ಅಸೂಸ್ ಹೊರತರಲಿದೆ ಫೋನ್‌ಪ್ಯಾಡ್ 7 ಟ್ಯಾಬ್ಲೆಟ್
ಹೊಸ ಫೋನ್ ಪ್ಯಾಡ್ ವಾಯ್ಸ್ ಕಾಲಿಂಗ್ ಟ್ಯಾಬ್ಲೆಟ್ ಅನ್ನು ಅಸೂಸ್ ಪ್ರಸ್ತುತಪಡಿಸಿದ್ದು, ಇದನ್ನು ಫೋನ್ ಪ್ಯಾಡ್ 7 (FE375CL) ಎಂದು ಕರೆಯಲಾಗಿದ್ದು, ಇದರಲ್ಲಿ ಆಂಡ್ರಾಯ್ಡ್ 5.0 ಲಾಲಿಪಪ್ ಚಾಲನೆಯಾಗಲಿದೆ.

ಕಂಪೆನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಸೂಸ್ ಫೋನ್‌ಪ್ಯಾಡ್ 7 ಅನ್ನು ಪಟ್ಟಿಮಾಡಲಾಗಿದ್ದು, ಇದು ತೈವಾನ್‌ನಲ್ಲಿ ಮೊದಲು ಬಿಡುಗಡೆಯಾಗಲಿದೆ, ಬೆಲೆ ಸರಿಸುಮಾರು ರೂ 15,500 ಎಂದು ನಿರ್ಧರಿಸಲಾಗಿದೆ.

ಇನ್ನು ಕಂಪೆನಿಯ ವರದಿ ಪ್ರಕಾರ, ಸಿಂಗಲ್ ಸಿಮ್ ಇರುವ ಅಸೂಸ್ ಫೋನ್‌ಪ್ಯಾಡ್ 7, 7 ಇಂಚಿನ WXGA (1280x800 ಪಿಕ್ಸೆಲ್‌ಗಳು) IPS IPS LED-ಬ್ಯಾಕ್‌ಲಿಟ್ ಡಿಸ್‌ಪ್ಲೇಯನ್ನು ಹೊಂದಿದ್ದು ಕ್ವಾಡ್ ಕೋರ್ ಇಂಟೆಲ್ ಆಟಮ್ Z3530 ಪ್ರೊಸೆಸರ್ ಇದರಲ್ಲಿದೆ. ಡಿವೈಸ್ 2 ಜಿಬಿ RAM ಅನ್ನು ಹೊಂದಿದ್ದು 8 ಜಿಬಿ ಆಂತರಿಕ ಸಂಗ್ರಹವನ್ನು ಡಿವೈಸ್ ಹೊಂದಿದೆ ಇದನ್ನು 64 ಜಿಬಿಗೆ ವಿಸ್ತರಿಸಬಹುದಾಗಿದೆ.

ರಿಯರ್ ಕ್ಯಾಮೆರಾ 5 ಎಮ್‌ಪಿಯಾಗಿದ್ದು 2 ಮೆಗಾಪಿಕ್ಸೆಲ್ ಕ್ಯಾಮೆರಾ ಮುಂಭಾಗದಲ್ಲಿದೆ. ಇನ್ನು ಡಿವೈಸ್‌ನ ಸಂಪರ್ಕ ಅಂಶಗಳತ್ತ ಗಮನಹರಿಸಿದಾಗ ಇದು 4ಜಿ ಎಲ್‌ಟಿಇ, ವೈಫೈ, ಬ್ಲ್ಯೂಟೂತ್ ಅನ್ನು ಒಳಗೊಂಡಿದೆ.


Click it and Unblock the Notifications








