ಅಸೂಸ್ ಸಂಸ್ಥೆಯಿಂದ ಹೊಸ ತಲೆಮಾರಿನ ಲ್ಯಾಪ್‌ಟಾಪ್ ಲಾಂಚ್! ಬೆಲೆ ಎಷ್ಟು?
ಜನಪ್ರಿಯ ಲ್ಯಾಪ್‌ಟಾಪ್‌ಗಳಿಗೆ ಪ್ರಸಿದ್ಧಿಯನ್ನ ಪಡೆದುಕೊಂಡಿರುವ ಅಸೂಸ್ ಕಂಪೆನಿ ತನ್ನ ಹೊಸ ಅಲ್ಟ್ರಾಬುಕ್ ಮಾದರಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಸದ್ಯ ಅಸೂಸ್ ಬಿಡುಗಡೆ ಮಾಡಿರುವ ಆಪ್ಡೇಟ್ ವರ್ಷನ್ ಅಲ್ಟ್ರಾಬುಕ್ ಮಾದರಿಯಲ್ಲಿ ವಿವೊಬುಕ್ ಮತ್ತು ಜೆನ್‌ಬುಕ್ ಲ್ಯಾಪ್‌ಟಾಪ್‌ಗಳು ಸೇರಿವೆ. ಇನ್ನು ಈ ಲ್ಯಾಪ್‌ಟಾಪ್‌ಗಳು ಇತ್ತೀಚಿನ ಇಂಟೆಲ್ 11 ನೇ ಜನ್ ಪ್ರೊಸೆಸರ್‌ಗಳನ್ನು ಬಳಸುತ್ತಿದ್ದು, ಹಳೆಯ ಮಾದರಿಗಳಿಗಿಂತ ಗಮನಾರ್ಹ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಎಂದು ಅಸುಸ್ ಸಂಸ್ಥೆ ಭರವಸೆ ನೀಡಿದೆ.

ಹೌದು, ಅಸೂಸ್ ತನ್ನ ಹೊಸ ಅಲ್ಟ್ರಾಬುಕ್ ಮಾದರಿಗಳನ್ನ ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಅಸೂಸ್ ಆಪ್ಡೇಟ್ ಮಾಡಿರುವ ಲ್ಯಾಪ್‌ಟಾಪ್ ಸರಣಿಯಲ್ಲಿ ವಿವೊಬುಕ್ ಅಲ್ಟ್ರಾ 14/15 (X413 / X513), ವಿವೊಬುಕ್ ಅಲ್ಟ್ರಾ K15 (K 513), ಮತ್ತು ಜೆನ್‌ಬುಕ್ 14 (UX 425) ಸೇರಿವೆ. ಹೊಸದಾಗಿ ಆಪ್ಡೇಟ್ ಮಾಡಲಾದ ಈ ಲ್ಯಾಪ್‌ಟಾಪ್‌ಗಳು ಎಂಟ್ರಿ ಲೆವೆಲ್ ಪ್ರೈಸ್‌ಟ್ಯಾಗ್ ಅನ್ನು ಹೊಂದಿವೆ. ಅದರಲ್ಲೂ ವಿವೋಬುಕ್ ಅಲ್ಟ್ರಾ K15 ಬೆಲೆ 42,990 ರೂ ರಿಂದ ಪ್ರಾರಂಭವಾಗಲಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇದೀಗ ಅಸೂಸ್ ಸಂಸ್ಥೆ ಆಪ್ಡೇಟ್ ಮಾಡಿರುವ ಇಂಟೆಲ್ 11 ನೇ ಜನ್ ಲ್ಯಾಪ್‌ಟಾಪ್‌ಗಳಲ್ಲಿ ಜೆನ್‌ಬುಕ್ 14 ಅತ್ಯಂತ ಪ್ರೀಮಿಯಂ ಮಾದರಿಯಾಗಿದೆ. ಇದು 14 ಇಂಚಿನ ಎಲ್‌ಇಡಿ-ಬ್ಯಾಕ್‌ಲಿಟ್ ಎಫ್‌ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು IPS300 ನಿಟ್ಸ್ ಪ್ಯಾನೆಲ್‌ನೊಂದಿಗೆ 100% SRGB ಕಲರ್ ಸ್ಪೇಸ್ ಹೊಂದಿದೆ. ಇನ್ನು ಇಂಟೆಲ್ ಕೋರ್ I7-1165 G7 ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಬಳಕೆದಾರರು 16GB RAM ಜೊತೆಗೆ 512GB ಸ್ಟೋರೇಜ್ ಸಾಮರ್ಥ್ಯವನ್ನು ಕಾನ್ಫಿಗರ್ ಮಾಡಬಹುದಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 2 x ಥಂಡರ್ಬೋಲ್ಟ್, 1X ಸ್ಟ್ಯಾಂಡರ್ಡ್ HDMI 2.0A, ಮತ್ತು 1X ಮೈಕ್ರೊ ಎಸ್‌ಡಿ ರೀಡರ್ ಅನ್ನು ಬೆಂಬಲಿಸಲಿದೆ. ಅಲ್ಲದೆ ವಾಯರ್‌ಲೆಸ್ ಕನೆಕ್ಟಿವಿಟಿಗಾಗಿ ವೈ-ಫೈ 6 ಮತ್ತು ಬ್ಲೂಟೂತ್ 5.0 ಅನ್ನು ಹೊಂದಿದೆ. ಇದರ ಬೆಲೆ 82,990 ರೂ. ಆಗಿದೆ.

