳಗೊಂಡಿದೆ. ಜೊತೆಗೆ ಐಪ್ಯಾಡ್‌ನಲ್ಲಿ ಲಾಕ್‌ಸ್ಕ್ರೀನ್‌ ಅನ್ನು ಕಸ್ಟಮೈಸ್‌ ಮಾಡುವುದಕ್ಕೆ ಅವಕಾಶವನ್ನು ನೀಡಲಿದೆ. ಹಾಗಾದ್ರೆ ಹೊಸ iPadOS 17 ಹೇಗೆ ಕಾರ್ಯನಿರ್ವಹಿಸಲಿದೆ, ಇದರ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Apple iPadOS 17: Apple WWDC 2023 ರಲ್ಲಿ iPadOS 17 ಅನಾವರಣ! ವಿಶೇಷತೆ ಏನು?

iPadOS 17 ಫೀಚರ್ಸ್‌ ಹೇಗಿದೆ?
ಆಪಲ್‌ ಅನಾವರಣಗೊಳಿಸಿರುವ iPadOS 17 ಹೊಸತನದ ಫೀಚರ್ಸ್‌ಗಳಿಂದ ಗಮನಸೆಳೆದಿದೆ. ಇದೇ ಮೊದಲ ಬಾರಿಗೆ ಕಸ್ಟಮೈಸ್‌ ಮಾಡಿದ ಲಾಕ್‌ಸ್ಕ್ರೀನ್‌ಗೆ ಬೆಂಬಲ ನೀಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಐಫೋನ್ ಬಳಕೆದಾರರು ತಮ್ಮ iOS 16 ಲಾಕ್ ಸ್ಕ್ರೀನ್‌ಗಳನ್ನು ಕಸ್ಟಮೈಸ್ ಮಾಡುವ ರೀತಿಯಲ್ಲಿಯೇ ಈ ಫೀಚರ್ಸ್‌ ಕೂಡ ಕಾರ್ಯನಿರ್ವಹಿಸಲಿದೆ. ಇದಲ್ಲದೆ ಬಳಕೆದಾರರು ತಮ್ಮ ಐಪ್ಯಾಡ್ ಲಾಕ್ ಸ್ಕ್ರೀನ್ ಅನ್ನು ಕಸ್ಟಮೈಸ್‌ ಮಾಡಬಹುದು ಮತ್ತು ಕಸ್ಟಮ್‌ ವಾಲ್‌ಪೇಪರ್‌ಗಳನ್ನು ಸೆಟ್‌ ಮಾಡಬಹುದಾಗಿದೆ.

ಆಪಲ್‌ iPadOS 17 ನಲ್ಲಿ ಬಳಕೆದಾರರು ಫಾಂಟ್ ಅನ್ನು ಸೆಟ್‌ ಮಾಡುವ ಮತ್ತು ಆದ್ಯತೆಗಳ ಪ್ರಕಾರ ಫೋಕಸ್ ಮೋಡ್‌ಗಳನ್ನು ಸೆಟ್‌ ಮಾಡಬಹುದಾಗಿದೆ. ಇದಲ್ಲದೆ ಲೈವ್‌ ಆಕ್ಟಿವಿಟಿಗಳನ್ನು ಸಹ ನೀಡಲಾಗಿದೆ. ಇನ್ನು ಈ ಹೊಸ iPadOS 17ನಲ್ಲಿ ಸಂವಾದಾತ್ಮಕ ವಿಜೆಟ್‌ಗಳಿಗೆ ಬೆಂಬಲವನ್ನು ನೀಡಲಾಗಿದೆ. ಇದರಿಂದ ಬಳಕೆದಾರರು ಯಾವುದೇ ನಿರ್ದಿಷ್ಟ ಅಪ್ಲಿಕೇಶನ್‌ ಅನ್ನು ತೆರೆಯದೆಯೇ ವಿಜೆಟ್‌ಗಳ ಮೂಲಕ ಲೈಟ್‌ಗಳನ್ನು ಆನ್ ಮಾಡಲು, ಹಾಡನ್ನು ಪ್ಲೇ ಮಾಡುವುದಕ್ಕೆ ಸಾಧ್ಯವಾಗಲಿದೆ.

