Just In
Don't Miss
- News
ಫೆ.28ರವರೆಗೂ ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನ ಸಂಚಾರಕ್ಕೆ ನಿರ್ಬಂಧ
- Automobiles
ಭಾರತದಲ್ಲಿ ಟೊಯೊಟಾ ಹಿಲಕ್ಸ್ ಪಿಕ್ಅಪ್ ಟ್ರಕ್ ಬಿಡುಗಡೆ ಮಾಹಿತಿ ಬಹಿರಂಗ
- Sports
ಫಿಕ್ಸಿಂಗ್ ಪ್ರಕರಣದಲ್ಲಿ ಶ್ರೀಲಂಕಾದ ದಿಲ್ಹರ ಲೋಕುಹೆಟ್ಟಿಗೆ ತಪ್ಪಿತಸ್ಥ ಎಂದು ಸಾಬೀತು
- Movies
ರಾಬರ್ಟ್, ಪೊಗರು, ಕೋಟಿಗೊಬ್ಬ 3 ಬಗ್ಗೆ ಪುನೀತ್ ರಾಜ್ಕುಮಾರ್ ಮಾತು
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 28ರ ಚಿನ್ನ, ಬೆಳ್ಳಿ ದರ
- Lifestyle
ಶನಿ ಸಂಚಾರ 2021: ನಿಮ್ಮ ರಾಶಿಯ ಮೇಲೆ ವರ್ಷ ಪೂರ್ತಿ ಇರಲಿದೆ ಶನಿಯ ಪ್ರಭಾವ
- Education
KVAFSU Bidar Recruitment 2021: 9 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಸೂಸ್ ಕಂಪೆನಿಯಿಂದ CES 2020ರಲ್ಲಿ ಹೊಸ ಪ್ರಾಡಕ್ಟ್‌ಗಳ ಪ್ರದರ್ಶನ!
ಈ ವರ್ಷದ ಕನ್ಸ್ಯೂಮರ್ ಎಲೆಕ್ಟ್ರಾನಿಕ್ ಶೋ ಲಾಸ್‌ವೇಗಸ್‌ನಲ್ಲಿ ನಡೆಯುತ್ತಿದೆ. ಜನವರಿ 7ರಿಂದ ಶುರುವಾಗಿದ್ದು ಜನವರಿ 10ರ ತನಕ ನಡೆಯಲಿದೆ. ವಿಶ್ವದ ದೊಡ್ಡ ದೊಡ್ಡ ಬ್ರ್ಯಾಂಡ್ ಸಂಸ್ಥೆಗಳೆಲ್ಲವೂ ಹೊಸ ಹೊಸ ಉತ್ಪನ್ನಗಳನ್ನು ಮೇಳದಲ್ಲಿ ಬಿತ್ತರಿಸುತ್ತಿದ್ದು, ಈ ವರ್ಷ ಗ್ರಾಹಕರ ನಿರೀಕ್ಷೆ ದುಪ್ಪಟ್ಟಾಗಿದೆ. ಆದರಂತೆ ಆಸೂಸ್ ಕಂಪೆನಿ ಸಹ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋನಲ್ಲಿ ತನ್ನ ಹೊಸ ಎಲೆಕ್ಟ್ರಾನಿಕ್ಸ್ ಉತ್ತನ್ನಗಳನ್ನ ಪ್ರದರ್ಶಿಸಿದ್ದು, ಮುಂಬರುವ ಹೊಸ ಪ್ರಾಡಕ್ಟ್‌ಗಳ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ಹೌದು, ಕನ್ಸೂಮರ್ ಎಲೆಕ್ಟ್ರಾನಿಕ್ಸ್ ಶೋ ನಲ್ಲಿ ಆಸೂಸ್ ಕಂಪೆನಿ 2020ರಲ್ಲಿ ತಾನು ಬಿಡುಗಡೆ ಮಾಡಲಿರುವ ಎಲೆಕ್ಟ್ರಾನಿಕ್ಸ್ ಉತ್ತನ್ನಗಳನ್ನ ಬಹಿರಂಗ ಪಡಿಸಿದೆ. ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಈ ವರ್ಷ ಆಸೂಸ್ ಕಂಪೆನಿ ಲ್ಯಾಪ್‌ಟಾಪ್‌ಗಳು, ಮಾನಿಟರ್‌ಗಳು ಮತ್ತು ಹೊಸ zen ವೈಫೈ ರೂಟರ್ ಮಾದರಿಗಳನ್ನು ಅನಾವರಣಗೊಳಿಸಿದೆ. ಲ್ಯಾಪ್‌ಟಾಪ್ ನಿಂದ ಹಿಡಿದು ಹೊಸ ಕಾಂಪ್ಯಾಕ್ಟ್ zenಬುಕ್ ಡ್ಯುವೋ, ಆಸೂಸ್ ಎಕ್ಸ್‌ಪರ್ಟ್‌ಬುಕ್ ಬಿ 9450 ಲ್ಯಾಪ್‌ಟಾಪ್, ಆಸೂಸ್ ಆರ್‌ಒಜಿ ಜೆಫೈರಸ್ ಜಿ 15, ಮತ್ತು ಆಸೂಸ್ ಕ್ರೋಮ್‌ಬುಕ್ ಫ್ಲಿಪ್ ಸಿ 436, ವೈರ್‌ಲೆಸ್ ಮೌಸ್‌ಗಳು, ಹೊಸ ಗೇಮಿಂಗ್ ಕೀಬೋರ್ಡ್ ಮತ್ತು ರಿಪಬ್ಲಿಕ್ ಆಫ್ ಗೇಮರ್ಸ್ (ROG) ಶ್ರೇಣಿಯಲ್ಲಿ ಹೊಸ ವೈರ್‌ಲೆಸ್ ಹೆಡ್‌ಸೆಟ್ ಅನ್ನು ಪರಿಚಯಿಸಿದೆ.

ಆಸೂಸ್ ಎಕ್ಸ್‌ಪರ್ಟ್‌ಬುಕ್ ಬಿ 9450
ಆಸೂಸ್ ಸಿಎಎಸ್2020ಯಲ್ಲಿ ಹೊಸ ಎಕ್ಸ್‌ಪರ್ಟ್‌ಬುಕ್ ಬಿ 9450 ಲ್ಯಾಪ್‌ಟಾಪ್ ಅನ್ನು ಪರಿಚಯಿಸಿದೆ. ಇದು ವಿಶ್ವದಲ್ಲಿಯೇ ಅತಿ ಹಗುರವಾದ ಕೇವಲ 14 ಇಂಚಿನ ಲ್ಯಾಪ್‌ಟಾಪ್ ಆಗಿದ್ದು, ಇದರ ತೂಕ 870 ಗ್ರಾಂ ಆಗಿದೆ. ಈ ಲ್ಯಾಪ್‌ಟಾಪ್ MIL-STD-810G ಮಿಲಿಟರಿ ಸ್ಟ್ಯಾಂಡರ್ಡ್‌ಗೆ ಅನುಗುಣವಾಗಿದೆ. ಇದು 10thಜನರೇಷನ್ ಇಂಟೆಲ್ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ. ಅಲ್ಲದೆ 16GB RAM ಒಳಗೊಂಡಿದೆ. ಈ ಲ್ಯಾಪ್‌ಟಾಪ್ 14.8 ಎಂಎಂ ಥಿಕ್‌ನೆಸ್ ಚಾಸಿಸ್ ಹೊಂದಿದೆ. 66Whr ಬ್ಯಾಟರಿ ಪ್ಯಾಕಪ್ ಹೊಂದಿದ್ದು,ಇದು 20 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈಥರ್ನೆಟ್, ಯುಎಸ್ಬಿ 3.2 gen2, ಮತ್ತು ಎರಡು ಥಂಡರ್ಬೋಲ್ಟ್ 3 ಪೋರ್ಟ್‌ಗಳು ಸೇರಿವೆ. ಇದು ವೈ-ಫೈ 6 ಅನ್ನು ಬೆಂಬಲಿಸುತ್ತದೆ, ಐಆರ್ ಕ್ಯಾಮೆರಾ, ವೆಬ್‌ಕ್ಯಾಮ್ ಶೀಲ್ಡ್ ಮತ್ತು ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ.

