CES-2021: ಆಸೂಸ್‌ನಿಂದ ಹೊಸ ಮಾದರಿಯ ಲ್ಯಾಪ್‌ಟಾಪ್‌ಗಳ ಅನಾವರಣ!

|

ಟೆಕ್‌ ವಲಯದಲ್ಲಿ ಪ್ರತಿನಿತ್ಯ ಹೊಸ ಮಾದರಿಯ ಪ್ರಾಡಕ್ಟ್‌ಗಳು ಎಂಟ್ರಿ ನೀಡುತ್ತಲೇ ಇರುತ್ತವೆ. ಇನ್ನು ಹೊಸ ಮಾದರಿಯ ಗ್ಯಾಡ್ಜೆಟ್ಸ್‌ಗಳ ಅನಾವರಣಕ್ಕೆ ಒಂದು ವೇದಿಕೆ ಅಗತ್ಯವಾಗಿರುತ್ತದೆ. ಆ ಪೈಕಿ ಈ ವರ್ಷದ 'ಕನ್ಸೂಮರ್‌ ಎಲೆಕ್ಟ್ರಾನಿಕ್ಸ್‌ ಶೋ-2021' (Consumer Electronics Show (CES-2021) ಕಾರ್ಯಕ್ರಮ ಪ್ರಮುಖ ವೇದಿಕೆ ಆಗಿದೆ. ಕಳೆದ ಬಾರಿ ಕರೊನಾ ದಿಂದ ಕಳೆಗುಂದಿದ್ದ ಟೆಕ್‌ ವಲಯ ಈ ಬಾರಿಯ ಕನ್ಸೂಮರ್‌ ಎಲ್ಕಟ್ರಾನಿಕ್‌ ಶೋ-2021 ನಲ್ಲಿ ಹಲವು ಆಕರ್ಷಕ ಡಿವೈಸ್‌ಗಳನ್ನು ಅನಾವರಣ ಗೊಳಿಸಿದೆ. ಸದ್ಯ ಇದೇ ಕಾರ್ಯಕ್ರಮದಲ್ಲಿ ಆಸೂಸ್‌ ಸಂಸ್ಥೆಯು ತನ್ನ ಹೊಸ ಡಿವೈಸ್‌ಗಳನ್ನು ಪರಿಚಯಿಸಿದೆ.

ಆಸೂಸ್‌

ಹೌದು, ಆಸೂಸ್‌ ಸಂಸ್ಥೆ ತನ್ನ ROG ಗೇಮಿಂಗ್ ಶ್ರೇಣಿಯನ್ನು ಅನಾವರಣಗೊಳಿಸಿದ ಒಂದು ದಿನದ ನಂತರ, ಆಸೂಸ್ ತನ್ನ 2021 ಶ್ರೇಣಿಯ ಪ್ರೀಮಿಯಂ ಜೆನ್‌ಬುಕ್ ಮತ್ತು ವಿವೊಬುಕ್ ಲ್ಯಾಪ್‌ಟಾಪ್‌ಗಳನ್ನು ಪ್ರಕಟಿಸಿದೆ. ಜೊತೆಗೆ ಅದರ TUF ಬ್ಯಾನರ್ ಅಡಿಯಲ್ಲಿ ಮತ್ತೊಂದು ಎಂಟ್ರಿ ಲೆವೆಲ್‌ನಲ್ಲಿ ಗೇಮಿಂಗ್ ಮಾದರಿಯನ್ನು ಪ್ರಕಟಿಸಿದೆ. ಹೊಸ ಲ್ಯಾಪ್‌ಟಾಪ್‌ಗಳನ್ನು ವರ್ಚುವಲ್ CES 2021 ಬ್ರೀಫಿಂಗ್‌ನಲ್ಲಿ ಪ್ರದರ್ಶಿಸಲಾಗಿದೆ. ಜೊತೆಗೆ ಜೆನ್‌ಬುಕ್ ಡ್ಯುವೋ 14 ಮತ್ತು ಜೆನ್‌ಬುಕ್ ಪ್ರೊ ಡ್ಯುವೋ 15 ಮಾದರಿಗಳಿಗೆ ರಿಫ್ರೆಶ್‌ಗಳನ್ನು ಒಳಗೊಂಡಿದೆ, ಜೊತೆಗೆ ಹೆಚ್ಚು ಮುಖ್ಯವಾಹಿನಿಯ ವಿವೊಬುಕ್ ಎಸ್ 14 ಅನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಸೂಸ್ TUF ಡ್ಯಾಶ್ F15 ಮತ್ತು TUF ಗೇಮಿಂಗ್ A15

