Home
ಸುದ್ದಿಜಾಲ

Apple WWDC 2023: ಆಪಲ್‌ ಮ್ಯಾಕ್‌ಬುಕ್ ಏರ್ 15 ಬಿಡುಗಡೆ ! ಭಾರತದಲ್ಲಿ ಬೆಲೆ ಎಷ್ಟು!

ಆಪಲ್‌ ಕಂಪೆನಿ ತನ್ನ ವಾರ್ಷಿಕ ಸಮ್ಮೇಳನ ವರ್ಲ್ಡ್‌ವೈಡ್ ಡೆವಲಪರ್ಸ್ ಕಾನ್ಫರೆನ್ಸ್ನಲ್ಲಿ (Apple WWDC 2023) ನಿರೀಕ್ಷೆತಂತೆಯೆ ಮ್ಯಾಕ್‌ಬುಕ್‌ ಏರ್‌ 15 ಅನ್ನು ಅನಾವರಣಗೊಳಿಸಿದೆ. ಇದು ಆಪಲ್‌ ಕಂಪೆನಿಯ M2 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಆಪಲ್ ಕಂಪೆನಿ ಇದೇ ಈವೆಂಟ್‌ನಲ್ಲಿ ತನ್ನ ಹೊಸ ಮ್ಯಾಕ್ ಸ್ಟುಡಿಯೋ ಮತ್ತು ಮ್ಯಾಕ್ ಪ್ರೊ ಮಾದರಿಗಳನ್ನು ಸಹ ಘೋಷಣೆ ಮಾಡಿದೆ.

ಹೌದು, ಆಪಲ್‌ ವರ್ಲ್ಡ್‌ವೈಡ್ ಡೆವಲಪರ್ಸ್ ಕಾನ್ಫರೆನ್ಸ್ನಲ್ಲಿ ಮ್ಯಾಕ್‌ಬುಕ್‌ ಏರ್‌ 15 ಅನ್ನು ಪ್ರದರ್ಶನ ಮಾಡಿದೆ. ಇದು 8 ಕೋರ್ CPU ಮತ್ತು 10-ಕೋರ್ GPU ಅನ್ನು ಹೊಂದಿದ್ದು, ಇಂಟೆಲ್ ಚಾಲಿತ ಮ್ಯಾಕ್‌ಬುಕ್‌ಗಿಂತ 12 ಪಟ್ಟು ವೇಗವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗಿದೆ. ಹಾಗಾದ್ರೆ ಆಪಲ್‌ ಕಂಪೆನಿ ಪ್ರದರ್ಶಿಸಿರುವ ಮ್ಯಾಕ್‌ಬುಕ್‌ ಏರ್‌ 15 ಹಾಗೂ ಮ್ಯಾಕ್ ಸ್ಟುಡಿಯೋ ಮತ್ತು ಮ್ಯಾಕ್ ಪ್ರೊ ಮಾದರಿಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Apple WWDC 2023: ಆಪಲ್‌ ಮ್ಯಾಕ್‌ಬುಕ್ ಏರ್ 15 ಬಿಡುಗಡೆ ! ಬೆಲೆ ಎಷ್ಟು!

ಮ್ಯಾಕ್‌ಬುಕ್ ಏರ್ 15 ವಿಶೇಷತೆ ಏನು?
ಮ್ಯಾಕ್‌ಬುಕ್ ಏರ್ 15 ಹೆಸರೇ ಸೂಚಿಸುವಂತೆ ಇದು 15.3 ಇಂಚಿನ ಲಿಕ್ವಿಡ್ ರೆಟಿನಾ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 500 ನಿಟ್ಸ್‌ ಬ್ರೈಟ್‌ನೆಸ್ ಅನ್ನು ಬೆಂಬಲಿಸಲಿದ್ದು, ಕೇವಲ 11.5mm ಅಳತೆಯನ್ನು ಹೊಂದಿದೆ. ಆಪಲ್‌ ಕಂಪೆನಿ ಪ್ರಕಾರ ಇದು ವಿಶ್ವದ ಅತ್ಯಂತ ತೆಳುವಾದ 15 ಇಂಚಿನ ಲ್ಯಾಪ್‌ಟಾಪ್ ಆಗಿದೆ. ಇನ್ನು ಮ್ಯಾಕ್‌ಬುಕ್ ಏರ್ 15 MagSafe ಚಾರ್ಜಿಂಗ್, ಪರಿಕರಗಳನ್ನು ಸಂಪರ್ಕಿಸಲು ಎರಡು ಥಂಡರ್‌ಬೋಲ್ಟ್ ಪೋರ್ಟ್‌ಗಳನ್ನು ಹೊಂದಿದೆ.