ಆಸೂಸ್ zen ಬುಕ್ ಡ್ಯುಯೊ
ಆಸೂಸ್ ತನ್ನ zenಬುಕ್ ಡ್ಯುಯೊವನ್ನು ಸಹ ನವೀಕರಿಸಿದ್ದು, ಈ ಡ್ಯುಯೊ ಕಾಂಪ್ಯಾಕ್ಟ್ ಸ್ಕ್ರೀನ್ ಮತ್ತು 10 ನೇ gen ಇಂಟೆಲ್ ಪ್ರೊಸೆಸರ್ ಹೊಂದಿರಲಿದೆ ಎನ್ನಲಾಗಿದೆ. ಇನ್ನು ಈ ಲ್ಯಾಪ್‌ಟಾಪ್ ಎರಡು ಡಿಸ್‌ಪ್ಲೇಗಳನ್ನು ಹೊಂದಿದ್ದು, ಮೊದಲನೇ ಮುಖ್ಯ ಡಿಸ್‌ಪ್ಲೇ 14-ಇಂಚಿನ ಫುಲ್ ಎಚ್‌ಡಿ ಡಿಸ್‌ಪ್ಲೇ ಆಗಿದೆ, ಇನ್ನು ಎರಡನೇ ಡಿಸ್‌ಪ್ಲೇ ಕೀಬೋರ್ಡ್ ಮೇಲೆ ಇರಲಿರುವ 12.6-ಇಂಚಿನ ಪ್ಯಾನೆಲ್ ಆಗಿದೆ. ಈ ಲ್ಯಾಪ್‌ಟಾಪ್ 16GB RAM ಹೊಂದಿದ್ದು, ಜೀಫೋರ್ಸ್ MX250 ಜಿಪಿಯು ಹೊಂದಿದೆ. ಈ ಹೊಸ ಪೋರ್ಟಬಲ್ zen book duo 2020ರ ಮೊದಲ ತ್ರೈಮಾಸಿಕದಲ್ಲಿ ಲಭ್ಯವಾಗಲಿದೆ ಎನ್ನಲಾಗ್ತಿದೆ.

ಆಸೂಸ್ ಕ್ರೋಮ್‌ಬುಕ್ ಫ್ಲಿಪ್ ಸಿ 436
ಕ್ರೋಮ್‌ಬುಕ್ ಫ್ಲಿಪ್ ಸಿ 436 ಅನ್ನು ಆಸುಸ್ ಸಿಇಎಸ್ 2020 ರಲ್ಲಿ ಪರಿಚಯಿಸಿದ್ದು, ಈ ಲ್ಯಾಪ್‌ಟಾಪ್ 360 ಡಿಗ್ರಿ ಹಿಂಜ್ ಹೊಂದಿದ್ದು ಇದನ್ನು ಟ್ಯಾಬ್ಲೆಟ್ ಆಗಿಯೂ ಕೂಡ ಬಳಸಬಹುದಾಗಿದೆ. ಇದು ಕ್ರೋಮ್ ಓಎಸ್ ನಿಂದ ಕಾರ್ಯನಿರ್ವಹಿಸಲಿದ್ದು, ಕೇವಲ 1.1 ಕಿ.ಗ್ರಾಂ ತೂಕ, ಮತ್ತು ಕೇವಲ 13.7 ಮಿಮೀ ಥಿಕ್‌ನೆಸ್ ಅನ್ನ ಹೊಂದಿರಲಿದೆ ಎಂದು ಹೇಳಲಾಗಿದೆ. ಅಲ್ಲದೆ 1920x1080 ಪಿಕ್ಸೆಲ್ ಸೆನ್ಸಾರ್ ಹೊಂದಿರುವ 14 ಇಂಚಿನ ಫುಲ್-ಎಚ್‌ಡಿ ಡಿಸ್‌ಪ್ಲೇಯನ್ನ ಹೊಂದಿದೆ. ಇದು 10th gen ಇಂಟೆಲ್ ಕೋರ್ ಪ್ರೊಸೆಸರ್ ಹೊಂದಿದ್ದು 8GB ಅಥವಾ 16GB LDDR3 ಮೆಮೊರಿಯನ್ನು ಒಳಗೊಂಡಿದೆ. ಅಲ್ಲದೆ 42Whr ಬ್ಯಾಟರಿ ಪ್ಯಾಕಪ್ ಹೊಂದಿದ್ದು, ಇದು 12 ಗಂಟೆಗಳ ಬ್ಯಾಟರಿ ಅವಧಿಯನ್ನ ನೀಡುತ್ತದೆ. ಇದು ಫ್ಲಿಪ್ C436 512GB ವರೆಗಿನ M.2 SSD ಹೊಂದಿದ್ದು, ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈ-ಫೈ 6, ಬ್ಲೂಟೂತ್ ವಿ 5.0, ಮತ್ತು ಯುಎಸ್‌ಬಿ 3.1 ಜನ್ 1 ಟೈಪ್-ಸಿ ಪೋರ್ಟ್‌ಗಳನ್ನ ಒಳಗೊಂಡಿದೆ.

