Just In
- 10 hrs ago
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- 12 hrs ago
ಜಿಯೋದ ಈ ಪ್ಲ್ಯಾನ್ ಸಖತ್ ಆಗಿದೆ!..ರೀಚಾರ್ಜ್ ಮಾಡಬೇಕಾ?.ಬೇಡವೇ?
- 12 hrs ago
ದೃಷ್ಟಿಹೀನರಿಗಾಗಿ ಹೊಸ ಸ್ಮಾರ್ಟ್ವಾಚ್; ಇದು ಹೇಗೆಲ್ಲಾ ಕೆಲಸ ಮಾಡಲಿದೆ!?
- 14 hrs ago
Vivo X90 Pro : ಲಾಂಚ್ ಆಗಿಯೇ ಬಿಡ್ತು 'ವಿವೋ X90 ಪ್ರೊ' ಫೋನ್; ಖರೀದಿಗೆ ಕ್ಯೂ ಖಚಿತ!
Don't Miss
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Movies
Ramachari Serial: ವಿಹಾನ್ ಬಳಿ ಸತ್ಯ ಹೇಳಿಬಿಟ್ಟ ಚಾರು!
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಡಿಜಿಟಲ್ ಮೆಡಿಸಿನ್ – ಮೆದುಳಿನ ಕಾಯಿಲೆಗೆ ವೀಡಿಯೋ ಗೇಮ್
ನಮ್ಮ ಮೆದುಳಿಗೆ ವೀಡಿಯೋ ಗೇಮ್ ಗಳು ಸಹಾಯ ಮಾಡುವುದಕ್ಕೆ ಸಾಧ್ಯವಿದೆಯೇ? ಕೆಲವು ವೈದ್ಯಕೀಯ ಚಿಕಿತ್ಸೆಗಳಿಗೆ ಮುಂದಿನ ದಿನಗಳಲ್ಲಿ ವೀಡಿಯೋ ಗೇಮ್ ಗಳು ಬಳಕೆಯಾದರೂ ಆಶ್ಚರ್ಯ ಪಡಬೇಕಿಲ್ಲ. ಅಂತಹದ್ದೊಂದು ಸಂಶೋಧನೆಯನ್ನು ಸಂಶೋಧಕರು ಪ್ರಸ್ತುತ ಪಡಿಸಿದ್ದಾರೆ.

ವೀಡಿಯೋ ಗೇಮ್ ಗಳು ಮೆದುಳಿನ ಮೇಲೆ, ಕಣ್ಣುಗಳ ಮೇಲೆ ಹಾಗೂ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಮಾಡುವ ಪರಿಣಾಮಗಳ ಬಗ್ಗೆ ಚರ್ಚೆಗಳು ಇಂದು ನಿನ್ನೆಯದಲ್ಲ! ನಡೆಯುತ್ತಲೇ ಇದೆ. ಒಂದೇ ಸ್ಥಿತಿಯಲ್ಲಿ ಘಂಟೆಗಳ ಕಾಲ ಕುಳಿತುಕೊಳ್ಳುವುದರಿಂದಾಗಿ ದೈಹಿಕ ಆರೋಗ್ಯ ಹದಗೆಡುತ್ತದೆ ಎಂಬುದು ಒಂದು ವಾದ. ಆದರೆ ಇಲ್ಲೊಂದು ವಾದವು ವೀಡಿಯೋ ಗೇಮ್ ಗಳು ಮೆದುಳಿನ ಚಿಕಿತ್ಸೆಗೆ ಅಥವಾ ಮೆದುಳಿಗೆ ಟ್ರೈನಿಂಗ್ ನೀಡುವುದಕ್ಕೆ ಅನುಕೂಲಕಾರಿ ಎಂದು ಹೇಳುತ್ತಿದೆ.

ವೀಡಿಯೋ ಗೇಮ್ ಗಳು ನಿಜಕ್ಕೂ ನಿಮಗೆ ಕೆಟ್ಟದ್ದಾ? ಒಳ್ಳೇದಾ?
ಪೀಟರ್ ರೂಬಿನ್, WIRED ಹಿರಿಯ ಪ್ರೊಡ್ಯೂಸರ್. ಇವರು ಡಾಕ್ಟರ್ ಗಳನ್ನು, ಅಧ್ಯಯನಕಾರರನ್ನು ಮತ್ತು ಗೇಮ್ ಪರವಾಗಿ ಕೆಲವು ಸ್ಕಿಲ್ ಗಳನ್ನು ಟೆಸ್ಟ್ ಮಾಡಲು ಮುಂದಾದರು. ವೀಡಿಯೋ ಗೇಮ್ ನಮ್ಮ ಆರೋಗ್ಯದ ಮೇಲೆ ಏನು ಪರಿಣಾಮ ಮಾಡುತ್ತೆ ಎಂಬುದನ್ನು ಪರೀಕ್ಷೆಗೆ ಒಡ್ಡಲು ನಿರ್ಧರಿಸಿದರು.
ಆದರೆ, ಈ ವ್ಯಕ್ತಿ ಹೊರತಂದ ಫಲಿತಾಂಶ ಮಾತ್ರ ಆಶ್ಚರ್ಯಕರವಾಗಿದೆ ಮತ್ತು ಭವಿಷ್ಯದಲ್ಲಿ ವೀಡಿಯೋ ಗೇಮ್ ಗಳ ನಮ್ಮನ್ನ ಎಲ್ಲಿಗೆ ಕೊಂಡೊಯ್ಯಬಹುದು ಎಂಬ ತರ್ಕಕ್ಕೆ ಒಡ್ಡುತ್ತಿದೆ.

ವೀಡಿಯೋ ಗೇಮ್ ಗಳೇ ಔಷಧಿಗಳು!
ಇಂದೆಂಥ ಹುಚ್ಚು ಹೇಳಿಕೆ ಎಂದು ನೀವು ಅಂದುಕೊಳ್ಳುತ್ತಿರಬಹುದು. ಹೌದು ಅಧ್ಯಯನಕಾರರು ವೀಡಿಯೋ ಗೇಮ್ ಗಳನ್ನು ಬಳಸಿ ನಿಮ್ಮ ದೈನಂದಿನ ಚಟುವಟಿಕೆಗೆ ಮೆದುಳನ್ನು ಚುರುಕುಗೊಳಿಸಲು ವೀಡಿಯೋ ಗೇಮ್ ಗಳನ್ನು ಹೇಗೆ ಬಳಸಬಹುದು ಎಂಬ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಕೆಲವು ಮೆದುಳಿನ ಔಷಧಿಗಳಿಗೆ ಅರ್ಥಾತ್ ಚಿಕಿತ್ಸೆಗಳಿಗೆ ಮುಂದಿನ ದಿನಗಳಲ್ಲಿ ಇದನ್ನು ಬಳಕೆ ಮಾಡುವ ಸಾಧ್ಯತೆ ಇದೆ. ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳಾದ ADHD, ಆಟಿಸಂ, ಡಿಪ್ರೆಷನ್,ಅಲ್ಜಿಮರ್ ಕಾಯಿಲೆ ಹಾಗೂ ಇತ್ಯಾದಿಗಳಿಗೆ ಪರಿಹಾರವಾಗಿ ವೀಡಿಯೋ ಗೇಮ್ ಗಳನ್ನು ಬಳಕೆ ಮಾಡುವುದಕ್ಕೆ ಹೇಗೆ ಸಾಧ್ಯ ಎಂಬುದರ ಬಗ್ಗೆ ಸಂಶೋಧನೆ ನಡೆಯುತ್ತಿದೆ.

