Subscribe to Gizbot

ಎಲಾನ್ ಮಸ್ಕ್ ಭವಿಷ್ಯ!..ಕೃತಕ ಬುದ್ಧಿಮತ್ತೆ ಮನುಷ್ಯರನ್ನು ನಾಶಮಾಡಲಿದೆ!!

Written By:

ಇತಿಹಾಸದ ಉದ್ದಗಲಕ್ಕೂ ಯಾವುದೇ ಒಂದು ವಿಷಯದ ಬಗ್ಗೆ ಮೇದಾವಿಗಳ ನಡುವೆ ವಾದ ವಿವಾದಗಳು ನಡೆದುಕೊಂಡು ಬಂದಿವೆ. ಅದಕ್ಕೆ ಪ್ರಸ್ತುತ ತಂತ್ರಜ್ಞಾನ ಆಧಾರಿತ ಪ್ರಪಂಚ ಕೂಡ ಹೊರತಾಗಿಲ್ಲ.! ಹೌದು, ತಂತ್ರಜ್ಞಾನದ ಭವಿಷ್ಯ ಎಂದು ಕರೆಯಲಾಗುತ್ತಿರುವ 'ಕೃತಕ ಬುದ್ಧಿಮತ್ತೆ' ಇಂದು ಹಸಿಬಿಸಿ ಚರ್ಚೆಗಳಲ್ಲಿ ಒಂದಾಗಿ ಬದಲಾಗಿದೆ.!!

ಕೃತಕ ಬುದ್ಧಿಮತ್ತೆ ಪರಿಕಲ್ಪನೆಗೆ ಸಂಬಂಧಿಸಿದಂತೆ ಹೆಸರಾಂತ ದಿಗ್ಗಜರೆಲ್ಲರೂ ಭಿನ್ನ ನಿಲುವುಗಳನ್ನು ತಳೆದಿರುವುದರಿಂದ ಈ ವಿಷಯ ಪ್ರಪಂಚದ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಇದೀಗ ತಂತ್ರಜ್ಞಾನ ದಿಗ್ಗಜನಾದ ಹಾಗೂ ಸ್ವತಃ ಒಂದು 'ಕೃತಕ ಬುದ್ಧಿಮತ್ತೆ' ಕಂಪೆನಿಯನ್ನು ಆರಂಭಿಸಿದ್ದ ಸ್ಪೇಸ್ ಎಕ್ಸ್‌ನ ಎಲಾನ್ ಮಸ್ಕ್ ''ಕೃತಕ ಬುದ್ಧಿಮತ್ತೆ" ಮನುಷ್ಯನನ್ನು ನಿರ್ನಾಮ ಮಾಡಲಿದೆ ಎಂದಿದ್ದಾರೆ.!!

ಎಲಾನ್ ಮಸ್ಕ್ ಭವಿಷ್ಯ!..ಕೃತಕ ಬುದ್ಧಿಮತ್ತೆ ಮನುಷ್ಯರನ್ನು ನಾಶಮಾಡಲಿದೆ!!

ಹಾಗಾದರೆ, ಕೃತಕ ಬುದ್ಧಿಮತ್ತೆ ಎಂದರೇನು? ಈ ತಂತ್ರಜ್ಞಾನ ದೈತ್ಯರು ವಿಭನ್ನ ದೃಷ್ಟಿಕೋನ ಹೊಂದಿರುವುದು ಏಕೆ? ಯಾವ ಯಾವ ಹೆಸರಾಂತ ದಿಗ್ಗಜರು ಈ ಬಗ್ಗೆ ಏನು ಹೇಳಿದ್ದಾರೆ? ಮತ್ತು ಕೃತಕ ಬುದ್ಧಿಮತ್ತೆ ಬಗ್ಗೆ ಎಲಾನ್ ಮಸ್ಕ್ಗೆ ಹೀಗೆ ಹೇಳಿದ್ದೇಕೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ದೊಡ್ಡ ಚರ್ಚೆಗೆ ಗ್ರಾಸವಾಗಿದೆ ಕೃತಕ ಬುದ್ದಿಮತ್ತೆ.!!

