ಆಸುಸ್‌ನಿಂದ ಹೊಸ ಮಾದರಿಯ ಲ್ಯಾಪ್‌ಟಾಪ್‌ಗಳ ಅನಾವರಣ! ಬೆಲೆ ಎಷ್ಟಿದೆ ಗೊತ್ತಾ?
ಆಸುಸ್ ಕಂಪೆನಿ ಭಾರತದಲ್ಲಿ ಹಲವು ರೀತಿಯ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಹೊಸ ಆಸುಸ್ ಎಕ್ಸ್‌ಪರ್ಟ್‌ಬುಕ್ ಲ್ಯಾಪ್‌ಟಾಪ್‌ಗಳನ್ನು ಅನಾವರಣಗೊಳಿಸಿದೆ. ಇವುಗಳನ್ನು ಇಂದಿನ ಆಧುನಿಕ ಯುಗದ ಉದ್ಯೋಗಿಗಳ ಅಗತ್ಯತೆಗಳನ್ನು ಪೂರೈಸುವುದಕ್ಕೆ ಸೂಕ್ತವಾದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
ಹೌದು, ಆಸುಸ್ ಕಂಪೆನಿ ಭಾರತದಲ್ಲಿ ಹೊಸ ಲ್ಯಾಪ್‌ಟಾಪ್ ಸರಣಿಯನ್ನು ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟಾಪ್‌ಗಳನ್ನು ASUS ExpertBook (B9403CVA),
ASUS ExpertBook (B5602CVA), ASUS ExpertBook (B5402CVA), ASUS ExpertBook (B5402FVA) ಎಂದು ಹೆಸರಿಸಲಾಗಿದೆ. ಹಾಗಾದ್ರೆ ಈ ಲ್ಯಾಪ್‌ಟಾಪ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ASUS ಎಕ್ಸ್‌ಪರ್ಟ್‌ಬುಕ್ B9403CVA
ASUS ಎಕ್ಸ್‌ಪರ್ಟ್‌ಬುಕ್ B9 OLED (B9403) ಲ್ಯಾಪ್‌ಟಾಪ್ ಪ್ರೀಮಿಯಂ ಮೆಗ್ನೀಸಿಯಮ್-ಲಿಥಿಯಂ ಮಿಶ್ರಲೋಹದಿಂದ ರಚಿಸಲಾದ ಹಗುರವಾದ ವಿನ್ಯಾಸವನ್ನು ಹೊಂದಿದೆ. ಈ ಲ್ಯಾಪ್‌ಟಾಪ್ 13ನೇ ತಲೆಮಾರಿನ ಇಂಟೆಲ್ ಕೋರ್ vPro ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಲ್ಯಾಪ್‌ಟಾಪ್ ಡ್ಯುಯಲ್-ಫ್ಯಾನ್ ಕೂಲಿಂಗ್ ಸಿಸ್ಟಂ ಅನ್ನು ಹೊಂದಿದ್ದು, AI-ಚಾಲಿತ ನಾಯ್ಸ್ ಕ್ಯಾನ್ಸಲೇಶನ್ ಅನ್ನು ಹೊಂದಿದೆ. ಇದಲ್ಲದೆ ಲ್ಯಾಪ್‌ಟಾಪ್ ಪ್ಯಾಂಟೋನ್ ಮೌಲ್ಯೀಕರಣದೊಂದಿಗೆ ಬೆರಗುಗೊಳಿಸುವ 90Hz OLED ಡಿಸ್ಪ್ಲೇಯನ್ನು ಪಡೆದುಕೊಂಡಿದೆ. ಜೊತೆಗೆ 63Wh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.
ASUS ಎಕ್ಸ್‌ಪರ್ಟ್‌ಬುಕ್ B5602CVA
ASUS ಎಕ್ಸ್‌ಪರ್ಟ್‌ಬುಕ್ B5602CVA ಲ್ಯಾಪ್‌ಟಾಪ್ 16 ಇಂಚಿನ 4K OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ HDR ಬೆಂಬಲದೊಂದಿಗೆ ಬರಲಿದೆ. ಇದು 13 ನೇ Gen ಇಂಟೆಲ್ ಕೋರ್ i7 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಲ್ಯಾಪ್‌ಟಾಪ್ 40GB RAM ಅನ್ನು ಹೊಂದಿದ್ದು, Wi-Fi 6E ಮತ್ತು BT 5.3 ಜೊತೆಗೆ, ತಡೆರಹಿತ ಕಾರ್ಯವನ್ನು ನೀಡಲಿದೆ. ಇನ್ನು Intel vPro ಬೆಂಬಲ, TPM 2.0, ಫಿಂಗರ್‌ಪ್ರಿಂಟ್ ಲಾಗಿನ್, IR HD ಕ್ಯಾಮೆರಾ ಮತ್ತು ವೆಬ್‌ಕ್ಯಾಮ್ ಶೀಲ್ಡ್‌ನಂತಹ ಸೆಕ್ಯುರಿಟಿ ಫೀಚರ್ಸ್‌ಗಳನ್ನು ಒಳಗೊಂಡಿದೆ.

