ವಿದ್ಯಾರ್ಥಿಗಳಿಗಾಗಿ ಹೊಸ ಡೆಸ್ಕ್‌ಟಾಪ್ ಪರಿಚಯಿಸಿದ ಅಸೂಸ್! ಹೇಗಿದೆ ಇದರ ಡಿಸೈನ್!
ಅಸೂಸ್ ಕಂಪೆನಿಯ ಲ್ಯಾಪ್‌ಟಾಪ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್ ಇದೆ. ತನ್ನ ವಿಭಿನ್ನ ಶೈಲಿ ಹಾಗೂ ಗೇಮಿಂಗ್ ಲ್ಯಾಪ್‌ಟಾಪ್‌ಗಳಿಂದಾಗಿ ಅಸೂಸ್ ಕಂಪೆನಿ ಗಮನಸೆಳೆದಿದೆ. ಇದೀಗ ಅದರ ಮುಂದುವರೆದ ಭಾಗವಾಗಿ ಭಾರತದಲ್ಲಿ ಹೊಸ ಪ್ರೀಮಿಯಂ ಆಲ್ ಇನ್ ಒನ್ A5 ಡೆಸ್ಕ್‌ಟಾಪ್ ಅನ್ನು ಬಿಡುಗಡೆ ಮಾಡಿದೆ.
ಹೌದು, ಭಾರತದಲ್ಲಿ ಅಸೂಸ್ ಕಂಪೆನಿ ಪ್ರೀಮಿಯಂ ಆಲ್ ಇನ್ ಒನ್ A5 ( Asus AIO A5402) ಡೆಸ್ಕ್‌ಟಾಪ್ ಎಂಟ್ರಿ ನೀಡಿದೆ. ಇದನ್ನು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ವಿಶ್ವಾಸಾರ್ಹ ಆಡಿಯೊ ಸಿಸ್ಟಮ್ ಅನ್ನು ಒಳಗೊಂಡಿದೆ. ಇದು 13 ನೇ-ಜನ್ ಇಂಟೆಲ್ ಕೋರ್ i5 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನುಳಿದಂತೆ ಈ ಹೊಸ ಡೆಸ್ಕ್‌ಟಾಪ್ ಏನೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಸೂಸ್ AIO A5402 ಡೆಸ್ಕ್‌ಟಾಪ್ ಫೀಚರ್ಸ್ ಹೇಗಿದೆ?
ಅಸೂಸ್ AIO A5402 ಡೆಸ್ಕ್‌ಟಾಪ್ 23.8-ಇಂಚಿನ IPS ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ಆಂಟಿ-ಗ್ಲೇರ್ ಲೇಪನ ಮತ್ತು 250 ನೀಟ್ಸ್ ಬ್ರೈಟ್‌ನೆಸ್‌ನೊಂದಿಗೆ ಬರಲಿದೆ. ಇನ್ನು ಡಿಸ್‌ಪ್ಲೇ ಟಚ್-ಸಕ್ರಿಯಗೊಳಿಸಿದ 100% sRGB ಮತ್ತು 1000:1 ಕಾಂಟ್ರಾಸ್ಟ್ ಅನ್ನು ನೀಡಲಿದೆ. ಈ ಡಿಸ್‌ಪ್ಲೇ 88% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದ್ದು, ಕಿರಿದಾದ ಬೆಜೆಲ್‌ಗಳನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್ ಸಾಕಷ್ಟು ಒರಟಾಗಿ ಕಾಣಲಿದೆ, ಇದರ ಒರಟಾದ ವಿನ್ಯಾಸವು ಆಸುಸ್‌ಗೆ ಹೆಚ್ಚಿನ ಸ್ಲಾಟ್‌ಗಳನ್ನು ಅಳವಡಿಸಲು ಅನುವು ಮಾಡಿಕೊಡಲಿದೆ.
ಅಸೂಸ್ AIO A5402 ಡೆಸ್ಕ್‌ಟಾಪ್ ಇಂಟೆಲ್ ಕೋರ್ i5-1340P (4P + 8E ಕೋರ್‌ಗಳು) ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 16GB DDR4 ಮತ್ತು 512GB PCIe Gen 4 SSD ಮೆಮೊರಿಯನ್ನು ಹೊಂದಿದೆ. ಇದಲ್ಲದೆ ಇಂಟೆಲ್ UHD ಇಂಟಿಗ್ರೇಟೆಡ್ ಗ್ರಾಫಿಕ್ಸ್ ಅನ್ನು ಹೊಂದಿದ್ದು, ಏಜ್ ಆಫ್ ಎಂಪೈರ್ಸ್ IV ಮತ್ತು FIFA 22 ಸೇರಿದಂತೆ ಕೆಲವು ಹೊಸ ಗೇಮ್‌ಗಳನ್ನು ರನ್ ಮಾಡಲು ಅವಕಾಶ ನೀಡಲಿದೆ.
