Apple: ಜೂನ್ 10ರಿಂದ ಆಪಲ್‌ನ ಬಹು ನಿರೀಕ್ಷಿತ ವರ್ಲ್ಡ್‌ವೈಡ್ ಡೆವಲಪರ್ಸ್ ಕಾನ್ಫರೆನ್ಸ್; ಏನೆಲ್ಲಾ ಘೋಷಣೆಗಳಿರಲಿವೆ !
ಆಪಲ್ (Apple) ಸಂಸ್ಥೆ ತನ್ನ ಬಹು ನಿರೀಕ್ಷಿತ ವರ್ಲ್ಡ್‌ವೈಡ್ ಡೆವಲಪರ್ಸ್ ಕಾನ್ಫರೆನ್ಸ್ (WWDC) 2024ಕ್ಕೆ ತಯಾರಿ ನಡೆಸುತ್ತಿದೆ. ಈ ಸಮ್ಮೇಳನವು ಜೂನ್ 10 ರಿಂದ 14ರವರೆಗೆ ನಡೆಯಲಿದೆ. ಜೂನ್ 10 ರ ಸೋಮವಾರ ಬೆಳಗ್ಗೆ 10 ಗಂಟೆಗೆ ಈ ಪ್ರಮುಖ ಕಾರ್ಯಕ್ರಮ ಆರಂಭವಾಗಲಿದೆ. ಈ ಸಂದರ್ಭಗಳಲ್ಲಿ ಪ್ರತೀ ವರ್ಷದಂತೆ iOS 18, ಐಪ್ಯಾಡ್ OS 18, ವಾಚ್ OS ಅಪ್ಡೇಟ್‌ಗಳು ಮತ್ತು ಹೊಸ ಮ್ಯಾಕ್OS ಸೇರಿದಂತೆ ಹೊಸ ಸಾಫ್ಟ್‌ವೇರ್ ಅಪ್ಡೇಟ್‌ಗಳ ಕುರಿತು ಮಾಹಿತಿ ನೀಡಲಿದೆ. ಜೊತೆಗೆ ಈವೆಂಟ್‌ನ ಇತರ ದಿನಗಳಲ್ಲಿ ಬೇರೆ ಬೇರೆ ವಿಚಾರಗಳಿಗೆ ಸಂಬಂಧಿಸಿದ ಪ್ರಕಟಣೆಗಳು ಹೊರಬರುವ ಸಾಧ್ಯತೆಗಳಿವೆ.
ಎಐ (AI) ಪ್ರಕಟಣೆಗಳಿಗೆ ಆಪಲ್ ಸಜ್ಜು: ಗೂಗಲ್ ಮತ್ತು ಸ್ಯಾಮ್‌ಸಂಗ್‌ನಂತಹ ಕಂಪನಿಗಳು ಈಗಾಗಲೇ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಎಐ ವೈಶಿಷ್ಟ್ಯಗಳನ್ನು ಅಳವಡಿಸಿಕೊಂಡಿವೆ, ಆದರೆ ಆಪಲ್ ಪ್ರಮುಖ ಎಐ ಅಪ್ಡೇಟ್ ಅನ್ನು ಅಳವಡಿಸುವಲ್ಲಿ ಸ್ವಲ್ಪ ಹಿಂದುಳಿದಿದೆ. ಆದಾಗ್ಯೂ WWDCಯಲ್ಲಿ ಕ್ಯುಪರ್ಟಿನೊ ದೈತ್ಯ ತನ್ನ ಎಐ ತಂತ್ರವನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ.
ಗೂಗಲ್, ಮೈಕ್ರೋಸಾಫ್ಟ್ ಮತ್ತು ಓಪನ್ ಎಐ ಪ್ರಾಬಲ್ಯವಿದ್ದು ಅವುಗಳಿಗೆ ಸ್ಪರ್ಧೆ ನೀಡಲು ಆಪಲ್ ಸಿದ್ದವಾಗಿದೆ. ಬ್ಲೂಮ್‌ಬರ್ಗ್ ಮಾರ್ಕ್ ಗುರ್‌ಮನ್ ಪ್ರಕಾರ, ಆಪಲ್‌ನ ಎಐ ವಿಧಾನವು ಅಲಂಕಾರಕ್ಕಿಂತ ಡಿವೈಸ್‌ನ ಪ್ರಾಯೋಗಿಕ ವೈಶಿಷ್ಟ್ಯಗಳ ಮೇಲೆ ಕೇಂದ್ರೀಕರಿಸಲಿದೆ ಎಂದು ತಿಳಿಸಿದೆ. ಜೊತೆಗೆ ಈ ಕಾನ್ಫರೆನ್ಸ್‌ನಲ್ಲಿ ಎಐ ಕುರಿತಾದ ಪ್ರಕಟಣೆಗಳನ್ನು ಒಳಗೊಂಡಿಬಹುದು ಎಂದು ನಿರೀಕ್ಷಿಸಲಾಗಿದೆ.

