ಸ್ಮಾರ್ಟ್‌ಫೋನ್‌ಗೆ ಮಾರಕ ಈ ಅಪ್ಲಿಕೇಶನ್‌ಗಳು
ಸ್ಮಾರ್ಟ್‌ಫೋನ್‌ನಲ್ಲಿ ಅಪ್ಲಿಕೇಶನ್‌ಗಳು ಇಲ್ಲ ಎಂದಾದಲ್ಲಿ ಅದೊಂದು ತುಂಬಲಾರದ ನಷ್ಟವಾಗಿದೆ ಎಂದೇ ನಾವು ಅಂದುಕೊಳ್ಳುತ್ತೇವೆ. ಬೇರೆ ಬೇರೆ ಕೆಲಸ ಕಾರ್ಯಗಳನ್ನು ಮಾಡಲು, ಸಾಮಾಜಿಕ ತಾಣಗಳ ಮಾಹಿತಿಗಾಗಿ ಅಪ್ಲಿಕೇಶನ್‌ಗಳು ನಮಗೆ ಅಗತ್ಯವಿದೆ. ಆದರೆ ಇವುಗಳೇ ನಮ್ಮ ಫೋನ್‌ಗೆ ಮಾರಕವಾದರೆ ನಮಗೆ ಸಂಕಷ್ಟ ಖಂಡಿತ.
ನೀವು ಹೆಚ್ಚು ಬಳಸುವ ಜನಪ್ರಿಯ ಅಪ್ಲಿಕೇಶನ್‌ಗಳೇ ನಿಮ್ಮ ಫೋನ್‌ನ ಡೇಟಾವನ್ನು ನುಂಗಿ ಹಾಕುತ್ತಿವೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ. ಡೇಟಾ ಮ್ಯಾನೇಜ್‌ಮೆಂಟ್ ಮತ್ತು ಡೇಟಾ ಸೇವಿಂಗ್ ಅಪ್ಲಿಕೇಶನ್ ಆದ ಒಪೇರಾ ಮ್ಯಾಕ್ಸ್ ಪ್ರಕಾರ ಹೇಳುವಂತೆ ಫೇಸ್‌ಬುಕ್ ಮೆಸೆಂಜರ್, ಜಿಮೇಲ್ ಮತ್ತು ವಾಟ್ಸಾಪ್ ನಿಮ್ಮ ಡೇಟಾವನ್ನು ಮುಗಿಸುವ ಸಂಚುಕೋರ ಅಪ್ಲಿಕೇಶನ್‌ಗಳಾಗಿವೆ ಎಂಬುದಾಗಿದೆ. ಅದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನಾವು ವಿಷದವಾಗಿ ತಿಳಿಸುತ್ತಿದ್ದೇವೆ.

#1
ಹಿನ್ನಲೆಯಲ್ಲಿ ಚಾಲನೆ ನೀವು ಇವುಗಳನ್ನು ಬಳಸದೇ ಇದ್ದರೂ ಹಿನ್ನಲೆಯಲ್ಲಿ ಚಾಲನೆಯಾದ ಸಂದರ್ಭದಲ್ಲಿ ಈ ಅಪ್ಲಿಕೇಶನ್‌ಗಳು 30% ದಷ್ಟು ಡೇಟಾವನ್ನು ಮುಗಿಸಿಬಿಡುತ್ತವೆ ಎಂದಾಗಿದೆ.

#2
50% ದಷ್ಟು ಡೇಟಾ 50% ದಷ್ಟು ಡೇಟಾವನ್ನು ವಾಟ್ಸಾಪ್ ಬಳಕೆದಾರರು ಹಿನ್ನಲೆಯಲ್ಲಿ ಈ ಅಪ್ಲಿಕೇಶನ್ ಚಾಲನೆಯಾದ ಸಂದರ್ಭದಲ್ಲಿಯೇ ಕಳೆದುಕೊಳ್ಳುತ್ತಾರೆ.

#3
ಡೇಟಾ ಪ್ರಮಾಣ ಇನ್ನುಳಿದಂತೆ ಉಳಿದ ಡೇಟಾ ಪ್ರಮಾಣವನ್ನು ಫೇಸ್‌ಬುಕ್ ಮೆಸೆಂಜರ್ ಮತ್ತು ಜಿಮೇಲ್ ಬಳಕೆಯ ಸಂದರ್ಭದಲ್ಲಿ ಮುಗಿದು ಹೋಗುತ್ತದೆ. ಅದೂ ಅವುಗಳು ಸಕ್ರಿಯಗೊಂಡಿರದೇ ಇರುವಂತಹ ಸಂದರ್ಭದಲ್ಲಿ ಡೇಟಾ ಇಳಿಕೆಯಾಗುತ್ತದೆ.

#4
ಡೇಟಾ ವಿನಿಯೋಗ ಅಪ್ಲಿಕೇಶನ್‌ಗಳನ್ನು ನೀವು ಬಳಸದೇ ಇದ್ದ ಸಂದರ್ಭದಲ್ಲಿ ಡೇಟಾ ವಿನಿಯೋಗವಾಗುತ್ತದೆ ಎಂಬ ಸತ್ಯ ಕಹಿಯಾದರೂ ನೀವು ಅದನ್ನು ಅರಗಿಸಿಕೊಳ್ಳಲೇಬೇಕು.

#5
ವಾಟ್ಸಾಪ್, ಜಿಮೇಲ್ ವಾಟ್ಸಾಪ್‌ನಲ್ಲಿ ನಿಮಗೆ ಬರುವ ಇನ್‌ಕಮಿಂಗ್ ಸಂದೇಶಗಳು, ಜಿಮೇಲ್‌ಗೆ ಬರುವ ಇಮೇಲ್‌ಗಳು ಇದೆಲ್ಲಾ ನೀವು ಅಪ್ಲಿಕೇಶನ್ ತೆರೆಯುವುದಕ್ಕಾಗಿಯೇ ಕಾದುಕೊಂಡಿರುತ್ತವೆ.

#6
ಏರ್‌ಪ್ಲೇನ್ ಮೋಡ್ ಇದನ್ನು ನಿಲ್ಲಿಸಲು ಆದಷ್ಟು ಫೋನ್‌ನ ಬಳಕೆ ಇಲ್ಲದ ಸಂದರ್ಭದಲ್ಲಿ ಏರ್‌ಪ್ಲೇನ್ ಮೋಡ್‌ನಲ್ಲಿರಿಸುವುದು ಮುಂತಾಗಿ ಮಾಡಿ.

#7
ವೈಫೈ ಸೆಟ್ಟಿಂಗ್ಸ್ ಹೊಂದಿಸಿ ಭದ್ರತೆಯುಳ್ಳ ವೈಫೈ ನೆಟ್‌ವರ್ಕ್‌ಗೆ ನೀವು ಸಂಪರ್ಕವನ್ನು ಹೊಂದುವಂತೆ ಸೆಟ್ಟಿಂಗ್ಸ್ ಇದೆಯೇ ಎಂಬುದನ್ನು ಕಂಡುಕೊಳ್ಳಿ. ಡಿವೈಸ್ ಸೆಟ್ಟಿಂಗ್ಸ್‌ಗೆ ಹೋಗಿ. ನಿಮ್ಮ ವೈಫೈ ಆನ್ ಆಗಿದೆಯೇ ಎಂಬುದನ್ನು ನೋಡಿಕೊಳ್ಳಿ

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ
ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ


Click it and Unblock the Notifications