ಆಸೂಸ್ TUF ಡ್ಯಾಶ್ F15 ಮತ್ತು TUF ಗೇಮಿಂಗ್ A15

ಆಸೂಸ್‌ TUF ಡ್ಯಾಶ್ F15 ಅನ್ನು ಸ್ಲಿಮ್ ಮತ್ತು ಪೋರ್ಟಬಲ್ ಆಗಿ ವಿನ್ಯಾಸಗೊಳಿಸಲಾಗಿದೆ. ಇದು ಹಿಂದಿನ ಪೀಳಿಗೆಗಿಂತ 10% ಚಿಕ್ಕದಾಗಿದೆ ಮತ್ತು 14% ಹಗುರವಾಗಿದೆ ಎಂದು ಆಸೂಸ್ ಕಂಪೆನಿ ಹೇಳಿದೆ. ಇದು ಮೂನ್‌ಲೈಟ್ ವೈಟ್ ಮತ್ತು ಎಕ್ಲಿಪ್ಸ್ ಗ್ರೇನಲ್ಲಿ ಲಭ್ಯವಿರುತ್ತದೆ. ಆಸೂಸ್ ಹೊಸ 11 ನೇ ಜನ್ ಇಂಟೆಲ್ ಎಚ್-ಸರಣಿ ಸಿಪಿಯುಗಳನ್ನು ಮತ್ತು ಎನ್ವಿಡಿಯಾ ಜೀಫೋರ್ಸ್ ಆರ್ಟಿಎಕ್ಸ್ 3070 ಜಿಪಿಯು ವರೆಗೆ ಬಳಸಿದೆ. ಇನ್ನು ಈ ಲ್ಯಾಪ್‌ಟಾಪ್‌ 15.6-ಇಂಚಿನ ಡಿಸ್‌ಪ್ಲೇ 240Hz ರಿಫ್ರೆಶ್ ರೇಟ್‌ ಮತ್ತು ಕಿರಿದಾದ ಗಡಿಗಳನ್ನು ಹೊಂದಿದೆ. ಇನ್ನು TUF ಗೇಮಿಂಗ್ A15 AMDಯ ಹೊಸ ರೈಜೆನ್ 7 5800 H CPU ಮತ್ತು ಎನ್ವಿಡಿಯಾ ಜೀಫೋರ್ಸ್ ಆರ್‌ಟಿಎಕ್ಸ್ 30-ಸರಣಿ ಜಿಪಿಯುಗಳನ್ನು ಆಧರಿಸಿದೆ, 15.6-ಇಂಚಿನ ಫುಲ್‌-ಹೆಚ್‌ಡಿ 144 Hz ಅಥವಾ 240 Hz ಅಡಾಪ್ಟಿವ್ ಸಿಂಕ್ ಸ್ಕ್ರೀನ್, 32GB RAM ಮತ್ತು 1TB ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ.

ಆಸೂಸ್ ಜೆನ್‌ಬುಕ್ ಪ್ರೊ ಡ್ಯುವೋ 15 Oled (UX 582)

ಆಸೂಸ್ ಜೆನ್‌ಬುಕ್ ಪ್ರೊ ಡ್ಯುವೋ 15 Oled (UX 582)

ಬೃಹತ್ ಸ್ಕ್ರೀನ್‌ಪ್ಯಾಡ್ + ಎರಡನೇ ಡಿಸ್‌ಪ್ಲೇ ಹೊಂದಿರುವ ಪ್ರಮುಖ ಜೆನ್‌ಬುಕ್ ಪ್ರೊ ಡ್ಯುವೋ ಕೂಡ ಬಿಡುಗಡೆ ಆಗಿದೆ. ಇದರ ಮುಖ್ಯ ಡಿಸ್‌ಪ್ಲೇ 15.6-ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಈಗ 4K HDR OLED ಸ್ಕ್ರೀನ್‌ ಹೊಂದಿದೆ. ಇನ್ನು ಒಳಭಾಗದಲ್ಲಿ, ನೀವು 11 ನೇ ಜನ್ ಇಂಟೆಲ್ ಕೋರ್ ಐ 9 ಸಿಪಿಯು, ಎನ್ವಿಡಿಯಾ ಜಿಫೋರ್ಸ್ ಆರ್ಟಿಎಕ್ಸ್ 3070 ಜಿಪಿಯು, 32 ಜಿಬಿ RAM ವರೆಗೆ ಮತ್ತು 1 ಟಿಬಿ ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಆಸೂಸ್ ಜೆನ್‌ಬುಕ್ ಡ್ಯುವೋ 14 (UX 482)