ಸ್ಮಾರ್ಟ್ ರೀಕ್ಯಾಪ್ ಫೀಚರ್ಸ್: ಈ ಹೊಸ ಫೀಚರ್ ಬಿಟ್ಟು ಹೋಗಿರುವ ಟೆಕ್ಸ್ಟ್, ಅಧಿಸೂಚನೆಗಳು ಮತ್ತು ಮಿಡಿಯಾವನ್ನು ಸಮರೈಸ್ ಮಾಡಲಿದೆ. ಬಳಕೆದಾರರಿಗೆ ಬಿಟ್ಟು ಹೋಗಿರುವ ಸಂಕ್ಷಿಪ್ತ ಅವಲೋಕನವನ್ನು ಒದಗಿಸುತ್ತದೆ. ಇದು ಮೈಕ್ರೋಸಾಫ್ಟ್ ರೀಕಾಲ್ ಫೀಚರ್ ಅನ್ನು ಪ್ರತಿನಿಧಿಸಲಿದೆ. ಜೊತೆಗೆ ಡಿವೈಸ್‌ನಲ್ಲಿ ಇತ್ತೀಚೆಗೆ ಮಾಡಿರುವ ಅಕ್ಟಿವಿಟಿಯನ್ನು ಟ್ರ್ಯಾಕ್ ಮಾಡಬಹುದಾಗಿದೆ.
ಧ್ವನಿ ಮೆಮೊ ಪ್ರತಿಲೇಖನಗಳು: ವಾಯ್ಸ್ ಮೆಮೊ ಅಪ್ಲಿಕೇಶನ್ ಎಐ ಚಾಲಿತ ಪ್ರತಿಲೇಖನಗಳನ್ನು ಪಡೆಯುತ್ತದೆ ಎಂದು ವರದಿಯಾಗಿದೆ, ಇದು ಬಳಕೆದಾರರಿಗೆ ರೆಕಾರ್ಡ್ ಮಾಡಲಾದ ವಿಷಯವನ್ನು ತಿಳಿಸಲು ಸುಲಭವಾಗುತ್ತದೆ.
ವರ್ಧಿತ ಸ್ಪಾಟ್‌ಲೈಟ್ ಹುಡುಕಾಟ: ಎಐ ಸುಧಾರಣೆಗಳಿಂದ ಡಿವೈಸ್‌ನಲ್ಲಿ ಸ್ಪಾಟ್‌ಲೈಟ್ ಹುಡುಕಾಟಗಳು ಮತ್ತು ಸಫಾರಿ ಮೂಲಕ ಇಂಟರ್ನೆಟ್ ಹುಡುಕಾಟಗಳನ್ನು ಹೆಚ್ಚಿಸುತ್ತದೆ.
ಎಐ ರಚಿತವಾದ ಎಮೋಜಿ ಮತ್ತು ಫೋಟೋ ರೀಟಚಿಂಗ್: ಆಪಲ್ ಟೆಕ್ಸ್ಟ್ ಮೆಸೇಜ್ ಸಂದರ್ಭದ ಆಧಾರದ ಮೇಲೆ ಎಮೋಜಿ ಮತ್ತು ರಿಟಚ್ ಫೋಟೋಗಳನ್ನು ಉತ್ಪಾದಿಸುವ ಎಐ ವೈಶಿಷ್ಟ್ಯಗಳನ್ನು ಪರಿಚಯಿಸಬಹುದು.