ಇನ್ನು 6K ಇನರ್‌ ಡಿಸ್‌ಪ್ಲೇ ಜೊತೆಗೆ 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಒಳಗೊಂಡಿದೆ. ಮ್ಯಾಕ್‌ಬುಕ್ ಏರ್ 15-ಇಂಚಿನ ನಾಲ್ಕು ಕಾರ್ಯಕ್ಷಮತೆಯ ಕೋರ್‌ಗಳು ಮತ್ತು ನಾಲ್ಕು ದಕ್ಷತೆಯ ಕೋರ್‌ಗಳನ್ನು ಸಹ ಹೊಂದಿದೆ. ಅಲ್ಲದೆ 10-ಕೋರ್ ಜಿಪಿಯು ಮತ್ತು 16-ಕೋರ್ ನ್ಯೂರಲ್ ಎಂಜಿನ್‌ನೊಂದಿಗೆ 8-ಕೋರ್ ಸಿಪಿಯು ನಲ್ಲಿ ಕಾರ್ಯನಿರ್ವಹಿಸಲಿದೆ. ಇದರಲ್ಲಿ 1080p ವೆಬ್‌ಕ್ಯಾಮ್ ಮತ್ತು ಸ್ಪಷ್ಟವಾದ ಧ್ವನಿ ಕರೆಗಳಿಗಾಗಿ ಮೂರು-ಮೈಕ್ ರೇಂಜ್‌ ಅನ್ನು ಸಹ ನೀಡಲಾಗಿದೆ. ಇದರಲ್ಲಿ ಒಟ್ಟು ಆರು ಸ್ಪೀಕರ್‌ಗಳನ್ನು ನೀಡಲಾಗಿದೆ.

ಮ್ಯಾಕ್‌ ಸ್ಟುಡಿಯೋ (2023) ವಿಶೇಷತೆ ಏನು?
ಇನ್ನು ಆಪಲ್‌ ಕಂಪೆನಿ ಅನಾವರಣಗೊಳಿಸಿರುವ ಮ್ಯಾಕ್ ಸ್ಟುಡಿಯೊ (2023) ಹೊಸತನದಿಂದ ಕೂಡಿದೆ. ಇದು M2 ಮ್ಯಾಕ್ಸ್‌ SoC M1 ಮ್ಯಾಕ್ಸ್‌ ಜೊತೆಗೆ ಕಾರ್ಯನಿರ್ವಹಿಸಲಿದ್ದು, ಹಿಂದಿನ gen Studio ಗಿಂತ 50% ವೇಗವಾಗಿರಲಿದೆ ಎಂದು ಆಪಲ್‌ ಹೇಳಿದೆ. ಇನ್ನು ಈ ಹೊಸ M2 ಮ್ಯಾಕ್ಸ್‌ SoC ಮೂರು ಪಟ್ಟು ವೇಗವಾಗಿರಲಿದೆ. ಮ್ಯಾಕ್ ಸ್ಟುಡಿಯೋ (2023) ಹೆಚ್ಚಿನ ಬ್ಯಾಂಡ್‌ವಿಡ್ತ್ HDMI ಅನ್ನು ಹೊಂದಿದೆ. ಇದು 8K ರೆಸಲ್ಯೂಶನ್ ಮತ್ತು 240Hz ಫ್ರೇಮ್‌ರೇಟ್‌ಗಳನ್ನು ಸಕ್ರಿಯಗೊಳಿಸಲಿದ್ದು, M2 ಅಲ್ಟ್ರಾದೊಂದಿಗೆ ಮ್ಯಾಕ್ ಸ್ಟುಡಿಯೋ ಆರು ಪ್ರೊ ಡಿಸ್‌ಪ್ಲೇ XDR ಗಳನ್ನು ಬೆಂಬಲಿಸಲಿದೆ.

