ಭಾರತದಲ್ಲಿ ಹೊಸ ಕ್ರೋಮ್‌ಬುಕ್‌ CX1101 ಲ್ಯಾಪ್‌ಟಾಪ್‌ ಲಾಂಚ್‌! ಬೆಲೆ ಎಷ್ಟು?

|

ಇತ್ತೀಚಿನ ದಿನಗಳಲ್ಲಿ ಲ್ಯಾಪ್‌ಟಾಪ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆನ್‌ಲೈನ್‌ ತರಗತಿಗಳು, ವರ್ಕ್‌ ಫ್ರಂ ಹೋಮ್‌ ಶುರುವಾದ ನಂತರ ಲ್ಯಾಪ್‌ಟಾಪ್‌ಗಳು ಇನ್ನು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿವೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ತಮ್ಮದೇ ಆದ ವಿಭಿನ್ನ ಮಾದರಿಯ ಲ್ಯಾಪ್‌ಟಾಪ್‌ಗಳು ಬಿಡುಗಡೆ ಮಾಡಿವೆ. ಈ ಪೈಕಿ ಆಸುಸ್‌ ಕಂಪೆನಿ ಮಾರುಕಟ್ಟೆಯಲ್ಲಿ ಹಲವು ವೈವಿದ್ಯಮಯ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ತನ್ನ ಹೊಸ ಆಸುಸ್‌ ಕ್ರೋಮ್‌ಬುಕ್‌ CX1101 ಹೆಸರಿನ ಹೊಸ ಕ್ರೋಮ್‌ಬುಕ್‌ ಬಿಡುಗಡೆ ಮಾಡಿದೆ.

ಕ್ರೋಮ್‌ಬುಕ್‌

ಹೌದು, ಆಸುಸ್‌ ಕಂಪೆನಿ ಭಾರತದಲ್ಲಿ ಹೊಸ ಕ್ರೋಮ್‌ಬುಕ್‌ CX1101 ಲ್ಯಾಪ್‌ಟಾಪ್‌ ಲಾಂಚ್‌ ಮಾಡಿದೆ. ಈ ಡಿವೈಸ್‌ 11.6-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮಿಲಿಟರಿ-ದರ್ಜೆಯ ಒರಟಾದ ಲ್ಯಾಪ್‌ಟಾಪ್‌ಗಳ ಸರಣಿಗೆ ಸೇರಿದೆ. ಇನ್ನು ಈ ಲ್ಯಾಪ್‌ಟಾಪ್‌ ವಿದ್ಯಾರ್ಥಿಗಳಿಗೆ ಸೂಕ್ತವಾದ ವಿನ್ಯಾಸವನ್ನು ಹೊಂದಿದೆ. ಜೊತೆಗೆ ಇದು ಎಡ್ಜ್-ಟು-ಎಡ್ಜ್ ಸ್ಪಿಲ್-ರೆಸಿಸ್ಟೆಂಟ್ ಕೀಬೋರ್ಡ್ ಅನ್ನು ಒಳಗೊಂಡಿದ್ದು, 180-ಡಿಗ್ರಿ ಲೇ-ಫ್ಲಾಟ್ ಮೆಟಲ್ ಬಲವರ್ಧಿತ ಹಿಂಜ್ ಅನ್ನು ಹೊಂದಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಸುಸ್‌ ಕ್ರೋಮ್‌ಬುಕ್‌ CX1101

ಆಸುಸ್‌ ಕ್ರೋಮ್‌ಬುಕ್‌ CX1101 HD ಲ್ಯಾಪ್‌ಟಾಪ್‌ 1366x768 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 11.6 ಇಂಚಿನ ಆಂಟಿ-ಗ್ಲೇರ್ LCD ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 16:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಇದು ಇಂಟೆಲ್‌ Celeron N4020 ಡ್ಯುಯಲ್-ಕೋರ್ ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಈ ಲ್ಯಾಪ್‌ಟಾಪ್ Chrome OS ಅನ್ನು ರನ್ ಮಾಡುತ್ತದೆ. ಜೊತೆಗೆ ಈ ಲ್ಯಾಪ್‌ಟಾಪ್‌ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದೆ. ಇದಲ್ಲದೆ ಮೈಕ್ರೊ SD ಬಳಸಿಕೊಂಡು 2TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ರೋಮ್‌ಬುಕ್‌ CX1101

ಆಸುಸ್‌ ಪ್ರಕಾರ, ಹೊಸ ಕ್ರೋಮ್‌ಬುಕ್‌ CX1101 ಮೆಟಲ್ ರೇಯ್ನ್ ಫೊರ್ಸ್ಡ್ ಹಿಂಗೀಸ್ ಅನ್ನು ಹೊಂದಿದೆ. ಇದು ಎಡ್ಜ್-ಟು-ಎಡ್ಜ್ ಸ್ಪಿಲ್-ರೆಸಿಸ್ಟೆಂಟ್ ಕೀಬೋರ್ಡ್ ಅನ್ನು ಒಳಗೊಂಡಿದೆ. ಈ ಕ್ರೋಮ್‌ಬುಕ್‌ US MIL-STD 810H ಪ್ರಮಾಣೀಕರಿಸಲ್ಪಟ್ಟಿದೆ. ಇದು Google ನ ಟೈಟಾನ್ C ಭದ್ರತಾ ಚಿಪ್‌ನೊಂದಿಗೆ ಅಂತರ್ನಿರ್ಮಿತವಾಗಿದೆ. ಅಲ್ಲದೆ ಟ್ರ್ಯಾಕ್‌ಪ್ಯಾಡ್ ಬಹು-ಗೆಸ್ಚರ್ ಬೆಂಬಲದೊಂದಿಗೆ ಬರುತ್ತದೆ. ಇದನ್ನು ನೀವು 180-ಡಿಗ್ರಿ ಕೋನದಲ್ಲಿ ತೆರೆಯಬಹುದು.