ಆಸೂಸ್ ಜೆನ್‌ಬುಕ್ ಡ್ಯುವೋ 14 (UX 482)

ಆಸೂಸ್ ಜೆನ್‌ಬುಕ್ ಡ್ಯುವೋ 14 ಅನ್ನು ಸ್ಕ್ರೀನ್‌ಪ್ಯಾಡ್ + ದ್ವಿತೀಯಕ ಪ್ರದರ್ಶನಕ್ಕಾಗಿ ಅದೇ ಸ್ವಯಂ-ಟಿಲ್ಟ್ ಕಾರ್ಯವಿಧಾನದೊಂದಿಗೆ ನವೀಕರಿಸಲಾಗಿದೆ. ಇದನ್ನು ಇಂಟೆಲ್ ಇವೊ ಬ್ಯಾಡ್ಜ್‌ನೊಂದಿಗೆ 11 ನೇ ಜನ್ ಇಂಟೆಲ್ ಕೋರ್ ಸಿಪಿಯುಗಳಲ್ಲಿ ನಿರ್ಮಿಸಲಾಗಿದೆ. ಇದು ತನ್ನ ಥಂಡರ್ಬೋಲ್ಟ್ 4 ಪೋರ್ಟ್‌ಗಳ ಮೂಲಕ 17 ಗಂಟೆಗಳ ಬ್ಯಾಟರಿ ಬಾಳಿಕೆ ಮತ್ತು ಟೈಪ್-ಸಿ ಚಾರ್ಜಿಂಗ್ ಭರವಸೆ ನೀಡುತ್ತದೆ.

ಆಸೂಸ್ ವಿವೋಬುಕ್ s14

ಆಸೂಸ್ ವಿವೋಬುಕ್ s14

ಹೊಸ ಅಲ್ಟ್ರಾಪೋರ್ಟಬಲ್ ವಿವೊಬುಕ್ s14 ಇಂಟೆಲ್ ಇವೊ ಪ್ರಮಾಣೀಕೃತ ವಿನ್ಯಾಸವಾಗಿದ್ದು, ಆಲ್-ಮೆಟಲ್ ಬಾಡಿ ವಿನ್ಯಾಸವನ್ನು ಹೊಂದಿದೆ. ಇದು 15.9 ಮಿಮೀ ದಪ್ಪ ಮತ್ತು 1.3 ಕೆಜಿ ತೂಕವಿರುತ್ತದೆ. 14 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಯನ್ನು ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ 17 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದೆ. ಇಂಟಿಗ್ರೇಟೆಡ್ ಇಂಟೆಲ್ ಎಕ್ಸ್‌ಇ ಗ್ರಾಫಿಕ್ಸ್‌ನೊಂದಿಗೆ ನೀವು 11 ನೇ ಜನ್ ಇಂಟೆಲ್ ಕೋರ್ ಸಿಪಿಯುಗಳ ಆಯ್ಕೆಯನ್ನು ನೀಡಲಾಗಿದೆ. ಜೊತೆಗೆ ಇದು 16GB ವರೆಗೆ RAM ಮತ್ತು 1TB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ವರ್ಚುವಲ್ ನಂಬರ್‌ಪ್ಯಾಡ್ ಅನ್ನು ಟ್ರ್ಯಾಕ್‌ಪ್ಯಾಡ್‌ನಲ್ಲಿ ಸಂಯೋಜಿಸಲಾಗಿದೆ.

Best Mobiles in India

English summary
Asus has announced its 2021 lineup of premium ZenBook and VivoBook laptops, along with another entry-level gaming model under its TUF banner.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X