ಕ್ರೆಡಿಟ್ ಕಾರ್ಡ್ ಸ್ಕ್ಯಾನ್ ಮಾಡುವ ಸೂಪರ್ ಆಪಲ್ ಅಪ್ಲಿಕೇಶನ್

By Shwetha
|

ಆಪಲ್‌ನ ಡಬ್ಲ್ಯೂಡಬ್ಲ್ಯೂಡಿಸಿ ಕಾನ್ಫರೆನ್ಸ್‌ನಲ್ಲಿ ಐಓಎಸ್ 8 ಬಿಡುಗಡೆಯೊಂದಿಗೆ ಸಾಕಷ್ಟು ಅಚ್ಚರಿಗಳನ್ನು ಆಪಲ್ ಡೆಲಿವರಿ ಮಾಡಿತ್ತು. ಆದರೆ ಬಳಕೆದಾರರು ಇನ್ನಷ್ಟು ಅಂಶಗಳನ್ನು ಹುಡುಕುತ್ತಿದ್ದು ಅವರ ಅನ್ವೇಷಣೆಗೆ ತಕ್ಕಂತೆ ಸಫಾರಿಯಲ್ಲಿ ಹೊಸ ಕ್ರೆಡಿಟ್ ಕಾರ್ಡ್ ಸ್ಕ್ಯಾನಿಂಗ್ ಆಯ್ಕೆ ಕೂಡ ಬಂದಿದೆ.

ಇ ಕಾಮರ್ಸ್ ಟ್ರಾನ್ಸಾಕ್ಶನ್ ಸಂದರ್ಭದಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಅನ್ನು ಸ್ಕ್ಯಾನ್ ಮಾಡಲು ಐಫೋನ್ ಕ್ಯಾಮೆರಾ ಬಳಸುವ ವಿಶಿಷ್ಟ ಬಳಕೆಯನ್ನು ಈ ಫೀಚರ್ ನಿಮಗೊದಗಿಸುತ್ತದೆ.

ಆಪಲ್‌ನ ಐಓಎಸ್ 8 ನಿಮ್ಮ ಸೂಪರ್ ಬಾಡಿಗಾರ್ಡ್

ಐಓಎಸ್ 8 ನ ಆವೃತ್ತಿಯಾದ ಸಫಾರಿಯಲ್ಲಿ, ನೀವು ಸ್ಕ್ಯಾನ್ ಕಾರ್ಡ್ ಪ್ರಾಂಪ್ಟ್ ಅಂಶವನ್ನು ನೋಡಬಹುದು. ನಿಮ್ಮ ಹೆಚ್ಚಿನ ಆನ್‌ಲೈನ್ ಖರೀದಿಗಾಗಿ ನಿಮ್ಮನ್ನು ಅನುಮತಿಸುವ ಪಾಸ್‌ವರ್ಡ್‌ ಹಾಗೂ ಸ್ವಯಂ ಭರ್ತಿಗೊಳಿಸುವಿಕೆ ಆಯ್ಕೆಗಳು ಐಓಎಸ್ 7 ನಲ್ಲಿ ಹೊಸ ಭಾಗವೆಂಬಂತೆ ಈಗಾಗಲೇ ಲಭ್ಯವಿದೆ. ಈ ಹೊಸ ಫೀಚರ್ ನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿರುವ ಚಿತ್ರವನ್ನು ಅನುವಾದಿಸಲು ಅಕ್ಷರ ಗುರುತಿಸುವಿಕೆಯನ್ನು ಬಳಸಿಕೊಂಡು ಸಂಖ್ಯೆಗಳಲ್ಲಿ ಒದಗಿಸುತ್ತದೆ ಇದು ನಿಮ್ಮ ಐಓಎಸ್ ಡಿವೈಸ್‌ನಲ್ಲಿ ಕಂಡುಬರುತ್ತದೆ.

ಐಓಎಸ್ 8 ನ ಇನ್ನೊಂದು ವೈಶಿಷ್ಟ್ಯತೆಯೆಂದರೆ ಇದು ಮ್ಯಾಕ್ (ಮೀಡಿಯಾ ಪ್ರವೇಶ ನಿಯಂತ್ರಣ) ವಿಳಾಸವನ್ನು ರಚಿಸುತ್ತದೆ. ಇದರಿಂದ ಮಾರ್ಕೆಟಿಂಗ್ ಕಂಪೆನಿಗಳಿಗೆ ನಿಮ್ಮನ್ನು ಮ್ಯಾಕ್ ವಿಳಾಸದಲ್ಲಿ ಟ್ರ್ಯಾಕ್ ಮಾಡಲು ಸಾಧ್ಯವಾಗುವುದಿಲ್ಲ.

ಐಓಎಸ್ 8 ನ ಇನ್ನಷ್ಟು ವಿಶೇಷತೆಗಳನ್ನು ನೀವು ಮುಂಬರುವ ದಿನಗಳಲ್ಲಿ ಕಾಣಬಹುದಾಗಿದ್ದು ಇದರ ಚಕಿತಗೊಳಿಸುವ ಅಂಶಗಳನ್ನು ನೋಡಲು ಇನ್ನೂ ಸ್ವಲ್ಪ ದಿನ ಕಾಯಬೇಕಾಗುತ್ತದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X