ಭಾರತದಲ್ಲಿ ಅಧಿಕೃತ ಆನ್‌ಲೈನ್‌ ​​ಸ್ಟೋರ್ ಪ್ರಾರಂಭಿಸಿದ ಆಸುಸ್‌ ಕಂಪೆನಿ!

|

ಆಸುಸ್‌ ಕಂಪೆನಿ ಟೆಕ್‌ ವಲಯದಲ್ಲಿ ತನ್ನದ ವಿಭಿನ್ನ ಮಾದರಿಯ ಗ್ಯಾಜೆಟ್ಸ್‌ಗಳಿಂದ ಗುರುತಿಸಿಕೊಂಡಿದೆ. ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಸೇರಿದಂತೆ ಹಲವು ಗ್ಯಾಜೆಟ್ಸ್‌ಗಳಿಗೆ ಸೈ ಎನಿಸಿಕೊಂಡಿದೆ. ಅದರಲ್ಲೂ ಆಸುಸ್‌ ಕಂಪೆನಿ ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳಿಗೆ ಪ್ರಸಿದ್ಧಿ ಪಡೆದಿದೆ. ಇದೇ ಕಾರಣಕ್ಕೆ ಗೇಮಿಂಗ್‌ ಪ್ರಿಯರು ಸ್ಮಾರ್ಟ್‌ಫೋನ್‌ ಆಯ್ಕೆ ಮಾಡುವಾಗ ಮುಂಚೂಣಿ ಬ್ರ್ಯಾಂಡ್‌ ಆಗಿ ಆಸುಸ್‌ ಕಾಣಿಸಿಕೊಳ್ಳಲಿದೆ. ಇಂತಹ ಆಸುಸ್‌ ಸಂಸ್ಥೆ ಇದೀಗ ಭಾರತದಲ್ಲಿ ತನ್ನ ಅಧಿಕೃತ ಆನ್‌ಲೈನ್‌ ಸ್ಟೋರ್‌ ಅನ್ನು ಅನಾವರಣಗೊಳಿಸಿದೆ.

ಆಸುಸ್

ಹೌದು, ಆಸುಸ್ ಕಂಪೆನಿ ತನ್ನ ಅಧಿಕೃತ ಆನ್‌ಲೈನ್‌ ​​ಸ್ಟೋರ್ ಅನ್ನು ಭಾರತದಲ್ಲಿ ಅನಾವರಣಗೊಳಿಸಿದೆ. ಇದರಿಂದ, ಇನ್ಮುಂದೆ ಗ್ರಾಹಕರು ಆಸುಸ್‌ ಕಂಪನಿಯ ಇ-ಸ್ಟೋರ್ ಮೂಲಕ ನೇರವಾಗಿ ಆಸುಸ್ ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಈ ಹೊಸ ಸೇವೆ ಗ್ರಾಹಕರ ಅನುಭವವನ್ನು ಹೆಚ್ಚಿಸುವ ಜೊತೆಗೆ ಎಲ್ಲಾ ಬ್ರಾಂಡ್-ಸಂಬಂಧಿತ ಮಾಹಿತಿಯು ಸುಲಭವಾಗಿ ಲಭ್ಯವಾಗುವ ಗುರಿಯನ್ನು ಹೊಂದಿದೆ. ಹಾಗಾದ್ರೆ ಆಸುಸ್‌ ಕಂಪೆನಿ ಪ್ರಾರಂಭಿಸಿರುವ ಆನ್‌ಲೈನ್‌ ಸ್ಟೋರ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಮುಂದೆ ಓದಿರಿ.

ಇ-ಸ್ಟೋರ್

ಆಸುಸ್‌ ಸಂಸ್ಥೆಯ ಇ-ಸ್ಟೋರ್ ಅನ್ನು ಆನ್‌ಲೈನ್‌ನಲ್ಲಿ ಪ್ರಮುಖ ಮಾರಾಟಗಾರರಲ್ಲಿ ಒಬ್ಬರಾದ ಎವೈಆರ್ ಟೆಕ್ನಾಲಜೀಸ್ ಪೂರೈಸುತ್ತದೆ. ಸೈಟ್ ROG (ರಿಪಬ್ಲಿಕ್ ಆಫ್ ಗೇಮರ್ಸ್) ಮತ್ತು ಗ್ರಾಹಕ PC ಸೇರಿದಂತೆ ಎಲ್ಲಾ ಉತ್ಪನ್ನಗಳನ್ನು ನೀಡುತ್ತದೆ. ಇದು ಬ್ರ್ಯಾಂಡ್‌ನ ಗೇಮಿಂಗ್ ಮತ್ತು ಗ್ರಾಹಕ ಲ್ಯಾಪ್‌ಟಾಪ್‌ಗಳನ್ನು ಒಳಗೊಂಡಿರುತ್ತದೆ. ಜೊತೆಗೆ ROG ಫೋನ್ 5 ಮತ್ತು ROG ಫೋನ್ 3 ನಂತಹ ಪ್ರಮುಖ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ.

