ಆನ್‌ಲೈನ್ ಶಾಪಿಂಗ್ ಪ್ರಿಯರಿಗೆ ಬಿಗ್‌ಶಾಕ್!..ದೇಶದಲ್ಲಿ ಚೀನಾ ಕಂಪೆನಿಗಳಿಗೆ ನಿರ್ಬಂಧ!?

|

ಭಾರೀ ರಿಯಾಯಿತಿಯಲ್ಲಿ ಇ-ಕಾಮರ್ಸ್​ ಮಾರುಕಟ್ಟೆಯಲ್ಲಿ ಹೊಸ ಅಲೆಯೆಬ್ಬಿಸುತ್ತಿರುವ ಚೀನಾದ ಪ್ರಮುಖ ಆನ್‌ಲೈನ್ ಶಾಪಿಂಗ್ ತಾಣಗಳಿಗೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ. ಇತರೆ ಆನ್‌ಲೈನ್ ತಾಣಗಳಿಗೆ ಹೋಲಿಸಿದರೆ ಚೀನಾದ ಕೆಲ ಆನ್​ಲೈನ್ ಕಂಪೆನಿಗಳು ಹೆಚ್ಚಿನ ಡಿಸ್ಕೌಂಟ್​ ನೀಡುತ್ತಿರುವುದನ್ನು ನಿರ್ಬಂಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ.

ಹೌದು, ಇತ್ತೀಚಿನ ದಿನಗಳಲ್ಲಿ ಕ್ಲಬ್​ ಫ್ಯಾಕ್ಟರಿ, ಶೀ-ಇನ್ ಮತ್ತು ಅಲಿ ಎಕ್ಸ್​ಪ್ರೆಸ್ ಸೇರಿದಂತೆ ಹಲವು ಚೀನಾ ಮೂಲದ ಶಾಪಿಂಗ್ ಜಾಲತಾಣಗಳು ದೇಶದ ಇ-ಕಾಮರ್ಸ್​ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಚೀನಾ ಮೂಲದ ಕಂಪೆನಿಗಳಾಗಿರುವುದರಿಂದ ಇಲ್ಲಿ ಉತ್ಪನ್ನಗಳ ಕಡಿಮೆ ಬೆಲೆ ಸಿಗುತ್ತಿರುವುದು ಮತ್ತು ಹೆಚ್ಚಿನ ಆಫರ್ ಇರುವುದು ಗ್ರಾಹಕರನ್ನು ಸೆಳೆಯುತ್ತಿದೆ.

ಆನ್‌ಲೈನ್ ಶಾಪಿಂಗ್ ಪ್ರಿಯರಿಗೆ ಬಿಗ್‌ಶಾಕ್!..ಚೀನಾ ಕಂಪೆನಿಗಳಿಗೆ ನಿರ್ಬಂಧ!?

ಆದರೆ, ಇದು ಈಗ ಮತ್ತೊಂದು ಸಮಸ್ಯೆಯಾಗಿ ಪರಿಣಮಿಸಿರುವರಿಂದ ಸರ್ಕಾರ ಇಂತಹ ಚೀನಾದ ಕೆಲ ಆನ್​ಲೈನ್ ಕಂಪೆನಿಗಳಿಗೆ ಬ್ರೇಕ್ ಹಾಕಲು ಮುಂದಾಗಿದೆ ಎಂದು ಹೇಳಲಾಗಿದೆ. ಹಾಗಾದರೆ, ದೇಶದಲ್ಲಿ ಚೀನಾ ಕಂಪೆನಿಗಳಿಗೆ ನಿರ್ಬಂಧ ಹೇರಲು ಇತರೆ ಕಾರಣಗಳು ಯಾವುವು?, ಇದರಿಂದ ಗ್ರಾಹಕರಿಗೆ ಸಮಸ್ಯೆ ಎದುರಾಗಲಿದೆಯಾ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ತೆರಿಗೆ ಕಳ್ಳ ಚೀನೀ ತಾಣಗಳು!

ತೆರಿಗೆ ಕಳ್ಳ ಚೀನೀ ತಾಣಗಳು!

ಚೀನಾದ ಕೆಲ ಇ-ಕಾಮರ್ಸ್​ ಕಂಪೆನಿಗಳು ಕಸ್ಟಮ್ಸ್​ ಡ್ಯೂಟಿ ತೆರಿಗೆಗಳನ್ನು ಪಾವತಿಸದೇ ತನ್ನ ಉತ್ಪನ್ನಗಳನ್ನು ದೇಶದಲ್ಲಿ ಮಾರಾಟ ಮಾಡುತ್ತಿದೆ ಎನ್ನಲಾಗಿದೆ. ವಿದೇಶದಿಂದ ಬರುವ 5 ಸಾವಿರದವೆರಗಿನ ಉಡುಗೊರೆಗಳಿಗೆ ಕಸ್ಟಮ್ಸ್​ ಡ್ಯೂಟಿ ವಿಧಿಸಲಾಗುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಂಪೆನಿಗಳು ಗ್ರಾಹಕರಿಗೆ ಕೊರಿಯರ್​ನ್ನು ಗಿಫ್ಟ್ ಎಂದು ದೇಶದ ಗ್ರಾಹಕರಿಗೆ ವಸ್ತುಗಳನ್ನು ಕಳುಹಿಸುತ್ತಿವೆ. ಈ ಮೂಲಕ ತೆರಿಗೆ ನಿಯಮವನ್ನು ಕಂಪೆನಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ದೇಸಿ ಕಂಪೆನಿಗಳ ಮೇಲೆ ಪರಿಣಾಮ

ದೇಸಿ ಕಂಪೆನಿಗಳ ಮೇಲೆ ಪರಿಣಾಮ

ತೆರಿಗೆ ನಿಯಮವನ್ನು ಕಂಪೆನಿಗಳು ದುರ್ಬಳಕೆ ಮಾಡಿಕೊಳ್ಳುವುದು ಮಾತ್ರವಲ್ಲದೆ, ಚೀನಾ ಶಾಪಿಂಗ್ ತಾಣಗಳು ದೇಸಿಯ ಕಂಪೆನಿಗಳ ಮೇಲೆ ಪರಿಣಾಮ ಬೀರುತ್ತಿದೆ ಎಂಬ ದೂರುಗಳು ಕೇಳಿ ಬಂದಿದ್ದವು. ಆಫರ್​ ಮೂಲಕವೇ ಖರೀದಿ ಬಯಸುವ ಗ್ರಾಹಕರನ್ನು ಸೆಳೆದಿದ್ದ ಈ ಶಾಪಿಂಗ್ ಸೈಟ್​ಗಳು ಫ್ಲಿಪ್​ಕಾರ್ಟ್​, ಅಮೇಜಾನ್, ಜಬಾಂಗ್​ನಂತಹ ಅಂತರಾಷ್ಟ್ರೀಯ ವೆಬ್​ಸೈಟ್​ಗಳಿಗೆ ಪ್ರಬಲ ಪೈಪೋಟಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರವು ಚೀನಿ ಶಾಪಿಂಗ್​ ವೆಬ್​ಸೈಟ್​ಗಳ ಶಿಪ್​ಮೆಂಟ್​ಗೆ ಬ್ರೇಕ್ ಹಾಕಲು ನಿರ್ಧರಿಸಿದೆ ಎಂದು ವರದಿಯಾಗಿದೆ.

ಫ್ಲಿಪ್​ಕಾರ್ಟ್​, ಅಮೇಜಾನ್​​ ಆಟ!

ಫ್ಲಿಪ್​ಕಾರ್ಟ್​, ಅಮೇಜಾನ್​​ ಆಟ!

ಚೀನಿ ವೆಬ್​ಸೈಟ್​ಗಳು ದೇಶದಲ್ಲಿರುವ ಇ-ಕಾಮರ್ಸ್​ ಸಂಸ್ಥೆಗಳಿಗಿಂತ ಶೇ. 40 ರಿಂದ ಶೇ.60 ರಷ್ಟು ರಿಯಾಯಿತಿಯಲ್ಲಿ ಪ್ರೊಡೆಕ್ಟ್​ಗಳನ್ನು ಮಾರಾಟ ಮಾಡುತ್ತಿದೆ. ಹಾಗಾಗಿ, ದೇಶದಲ್ಲಿ ಫ್ಲಿಪ್​ಕಾರ್ಟ್​, ಅಮೇಜಾನ್​​ನಂತಹ ದೈತ್ಯ ಕಂಪೆನಿಗಳಿಗೆ ವೇದಿಕೆ ಒದಗಿಸಲೆಂದೇ ಸರ್ಕಾರ ಕೂಡ ಇಂತಹದೊಂದು ಕ್ರಮಕ್ಕೆ ಮುಂದಾಗಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ. ದೇಶೀಯ ಇ-ಕಾಮರ್ಸ್​ ಕಂಪೆನಿಗಳು ಚೀನಿ ಶಾಪಿಂಗ್ ಸೈಟ್​ಗಳ ಮೇಲೆ ನಿಯಂತ್ರಣ ಹೇರಿ ತಮ್ಮ ಮಾರಾಟವನ್ನು ಹೆಚ್ಚಿಸಿಕೊಳ್ಳಲು ಸರ್ಕಾರದ ಮೊರೆ ಹೋಗಿದೆ ಎಂದು ಹೇಳಲಾಗುತ್ತಿದೆ.