ಇನ್ನು ಡೆಸ್ಕ್‌ಟಾಪ್ ತನ್ನ ಕನೆಕ್ಟಿವಿಟ ಆಯ್ಕೆಗಳಲ್ಲಿ ಥಂಡರ್‌ಬೋಲ್ಟ್ 4, USB 3.2 Gen 2 (Type-C), USB 3.2 Gen 1, SD ಕಾರ್ಡ್ ರೀಡರ್ ಮತ್ತು ಆಡಿಯೊ ಜ್ಯಾಕ್ ಅನ್ನು ಬೆಂಬಲಿಸಲಿದೆ. ಜೊತೆಗೆ ಹಿಂಭಾಗದಲ್ಲಿ ಎರಡು USB 3.2 Gen 1, ಎರಡು USB 2.0, HDMI 1.4, HDMI ಔಟ್ 2.1b, ಮತ್ತು RJ45 ಈಥರ್ನೆಟ್ ಪೋರ್ಟ್‌ಗಳನ್ನು ಒಳಗೊಂಡಿದೆ. ಇದಲ್ಲದೆ ವಾಯರ್‌ಲೆಸ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi 6E ಮತ್ತು ಬ್ಲೂಟೂತ್ 5.3 ಅನ್ನು ಒಳಗೊಂಡಿವೆ.

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಅಸೂಸ್ A5 (A5402) ಡೆಸ್ಕ್‌ಟಾಪ್ ಬೆಲೆ 94,990ರೂ.ಗಳಿಂದ ಪ್ರಾರಂಭವಾಗಲಿದೆ. ಈ ಡೆಸ್ಕ್‌ಟಾಪ್ ಅನ್ನು ನೀವು ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಸೇರಿದಂತೆ ಜನಪ್ರಿಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಖರೀದಿಸಬಹುದಾಗಿದೆ. ಇದಲ್ಲದೆ ಆಸುಸ್ ಇಂಡಿಯಾ ಸ್ಟೋರ್‌ಗಳ ಮೂಲಕ ಕೂಡ ಬಳಕೆದಾರರು ಅಸೂಸ್ ಆಲ್-ಇನ್-ಒನ್ ಡೆಸ್ಕ್‌ಟಾಪ್ ಅನ್ನು ಖರೀದಿಸಬಹುದು.
ಇನ್ನು ಸದ್ಯದಲ್ಲೇ ಆಸುಸ್ ತನ್ನ ಹೊಸ ಆಸುಸ್ ಜೆನ್‌ಫೋನ್ 10 ಸ್ಮಾರ್ಟ್‌ಫೋನ್ ಪರಿಚಯಿಸಲಿದೆ. ಈ ಸ್ಮಾರ್ಟ್‌ಫೋನ್ 6.3 ಇಂಚಿನ AMOLED ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. ಇನ್ನು ಇದರ ಡಿಸ್‌ಪ್ಲೇಯು 1,080 x 2,400 ಪಿಕ್ಸಲ್ ರೆಸಲ್ಯೂಶನ್ ಹೊಂದಿರಲಿದ್ದು, ಜೊತೆಗೆ 120Hz ರಿಫ್ರೆಶ್ ರೇಟ್ ಸಾಮರ್ಥ್ಯವನ್ನು ಹೊಂದಿರಲಿದೆ. ಅಲ್ಲದೇ ಈ ಡಿಸ್‌ಪ್ಲೇಯು 20:9 ಅನುಪಾತವನ್ನು ಒಳಗೊಂಡಿರಲಿದೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಹೊಂದಿರುತ್ತದೆ. ಹಾಗೆಯೇ ಆಸುಸ್ ಜೆನ್‌ಫೋನ್ 10 ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 8 ಜೆನ್ 2 SoC ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಸಹ ಪಡೆದಿರಲಿದೆ. ಇದರೊಂದಿಗೆ 16GB RAM ಮತ್ತು 512 GB ಸ್ಟೋರೇಜ್ ವೇರಿಯಂಟ್ ಆಯ್ಕೆ ಒಳಗೊಂಡಿರಲಿದೆ. ಇರತೆ ವೇರಿಯಂಟ್ ಆಯ್ಕೆ ಪಡೆದಿರುವ ನಿರೀಕ್ಷೆ ಸಹ ಇದೆ.


Click it and Unblock the Notifications








