ಇದು ಸಾಮಾನ್ಯ ಕನ್ನಡಕ ಅಲ್ಲವೇ ಅಲ್ಲ; ಇದರಲ್ಲಿರುವ ಫೀಚರ್ಸ್ ಕೇಳಿದ್ರೆ ಶಾಕ್ ಆಗ್ತೀರಾ?
ಟೆಕ್ ವಲಯದಲ್ಲಿ ARknovv ಕಂಪೆನಿ ಹೊಸ ಬಿರುಗಾಳಿಯನ್ನು ಎಬ್ಬಿಸಿದೆ. ಇಡೀ ಟೆಕ್ ಮಾರುಕಟ್ಟೆಯೆ ಒಂದು ಕ್ಷಣ ದಂಗಾಗುವಂತ ಹೊಸ ಸ್ಮಾರ್ಟ್ ಗ್ಲಾಸ್‌ಗಳನ್ನು ಅನಾವರಣಗೊಳಿಸಿದೆ. ಇದು ವಿಶ್ವದ ಮೊದಲ ಸಂಪೂರ್ಣ ಕ್ರಿಯಾತ್ಮಕ ಗ್ರಾಹಕ-ದರ್ಜೆಯ AR ಗ್ಲಾಸಸ್ ಆಗಿದೆ. ಇನ್ನು ಈ ಸ್ಮಾರ್ಟ್‌ಗ್ಲಾಸ್‌ಗಳನ್ನು ARknovv A1 ಎಂದು ಹೆಸರಿಸಲಾಗಿದೆ.
ಹೌದು, ARknovv ಕಂಪೆನಿ ARknovv A1 AR ಗ್ಲಾಸ್‌ಗಳನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಗ್ಲಾಸ್‌ಗಳು ಹೊರಾಂಗಣ ಬಳಕೆಗೆ ಅನುಗುಣವಾಗಿರುತ್ತವೆ ಎಂದು ಕಂಪೆನಿ ಹೇಳಿದೆ. ಅಲ್ಲದೆ ನಿಮ್ಮ ಅನುಕೂಲಕ್ಕೆ ತಕ್ಕಂತೆ AI ಟೆಕ್ನಾಲಜಿಯನ್ನು ಈ ಸ್ಮಾರ್ಟ್‌ಗ್ಲಾಸ್‌ಗಳು ಸಂಯೋಜಿಸಲಿವೆ ಎನ್ನಲಾಗಿದೆ. ಹಾಗಾದ್ರೆ ARknovv ಕಂಪೆನಿಯ ಈ ಸ್ಮಾರ್ಟ್‌ಗ್ಲಾಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ARknovv A1 ಸ್ಮಾರ್ಟ್‌ಗ್ಲಾಸ್ ವಿಶೇಷತೆ ಏನು?
ARknovv A1 ಸ್ಮಾರ್ಟ್‌ಗ್ಲಾಸ್ ಸಾಕಷ್ಟು ಹಗುರವಾದ AR ಗ್ಲಾಸ್ ಆಗಿದೆ. ಇದು 3840×1080 ಡ್ಯುಯಲ್-ಐ ರೆಸಲ್ಯೂಶನ್ ಹೊಂದಿದೆ. ಇನ್ನು ಈ ಸ್ಮಾರ್ಟ್‌ಗ್ಲಾಸ್ ರೆಟಿನಾ-ಲೆವೆಲ್ ಡಿಸ್‌ಪ್ಲೇ ಎಫೆಕ್ಟ್ ಅನ್ನು ಹೊಂದಿದೆ. ಸ್ಮಾರ್ಟ್‌ಗ್ಲಾಸ್ 55 ಡಿಗ್ರಿ ವ್ಯೂ ಫಿಲ್ಡ್ ಮತ್ತು 70Hz ರಿಫ್ರೆಶ್ ರೇಟ್ ಅನ್ನು ನೀಡಲಿದೆ. ಈ ಸ್ಮಾರ್ಟ್‌ಗ್ಲಾಸ್ ಹೆಚ್ಚಿನ-ಬ್ರೈಟ್‌ನೆಸ್ ಅನ್ನು ಒಳಗೊಂಡಿದ್ದು, ಆಪ್ಟಿಕಲ್ ಡಿಸ್ಪ್ಲೇ ವ್ಯವಸ್ಥೆಯನ್ನು ಹೊಂದಿದೆ.