ಆಸೂಸ್ ROG ಜೆಫೈರಸ್ ಜಿ 15
ಹೊಸ ಆಸೂಸ್ ಆರ್‌ಒಜಿ ಜೆಫೈರಸ್ ಜಿ 15 15.6 ಇಂಚಿನ ಪೂರ್ಣ-ಎಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 240Hz ರಿಫ್ರೆಶ್ ರೇಟ್ ಹೊಂದಿದೆ, ಹೊಸ Ryzen 7 4800HS CPU ಹೊಂದಿದೆ. ಅಲ್ಲದೆ ಎನ್ವಿಡಿಯಾ ಜೀಫೋರ್ಸ್ ಆರ್‌ಟಿಎಕ್ಸ್ 2060 ಆಗಿದ್ದು, 32GB DDR4 RAM ಮತ್ತು 1TB ವರೆಗಿನ ಶೇಖರಣಾ ಸಾಮರ್ಥ್ಯ ಹೊಂದಿದೆ. ಇದು ವೈ-ಫೈ 6 ಅನ್ನು ಬೆಂಬಲಿಸಲಿದ್ದು, ಬ್ಯಾಕ್‌ಲಿಟ್ ಕೀಬೋರ್ಡ್ ಹೊಂದಿದೆ ಮತ್ತು ಬ್ಲೂಟೂತ್ ವಿ5 ಅನ್ನು ಸಹ ಬೆಂಬಲಿಸುತ್ತದೆ. ಈ ಲ್ಯಾಪ್‌ಟಾಪ್ 76Whr ಬ್ಯಾಟರಿ ಪ್ಯಾಕ್ ಆಪ್ ಹೊಂದಿರಲಿದ್ದು, ವಿಂಡೋಸ್ 10 ಪ್ರೊನಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ನು ಆನ್‌ಬೋರ್ಡ್ ಕಂಟ್ಯಾಕ್ಟ್‌ನಲ್ಲಿ ಒಂದು ಯುಎಸ್‌ಬಿ 3.2 gen 2 ಟೈಪ್-ಸಿ, ಮೂರು ಯುಎಸ್‌ಬಿ 3.2 gen 1 ಟೈಪ್-ಎ, ಒಂದು ಎಚ್‌ಡಿಎಂಐ 2.0 ಬಿ, ಮತ್ತು ಒಂದು 3.5 ಎಂಎಂ ಆಡಿಯೊ ಕಾಂಬೊ ಜ್ಯಾಕ್ ಸೇರಿವೆ.

ಆಸೂಸ್ ವಿವೋಬುಕ್ ಎಸ್ ಸೀರಿಸ್ ಆಪ್‌ಗ್ರೇಡ್
ವಿವೋಬುಕ್ ಎಸ್ ಸೀರಿಸ್ ಅನ್ನ ಆಪ್‌ಗ್ರೇಡ್ ಮಾಡಲಾಗಿದ್ದು ಇದು 10th gen ಇಂಟೆಲ್ ಪ್ರೊಸೆಸರ್ ಸಿಪಿಯುಗಳೊಂದಿಗೆ ವಿವೋಬುಕ್ ಎಸ್ 13, ವಿವೋಬುಕ್ ಎಸ್ 14 ಮತ್ತು ವಿವೋಬುಕ್ ಎಸ್ 15 ಲ್ಯಾಪ್‌ಟಾಪ್‌ಗಳನ್ನು ಆಪ್‌ಗ್ರೇಡ್ ಮಾಡಲಾಗಿದೆ. ಈ ಹೊಸ ಲ್ಯಾಪ್‌ಟಾಪ್‌ಗಳು ವೈ-ಫೈ 6 ಸಂಪರ್ಕವನ್ನು ನೀಡುತ್ತವೆ ಅಲ್ಲದೆ 16GB RAM ವರೆಗೆ ಬೆಂಬಲ ನೀಡುತ್ತವೆ. ವಿವೋಬುಕ್ ಎಸ್ 14 ಮತ್ತು ವಿವೋಬುಕ್ ಎಸ್ 15 ಲ್ಯಾಪ್‌ಟಾಪ್‌ಗಳು ರೆಸೊಲ್ಯೂಟ್ ರೆಡ್, ಗಯಾ ಗ್ರೀನ್, ಡ್ರೀಮಿ ವೈಟ್ ಮತ್ತು ಇಂಡಿ ಬ್ಲ್ಯಾಕ್ ಕಲರ್‌ನಲ್ಲಿ ಬರಲಿದ್ದು, ಶೀಘ್ರದಲ್ಲೇ ಲಭ್ಯವಾಗುವ ನಿರೀಕ್ಷೆಯಿದೆ.