ಆನ್‌ಲೈನ್‌

ಇನ್ನು ಆನ್‌ಲೈನ್‌ ಸ್ಟೋರ್‌ನಲ್ಲಿ ಗ್ರಾಹಕರು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು, ಡಿಜಿಟಲ್ ವ್ಯಾಲೆಟ್‌ಗಳು ಮತ್ತು ಹೆಚ್ಚಿನದನ್ನು ಬಳಸಿಕೊಂಡು ಪಾವತಿಗಳನ್ನು ಮಾಡಬಹುದಾಗಿದೆ. ಜಿಎಸ್‌ಟಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಕ್ಲೈಮ್ ಮಾಡುವ ಮೂಲಕ ವ್ಯಾಪಾರ ಗ್ರಾಹಕರು ತಮ್ಮ ಖರೀದಿಗಳಲ್ಲಿ ಶೇ.18 ರಷ್ಟು ಉಳಿತಾಯ ಮಾಡಬಹುದೆಂದು ಆಸುಸ್ ಘೋಷಿಸಿದೆ. 99 ರೂ.ಗಳಿಂದ ಆರಂಭವಾಗುವ ವಾರಂಟಿ ವಿಸ್ತರಣಾ ಪ್ಯಾಕ್‌ಗಳು ಲಭ್ಯವಾಗಲಿವೆ. ಅಲ್ಲದೆ 499ರೂ,ಗಳಿಂದ ಆರಂಭವಾಗುವ ಪ್ರೀಮಿಯಂ ಬ್ರಾಂಡೆಡ್ ಆಕ್ಸೆಸರೀಸ್ ಮತ್ತು ಕ್ಯಾಶಿಫೈ ಮೂಲಕ ಸುಲಭ ವಿನಿಮಯ ಆಫರ್‌ನಂತಹ ಆಫರ್‌ಗಳು ಕೂಡ ಇವೆ. ಕಂಪನಿಯ ಪ್ರಕಾರ ಎಲ್ಲಾ ನಗರಗಳಾದ್ಯಂತ ಗ್ರಾಹಕರಿಗೆ ಈ ಕೊಡುಗೆಗಳು ಲಭ್ಯವಿರುತ್ತವೆ.

ಪಿನ್-ಕೋಡ್

ಇದಲ್ಲದೆ ಸರಿಸುಮಾರು 30,000 ಪಿನ್-ಕೋಡ್ ಪ್ರದೇಶಗಳಲ್ಲಿ ಸೇವೆಗಳನ್ನು ಒದಗಿಸುವುದರ ಹೊರತಾಗಿ, "ಉಚಿತ ವಿತರಣೆ, ಸಾಂದರ್ಭಿಕ ಪ್ರೊಮೊ ಕೊಡುಗೆಗಳು, 220+ ಸೇವಾ ಸ್ಥಳಗಳಲ್ಲಿ ಕಾಲ್ ಸೆಂಟರ್ ಬೆಂಬಲ, ರಿಯಲ್-ಟೈಮ್ ಸ್ಟೇಟಸ್ ಟ್ರ್ಯಾಕಿಂಗ್ ನಂತಹ ತಡೆರಹಿತ ಗ್ರಾಹಕ ಸೇವೆಯನ್ನು ನೀಡುವ ವೈಶಿಷ್ಟ್ಯಗಳನ್ನು ಇದು ಒಳಗೊಂಡಿರುತ್ತದೆ. ಇನ್ನು ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಮತ್ತು ನಮ್ಮ ವ್ಯಾಪಕವಾದ ಆಫ್‌ಲೈನ್ ನೆಟ್‌ವರ್ಕ್ ಬಳಕೆದಾರರಿಗೆ ಹೊಸ ಅನುಭವ ನೀಡುವುದಕ್ಕೆ ನಮ್ಮ ಆನ್‌ಲೈನ್ ವಿಸ್ತರಣೆಯು ಸಹಾಯ ಮಾಡಲಿದೆ ಎಂದು ಆಸುಸ್‌ ಹೇಳಿಕೊಂಡಿದೆ.

ಡಿಜಿಟಲ್

ಇನ್ನು ಗ್ರಾಹಕರಿಗೆ ಅನುಕೂಲಕರ ಶಾಪಿಂಗ್‌ಗಾಗಿ ASUS ಇ-ಸ್ಟೋರ್ ಅನ್ನು ಪ್ರಾರಂಭಿಸುವುದು ಉತ್ತಮ ಮಾರ್ಗವಾಗಿದೆ. ಅರ್ಥಪೂರ್ಣ ನಾವೀನ್ಯತೆಯೊಂದಿಗೆ ಗ್ರಾಹಕರನ್ನು ಸಬಲೀಕರಣಗೊಳಿಸುವ ಬ್ರಾಂಡ್‌ನ ಬದ್ಧತೆಯನ್ನು ಬಲಪಡಿಸುತ್ತದೆ, ಅವರ ಒಟ್ಟಾರೆ ಡಿಜಿಟಲ್ ಪ್ರಯಾಣವನ್ನು ಸುಧಾರಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಒಟ್ಟಿನಲ್ಲಿ ಆಸುಸ್‌ ಇ-ಸ್ಟೋರ್‌ ಮೂಲಕ ಇನ್ಮುಂದೆ ಆಸುಸ್‌ ಉತ್ಫನ್ನಗಳನ್ನು ಆನ್‌ಲೈನ್‌ನಲ್ಲಿ ಖರೀದಿ ಮಾಡುವುದು ಸುಲಭವಾಗಿದೆ. ನೇರವಾಗಿ ಕಂಪೆನಿಯ ಅಧಿಕೃತ ಸ್ಟೋರ್‌ನಿಂದಲೇ ಖರೀದಿಸುವುದರಿಂದ ನಿಮಗೆ ಅಗತ್ಯ ಆಫರ್‌ಗಳು ಕೂಡ ಲಭ್ಯವಾಗಲಿವೆ. ವಿಶೇಷ ದಿನಗಳಲ್ಲಿ ಪ್ರೊಮೊ ಆಫರ್‌ಗಳು ಕೂಡ ದೊರೆಯಲಿವೆ.

Best Mobiles in India

English summary
Asus has announced that business customers will be able to save up to 18 percent on their purchases by claiming GST Input Tax Credit.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X