ಇನ್ನು ಈ ಸ್ಮಾರ್ಟ್‌ಗ್ಲಾಸ್ ಸಾಟಿಯಿಲ್ಲದ ವ್ಯೂ ಎಕ್ಸ್‌ಪಿರಿಯನ್ಸ್ ಅನ್ನು ಒದಗಿಸಲಿದೆ. ಜೊತೆಗೆ ಹೆಚ್ಚುವರಿಯಾಗಿ, ಎಲೆಕ್ಟ್ರೋಕ್ರೊಮಿಕ್ ಲೆನ್ಸ್‌ಗಳು ಕಣ್ಣುಗಳನ್ನು ದಿನವಿಡೀ ಆರಾಮದಾಯಕವಾಗಿರುವಂತೆ ಮಾಡಲಿವೆ. ಇನ್ನು ಈ ಸ್ಮಾರ್ಟ್‌ಗ್ಲಾಸ್‌ನ ಮತ್ತೊಂದು ವಿಶೇಷತೆ ಎಂದರೆ "ಮ್ಯಾಜಿಕ್ ರಿಂಗ್". ಇದು ಚಿಂತನಶೀಲವಾಗಿ ವಿನ್ಯಾಸಗೊಳಿಸಲಾದ ಇಂಟರ್ ಆಕ್ಷನ್ ಆಕ್ಸಿಸರೀಸ್ ಆಗಿದೆ. ಅಂದರೆ ಬಳಕೆದಾರರಿಗೆ ಡಿಜಿಟಲ್ ಪ್ರಪಂಚದೊಂದಿಗೆ ಕಮ್ಯೂನಿಕೇಷನ್ ಮಾಡಲು ಅವಕಾಶ ನೀಡಲಿದೆ.
ಅಂದರೆ ಹೇಳಿಕೇಳಿ ಇದು AR ಸ್ಮಾರ್ಟ್‌ಗ್ಲಾಸ್ ಆಗಿರುವುದರಿಂದ ಮ್ಯಾಜಿಕ್ ರಿಂಗ್ ಮೂಲಕ ನೀವು ಡಿಜಿಟಲ್ ಪ್ರಪಂಚದಲ್ಲಿರುವಂತೆ ಭಾಸವಾಗಲಿದೆ. ಇನ್ನು ಇದರ AR ವಿಷಯ ಮತ್ತು ಅಪ್ಲಿಕೇಶನ್‌ಗಳ ಮೂಲಕ ತಡೆರಹಿತ ನಿಯಂತ್ರಣ ಮತ್ತು ನ್ಯಾವಿಗೇಷನ್ ಅನ್ನು ಸಕ್ರಿಯಗೊಳಿಸುತ್ತದೆ. ಇದರಿಂದ ನಿಮಗೆ ಯಾವುದೇ ಟಚ್‌ಸ್ಕ್ರೀನ್‌ಗಳ ಅಗತ್ಯ ಇದರಲ್ಲಿ ಕಂಡುಬರುವುದಿಲ್ಲ. ಇನ್ನು ಸ್ಮಾರ್ಟ್‌ಗ್ಲಾಸ್ ARknovv ಸ್ವಾಮ್ಯದ ಅಲ್ಲಾದೀನ್ OS ಬೆಂಬಲದೊಂದಿಗೆ ರನ್ ಆಗಲಿದೆ.