ದೊಡ್ಡ ಚರ್ಚೆಗೆ ಗ್ರಾಸವಾಗಿದೆ ಕೃತಕ ಬುದ್ದಿಮತ್ತೆ.!!

ಕೃತಕ ಬುದ್ಧಿಮತ್ತೆ ಪರಿಕಲ್ಪನೆಗೆ ಸಂಬಂಧಿಸಿದಂತೆ ಇಬ್ಬರು ಭಿನ್ನ ನಿಲುವುಗಳನ್ನು ತಳೆದಿದ್ದು, ಪ್ರಪಂಚದ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.! ಟೆಕ್ ಪ್ರಪಂಚದ ದೈತ್ಯರಾದ ಎಲಾನ್ ಮಸ್ಕ್ ಮತ್ತು ಮಾರ್ಕ್ ಝುಕರ್‌ಬರ್ಗ್ ಸೇರಿ ಬಿಲ್‌ಗೇಟ್ಸ್ ಸೇರಿ ಬಹುತೇಕ ಎಲ್ಲರೂ ಕೃತಕ ಬುದ್ಧಿಮತ್ತೆ ಬಗ್ಗೆ ವಿಭನ್ನ ನಿಲುವನ್ನು ಹೊಂದಿದ್ದಾರೆ.!!

ಏನಿದು ‘ಕೃತಕ ಬುದ್ಧಿಮತ್ತೆ

ಏನಿದು ‘ಕೃತಕ ಬುದ್ಧಿಮತ್ತೆ"?

ನೀವು ಸೂಪರ್‌ಸ್ಟಾರ್ ಉಪೇಂದ್ರ ಅವರ ಹಾಲಿವುಡ್ ಮತ್ತು ರಜಿನಿಕಂತ್ ಅವರ ರೋಬಾಟ್ ಸಿನಿಮಾ ನೋಡಿದ್ದರೆ ಕೃತಕ ಬುದ್ಧಿಮತ್ತೆ ಎಂದರೆ ಏನು ಎಂದು ತಿಳಿಯಬಹುದು. ಯಂತ್ರವು ತನ್ನ ಸ್ವಂತಿಕೆ ಬುದ್ದಿಯನ್ನು ಉಪಯೋಗಿಸಿ ಯೋಚನೆ ಜೊತೆಗೆ ತಾನೇ ಎಲ್ಲಾ ಕಾರ್ಯಗಳನ್ನು ಮಾಡುವಂತದನ್ನು ಸಾಮಾನ್ಯವಾಗಿ ಕೃತಕ ಬುದ್ಧಿಮತ್ತೆ ಎನ್ನುತ್ತಾರೆ.!!

ನಮ್ಮನ್ನು ಮುಗಿಸಲಿದೆಯೇ ತಂತ್ರಜ್ಞಾನ!?

ನಮ್ಮನ್ನು ಮುಗಿಸಲಿದೆಯೇ ತಂತ್ರಜ್ಞಾನ!?

ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಭಿವೃದ್ದಿಯಾದರೆ ಭವಿಷ್ಯದಲ್ಲಿ ಆಗಬಹುದಾದ ಪರಿಣಾಮಗಳನ್ನು ಎಲಾನ್ ಮಸ್ಕ್ ಭಯದಿಂದ ನೋಡುತ್ತಿದ್ದಾರೆ. ಯಂತ್ರಗಳು ತಾವೇ ಸ್ವತಹಃ ನಿರ್ಣಯ ಕೈಗೊಳ್ಳುವುದರಿಂದ ಭವಿಷ್ಯದಲ್ಲಿ ಮಾನವನನ್ನು ನಿರ್ನಾಮ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದ್ದಾರೆ.!!

ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ವಿರುದ್ದ ಯಾರಿದ್ದಾರೆ.!!

ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ವಿರುದ್ದ ಯಾರಿದ್ದಾರೆ.!!

ಎಲಾನ್ ಮಸ್ಕ್ ಪ್ರಕಾರ ಕೃತಕ ಬುದ್ಧಿಮತ್ತೆ ಮನುಕುಲದ ಅಂತ್ಯಕ್ಕೆ ಕಾರಣವಾಗುತ್ತದೆ ಎಂದರೆ, ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಸಹ ಕೃತಕ ಬುದ್ಧಿಮತ್ತೆಯನ್ನು ಮನುಕುಲ ಕೊನೆಗೊಳಿಸಬಹುದಾದ ಪರಿಕಲ್ಪನೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕಾಳಜಿ ವಹಿಸಬೇಕಾದ ವಿಚಾರ ಎಂದಿದ್ದಾರೆ.!!