ಆಸೂಸ್ zenscreen MB16ACE ಮಾನಿಟರ್
ಸಿಎಎಸ್‌ನಲ್ಲಿ ಆಸೂಸ್ MB16ACE ಪೋರ್ಟಬಲ್ ಮಾನಿಟರ್ ಅನ್ನು ಅನಾವರಣಗೊಳಿಸಿದ್ದು, ಇದು 15.6-ಇಂಚಿನ ಪೂರ್ಣ-ಎಚ್ಡಿ ಅಲ್ಟ್ರಾ-ಸ್ಲಿಮ್ ಐಪಿಎಸ್ ಡಿಸ್‌ಪ್ಲೇಯನ್ನ ಹೊಂದಿದೆ, ಅಲ್ಲದೆ ಇದು ಕೇವಲ 707.64 ಗ್ರಾಂ ತೂಕವನ್ನು ಹೊಂದಿದೆ. ಜೊತೆಗೆ ಇದು ಒಂದೇ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನ ಹೊಂದಿರಲಿದೆ. ಇನ್ನು ಈ ಮಾನಿಟರ್‌ನ ಡಿಸ್‌ಪ್ಲೇಯನ್ನ ರಕ್ಷಣೆ ಮಾಡಲು ಸ್ಮಾರ್ಟ್ ಕೇಸ್ ಲೈಟ್ ಅನ್ನು ಅಳವಡಿಸಲಾಗಿದೆ. ಅಲ್ಲದೆ ಬಳಕೆದಾರರ ವೀಕ್ಷಣೆಯ ಅಗತ್ಯಗಳಿಗೆ ತಕ್ಕಂತೆ ಹೊಂದಾಣಿಕೆ ಮಾಡಬಹುದಾದ ನಿಲುವನ್ನು ಸಹ ಹೊಂದಿಸಲಾಗಿದೆ.

ಆಸೂಸ್ ಪ್ರೊ ಆರ್ಟ್ ಡಿಸ್ಪ್ಲೇ
ಆಸೂಸ್ ತನ್ನ ಪ್ರೊಆರ್ಟ್ ಆವೃತ್ತಿಯಲ್ಲಿ ಹೊಸದಾಗಿ ಪ್ರೊ ಆರ್ಟ್ ಡಿಸ್ಪ್ಲೇ PA248QV, ಮತ್ತು ಪ್ರೊಆರ್ಟ್ ಡಿಸ್ಪ್ಲೇ PA278QV ಎಂಬ ಎರಡು ಮಾನಿಟರ್‌ಗಳನ್ನ ಪರಿಚಯಿಸಿದೆ. ಆಸೂಸ್ ಪ್ರೊ ಆರ್ಟ್ ಡಿಸ್ಪ್ಲೇ PA248QV, 2560x1440 ಪಿಕ್ಸೆಲ್ ಸೆನ್ಸಾರ್ ಹೊಂದಿರುವ 27 ಇಂಚಿನ ಡಿಸ್‌ಪ್ಲೇಯನ್ನ ವೈಡ್ ಆಸ್ಪೆಕ್ಟ್ ಅನುಪಾತದಲ್ಲಿ ಹೊಂದಿದೆ. ಅಲ್ಲದೆ ಡಿಸ್ಪ್ಲೇಪೋರ್ಟ್ 1.2, ಮಿನಿ ಡಿಸ್ಪ್ಲೇಪೋರ್ಟ್, ಎಚ್ಡಿಎಂಐ 1.4 ಮತ್ತು ಡ್ಯುಯಲ್-ಲಿಂಕ್ ಡಿವಿಐ-ಡಿ ಪೋರ್ಟ್ ಗಳನ್ನ ಹೊಂದಿದೆ. ಜೊತೆಗೆ ಪ್ರೊಆರ್ಟ್ ಡಿಸ್‌ಪ್ಲೇ PA278QV, 1920x1200 