ಮ್ಯಾಕ್‌ ಪ್ರೊ (2023) ವಿಶೇಷತೆ ಏನು?
ಮ್ಯಾಕ್ ಪ್ರೊ (2023) ಈ ಹಿಂದಿನ ಮಾದರಿಯ ಲುಕ್‌ ಅನ್ನೇ ಹೊಂದಿದ್ದು, ಹೊಸದಾಗಿ ಇಂಟೆಲ್ ಕ್ಸಿಯಾನ್ ಸಿಪಿಯುಗಳನ್ನು M2 ಅಲ್ಟ್ರಾ SoC ನೊಂದಿಗೆ ಬರಲಿದೆ. ಇದು ನಿಮಗೆ 24-ಕೋರ್ CPU, 76-ಕೋರ್ GPU ಹೊಂದಿದ್ದು, ಇಂಟೆಲ್‌ ಮ್ಯಾಕ್‌ ಪ್ರೊಗೆ ಹೋಲಿಸಿದರೆ ಎರಡು ಪಟ್ಟು ಮೆಮೊರಿ ಮತ್ತು SSD ಸ್ಟೋರೇಜ್‌ನೊಂದಿಗೆ ಬರಲಿದೆ. ಇದಲ್ಲದೆ 800GBps ಏಕೀಕೃತ ಮೆಮೊರಿ ಬ್ಯಾಂಡ್‌ವಿಡ್ತ್‌ನೊಂದಿಗೆ ಬೃಹತ್ 192GB ಮೆಮೊರಿಯೊಂದಿಗೆ ಕಾನ್ಫಿಗರ್ ಮಾಡಬಹುದಾಘಿದೆ. ಇದಲ್ಲದೆ ಮ್ಯಾಕ್‌ ಪ್ರೊ (2023) ವೀಡಿಯೊ ರೆಂಡರಿಂಗ್ ಅನ್ನು ವೇಗಗೊಳಿಸಲು ಏಳು ಆಫ್ಟರ್‌ಬರ್ನರ್ ಕಾರ್ಡ್‌ಗಳ ಪವರ್‌ ಅನ್ನು ಕೂಡ ನೀಡಲಾಗಿದೆ.

Apple WWDC 2023: ಆಪಲ್‌ ಮ್ಯಾಕ್‌ಬುಕ್ ಏರ್ 15 ಬಿಡುಗಡೆ ! ಬೆಲೆ ಎಷ್ಟು!

ಭಾರತದಲ್ಲಿ ಮ್ಯಾಕ್‌ಬುಕ್‌ ಏರ್‌ 15, ಮ್ಯಾಕ್‌ ಸ್ಟುಡಿಯೋ (2023) ಮತ್ತು ಮ್ಯಾಕ್‌ ಪ್ರೊ (2023) ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಹೊಸ ಮ್ಯಾಕ್‌ಬುಕ್ ಏರ್ 15 ಇಂಚಿನ ಬೆಲೆಯನ್ನು 1,34,900ರೂ.ಗಳಿಗೆ ನಿಗಧಿಪಡಿಸಲಾಗಿದೆ. ಇದು ಮಿಡ್‌ನೈಟ್, ಸಿಲ್ವರ್, ಸ್ಪೇಸ್ ಗ್ರೇ ಮತ್ತು ಸ್ಟಾರ್‌ಲೈಟ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.
ಮ್ಯಾಕ್ ಸ್ಟುಡಿಯೋ (2023) ಭಾರತದಲ್ಲಿ 2,09,900ರೂ. ಬೆಲೆ ಹೊಂದಿದೆ.
ಮ್ಯಾಕ್‌ಪ್ರೊ ಟವರ್ ಆವರಣದ ಬೆಲೆ 7,29,900ರೂ. ಆಗಿರಲಿದೆ.

Best Mobiles in India

English summary
Apple WWDC 2023: MacBook Air with 15-Inch Display and Apple M2 Chip Launched: Details here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+