iPadOS 17 ನ ಬಹುಮುಖ್ಯವಾದ ಫೀಚರ್ಸ್‌ ಅಂದರೆ ನೋಟ್‌ ಅಪ್ಲಿಕೇಶನ್‌ನಲ್ಲಿ ಪಿಡಿಎಫ್‌ ಎಡಿಟ್‌ ಮಾಡಲು ಅವಕಾಶ ನೀಡಿರುವುದು. ಇದರಿಂದ iPadOS 17 ಬಳಕೆದಾರರು PDF ಗಳಲ್ಲಿ ಕಂಟ್ಯಾಕ್ಟ್‌ಗಳ ಹೆಸರು, ವಿಳಾಸಗಳು ಮತ್ತು ಇಮೇಲ್‌ಗಳಂತಹ ವಿವರಗಳನ್ನು ಸೇರಿಸಲು ಸಾಧ್ಯವಾಗಲಿದೆ. ಇನ್ನು ಪಿಡಿಎಫ್‌ ಪೇಜ್‌ಗಳ ಮೂಲಕ ಫ್ಲಿಪ್ ಮಾಡಲು ಅಥವಾ ಆಪಲ್ ಪೆನ್ಸಿಲ್‌ನೊಂದಿಗೆ ನೇರವಾಗಿ ಡಾಕ್ಯುಮೆಂಟ್‌ನಲ್ಲಿ ಸ್ಕೆಚ್ ಮಾಡಲು ಸಾಧ್ಯವಾಗಲಿದೆ. ಇದಲ್ಲದೆ ಬಳಕೆದಾರರು ಇದೀಗ ತಮ್ಮ ನೋಟ್‌ನಲ್ಲಿ PDF ಗಳು ಮತ್ತು ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಪರಿಶೀಲಿಸಲು ಅವಕಾಶ ಸಿಗಲಿದೆ.

ಇದರೊಂದಿಗೆ ಆಪಲ್‌ iPadOS 17 ನಲ್ಲಿ ಹೆಲ್ತ್‌ ಅಪ್ಲಿಕೇಶನ್‌ಗೆ ಬೆಂಬಲವನ್ನು ಸಹ ನೀಡಲಾಗಿದೆ. ಇದರಿಂದ ಬಳಕೆದಾರರು ತಮ್ಮ ಫೋನ್ ಅಗತ್ಯವಿಲ್ಲದೇ ತಮ್ಮ ಆರೋಗ್ಯ ಡೇಟಾವನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. iPad ಗಾಗಿ ಹೆಲ್ತ್‌ ಅಪ್ಲಿಕೇಶನ್ ಅನ್ನು ಆಪ್ಟಿಮೈಸ್ ಮಾಡಲಾಗಿದ್ದು, ಬಿಗ್‌ ಸ್ಕ್ರೀನ್‌ ಲಾಭವನ್ನು ಪಡೆದಯುವ ನಿಟ್ಟಿನಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇನ್ನು iPadOS 17 ನಲ್ಲಿ ಫ್ರೀಫಾರ್ಮ್ ಅಪ್ಲಿಕೇಶನ್ಗೆ ಹೊಸ ಡ್ರಾಯಿಂಗ್ ಟೂಲ್ಸ್‌ಗಳನ್ನು ನೀಡಲಾಗಿದೆ. ಇದು ಹೋವರ್, ಟಿಲ್ಟ್ ಮತ್ತು ಆಕಾರಕ್ಕೆ ಸ್ನ್ಯಾಪ್ ಮಾಡಲು ಬೆಂಬಲವನ್ನು ನೀಡುತ್ತದೆ.