ಪಿಕ್ಸೆಲ್ ಸೆನ್ಸಾರ್ ಹೊಂದಿರುವ 24.1-ಇಂಚಿನ ಡಿಸ್‌ಪ್ಲೇಯನ್ನ ಹೊಂದಿದ್ದು, 16:10 ಆಸ್ಪೆಕ್ಟ್ ಅನುಪಾತವನ್ನ ಹೊಂದಿದೆ. ಇದು ಡಿಸ್ಪ್ಲೇಪೋರ್ಟ್ 1.2, ಎಚ್ಡಿಎಂಐ 1.4, ಮತ್ತು ಲೆಗಸಿ ಡಿ-ಸಬ್ ಪೋರ್ಟ್‌ಗಳನ್ನ ಹೊಂದಿರಲಿದೆ.

ಆಸೂಸ್ zen ವೈಫೈ AX, zen ವೈಫೈ AC, zen ವೈಫೈ voice
ಇನ್ನು ಸಿಇಎಸ್‌ನಲ್ಲಿ ಆಸೂಸ್ ಕಂಪನಿಯು ಮೂರು ಹೊಸ zen ವೈಫೈ ಡಿವೈಸ್‌ಗಳನ್ನು ಪರಿಚಯಿಸಿದೆ, ಈ ಡಿವೈಸ್‌ಗಳು ವೈ-ಫೈ 6 ಸಾಧನಗಳೊಂದಿಗೆ ಸಂವಹನ ನಡೆಸುವಾಗ ರೂಟರ್ ಒಂದು 2.4GHz ಬ್ಯಾಂಡ್ ಮತ್ತು ಎರಡು 5GHz ಬ್ಯಾಂಡ್‌ಗಳಲ್ಲಿ ಒಟ್ಟು 6,600Mbps ವೇಗವನ್ನು ಹೊಂದಿವೆ. zen ವೈಫೈ AX ಐಮೆಶ್ ನೆಟ್‌ವರ್ಕಿಂಗ್ ತಂತ್ರಜ್ಞಾನವನ್ನು ಹೊಂದಿದ್ದು, ಎರಡು ವೈ-ಫೈ 6 ಮೆಶ್ ನೋಡ್‌ಗಳನ್ನು ಒಳಗೊಂಡಿದೆ. zen ವೈಫೈ AC ಡಿವೈಸ್ 300 ರೂಟರ್‌ಗಳನ್ನು ಒಳಗೊಂಡಿರುವ ಟ್ರೈ-ಬ್ಯಾಂಡ್ ಹೋಲ್-ಹೋಮ್ ಮೆಶ್ ವೈಫೈ ಸಿಸ್ಟಮ್ ಅನ್ನು ಹೊಂದಿದೆ. 802.11ac ವೇವ್ 2 ಸ್ಟ್ಯಾಂಡರ್ಡ್ ಮತ್ತು 802.11n ನ 5GHz ಮತ್ತು 2.4GHz ಸ್ಪೆಕ್ಟ್ರಲ್ ಬ್ಯಾಂಡ್‌ಗಳನ್ನು ಬೆಂಬಲಿಸುಲಿದೆ. ಅಲ್ಲದೆ ಐಪ್ರೊಟೆಕ್ಷನ್ ಪ್ರೊ ಸೆಕ್ಯುರಿಟಿ ಸೂಟ್ ಅನ್ನು ಸಹ ಸೇರಿಸಲಾಗಿದೆ. zen ವೈಫೈ voice ಇದು ಅಮೆಜಾನ್ ಅಲೆಕ್ಸಾ , ಎಂಯು-ಮಿಮೋ ಬೆಂಬಲದೊಂದಿಗೆ ವೈ-ಫೈ 5 ರೂಟರ್ ಸಂಪರ್ಕ, ಮತ್ತು ಐಮೆಶ್ ಕ್ರಿಯಾತ್ಮಕತೆಯನ್ನ ಒಳಗೊಂಡಿದೆ.