ಆಸುಸ್‌ ಕ್ರೋಮ್‌ಬುಕ್‌ CX1101

ಇನ್ನು ಆಸುಸ್‌ ಕ್ರೋಮ್‌ಬುಕ್‌ CX1101 3-ಸೆಲ್ 42Whr ಬ್ಯಾಟರಿಯನ್ನು ಹೊಂದಿದೆ. ಇದು 13 ಗಂಟೆಗಳವರೆಗೆ ಇರುತ್ತದೆ ಎಂದು ಕಂಪನಿ ಹೇಳುತ್ತದೆ. ಜೊತೆಗೆ USB-ಟೈಪ್ C ಮೂಲಕ 45W ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಇನ್ನು ಈ ಲ್ಯಾಪ್‌ಟಾಪ್‌ ಎರಡು USB 3.2 ನೊಂದಿಗೆ ಬರುತ್ತದೆ. ಟೈಪ್-ಸಿ ಪೋರ್ಟ್‌ಗಳು, ಎರಡು ಯುಎಸ್‌ಬಿ 3.2 ಟೈಪ್-ಎ ಪೋರ್ಟ್‌ಗಳು, ಮೈಕ್ರೊ ಎಸ್‌ಡಿ ಕಾರ್ಡ್ ರೀಡರ್ ಮತ್ತು 3.5 ಎಂಎಂ ಆಡಿಯೊ ಜ್ಯಾಕ್ ಅನ್ನು ಬೆಂಬಲಿಸಲಿದೆ. ಈ ಲ್ಯಾಪ್‌ಟಾಪ್‌ ಇಂಟೆಲ್‌ HD ಗ್ರಾಫಿಕ್ಸ್ 600 ಗ್ರಾಫಿಕ್ಸ್ ಅನ್ನು ನೋಡಿಕೊಳ್ಳುತ್ತದೆ. ಈ ಲ್ಯಾಪ್‌ಟಾಪ್‌ ಅಂತರ್ನಿರ್ಮಿತ ಮೈಕ್ರೊಫೋನ್, Google ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಆಸುಸ್‌ ಕ್ರೋಮ್‌ಬುಕ್‌ CX1101 ಅನ್ನು ಫ್ಲಿಪ್‌ಕಾರ್ಟ್‌ನೊಂದಿಗೆ ಆಸುಸ್‌ ಪಾಲುದಾರಿಕೆಯ ಭಾಗವಾಗಿ ಪ್ರಾರಂಭಿಸಲಾಗಿದೆ. ಇದರರ್ಥ ಆಸುಸ್‌ನ ಹೊಸ ಕ್ರೋಮ್‌ಬುಕ್‌ ಡಿಸೆಂಬರ್ 15ರಿಂದ ಭಾರತೀಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಪ್ರತ್ಯೇಕವಾಗಿ ಲಭ್ಯವಿರುತ್ತದೆ. ಕ್ರೋಮ್ ಓಎಸ್ ಚಾಲಿತ ಲ್ಯಾಪ್‌ಟಾಪ್ 19,999 ರೂ.ಬೆಲೆಯನ್ನು ಹೊಂದಿದೆ. ಕ್ರೋಮ್‌ಬುಕ್‌ CX1101 ರಿಟೇಲ್ ಸೇಲ್‌ನಲ್ಲಿ 18,990ರೂ.ಗಳ ವಿಶೇಷ ರಿಯಾಯಿತಿ ದರದಲ್ಲಿ ನೋಡುತ್ತದೆ. ಇದರ ಜೊತೆಗೆ SBI ಬ್ಯಾಂಕ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳೊಂದಿಗೆ ನೋ ಕಾಸ್ಟ್‌ EMI 6 ತಿಂಗಳವರೆಗೆ ತ್ವರಿತ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಆಸುಸ್

ಇದಲ್ಲದೆ ಇತ್ತೀಚಿಗೆ ಆಸುಸ್ ಕಂಪೆನಿ ತನ್ನ ಅಧಿಕೃತ ಆನ್‌ಲೈನ್‌ ​​ಸ್ಟೋರ್ ಅನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಇದರಿಂದ, ಗ್ರಾಹಕರು ಆಸುಸ್‌ ಕಂಪನಿಯ ಇ-ಸ್ಟೋರ್ ಮೂಲಕ ನೇರವಾಗಿ ಆಸುಸ್ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ. ಈ ಸೇವೆ ಗ್ರಾಹಕರ ಅನುಭವವನ್ನು ಹೆಚ್ಚಿಸುವ ಜೊತೆಗೆ ಎಲ್ಲಾ ಬ್ರಾಂಡ್-ಸಂಬಂಧಿತ ಮಾಹಿತಿಯು ಸುಲಭವಾಗಿ ಲಭ್ಯವಾಗುವ ಗುರಿಯನ್ನು ಹೊಂದಿದೆ.

Best Mobiles in India

English summary
Asus Chromebook CX1101 is compliant with US MIL-STD 810H durability standards.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X