AI Teacher: ಸೀರೆ ಉಟ್ಟು ಶಾಲೆಗೆ ಬಂದ್ರು ಎಐ ರೋಬೋಟ್ ಟೀಚರ್!
ಇಡೀ ವಿಶ್ವವೇ ತಂತ್ರಜ್ಞಾನದಿಂದ ಹೊಸ ಹೊಸ ಕಾಂತ್ರಿಗೆ ಮುಂದಾಗುತ್ತಿದೆ. ಹೊಸ ವಿಸ್ಮಯಗಳನ್ನು ಕಂಡುಕೊಳ್ಳುತ್ತಿದೆ. ಇದೀಗ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಆರಂಭವಾಗಿದೆ. ಸಾಂಪ್ರದಾಯಿಕವಾಗಿ ಸೀರೆಯನ್ನು ತೊಟ್ಟ ಭಾರತದ ಮೊದಲ AI (ಕೃತಕ ಬುದ್ಧಿಮತ್ತೆ) ಟೀಚರ್ ಅನ್ನು ಪರಿಚಯಿಸಲಾಗಿದೆ. ಈ ರೋಬೊ ಶಿಕ್ಷಕಿ (AI-Artificial Intelligence Teacher) ದೇಶದ ಜನತೆಯ ಆಕರ್ಷಣೆ ಆಗಿದೆ. ಈ ಎಐ ಶಿಕ್ಷಕಿ (AI Teacher) ವಿದ್ಯಾರ್ಥಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ತಕ್ಷಣವೇ ಉತ್ತರ ನೀಡುತ್ತಿದೆ. ಈ ಎಐ ಶಿಕ್ಷಕಿಯನ್ನು ಗುವಾಹಟಿಯ ಖಾಸಗಿ ಶಾಲೆಯಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ AI (ಕೃತಕ ಬುದ್ಧಿಮತ್ತೆ) ಕ್ರಾಂತಿ ಮೂಡಿಸುವ ಕಾಲ ಹತ್ತಿರವಾಗುತ್ತಿದೆ. ಮಾಹಿತಿ ತಂತ್ರಜ್ಞಾನದ ಹೊಸ ಹೊಸ ಆವಿಷ್ಕಾರದಲ್ಲಿನ ಹೊಸ ಸೇರ್ಪಡೆ ಎಐ ಶಿಕ್ಷಕಿ ಆಗಿದ್ದು, ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಸಾಂಪ್ರದಾಯಿಕವಾಗಿ ಕೃತಕ ಬುದ್ಧಿಮತ್ತೆ (AI) ಶಿಕ್ಷಕಿ (AI Teacher) ಈಶಾನ್ಯ ಭಾರತದ ಗುವಾಹಟಿ ಶಾಲೆಗೆ ಆಗಮಿಸಿದ್ದಾರೆ. ಈ ಎಐ ಶಿಕ್ಷಕಿ ಸೀರೆ ತೊಟ್ಟು ಶಾಲೆಗೆ ಬಂದಿರುವು ಮತ್ತೊಂದು ವಿಶೇಷವಾಗಿದೆ.

ಪ್ರಮುಖ ಅಂಶಗಳು
- ಸೀರೆ ತೊಟ್ಟು ಶಾಲೆಗೆ ಬಂದ ಭಾರತದ ಮೊದಲ ಸಾಂಪ್ರದಾಯಿಕ ಎಐ ಶಿಕ್ಷಕಿ (AI Teacher).
- ಅಟಲ್ ಟಿಂಕರಿಂಗ್ ಲ್ಯಾಬ್ (ATL) ಯೋಜನೆಯಡಿಯಲ್ಲಿ ಮೇಕರ್‌ಲ್ಯಾಬ್ಸ್ ಎಜು-ಟೆಕ್ ಸಹಯೋಗದೊಂದಿಗೆ ಈ ಎಐ ಶಿಕ್ಷಕಿಯ ಅಭಿವೃದ್ಧಿ.
- ಈ ಎಐ ಶಿಕ್ಷಕಿಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಭಾರತದ ಸುದ್ದಿ ವಾಹಿನಿಗಳಿಗೆ ರೋಬೋ ನಿರೂಪಕಿಯರು ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದ್ದರು. ಇದೀಗ, ಶಿಕ್ಷಣಕ್ಕೂ ಎಐ ತಂತ್ರಜ್ಞಾನ ಕಾಲಿಟ್ಟಿದೆ. ಅಸ್ಸಾಂ ಮತ್ತು ಈಶಾನ್ಯ ಭಾಗದಲ್ಲಿ ಸಾಂಪ್ರದಾಯಿಕವಾಗಿ ಸೀರೆಯನ್ನು ತೊಟ್ಟ ಭಾರತದ ಮೊದಲ ಕೃತಕ ಬುದ್ಧಿಮತ್ತೆ (AI) ಶಿಕ್ಷಕಿ ಕೆಲಸ ಪ್ರಾರಂಭಿಸಿದ್ದಾರೆ. ಈ ಎಐ ಶಿಕ್ಷಕಿಯನ್ನು (AI Teacher) ಗುವಾಹಟಿಯ ಖಾಸಗಿ ಶಾಲೆಯಲ್ಲಿ ಮೊದಲ ಬಾರಿಗೆ ಪ್ರಯೋಗ ಮಾಡಲಾಗಿದೆ. ಈ AI Teacher ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಪಟಾ ಪಟ್ ಅಂತ ಉತ್ತರ ನೀಡುತ್ತಿದ್ದಾರೆ.
ವಿದ್ಯಾರ್ಥಿಯೊಬ್ಬರು ಎಐ ಶಿಕ್ಷಕಿಗೆ ಹಿಮೋಗ್ಲೋಬಿನ್ ಎಂದರೇನು? ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಆಗ, ತಕ್ಷಣವೇ ಸಂಪೂರ್ಣ ವಿವರಗಳೊಂದಿಗೆ ವಿದ್ಯಾರ್ಥಿಗಳಿಗೆ ಈ ಎಐ ಶಿಕ್ಷಕಿ (AI Teacher) ಉತ್ತರಿಸಿದ್ದಾರೆ. ಈ ಬಗ್ಗೆ ಶಾಲೆಯ ಶಿಕ್ಷಕರು ಪ್ರತಿಕ್ರಿಯೆ ನೀಡಿದ್ದು, ಪ್ರಶ್ನೆಗಳು ಪಠ್ಯ ಅಥವಾ ಯಾವುದರ ಬಗ್ಗೆ ಇರಲಿ. ಯಾವುದೇ ಸಮಯದಲ್ಲಿ ಮತ್ತು ಉದಾಹರಣೆಗಳು, ಉಲ್ಲೇಖಗಳೊಂದಿಗೆ ಎಐ ಶಿಕ್ಷಕಿ (AI Teacher) ಉತ್ತರವನ್ನು ನೀಡುತ್ತಾರೆ. ವಿದ್ಯಾರ್ಥಿಗಳು ಕೂಡ ತುಂಬಾ ಆಸಕ್ತಿಯಿಂದ ಎಐ ಶಿಕ್ಷಕಿಯನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
AI ಶಿಕ್ಷಕಿ ಕಂಡು ಭಯಗೊಂಡ ಸ್ಟೂಡೆಂಟ್ಸ್!
ಇನ್ನು ಮೊದಲ ಬಾರಿ ಶಾಲೆಗೆ ಈ AI Teacher ಬಂದಾಗ ವಿದ್ಯಾರ್ಥಿಗಳು ಭಯಗೊಂಡಿದ್ದಾರೆ. ಹ್ಯಾಂಡ್‌ಶೇಕ್ ಮಾಡುವುದು ಇಂತಹ ಅನೇಕ ಸನ್ನೆಗಳನ್ನು ಈ ಎಐ ಶಿಕ್ಷಕಿ ಮಾಡುವುದನ್ನು ಕಂಡು ವಿದ್ಯಾರ್ಥಿಗಳು ಅಚ್ಚರಿಗೊಂಡಿದ್ದಾರೆ. ಇನ್ನು ಎಐ ಶಿಕ್ಷಕಿ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಹಾಗೂ ತುಂಬಾ ಲವಲವಿಯಿಂದ ಮಕ್ಕಳ ಜತೆಗೆ ಸಮಯ ಕಳೆಯುತ್ತಿದೆ ಎಂದು ಶಿಕ್ಷಕರು ಹೇಳಿದ್ದಾರೆ. ಈ AI Teacher ಧ್ವನಿ-ನಿಯಂತ್ರಿತ ಸಹಾಯಕವನ್ನು ಹೊಂದಿದ್ದು ಅದು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಹೆಲ್ಪ್ ಮಾಡುತ್ತಾರೆ. ಉತ್ತರ ಜತೆಗೆ ವಿವರಣೆಯನ್ನು ನೀಡುತ್ತಾರೆ ಮತ್ತು ಎಐ ಶಿಕ್ಷಕಿ ಎಲ್ಲದಕ್ಕೂ ಉತ್ತರ ನೀಡುತ್ತಾರೆ. ಮಕ್ಕಳು ಇದರಿಂದ ತುಂಬಾ ಉತ್ಸಾಹಿಗಳಾಗಿದ್ದಾರೆ.