ಕೃತಕ ಬುದ್ಧಿಮತ್ತೆ ಪರ ಯಾರಿದ್ದಾರೆ?

ಕೃತಕ ಬುದ್ಧಿಮತ್ತೆ ಪರ ಯಾರಿದ್ದಾರೆ?

ಮಾರ್ಕ್ ಝುಕರ್‌ಬರ್ಗ್ ರೀತಿಯಲ್ಲಿಯೇ ಇತರ ಹೆಸರಾಂತ ತಂತ್ರಜ್ಞರು ಅಭಿಪ್ರಾಯಪಟ್ಟಿದ್ದು, ಗೂಗಲ್ ಡೀಪ್ ಮೈಂಡ್‌ನ ಸಂಸ್ಥಾಪಕ ಡೆಮಿಸ್ ಹಸಾಬಿಸ್ ಪ್ರಕಾರ ಕೃತಕ ಬುದ್ಧಿಮತ್ತೆ ಮನುಕುಲ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೊಂದು ‘ಅಂತಿಮ ಪರಿಹಾರ' ಎಂದು ಹೇಳಿದ್ದಾರೆ. ಮೈಕ್ರೋಸಾಫ್ಟ್ ರೆಡ್ಮಂಡ್ ಲ್ಯಾಬ್ ನಿರ್ದೇಶಕ ಎರಿಕ್ ಹಾರ್ವಿಟ್ಜ್ ಅವರು ಸಹ ಮನುಷ್ಯನನ್ನು ಇನ್ನಿಲ್ಲದಷ್ಟು ಸಬಲನನ್ನಾಗಿ ಮಾಡಬಲ್ಲ ಸಾಧನ ಕೃತಕ ಬುದ್ಧಿಮತ್ತೆ ಎಂದಿದ್ದಾರೆ.!!

ಇದಕ್ಕಾಗಿ ಜಗಳವಾಡಿಕೊಂಡಿದ್ದರು ದೈತ್ಯರು !!

ಇದಕ್ಕಾಗಿ ಜಗಳವಾಡಿಕೊಂಡಿದ್ದರು ದೈತ್ಯರು !!

ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಹಾಗೂ ಸ್ಪೇಸ್‌ ಎಕ್ಸ್ ಮತ್ತು ಟೆಲ್ಸಾ ಮುಖ್ಯಸ್ಥ ಎಲಾನ್ ಮಸ್ಕ್ ತಂತ್ರಜ್ಞಾನ ಪ್ರಪಂಚದಲ್ಲಿ ಒಂದೇ ಸಮ ತೂಗುತ್ತಾರೆ.! ಆದರೆ, ಎಲಾನ್ ಮಸ್ಕ್ ಅವರ ಈ ಅಭಿಪ್ರಾಯಕ್ಕೆ ಜುಕರ್‌ಬರ್ಗ್ 'ಇದೊಂದು ಬೇಜವಾಬ್ದಾರಿ ಹೇಳಿಕೆ, ನಾನು ಈ ಬಗ್ಗೆ ಆಶಾವಾದಿ ಎಂದಿದ್ದರು. ಇದಕ್ಕೆ ಎಲಾನ್ ಮಸ್ಕ್ ಜುಕರ್‌ಬರ್ಗ್‌ಗೆ ವಿಷಯ ಜ್ಞಾನವಿಲ್ಲ' ಎಂದಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.!!

ಓದಿರಿ:ಜಪಾನ್‌ನಲ್ಲಿನ ಒಂದು ವಿಚಿತ್ರ ಸಮಸ್ಯೆ ಪರಿಹರಿಸಲು ಡ್ರೋಣ್ ಬಳಕೆ!..ವಿಶ್ವಕ್ಕೆ ಶಾಕ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Artificial intelligence is highly likely to destroy humans.to know more visit mto kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot