ಗಗನಯಾತ್ರಿಗಳಿಬ್ಬರು ಬಾಹ್ಯಾಕಾಶದಲ್ಲಿ ಕಂಡ ಈ ಸಂಗತಿ ಅಚ್ಚರಿ ಎನಿಸುತ್ತೆ!

|

ಬಾಹ್ಯಾಕಾಶದ ಬಗ್ಗೆ ಎಲ್ಲರಿಗೂ ಆಸಕ್ತಿ ಇದ್ದೆ ಇದೆ. ನಿಮ್ಮ ಆಸಕ್ತಿ ತಣಿಸುವ ವಿಚಾರವೊಂದನ್ನು ಟ್ವಿಟರ್‌ ಬಹಿರಂಗ ಪಡಿಸಿದೆ. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಟ್ವಿಟರ್‌ ಹ್ಯಾಂಡಲ್‌ನಿಂದ ಆಸಕ್ತಿಕರ ವಿಚಾರಗಳನ್ನು ಟ್ವೀಟ್ ಮಾಡಲಾಗಿದೆ. ಗಗನಯಾತ್ರಿಗಳಾದ ಜಪಾನ್‌ನ ಅಕಿಹಿಕೊ ಹೋಶೈಡ್ ಮತ್ತು ಫ್ರಾನ್ಸ್‌ನ ಥಾಮಸ್ ಪೆಸ್ಕ್ವೆಸ್ಟ್ ಸುಮಾರು ಏಳು ಗಂಟೆಗಳ ಕಾಲ ಬಾಹ್ಯಾಕಾಶ ನಡಿಗೆಯನ್ನು ಪೂರ್ಣಗೊಳಿಸಿದ ನಂತರ ಈ ಘಟನೆ ನಡೆದಿದೆ.

ಬಾಹ್ಯಕಾಶ

ಹೌದು, ಅಂತರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣದ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ ಟ್ವಿಟರ್‌ ಬಳಕೆದಾರರ ಪ್ರಶ್ನೆಗಳಿಗೆ ಉತ್ತರಿಸಿದೆ. ಅದರಲ್ಲೂ ಅಂತರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತ ಸಮಯ ಹೇಗಿದೆ ಎನ್ನುವ ಪ್ರಶ್ನೆಗೆ ನೀಡಿರುವ ಉತ್ತರ ನಿಜಕ್ಕೂ ಅಚ್ಚರಿ ಎನಿಸಲಿದೆ. ಅಲ್ಲದೆ ಗಗನಯಾತ್ರಿಗಳು ತಮ್ಮ ಸೂಟ್‌ಗಳಲ್ಲಿ ಯಾವುದೇ ತಾಪಮಾನ ವ್ಯತ್ಯಾಸಗಳನ್ನು ಅನುಭವಿಸುತ್ತಾರೆಯೇ ಎಂಬ ಪ್ರಶ್ನೆಗೆ ನೀಡಿರುವ ಉತ್ತರ ಕೂಡ ಆಶ್ಚರ್ಯಕರವಾಗಿದೆ. ಹಾಗಾದ್ರೆ ಟ್ವಿಟರ್ ಬಳಕೆದಾರರ ಪ್ರಶ್ನೆಗಳಿಗೆ ಐಎಸ್‌ಎಸ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಪ್ರತಿಕ್ರಿಯಿಸಿದ್ದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಬಾಹ್ಯಕಾಶ

ಅಂತರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣದ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ ಕೆಲವು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದೆ. ಬಾಹ್ಯಕಾಶದಲ್ಲಿ ಸೂರ್ಯೋದಯದ ಸಮಯ ಹೇಗಿರಲಿದೆ ಎಂಬ ಪ್ರಶ್ನೆಗೆ "ಬಾಹ್ಯಾಕಾಶ ನಡಿಗೆದಾರರು ಪ್ರತಿ 90 ನಿಮಿಷಗಳಿಗೊಮ್ಮೆ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಅನುಭವಿಸುತ್ತಾರೆ ಎನ್ನುವ ಉತ್ತರ ನೀಡಿದೆ. ಅಲ್ಲದೆ @cquantumspin ಕೇಳಿರುವ ಗಗನಯಾತ್ರಿಗಳು ತಮ್ಮ ಸೂಟ್‌ಗಳಲ್ಲಿ ತಾಪಮಾನ ವ್ಯತ್ಯಾಸಗಳನ್ನು ಅನುಭವಿಸುತ್ತಾರೆಯೇ ಎಂಬ ಪ್ರಶ್ನೆಗೆ ಮೈನಸ್‌ 250 ಡಿಗ್ರಿ (ಸೂರ್ಯಾಸ್ತದ ಸಮಯದಲ್ಲಿ) ಮತ್ತು 250 ಡಿಗ್ರಿ ಫ್ಯಾರನ್‌ಹೀಟ್ (ಸೂರ್ಯೋದಯ ಸಮಯದಲ್ಲಿ) ತಾಪಮಾನದ ವ್ಯತ್ಯಾಸವಿದೆ ಎಂಬ ಉತ್ತರ ನೀಡಿದೆ.