ATL ಯೋಜನೆಯಡಿಯಲ್ಲಿ AI ಶಿಕ್ಷಕಿ ಅಭಿವೃದ್ಧಿ
NITI ಆಯೋಗ್ ಪ್ರಾರಂಭಿಸಿದ ಅಟಲ್ ಟಿಂಕರಿಂಗ್ ಲ್ಯಾಬ್ (ATL) ಯೋಜನೆಯಡಿಯಲ್ಲಿ ಮೇಕರ್‌ಲ್ಯಾಬ್ಸ್ ಎಜು-ಟೆಕ್ ಸಹಯೋಗದೊಂದಿಗೆ ಈ ಎಐಯನ್ನು ಅಭಿವೃದ್ಧಿ ಮಾಡಲಾಗಿದೆ. ಇದು ಲಿಕೆಯ ಅನುಭವವನ್ನು ಹೆಚ್ಚಿಸುವಲ್ಲಿ ಮತ್ತು ವಿದ್ಯಾರ್ಥಿಗಳ ವೈವಿಧ್ಯಮಯ ಕಲಿಕಾ ಶೈಲಿಗಳನ್ನು ಪೂರೈಸುವಲ್ಲಿ ಮಹತ್ವದ ಮೈಲಿಗಲ್ಲನ್ನು ಹೊಂದಿದೆ. ಶಿಕ್ಷಕರು ಕೂಡ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ AI ಶಿಕ್ಷಕಿ ಇಡೀ ದೇಶದ ಮೊದಲ ಸಾಂಪ್ರದಾಯಿಕ ಮಾನವರೂಪಿ (ಹ್ಯೂಮನಾಯ್ಡ್) ರೋಬೋ ಶಿಕ್ಷಕಿ ಎಂಬ ದಾಖಲೆಗೆ ಕಾರಣವಾಗಿದೆ.
ಈ ಎಐ ಶಿಕ್ಷಕಿಯ ಸಾಮರ್ಥ್ಯ ಏನು ಗೊತ್ತಾ?
ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಅನಾವರಣಗೊಳಿಸಲಾದ ರೋಬೋ ಶಿಕ್ಷಕಿ ಸಾರ್ವಜನಿಕ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ. Amrit Mahotsav ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ, ಈ ಎಐ ಶಿಕ್ಷಕಿಯ ಸಾಮರ್ಥ್ಯಗಳನ್ನು ಪ್ರಸ್ತುತಪಡಿಸಿವೆ. ಹಲವು ವಿಷಯಗಳ ಬಗ್ಗೆ ಕೇಳುವ ಪ್ರಶ್ನೆಗಳಿಗೂ ಉತ್ತರಿಸುತ್ತಿದೆ ಈ ಎಐ ಶಿಕ್ಷಕಿ. ವೈಯಕ್ತಿಕ ಧ್ವನಿ ನೆರವನ್ನು ಒದಗಿಸುವ ಇದು ಪರಸ್ಪರ ಸಂವಹನದ ಕಲಿಕಾ ಅನುಭವವನ್ನು ಕೂಡ ನೀಡುತ್ತದೆ. ತರಗತಿ ಕೋಣೆಗಳಲ್ಲಿ ಅದು ಶಿಕ್ಷಕರಿಗೆ ಬೆಂಬಲದ ಪಾತ್ರವನ್ನು ನಿರ್ವಹಿಸುತ್ತದೆ.
ಒಟ್ಟಾರೆ, AI ಶಿಕ್ಷಕಿ (ಕೃತಕ ಬುದ್ಧಿಮತ್ತೆ) ಶಿಕ್ಷಕಿ ಸಾಮರ್ಥ್ಯಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಕೃತಕ ಬುದ್ಧಿಮತ್ತೆ ಕಾಲದಲ್ಲಿ ಸಾಂಪ್ರದಾಯಿಕವಾಗಿ ಸೀರೆಯನ್ನು ತೊಟ್ಟು ಗುವಾಹಟಿಗೆ ಕಾಲಿಟ್ಟಿರುವ ಹೊಸ ಟೀಚರ್ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸುವುದು ನಿಶ್ಚಿತ ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದರಿಂದ ಅಸ್ಸಾಂ ಮತ್ತು ಈಶಾನ್ಯ ಭಾಗದಲ್ಲಿ ಸಾಕ್ಷರತೆ ವೃದ್ಧಿಯಾಗುವ ಸಾಧ್ಯೆತೆಯಿದೆ.


Click it and Unblock the Notifications