ಇನ್ನು ಸ್ಮಾರ್ಟ್ ಗ್ಲಾಸ್ ಸಂವಹನ ನಡೆಸುವ ವಿಧಾನವನ್ನು ಮರು ವ್ಯಾಖ್ಯಾನಿಸುವ ಆಳವಾದ AI ಪಂಕ್ಷನ್‌ಗಳನ್ನು ಸಂಯೋಜಿಸಲಿದೆ. USB-C ಅಥವಾ HDMI ಇಂಟರ್‌ಫೇಸ್‌ಗಳ ಮೂಲಕ ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್‌ಗಳು ಮತ್ತು ಗೇಮಿಂಗ್ ಕನ್ಸೋಲ್‌ಗಳನ್ನು ಸ್ಮಾರ್ಟ್‌ಗ್ಲಾಸ್‌ಗಳಿಗೆ ಕನೆಕ್ಟ್ ಮಾಡಬಹುದಾಗಿದೆ. ಈ ಸ್ಮಾರ್ಟ್‌ಗ್ಲಾಸ್ ಧ್ವನಿಗುರುತಿಸುವಿಕೆಯನ್ನು ಹೊಂದಿದೆ. ಇದಕ್ಕಾಗಿ ಆಂತರಿಕ GPT ಮಾದರಿಯನ್ನು ಬಳಸಿಕೊಳ್ಳುತ್ತದೆ.
ಇದಲ್ಲದೆ AR ಫೋಟೋ ಆಲ್ಬಮ್ ಅನ್ನು ಹೊಂದಿದೆ. ಅಂದರೆ ARknovv A1 ಬಳಕೆದಾರರಿಗೆ ಫೋಟೋಗಳನ್ನು ಬಳಸಿಕೊಂಡು ತಮ್ಮ ಮೊದಲ-ವ್ಯಕ್ತಿ ದೃಷ್ಟಿಕೋನದಿಂದ ನೈಜ-ಪ್ರಪಂಚದ ಕ್ಷಣಗಳನ್ನು ಸೆರೆಹಿಡಿಯಲು ಅನುಮತಿಸಲಿದೆ. ಇದಕ್ಕಾಗಿ AR ಗ್ಲಾಸ್‌ಗಳು ಸ್ವಯಂ-ಅಭಿವೃದ್ಧಿಪಡಿಸಿದ AI ಅಲ್ಗಾರಿದಮ್‌ಗಳನ್ನು ಬಳಸಿಕೊಳ್ಳುತ್ತವೆ. ಇದಲ್ಲದೆ ಬಳಕೆದಾರರಿಗೆ 2D ಫೋಟೋಗಳನ್ನು 3D ಯಲ್ಲಿ ಪರಿಶೀಲಿಸಲು ಅವಕಾಶ ನೀಡಲಿವೆ.
ಇನ್ನು ARknovv ಕಂಪೆನಿ ARknovv A1 HUD ಸ್ಮಾರ್ಟ್‌ಗ್ಲಾಸ್ ಅನ್ನು ಸಹ ಪರಿಚಯಿಸಿದೆ. ಇದು ARknovv A1 ನ ವಿಸ್ತರಣೆಯಾಗಿದ್ದು, ಕಾರಿನಲ್ಲಿನ ಬಳಕೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿರುವ ವರ್ಧಿತ ರಿಯಾಲಿಟಿ ಫೀಚರ್ಸ್‌ಗಳು ಚಾಲಕರಿಗೆ ಅತ್ಯುತ್ತಮ ಅನುಭವವನ್ನು ನೀಡಲಿದೆ. ಇದಲ್ಲದೆ ಇನ್-ಕಾರ್ ಸ್ಪೇಸ್ ಪೊಸಿಷನಿಂಗ್, ಡ್ರೈವರ್‌ನ ವೀಕ್ಷಣೆಗೆ ಅಡ್ಡಿಯಾಗದಂತೆ ವರ್ಚುವಲ್ ಆಬ್ಜೆಕ್ಟ್‌ಗಳನ್ನು ಪ್ರದರ್ಶಿಸಲು 3DoF SLAM ಅಲ್ಗಾರಿದಮ್ ಅನ್ನು ಒಳಗೊಂಡಿದೆ.
ಬೆಲೆ ಮತ್ತು ಲಭ್ಯತೆ
ARknovv A1 ಸ್ಮಾರ್ಟ್‌ಗ್ಲಾಸ್ ಬೆಲೆ 2988 ಯುವಾನ್ (ಅಂದಾಜು 34,268ರೂ) ಬೆಲೆಯನ್ನು ಹೊಂದಿದೆ. ಇದು ಭಾರತಕ್ಕೆ ಯಾವಾಗ ಬರಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.


Click it and Unblock the Notifications