ಆಸೂಸ್ ವೈರ್‌ಲೆಸ್ ಪ್ರಾಡಕ್ಟ್‌ಗಳು
ಆಸೂಸ್ ROG ಸಿರೀಸ್‌ನಲ್ಲಿ ಹೊಸ ROG ಸ್ಟ್ರಿಕ್ಸ್ ಸ್ಕೋಪ್ ಟಿಕೆಎಲ್ ಡಿಲಕ್ಸ್ ಗೇಮಿಂಗ್-ಕೀಬೋರ್ಡ್ ಅನ್ನು ಅನಾವರಣಗೊಳಿಸಿದೆ, ಇದರ ಪ್ರತಿ ಕೀಲಿ ROG ಎಲ್ಇಡಿ ಲೈಟಿಂಗ್, ಬ್ಯಾಕ್‌ಲೈಟ್ ROG ಲೋಗೊ ಮತ್ತು ಫ್ರಂಟ್-ಎಡ್ಜ್ ಲೈಟ್ ಬಾರ್‌ನೊಂದಿಗೆ ಬರುತ್ತದೆ. ಇನ್ನು ಹೊಸ ವೈರ್‌ಲೆಸ್ ಮೌಸ್‌ಗಳ ಸೀರಿಸ್‌ನಲ್ಲಿ ROG ಚಕ್ರ, ROGಸ್ಟ್ರಿಕ್ಸ್ ಇಂಪ್ಯಾಕ್ಟ್ II ವೈರ್‌ಲೆಸ್, ಮತ್ತು ROGಪುಜಿಯೊ II ಅನ್ನ ಅನಾವರಣಗೊಳಿಸಲಾಗಿದೆ. ಹೊಸ ROG ಚಕ್ರ ವೈರ್‌ಲೆಸ್ ಮೌಸ್ ಡ್ಯುಯಲ್-ಮೋಡ್ ಥಂಬ್‌ಸ್ಟಿಕ್‌ನೊಂದಿಗೆ ಬರಲಿದ್ದು, ಈ ಮೌಸ್ 16,000 ಡಿಪಿಐ ಸ್ಪರ್ಧೆ-ವರ್ಗ ಆಪ್ಟಿಕಲ್ ಸೆನ್ಸಾರ್ ಹೊಂದಿದೆ.

ಇನ್ನು ROG ಸ್ಟ್ರಿಕ್ಸ್ ಇಂಪ್ಯಾಕ್ಟ್ II ವೈರ್‌ಲೆಸ್ ಮೌಸ್ ಮತ್ತು ROG Pugio II ವೈರ್‌ಲೆಸ್ ಮೌಸ್ ಎರಡು ಸಹ 16,000 ಡಿಪಿಐ ಯೂನಿಟ್ ಹೊಂದಿದ್ದು, 2.4GHz ರೇಡಿಯೊ ಫ್ರೀಕ್ವೆನ್ಸಿ ಲಿಂಕ್ ಅನ್ನು ಬಳಸಲಿವೆ. ಇದಲ್ಲದೆ ಸ್ಟ್ರಿಕ್ಸ್ ಗೋ 2.4 ವೈರ್‌ಲೆಸ್ ಹೆಡ್‌ಸೆಟ್ ಅನ್ನು ಸಹ ಪರಿಚಯಿಸಲಾಗಿದ್ದು, ಇದು 2.4GHz ಆರ್ಎಫ್ ಲಿಂಕ್, ಡೀಪ್ ಬಾಸ್‌ನೊಂದಿಗೆ ಕ್ಲೀನ್ ಆಡಿಯೊ ನೀಡುವ 40 ಎಂಎಂ ಎಎಸ್ಯುಎಸ್ ಎಸೆನ್ಸ್ ಡ್ರೈವರ್‌ಗಳು ಮತ್ತು ಸುಲಭ ಸಂಪರ್ಕಕ್ಕಾಗಿ ಯುಎಸ್‌ಬಿ-ಸಿ ವೈರ್‌ಲೆಸ್ ಟ್ರಾನ್ಸ್‌ಸಿವರ್ ಅನ್ನು ನೀಡುತ್ತದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190