ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ! ಆಪಲ್ ಮ್ಯಾಕ್‌ಬುಕ್ ಖರೀದಿಸಿದರೆ ಭಾರಿ ಡಿಸ್ಕೌಂಟ್!
ಆಪಲ್ ಡಿವೈಸ್‌ಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಲು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಆಪಲ್ ಸಂಸ್ಥೆ ರಿಯಾಯಿತಿ ಸೇಲ್ ಘೋಷಿಸಿದರೆ ಸಾಕು ಮುಗಿಬಿದ್ದು ಕೊಳ್ಳಬೇಕು ಅನ್ನೊ ಗ್ರಾಹಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದೀಗ ಭಾರತದಲ್ಲಿ ಆಪಲ್ ಸ್ಟೋರ್ ತನ್ನ ವಾರ್ಷಿಕ ಬ್ಯಾಕ್ ಟು ಯೂನಿವರ್ಸಿಟಿ ಆಫರ್ ಸೇಲ್ ಆಯೋಜಿಸಿದೆ.
ಹೌದು, ಭಾರತದಲ್ಲಿನ ಆಪಲ್ ಸ್ಟೋರ್ ಆನ್‌ಲೈನ್‌ನಲ್ಲಿ ತನ್ನ ವಾರ್ಷಿಕ 'ಬ್ಯಾಕ್ ಟು ಯೂನಿವರ್ಸಿಟಿ' ಆಫರ್ ಅನ್ನು ಆಯೋಜಿಸಿದೆ. ಇದು ಆಪಲ್ ಕಂಪೆನಿ ವಿಶೇಷ ರಿಯಾಯಿತಿ ಸೇಲ್ ಆಗಿದೆ. ಇದರಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು, ಶಿಕ್ಷಕರು ಬಿಗ್ ಆಫರ್‌ನಲ್ಲಿ ಆಪಲ್ ಐಪ್ಯಾಡ್‌ಗಳು, ಮ್ಯಾಕ್‌ಬುಕ್‌ಗಳು ಮತ್ತು ಏರ್‌ಪಾರ್ಡ್‌ಗಳನ್ನು ಖರೀದಿಸಲು ಅವಕಾಶ ನೀಡಲಾಗಿದೆ. ಹಾಗಾದ್ರೆ ಆಪಲ್ ಸಂಸ್ಥೆಯ 'ಬ್ಯಾಕ್ ಟು ಯೂನಿವರ್ಸಿಟಿ' ಈವೆಂಟ್‌ನಲ್ಲಿ ಏನೆಲ್ಲಾ ಆಫರ್ ಲಭ್ಯವಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮ್ಯಾಕ್‌ಬುಕ್ ಏರ್ (M1) ಮೇಲೆ ಭರ್ಜರಿ ಡಿಸ್ಕೌಂಟ್
ಆಪಲ್ ಸಂಸ್ಥೆ ತನ್ನ ಬ್ಯಾಕ್ ಟು ಯೂನಿವರ್ಸಿಟಿ ಈವೆಂಟ್ ಆಫರ್‌ನಲ್ಲಿ ಮ್ಯಾಕ್‌ಬುಕ್ ಏರ್(M1) ಮೇಲೆ 10,000ರೂ. ರಿಯಾಯಿತಿ ನೀಡುತ್ತಿದೆ. ಜೊತೆಗೆ 14,900ರೂ. ಮೌಲ್ಯದ ಏರ್‌ಪಾಡ್ಸ್ Gen 2 ಅನ್ನು ಉಚಿತವಾಗಿ ನೀಡುತ್ತಿದೆ. ಇದರಿಂದ ವಿದ್ಯಾರ್ಥಿಗಳು ಮ್ಯಾಕ್‌ಬುಕ್ ಏರ್ (M1) ಅನ್ನು ರಿಯಾಯಿತಿ ದರದಲ್ಲಿ ಕೇವಲ 89,900ರೂ. ಬೆಲೆಗೆ ಖರೀದಿಸಬಹುದಾಗಿದೆ. ಇದಲ್ಲದೆ ಖರೀದಿದಾರರು ಮೂರು ತಿಂಗಳ ಆಪಲ್ ಮ್ಯೂಸಿಕ್ ಮತ್ತು ಆಪಲ್ ಟಿವಿ + ಚಂದಾದಾರಿಕೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.
