Home
ಸುದ್ದಿಜಾಲ

ಇಂಗ್ಲಿಷ್ ಬೇಕಿಲ್ಲ, ಕನ್ನಡ ಸಾಕು: ಫೇಸ್‌ಬುಕ್‌ನಲ್ಲಿ ಕೆಲಸ ಪಕ್ಕಾ..!

By Gizbot Bureau

ಫೇಸ್ಬುಕ್ನಲ್ಲಿ ನೊಂದಿಗೆ ಕೆಲಸ ಮಾಡಬೇಕೆಂಬ ಆಸೆ ಏನು ನೀವು ಹೊಂದಿದ್ದಲ್ಲಿ ಇದೊಂದು ಸುವರ್ಣ ಅವಕಾಶ. ಟೆಕ್ ಮಾರುಕಟ್ಟೆಯಲ್ಲಿ ದೈತ್ಯ ಕಂಪನಿಗಳ ಎಂದು ಗುರುತಿಸಿಕೊಂಡಿರುವ ಗೂಗಲ್ ಹಾಗೂ ಫೇಸ್ಬುಕ್ ತನ್ನ ನೌಕರರಿಗೆ ಅತ್ಯುತ್ತಮವಾದ ಕೆಲಸದ ವಾತಾವರಣ ವನ್ನು ನಿರ್ಮಿಸುವಲ್ಲಿ ಹೆಸರುವಾಸಿಯಾಗಿದೆ. ಇದೇ ಮಾದರಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು ಎಳು ಸಾವಿರಕ್ಕೂ ಹೆಚ್ಚು ಅಧಿಕ ಮಂದಿಯನ್ನು ತನ್ನ ಕಂಪನಿಯಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಲು ಫೇಸ್ಬುಕ್ ಮುಂದಾಗಿದೆ.

ದೇಶದಲ್ಲಿ ಸೋಶಿಯಲ್ ಮೀಡಿಯಾ ಇಂದು ಹೆಚ್ಚುತ್ತಿರುವ ಸುಳ್ಳು ಸುದ್ದಿಯನ್ನು ತಡೆಯುವ ಸಲುವಾಗಿ ಫೇಸ್ಬುಕ್ ಹೊಸದೊಂದು ತಂಡವನ್ನು ಕಟ್ಟುತ್ತಿದ್ದು, ಇದರಲ್ಲಿ ಭಾಗಿಯಾಗಲು ಸರ್ವರಿಗೂ ಅವಕಾಶವನ್ನು ನೀಡುತ್ತದೆ. ಪದವೀಧರರಾಗಿ ಸ್ಥಳೀಯ ಭಾಷೆಯ ಜ್ಞಾನ ಹೊಂದಿದವರಿಗೆ ಹೆಚ್ಚಿನ ಅವಕಾಶವನ್ನು ಮಾಡಿಕೊಡುತ್ತಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಉಂಟಾಗುತ್ತಿರುವ ದೊಡ್ಡ ಪ್ರಮಾಣದ ಅಶಾಂತಿಯ ವಾತಾವರಣ ವನ್ನು ನಿರ್ಮೂಲನೆ ಮಾಡುವುದು ಫೇಸ್ಬುಕ್ ಉದ್ದೇಶವಾಗಿದೆ.

ಇಂಗ್ಲಿಷ್ ಬೇಕಿಲ್ಲ, ಕನ್ನಡ ಸಾಕು: ಫೇಸ್‌ಬುಕ್‌ನಲ್ಲಿ ಕೆಲಸ ಪಕ್ಕಾ..!

ಈಗಾಗಲೇ ಗನ್ ಪ್ಯಾಕ್ಟ್ ಕಂಪನಿ ಮೂಲಕ ಫೇಸ್ಬುಕ್ ತನಗೆ ಅಗತ್ಯ ಇರುವ ಲಾಂಗ್ವೇಜ್ ಎಕ್ಸ್ ಪರ್ಟ್ ಗಳನ್ನು ಕಂಪನಿಗೆ ಸೇರಿಕೊಳ್ಳುತ್ತಿದ್ದು, ಇದರೊಂದಿಗೆ ಮಾಧ್ಯಮ ವಿಚಾರದಲ್ಲಿ ಪದವಿ ಪಡೆದವರಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ. ಇದಲ್ಲದೆ ಹಲವು ಮೀಡಿಯಾ ಕಂಪನಿಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡು ಸುಳ್ಳುಸುದ್ದಿಯನ್ನು ತಡೆಯಲು ಫೇಸ್ಬುಕ್ ಸಾಕಷ್ಟು ಪ್ರಯತ್ನ ಮಾಡುತ್ತಿದೆ.

ಫೇಸ್ಬುಕ್ ಜಾಗತಿಕವಾಗಿ ಸುಳ್ಳು ಸುದ್ದಿಯ ಪ್ರಸಾರದ ತಡೆಗೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಪ್ರಯತ್ನವನ್ನು ಮಾಡುತ್ತಿದೆ. ಇದೇ ಮಾದರಿಯಲ್ಲಿ ಭಾರತದಲ್ಲಿಯೂ ಯಶಸ್ವಿಯಾಗುವ ಸಲುವಾಗಿ ಏಳು ಸಾವಿರಕ್ಕೂ ಅಧಿಕ ಮಂದಿಯನ್ನು ಕಂಪನಿಯಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುತ್ತಿದೆ. ನೀವು ಸಹ ಈ ಒಂದು ಯೋಜನೆಯಲ್ಲಿ ಭಾಗವಹಿಸಬಹುದಾಗಿದೆ.

ಇಂಗ್ಲಿಷ್ ಬೇಕಿಲ್ಲ, ಕನ್ನಡ ಸಾಕು: ಫೇಸ್‌ಬುಕ್‌ನಲ್ಲಿ ಕೆಲಸ ಪಕ್ಕಾ..!

ಫೇಸ್ಬುಕ್ ಈ ಬಾರಿ ಕೇವಲ ಹಿಂದಿ ಮತ್ತು ಇಂಗ್ಲೀಷ್ ಭಾಷೆಯ ಬಲ್ಲವರನ್ನು ಮಾತ್ರವೇ ಕೆಲಸಕ್ಕೆ ಸೇರಿಸಿಕೊಳ್ಳುವ ಬದಲು ಸ್ಥಳೀಯ ಭಾಷೆಗಳಾದ ಕನ್ನಡ ಸೇರಿದಂತೆ ದೇಶಿಯ ಮಾರುಕಟ್ಟೆಯಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿರುವ ಹಲವು ಭಾಷೆಗಳ ಪ್ರವೀಣ ರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಹಿನ್ನಲೆಯಲ್ಲಿ ಸ್ಥಳೀಯ ಭಾಷೆ ಕಲಿತವರಿಗೂ ಆದ್ಯತೆ ದೊರೆತಿದೆ.
Best Mobiles in India

English summary
Are you a graduate and looking for job? Facebook wants to hire you in India. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+