ಗಗನಯಾತ್ರಿ

ಈ ಕಾರಣಕ್ಕಾಗಿ ಬಾಹ್ಯಕಾಶದಲ್ಲಿ ಸಾಕಷ್ಟು ತಾಪಮಾನ ವ್ಯತ್ಯಾಸವಿದೆ. ಆದಾಗ್ಯೂ, ಆ ತಾಪಮಾನ ವ್ಯತ್ಯಾಸಗಳ ಸಮಯದಲ್ಲಿ ಗಗನಯಾತ್ರಿಯನ್ನು ಆರಾಮದಾಯಕವಾಗಿಸಲು ಸಹಾಯ ಮಾಡಲು ಸ್ಪೇಸ್‌ಸೂಟ್‌ಗಳು ತಂಪಾಗಿಸುವ ಉಡುಪುಗಳು ಮತ್ತು ರಕ್ಷಣೆಯ ಪದರಗಳೊಂದಿಗೆ ಸಜ್ಜುಗೊಂಡಿವೆ ಎಂಬ ಉತ್ತರ ನೀಡಿದೆ. ಇದೆಲ್ಲದಕ್ಕಿಂತ ಅಚ್ಚರಿ ಎಂದರೆ NASA ತಜ್ಞರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಪ್ರತಿ ತೊಂಬತ್ತು ನಿಮಿಷಗಳಿಗೊಮ್ಮೆ ಭೂಮಿಯ ಸುತ್ತ ಸುತ್ತುತ್ತದೆ, ಪ್ರತಿ ನಲವತ್ತೈದು ನಿಮಿಷಗಳಿಗೊಮ್ಮೆ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ಅನುಭವಿಸುತ್ತದೆ ಅನ್ನೊದನ್ನ ವಿವರಿಸಿದ್ದಾರೆ.

ಗಗನಯಾತ್ರಿಗಳು

ಇನ್ನು ಗಗನಯಾತ್ರಿಗಳಾದ ಹೋಶೈಡ್ ಮತ್ತು ಪೆಸ್ಕ್ವೆಸ್ಟ್ ISSನಲ್ಲಿ ಮೂರನೇ ಹೊಸ ಸೌರ ಶ್ರೇಣಿಯನ್ನು ಜೋಡಿಸಲು ಮುಂದಾಗಿದ್ದಾರೆ, ಇದಕ್ಕಾಗಿ ಸಪೋರ್ಟ್‌ ಬ್ರಾಕೆಟ್ ಅನ್ನು ಸ್ಥಾಪಿಸಲು ಬಾಹ್ಯಾಕಾಶ ನೌಕೆಯಿಂದ ಹೊರಬಂದಿದ್ದಾರೆ. ಸದ್ಯ ಗಗನಯಾತ್ರಿಗಳು ತಮ್ಮ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರೆ, ಈ ವರ್ಷದ ಯಶಸ್ವಿ 12ನೇ ಬಾಹ್ಯಾಕಾಶ ನಡಿಗೆಯಾಗಿರಲಿದೆ. ಇನ್ನು ವಾಣಿಜ್ಯ ಬಳಕೆಗಾಗಿ ISS ನಿಲ್ದಾಣವನ್ನು ತೆರೆಯಲು ನಾಸಾ ಹೊಸ ಕ್ರಮ ಕೈಗೊಂಡಿದೆ. ಇದಕ್ಕಾಗಿ ಇಂಧನ ಬೇಡಿಕೆಯೂ ಹೆಚ್ಚಾಗಿದೆ. ಈ ಬೆಳವಣಿಗೆಯಿಂದಾಗಿ, ಪ್ರಸ್ತುತ ಅಸ್ತಿತ್ವದಲ್ಲಿರುವ ಎಂಟು ವಿದ್ಯುತ್ ಚಾನೆಲ್‌ಗಳಲ್ಲಿ ಆರನ್ನು ಸಾಕಷ್ಟು ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಅಪ್‌ಗ್ರೇಡ್ ಮಾಡುವತ್ತ ಗಮನಹರಿಸಿದೆ.

Best Mobiles in India

English summary
The International Space Station (ISS) completes one orbit of Earth in 90 minutes.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X