ಸುಧಾರಿತ ಸಿರಿ: ಆಪಲ್ ಹೆಚ್ಚು ನೈಸರ್ಗಿಕ ಧ್ವನಿಯ ಸಿರಿಯನ್ನು ಅನಾವರಣಗೊಳಿಸುವ ನಿರೀಕ್ಷೆಯಿದ್ದು, ದೊಡ್ಡ ಭಾಷಾ ಮಾದರಿಗಳಿಂದ ವರ್ಧಿಸಲ್ಪಟ್ಟಿರುವ ಮತ್ತು ಆಪಲ್ ವಾಚ್‌ನಲ್ಲಿ ಸಿರಿ ಕಾರ್ಯ ಉತ್ತಮಗೊಳಿಸುವ ಸಾಧ್ಯತೆ ಇದೆ.
ಆಪಲ್‌ನ ಎಐ ಫೀಚರ್ಸ್‌ಗಳು ಪ್ರಾಥಮಿಕವಾಗಿ ಗೌಪ್ಯತೆ ಕಾರಣಕ್ಕೆ ಡಿವೈಸ್‌ನಲ್ಲಿ ರನ್ ಆಗುತ್ತವೆ ಎಂದು ಗುರ್ಮನ್ ತಿಳಿಸಿದ್ದಾರೆ. ಸಂಕೀರ್ಣ ಕಾರ್ಯಗಳನ್ನು M2 ಅಲ್ಟ್ರಾ ಆಧಾರಿತ ಸರ್ವರ್‌ಗಳಿಗೆ ಆಫ್‌ಲೋಡ್ ಮಾಡಲಾಗುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಬಿಡುಗಡೆಯಾದ ಹಳೆಯ ಆಪಲ್ ಸಾಧನಗಳು ಸಹ ಈ ವರ್ಧನೆಗಳಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುವ ಸಾಧ್ಯತೆಯಿದೆ.
ಎಐ ಕಂಪನಿಗಳೊಂದಿಗೆ ಆಪಲ್ ಪಾಲುದಾರಿಕೆ: ಎಐ ಅಳವಡಿಸಿಕೊಳ್ಳುವ ಹಾದಿಯಲ್ಲಿರುವ ಆಪಲ್ ಓಪನ್ ಎಐ, ಗೂಗಲ್ ಮತ್ತುಅಂಥ್ರೋಪಿಕ್ ( Anthropic) ಜೊತೆಗೆ ಮಾತುಕತೆ ನಡೆಸುತ್ತಿದೆ. ಓಪನ್ ಎಐನ ಚಾಟ್ GPT ಆಪಲ್ ಜೊತೆ ಸಂಯೋಜಿಸುವ ಮೊದಲನೆಯದು ಎಂದು ಹೇಳಲಾಗುತ್ತಿದ್ದು, ಗೇಮಿಂಗ್‌ಗೆ ಸಂಬಂಧಿಸಿದಂತೆ ಗೂಗಲ್ ಜೊತೆ ಚರ್ಚಿಸುತ್ತಿದೆ.
iOS 18 ಮತ್ತು iPadOS 18 ರ ಪ್ರಕಟಣೆ: ಅಂತಿಮವಾಗಿ ಆಪಲ್ ಪ್ರತಿ ವರ್ಷದಂತೆ ತನ್ನ ಡಿವೈಸ್‌ಗಳಿಗೆ ಸಾಫ್ಟ್‌ವೇರ್ ಅಪ್ಡೇಟ್‌ಗಳ ಹೊಸ ಪುನರಾವರ್ತನೆಯನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದ್ದು, iOS 18, ಐಪ್ಯಾಡ್ OS 18, ಮ್ಯಾಕ್OS ಮತ್ತು ವಾಚ್ OS ಅನಾವರಣ WWDC-2024ರ ಪ್ರಮುಖ ಘೋಷಣೆಗಳಲ್ಲಿ ಒಂದಾಗಿರಲಿದೆ.
ಆಪಲ್ ಅಭಿಮಾನಿಗಳು ಈ ಈವೆಂಟ್ ಅನ್ನು ಆಪಲ್ ಪೇಜ್ ಅಥವಾ ಆಪಲ್ ನ ಯೂಟ್ಯೂಬ್ ಚಾನೆಲ್ ಮೂಲಕ ಲೈವ್ ವೀಕ್ಷಣೆ ಮಾಡಬಹುದು.


Click it and Unblock the Notifications