Apple iPadOS 17: Apple WWDC 2023 ರಲ್ಲಿ iPadOS 17 ಅನಾವರಣ! ವಿಶೇಷತೆ ಏನು?

macOS Sonoma

ಇದಲ್ಲದೆ ಆಪಲ್‌ ಕಂಪೆನಿ ಇದೇ ಸಮಯದಲ್ಲಿ macOS Sonoma ಅಪ್ಡೇಟ್‌ ಅನ್ನು ಕೂಡ ಬಿಡುಗಡೆ ಮಾಡಿದೆ. ಇದು ಪ್ರಪಂಚದಾದ್ಯಂತ ವಿವಿಧ ಸ್ಥಳಗಳ ಸ್ಲೋ ಮೋಷನ್‌ ವೀಡಿಯೊಗಳನ್ನು ಒಳಗೊಂಡಿರುವ ಸ್ಕ್ರೀನ್‌ಸೇವರ್‌ಗಳಿಗೆ ಬೆಂಬಲ ನೀಡಲಿದೆ. ಇದರಿಂದ ಬಳಕೆದಾರರು ಡೆಸ್ಕ್‌ಟಾಪ್ ಸ್ಕ್ರೀನ್‌ಗೆ ಸಂವಾದಾತ್ಮಕ ವಿಜೆಟ್‌ಗಳನ್ನು ಸೇರಿಸಲು ಸಾಧ್ಯವಾಗಲಿದೆ. ಜೊತೆಗೆ ಬಳಕೆದಾರರು ಅಪ್ಲಿಕೇಶನ್‌ಗಳಲ್ಲಿ ಕೆಲಸ ಮಾಡುವಾಗ ವಾಲ್‌ಪೇಪರ್‌ನಲ್ಲಿ ಮನಬಂದಂತೆ ಬೆರೆಯುತ್ತದೆ. ಇನ್ನು ಈ ಹೊಸ ಆಯ್ಕೆಯು ಆಪಲ್‌ನ ಕಂಟಿನ್ಯೂಟಿ ಫೀಚರ್ಸ್‌ ಅನ್ನು ಬಳಸಲಿದ್ದು, ಐಫೋನ್ ವಿಜೆಟ್‌ಗಳನ್ನು ಮ್ಯಾಕೋಸ್‌ಗೆ ತರಲು ಅನುವು ಮಾಡಿಕೊಡುತ್ತದೆ.

ಇನ್ನು ಆಪಲ್ ಕಂಪೆನಿ ಇದೇ ಮೊದಲ ಬಾರಿಗೆ macOSನಲ್ಲಿ ಹೊಸ ಗೇಮ್‌ ಮೋಡ್‌ ಅನ್ನು ಸೇರಿಸಿದೆ. ಇದು ಆಪಲ್ ಸಿಲಿಕಾನ್‌ನ ಶಕ್ತಿಯುತ ಕಾರ್ಯಕ್ಷಮತೆಯ ಲಾಭವನ್ನು ಪಡೆಯುವ ಉದ್ದೇಶಕ್ಕೆ ಸೇರಿಸಲಾಗಿದೆ ಎನ್ನಲಾಗಿದೆ. ಇದರಿಂದ ನೀವು ಸುಗಮ ಮತ್ತು ಹೆಚ್ಚು ಸ್ಥಿರವಾದ ಫ್ರೇಮ್ ರೇಟ್‌ನಲ್ಲಿ ಆಪ್ಟಿಮೈಸ್ಡ್ ಗೇಮಿಂಗ್ ಅನುಭವವನ್ನು ಪಡೆದುಕೊಳ್ಳಬಹುದು ಎನ್ನಲಾಗಿದೆ. ಜೊತೆಗೆ ಯಾವುದೇ ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್‌ನಲ್ಲಿ ತಮ್ಮ ಕೆಲಸವನ್ನು ಹೆಚ್ಚು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಲು ಇದರಲ್ಲಿ ವರ್ಧಿತ ವೀಡಿಯೊ ಕಾನ್ಫರೆನ್ಸಿಂಗ್ ವೈಶಿಷ್ಟ್ಯಗಳನ್ನು ಕೂಡ ಸೇರಿಸಲಾಗಿದೆ.

Best Mobiles in India

English summary
Apple WWDC 2023: Apple announced iPadOS 17 and macOS Sonoma updates
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+