ಕಂಪ್ಯೂಟರ್‌ ಬಳಕೆದಾರರಿಗೆ ಮಾಸಾಜ್‌ ಮೌಸ್‌ ಬಂದಿದೆ

By Super
|
ಕಂಪ್ಯೂಟರ್‌ ಬಳಕೆದಾರರಿಗೆ ಮಾಸಾಜ್‌ ಮೌಸ್‌ ಬಂದಿದೆ

ಇದೇನಪ್ಪ ಮಸಾಜ್‌ ಮೌಸ್‌, ಇದ್ರಿಂದ ಏನ್‌ ಯೂಸ್‌? ಅಂತ ಅನ್ಕೊತಿದಿರಾ ಗಾಗಿದ್ದಲ್ಲಿ ಮುಂದೆ ಓದಿ ನೋಡಿ ನಿಮಗೇ ತಿಳಿಯುತ್ತದೆ. ನಿರಂತರ ಕಂಪ್ಯೂಟರ್‌ ಬಳಕೆಯಿಂದಾಗಿ ಹಲವು ತೊಂದರೆಗಳಿಂದಾಗಿ ಬಳಲುತ್ತಿರುವವರಿಗಾ ಹಾಗೂ ಅವರ ಸಮಸ್ಯೆಯನ್ನು ಹೋಗಲಾಡಿಸಲು ಸಲುವಾಗಿ ಆರ್ಟ್‌ ಫ್ಯಾಕ್ಟರಿ ಎಂಬ ಸಂಸ್ಥೆಯು ಮೌಸ್‌ ಹಾಗೂ ಮಸಾಜ್‌ ತಂತ್ರಜ್ಞಾನನವನ್ನು ಜೊತೆಗೂಡಿಸಿ ನೂತನ ಮೌಸ್‌ ಒಂದನ್ನು ಆವಿಷ್ಕರಿಸಿದ್ದು ಬಳಕೆದಾರರ ಕೈ ಹಾಗೂ ದೇಹಕ್ಕೆ ಆರಾಮದಾಯಕ ಅನುಭವ ನೀಡುವಂತೆ ಅಭಿವೃಧಿ ಪಡಿಸಿದೆ.

ಸ್ಟೇಟ್‌ ಆಫ್‌ ದಿ ಆರ್ಟ್‌ ಟಚ್‌ ಸೆನ್ಸಿಟೀವ್‌ ಮೌಸ್‌ ನಿಮಗೆ ನಿಖರ ಹಾಗೂ ನಿಯಂತ್ರಿತವಾಗಿ ಪ್ರಬಲ ಮಸಾಜ್‌ ನೀಡುತ್ತದೆ. ಇದರ ವಿಶೇಷತೆ ಏನೆಂದರೆ ಕೆಲಸದ ಮಧ್ಯೆ ಬಿಡುವಿನ ಸಮಯದಲ್ಲಿ ಮಸಾಜ್‌ ಮೋಡ್‌ ಆನ್‌ ಮಾಡಿ ನಿಮ್ಮ ದಣಿವನ್ನು ತಣಿಸಿಕೊಳ್ಳ ಬಹುದಾಗಿದೆ. ಮಸಾಜ್‌ ನಿಂದಾಗಿ ನಿಮ್ಮ ದಣಿವು ತೀರಿದ ಬಳಿಕ ರಿಫ್ರಷ್‌ ಆಗಿ ಮತ್ತೆ ನಿಮ್ಮ ಕೆಲಸವನ್ನು ಮುಂದುವರೆಸ ಬಹುದಾಗಿದೆ.

ಈ ನವೀನ ರೀತಿಯ ಮೌಸ್‌ ಅನ್ನು ಜರ್ಮನಿಯ ಹಾನೋವರ್‌ನಲ್ಲಿ ಆಕ್ಟೋಬರ್‌ 3 ರಿಂದ 5ರ ವರೆಗೆ ಪ್ರದರ್ಶನಕ್ಕಿಡಲಾಗಿದೆ ಹಾಗೂ ಲಾಸ್‌ ವೇಗಾಸ್‌ನಲ್ಲಿ 2013ರ ಜನವರಿ 8-11 ವರೆಗೂ ಇಡಲಾಗುತ್ತದೆ. ಅಂದಹಾಗೆ ಈ ಮೌಸ್‌ನ ವಿಶೇಷತೆ ಕುರಿತು ಒಮ್ಮೆ ತಿಳಿದುಕೊಳ್ಳೋಣ.

ವಿಶೇಷತೆ:

  • ಆರಾಮದಾಯಕ ಹಾಗೂ ಸ್ಟೈಲಿಷ್‌ ಡಿಸೈನ್‌.

  • ಲಾರ್ಜ್‌ ಟಚ್‌ ಸೆನ್ಸಿಟೀವ್‌ ಸರ್ಫೇಸ್‌.

  • ಈಸಿ ಮೋಡ್‌ ಸ್ವಿಚ್ಇಂಗ್‌.

  • 10 ವೈಬ್ರೇಷನ್‌ ಲೆವೆಲ್ಸ್‌.

  • 2 ವೈಬ್ರೇಷನ್‌ ಪ್ಯಾಟ್ರನ್ಸ್‌.

  • ರಿಲ್ಯಾಕ್ಸಿಂಗ್‌ LED ಇಲ್ಯುಮಿನೇಷನ್‌.

  • ನಿಖರವಾದ ಆಪ್ಟಿಕಲ್‌ ಟ್ರಾಕಿಂಗ್‌.

  • ವೈರ್‌ ಲೆಸ್‌ ಇಂಟರ್ಫೇಸ್‌.

  • ಕಾಂಪಾಕ್ಟ್‌ USB ವೈರ್‌ಲೆಸ್‌ ರಿಸೀವರ್‌.

  • ಸುಲಭದ USB ಚಾರ್ಜಿಂಗ್‌ ಸ್ಟ್ಯಾಂಡ್‌.

  • ಮ್ಯಾಕಿಂಥಾಷ್‌ ಹಾಗೂ ವಿಂಡೋಸ್‌ ಬೆಂಲಿತ.

ಹೆಚ್ಚಿನ ವಿವರಗಳಿಗಾಗಿ ಈ ಪೇಜ್‌ ಕ್ಲಿಕ್‌ ಮಾಡಿ.

Read In English...

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X