ಆನ್‌ಲೈನ್ ಶಾಪಿಂಗ್ ಪ್ರಿಯರಿಗೆ ಬಿಗ್‌ಶಾಕ್

ಆನ್‌ಲೈನ್ ಶಾಪಿಂಗ್ ಪ್ರಿಯರಿಗೆ ಬಿಗ್‌ಶಾಕ್

ಇತರೆ ಆನ್‌ಲೈನ್ ವೆಬ್​ಸೈಟ್​ಗಳಿಗೆ ಹೋಲಿಸಿದರೆ ಈ ಆನ್​ಲೈನ್ ಕಂಪೆನಿಗಳಲ್ಲಿ ಹೆಚ್ಚಿನ ಡಿಸ್ಕೌಂಟ್​ ಸಿಗುತ್ತಿತ್ತು. ಇದರಿಂದಲೇ ಗ್ರಾಹಕರು ಕೂಡ ಈ ವೆಬ್​ಸೈಟ್​ನತ್ತ ಮುಖ ಮಾಡಿದ್ದರು. ಆದರೀಗ ಇಂತಹ ಶಾಪಿಂಗ್​ ವೆಬ್​ಸೈಟ್​ಗಳ ಮೇಲೆ ನಿರ್ಬಂಧ ಹೇರಲು ಮುಂದಾಗಿರುವುದು ಆನ್‌ಲೈನ್ ಶಾಪಿಂಗ್ ಪ್ರಿಯರಿಗೆ ಬಿಗ್‌ಶಾಕ್ ನೀಡಿದಂತಿದೆ. ಆದರೆ, ಚೀನಾದ ತಾಣಗಳು ತೆರೆಇಗೆ ಮೋಸ ಮಾಡಿದ್ದರೆ ಖಂಡಿತವಾಗಿ ಅವನ್ನು ನಿರ್ಬಂಧಿಸಬೇಕು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಉತ್ಪನ್ನಗಳ ಬೆಲೆ ದುಬಾರಿ?

ಉತ್ಪನ್ನಗಳ ಬೆಲೆ ದುಬಾರಿ?

ದೇಶದಲ್ಲಿರುವ ಇ-ಕಾಮರ್ಸ್​ ಸಂಸ್ಥೆಗಳಿಗಿಂತ ಶೇ. 40 ರಿಂದ ಶೇ.60 ರಷ್ಟು ರಿಯಾಯಿತಿಯಲ್ಲಿ ಪ್ರೊಡೆಕ್ಟ್​ಗಳನ್ನು ಮಾರಾಟ ಮಾಡುತ್ತಿದ್ದ ಚೀನಾ ಕಂಪೆನಿಗಳಿಗೆ ನಿರ್ಬಂಧ ಹೇರಿದರೆ ಹಲವು ಉತ್ಪನ್ನಗಳ ಬೆಲೆ ದುಬಾರಿಯಾಗಲಿವೆ. ಒಂದು ವೇಳೆ ಚೀನೀ ಕಂಪೆನಿಗಳು ಹೊಸ ನಿಯಮವನ್ನು ಪಾಲಿಸಿದರೆ ಅವುಗಳಿಗೂ ವ್ಯಾಪಾರಕ್ಕೆ ಅವಕಾಶ ಸಿಗಲಿದೆ. ಆದರೂ, ಮುಂಬರುವ ದಿನಗಳಲ್ಲಿ ಚೀನಿ ಉತ್ಪನ್ನಗಳ ಬೆಲೆ ದುಬಾರಿಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.

Best Mobiles in India

English summary
Ali Express, Club Factory, Chinese, websites, online, ಆನ್‌ಲೈನ್, ಚೀನಾ, ಇ-ಕಾಮರ್ಸ್, ಅಮೆಜಾನ್, ಫ್ಲಿಪ್‌ಕಾರ್ಟ್, news

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X