ASUS ಎಕ್ಸ್‌ಪರ್ಟ್‌ಬುಕ್ B5402C ಮತ್ತು B5402F
ASUS ಎಕ್ಸ್‌ಪರ್ಟ್‌ಬುಕ್ B5402C ಮತ್ತು B5402F ಲ್ಯಾಪ್‌ಟಾಪ್‌ಗಳು ಆಕರ್ಷಕ ಫೀಚರ್ಸ್‌ಗಳನ್ನು ಹೊಂದಿವೆ. ಇದರಲ್ಲಿ ಮೊದಲ ಲ್ಯಾಪ್‌ಟಾಪ್ ಕ್ಲಾಮ್‌ಶೆಲ್ ಚಾಸಿಸ್ ಮತ್ತು ಇನ್ನೊಂದು ಫ್ಲಿಪ್ ಟಚ್‌ಸ್ಕ್ರೀನ್ ಮತ್ತು ಗ್ಯಾರೇಜ್ ಸ್ಟೈಲಸ್‌ನೊಂದಿಗೆ ಬರಲಿದೆ. ಈ ಲ್ಯಾಪ್‌ಟಾಪ್‌ಗಳು 14 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಲ್ಯಾಪ್‌ಟಾಪ್ Iris Xe ಗ್ರಾಫಿಕ್ಸ್, ಅಪ್‌ಗ್ರೇಡಬಲ್ RAM ಮತ್ತು ಥಂಡರ್‌ಬೋಲ್ಟ್ 4 ಮತ್ತು USB4 ಬೆಂಬಲದೊಂದಿಗೆ ಬರಲಿದೆ. ಇದು ಡ್ಯುಯಲ್ USB-C ಸೇರಿದಂತೆ ಸ್ಟ್ರಾಂಗ್ ಕಿನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿದೆ.
ಇನ್ನು ಈ ಲ್ಯಾಪ್‌ಟಾಪ್‌ಗಳು 13 ನೇ Gen Intel Core i7 vPro P-ಸರಣಿ ಪ್ರೊಸೆಸರ್‌ಗಳಿಂದ ಚಾಲಿತವಾಗಿವೆ. ಅಲ್ಲದೆ TPM 2.0, IR ಮತ್ತು ಫಿಂಗರ್‌ಪ್ರಿಂಟ್ ಲಾಗಿನ್, ವೆಬ್‌ಕ್ಯಾಮ್ ಶೀಲ್ಡ್, AI ಶಬ್ದ ರದ್ದತಿ ಮತ್ತು ನಂಬರ್‌ಪ್ಯಾಡ್‌ನಂತಹ ಫೀಚರ್ಸ್‌ಗಳನ್ನು ಪಡೆದುಕೊಂಡಿವೆ. ಅಲ್ಲದೆ ವಿಪರೀತ ಪರಿಸ್ಥಿತಿಗಳನ್ನು ತಡೆದುಕೊಳ್ಳಲು ಮತ್ತು ಯುಎಸ್ ಮಿಲಿಟರಿ ಮಾನದಂಡಗಳನ್ನು ಪೂರೈಸಲು ನಿರ್ಮಿಸಲಾಗಿದೆ.

ಭಾರತದಲ್ಲಿ ಬೆಲೆ ಮತ್ತು ಲಭ್ಯತೆ
ASUS ಎಕ್ಸ್‌ಪರ್ಟ್‌ಬುಕ್ (B9403CVA) ಲ್ಯಾಪ್‌ಟಾಪ್ ಭಾರತದಲ್ಲಿ 2,17,990ರೂ. ಬೆಲೆಯನ್ನು ಹೊಂದಿದೆ.
ASUS ಎಕ್ಸ್‌ಪರ್ಟ್‌ಬುಕ್ (B5602CVA) ಲ್ಯಾಪ್‌ಟಾಪ್ ಭಾರತದಲ್ಲಿ 1,88,990ರೂ. ಬೆಲೆಯನ್ನು ಹೊಂದಿದೆ.
ASUS ಎಕ್ಸ್‌ಪರ್ಟ್‌ಬುಕ್ (B5402CVA) ಲ್ಯಾಪ್‌ಟಾಪ್ ಭಾರತದಲ್ಲಿ 1,57,490ರೂ. ಬೆಲೆಯಲ್ಲಿ ಲಭ್ಯವಾಗಲಿದೆ.
ASUS ಎಕ್ಸ್‌ಪರ್ಟ್‌ಬುಕ್ (B5402FVA) ಲ್ಯಾಪ್‌ಟಾಪ್ ಭಾರತದಲ್ಲಿ 1,70,490ರೂ. ಬೆಲೆಯಲ್ಲಿ ಲಭ್ಯವಾಗಲಿದೆ.
ಇನ್ನು ಈ ಎಲ್ಲಾ ASUS ಎಕ್ಸ್‌ಪರ್ಟ್‌ಬುಕ್ ಲ್ಯಾಪ್‌ಟಾಪ್ ಮಾದರಿಗಳು Asus ಎಂಟರ್‌ಪ್ರೈಸ್ ಚಾನೆಲ್ ಪಾಲುದಾರರ ಮೂಲಕ ಖರೀದಿಸಬಹುದಾಗಿದೆ.


Click it and Unblock the Notifications