ಇನ್ನು ಅಸೂಸ್ ವಿವೋಬುಕ್ ಅಲ್ಟ್ರಾ 14/15 ಮತ್ತು ವಿವೊಬುಕ್ ಅಲ್ಟ್ರಾ K15 ಲ್ಯಾಪ್‌ಟಾಪ್‌ಗಳು ಹೊಸ ಬಣ್ಣ ಆಯ್ಕೆಗಳಾದ ಬೆಸ್‌ಪೋಕ್ ಬ್ಲ್ಯಾಕ್, ಡ್ರೀಮಿ ವೈಟ್ ಮತ್ತು ವಿವೋಬುಕ್ ಅಲ್ಟ್ರಾ 14/15 ಗಾಗಿ ಕೋಬಾಲ್ಟ್ ಬ್ಲೂನೊಂದಿಗೆ ವಿನ್ಯಾಸಗೊಳಿಸಲಾಗಿದೆ. ಈ ವಿವೋಬುಕ್ ಮಾದರಿಗಳು ಬಳಕೆದಾರರಿಗೆ ಇಂಟೆಲ್ ಕೋರ್ I3 1115 G 4 / I5 1135 G 7 / I 7 1165 G 7 ಪ್ರೊಸೆಸರ್‌ಗಳಿಂದ ಆಯ್ಕೆ ಮಾಡಲು ಅವಕಾಶ ಮಾಡಿಕೊಡುತ್ತವೆ. ಈ ಸರಣಿಯು 14 ರಿಂದ 15.6-ಇಂಚಿನ ಪ್ರದರ್ಶನ ಗಾತ್ರವನ್ನು ಆಯ್ಕೆ ಮಾಡುವ ಆಯ್ಕೆಯನ್ನು ನೀಡುತ್ತದೆ.

ಸದ್ಯ ವಿವೋಬುಕ್ ಅಲ್ಟ್ರಾ ಕೆ 15 ಕೋರ್ I3 ಪ್ರೊಸೆಸರ್‌ನೊಂದಿಗೆ ಬೇಸ್ ಮಾಡೆಲ್‌ಗಾಗಿ 42,990 ರೂ.ಬೆಲೆಯನ್ನು ಹೊಂದಿದೆ. ವಿವೋಬುಕ್ ಅಲ್ಟ್ರಾ 15 ಬೆಲೆ 43,990 ರಿಂದ ಪ್ರಾರಂಭವಾಗಿದ್ದರೆ, ವಿವೋಬುಕ್ ಅಲ್ಟ್ರಾ 14 59,990 ರೂ.ಗಳಿಗೆ ಲಭ್ಯವಾಗಲಿದೆ.


Click it and Unblock the Notifications