ಕೆಮಿಕಲ್ ರಹಿತ ಚಿಕಿತ್ಸೆ:
ಯಾವುದೇ ಕೆಮಿಕಲ್ ಗಳು ಇಲ್ಲದೆ ಮೆದುಳಿಗೆ ಸಂಬಂಧಿಸಿದ ಕಾಯಿಲೆಯನ್ನು ಗುಣಪಡಿಸುವುದಕ್ಕೆ ಮಾರ್ಗಗಳನ್ನು ಕಂಡುಹಿಡಿಯಲಾಗುತ್ತಿದೆ.ಪ್ರತಿಯೊಂದು ರೋಗಿಗೂ ಕೂಡ ಕಾಯಿಲೆ ರೂಪ ಬೇರೆ ರೀತಿಯಲ್ಲಿ ಇರುತ್ತದೆ. ಯಾವುದು ಯಾರಿಗೆ ಸೂಕ್ತ ಮತ್ತು ಹೇಗೆ ಸೂಕ್ತ ಎಂಬ ಬಗ್ಗೆ ಅಧ್ಯಯನಗಳು ನಡೆಯುತ್ತಿದೆ. ಈ ಡಿಜಿಟಲ್ ಮೆಡಿಸಿನ್ ನರವ್ಯೂಹಕ್ಕೆ ಸಹಕರಿಸಿ ಮೆದುಳಿನ ಸಮಸ್ಯೆಗೆ ಪರಿಹಾರ ನೀಡುವ ಬಗ್ಗೆ ಈಗ ಅಧ್ಯಯನ ನಡೆಯುತ್ತಿದೆ.

ಡಿಜಿಟಲ್ ಮೆಡಿಸಿನ್ ಬಳಕೆ:
ರೋಗಿಗಳು ತಾವು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದನ್ನೇ ಮರೆತು ಬಿಡಬೇಕು ಮತ್ತು ಅವರ ಕಾಯಿಲೆ ಅವರಿಗೆ ಗೊತ್ತಿಲ್ಲದೆ ಗುಣವಾಗುವಂತೆ ಮಾಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎನ್ನುತ್ತಾರೆ ಅಧ್ಯಯನಕಾರರು. ಚಿಕಿತ್ಸೆಯಲ್ಲಿ ತೊಡಗಿಕೊಳ್ಳುವುದಕ್ಕೆ ರೋಗಿಗಳು ಅನುಕೂಲಕರವಾದ ವಾತಾವರಣ ಲಭ್ಯವಾಗುವಂತೆ ಮಾಡಿ ಅವರನ್ನು ಚಿಕಿತ್ಸೆಯಲ್ಲಿ ಅವರಿಗೆ ಗೊತ್ತಿಲ್ಲದೆ ತೊಡಗಿಸಿ ಸಮಸ್ಯೆ ಪರಿಹಾರ ಮಾಡುವುದಕ್ಕೆ ವೀಡಿಯೋ ಗೇಮ್ ಗಳಿಂದ ಸಾಧ್ಯವಿದೆ ಎನ್ನಲಾಗುತ್ತಿದೆ.
ಗೇಮ್ ಗಳು ಆಕರ್ಷಕವಾಗಿರುತ್ತದೆ. ಅದರಲ್ಲಿ ಸಂತೋಷವಿರುತ್ತದೆ, ರಿವಾರ್ಡ್ ಗಳಿರುತ್ತದೆ, ತಲ್ಲೀನತೆ ಇರುತ್ತದೆ. ಒಟ್ಟಾರೆ ರೋಗಿ ತನಗೇ ಗೊತ್ತಿಲ್ಲದೇ ರೋಗದಿಂದ ಮುಕ್ತವಾಗಿ ಮೆದುಳಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾನೆ. ಹಾಗಾದ್ರೆ ವೀಡಿಯೋ ಗೇಮ್ ಗಳು ಮೆಡಿಸಿನ್ ಗಳಾಗಿ ಕಾರ್ಯನಿರ್ವಹಿಸುವುದು ಬಹುಶ್ಯಃ ಮುಂದಿನ ದಿನಗಳಲ್ಲಿ ಪಕ್ಕಾ ಅನ್ನಿಸುತ್ತಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470