ಮ್ಯಾಕ್‌ಬುಕ್ ಏರ್ (M2) ಖರೀದಿಸಿದರೆ ಸಿಗಲಿದೆ ಭಾರಿ ಬಹುಮಾನ
ಇನ್ನು ಇದೇ ಸಮಯದಲ್ಲಿ ಮ್ಯಾಕ್‌ಬುಕ್ ಏರ್ (M2) ಮೇಲೆ ಕೂಡ 10,000ರೂ. ರಿಯಾಯಿತಿ ಮತ್ತು 14,900ರೂ. ಮೌಲ್ಯದ ಏರ್‌ಪಾಡ್ಸ್ 2 ಅನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಇದರಿಂದ ಸೇಲ್ ಸಮಯದಲ್ಲಿ ಮ್ಯಾಕ್‌ಬುಕ್ ಏರ್ (M2) ನಿಮಗೆ ಕೇವಲ 1,04,900ರೂ. ಬೆಲೆಯಲ್ಲಿ ಸಿಗಲಿದೆ. ಈ ಆಫರ್‌ನಲ್ಲಿಯೂ ಸಹ ಹೆಚ್ಚುವರಿಯಾಗಿ, ಆಪಲ್ ಮ್ಯೂಸಿಕ್ ಮತ್ತು ಆಪಲ್ ಟಿವಿ ಪ್ಲಸ್ ಚಂದಾದಾರಿಕೆಯನ್ನು ಮೂರು ತಿಂಗಳ ಅವಧಿಗೆ ಉಚಿತವಾಗಿ ಪಡೆದುಕೊಳ್ಳಬಹುದು.
ಮ್ಯಾಕ್‌ಬುಕ್ ಏರ್ 15 ಇಂಚಿನ (M2) ಆಯ್ಕೆಗೂ ಬಂಪರ್ ಆಫರ್
ಮ್ಯಾಕ್‌ಬುಕ್ ಏರ್ 15 ಇಂಚಿನ (M2) ಲ್ಯಾಪ್‌ಟಾಪ್ ಮೇಲೆ ಸಹ ನಿಮಗೆ 10,000ರೂ. ರಿಯಾಯಿತಿ ಸಿಗಲಿದೆ. ಅಷ್ಟೇ ಅಲ್ಲ 14,900ರೂ.ಬೆಲೆ ಬಾಳುವ ಏರ್‌ಪಾಡ್ಸ್Gen 2 ಅನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಇದರಿಂದ ಮ್ಯಾಕ್‌ಬುಕ್ ಏರ್ 15 ಇಂಚಿನ ಬೆಲೆ 1,24,900 ರೂ. ಆಗಿರಲಿದೆ. ಎಂದಿನಂತೆ ಈ ಖರೀದಿಯ ಮೇಲೂ ಸಹ ನಿಮಗೆ ಮೂರು ತಿಂಗಳ ಅವಧಿಗೆ ಉಚಿತವಾಗಿ ಆಪಲ್ ಮ್ಯೂಸಿಕ್ ಚಂದಾದಾರಿಕೆ ಸಿಗಲಿದೆ.
ಮ್ಯಾಕ್‌ಬುಕ್ ಪ್ರೊ 13 ಮೇಲಿಗೆ ಸೂಪರ್ ಡೂಪರ್ ಆಫರ್
ಮ್ಯಾಕ್‌ಬುಕ್ ಪ್ರೊ 13 ಮೆಲೂ ಕೂಡ 10,000ರೂ.ಗಳ ರಿಯಾಯಿತಿ ಸಿಗಲಿದೆ. ಇದರೊಂದಿಗೆ ಉಚಿತವಾಗಿ 14,900ರೂ. ಮೌಲ್ಯದ ಏರ್‌ಪಾಡ್ಸ್ Gen 2 ಅನ್ನು ಪಡೆದುಕೊಳ್ಳಬಹುದು. ಇದರಿಂಧ ವಿದ್ಯಾರ್ಥಿಗಳು ಇದನ್ನು ಕೇವಲ 1,19,900ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಇದರೊಂದಿಗೆ ಮೂರು ತಿಂಗಳ ಉಚಿತ ಆಪಲ್ ಮ್ಯೂಸಿಕ್ ಮತ್ತು ಆಪಲ್ ಟಿವಿ ಪ್ಲಸ್ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದಾಗಿದೆ.

ಮ್ಯಾಕ್‌ಬುಕ್ ಪ್ರೊ 14 ಖರೀದಿಸೋರಿಗೆ ವಿಶೇಷ ರಿಯಾಯಿತಿ
ಮ್ಯಾಕ್‌ಬುಕ್ ಪ್ರೊ 14 ಖರೀದಿಸುವವರಿಗೆ ವಿಶೇಷವಾಗಿ 15,000ರೂ. ರಿಯಾಯಿತಿ ಸಿಗಲಿದೆ. ಇದರೊಂದಿಗೆ 14,900ರೂ. ಮೌಲ್ಯದ ಏರ್‌ಪಾಡ್ಸ್ 2 ಅನ್ನು ಉಚಿತವಾಗಿ ನೀಡಲಾಗ್ತಿದೆ. ಇದರಿಂದ ಈ ಡಿವೈಸ್ ಅನ್ನು ನೀವು 1,84,900ರೂ. ಗಳಿಗೆ ಖರೀದಿಸಬಹುದಾಗಿದೆ. ಇದನ್ನು ಖರೀದಿಸುವವರಿಗೆ ಸಹ ಮೂರು ತಿಂಗಳ ಉಚಿತ ಆಪಲ್ ಮ್ಯೂಸಿಕ್ ಮತ್ತು ಆಪಲ್ ಟಿವಿ ಪ್ಲಸ್ ಚಂದಾದಾರಿಕೆಯನ್ನು ನೀಡಲಾಗ್ತಿದೆ.


Click it and Unblock the Notifications








