Home
ಸುದ್ದಿಜಾಲ

ಅಸೂಸ್‌ ಕಂಪೆನಿಯಿಂದ ಬರಲಿದೆ ಹೊಸ ತಲೆಮಾರಿನ ROG ಲ್ಯಾಪ್‌ಟಾಪ್‌!

ಟೆಕ್‌ ವಲಯದಲ್ಲಿ ಸಾಕಷ್ಟು ವಿಭಿನ್ನ ಲ್ಯಾಪ್‌ಟಾಪ್‌ಗಳು ಲಬ್ಯವಿವೆ. ಹಲವಾರು ಕಂಪೆನಿಗಳು ತಮ್ಮ ವೈವಿಧ್ಯಮಯ ಸ್ಮಾರ್ಟ್‌ ಲ್ಯಾಪ್‌ಟಾಪ್‌ಗಳನ್ನ ಬಿಡುಗಡೆ ಗೊಳಿಸಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೊಸ ತಲೆಮಾರಿನ ಲ್ಯಾಪ್‌ಟಾಪ್‌ಗಳು ಬಿಡುಗಡೆ ಆಗಿವೆ. ಅದು ಅಲ್ಲದೆ ಇಂಟೆಲ್‌ ಪ್ರೊಸೆಸರ್‌ ತನ್ನ ಹೊಸ ತಲೆಮಾರಿನ 10 ಪ್ರೊಸೆಸರ್‌ ಸಿಪಿಯುಗಳನ್ನ ಪರಿಚಯಿಸಿದ್ದು, ಇದನ್ನು ಬೆಂಬಲಿಸುವ ಹೊಸ ಲ್ಯಾಪ್‌ಟಾಪ್‌ಗಳನ್ನ ಅಸೂಸ್‌ ಕಂಪೆನಿ ಬಿಡುಗಡೆಗೊಳಿಸುವುದಾಗಿದೆ ಘೋಷಣೆ ಮಾಡಿದೆ.

ಹೌದು

ಹೌದು ಅಸೂಸ್‌ ಕಂಪೆನಿಯಿಂದ ROG ಇಂಟೆಲ್‌ನ 10 ನೇ ತಲೆಮಾರಿನ ಪ್ರೊಸೆಸರ್‌ ಹೊಂದಿರುವ ಲ್ಯಾಪ್‌ಟಾಪ್‌ ಅನ್ನು ಪರಿಚಯಿಸುವುದಾಗಿ ಹೇಳಿಕೊಂಡಿದೆ. ಈಗಾಗಲೇ ಇಂಟೆಲ್ ಮತ್ತು NVIDIA ಗೇಮಿಂಗ್ ಮತ್ತು ಉನ್ನತ-ಮಟ್ಟದ ಸ್ಟುಡಿಯೋ ನೋಟ್‌ಬುಕ್‌ಗಳಿಗಾಗಿ ಹೊಸ ಚಿಪ್‌ಸೆಟ್‌ಗಳನ್ನ ಘೋಷಿಸಿದೆ. ಇದೀಗ NVIDIA ದ ಆರ್‌ಟಿಎಕ್ಸ್ ಸೂಪರ್ ಜಿಪಿಯು ಶ್ರೇಣಿಯನ್ನು ಬಿಡುಗಡೆ ಮಾಡಲಾಗಿದೆ. ಇದನ್ನೆ ಗುರಿಯಾಗಿರಿಸಿಕೊಂಡು ಅಸೂಸ್‌ ತನ್ನ ROG ಸರಣಿಯ ಲ್ಯಾಪ್‌ಟಾಪ್‌ಗಲ ಮೂಲಕ ಹೊರತರಲಿದೆ. ಅಷ್ಟಕ್ಕೂ ಆ ಲ್ಯಾಪ್‌ಟಾಪ್‌ಗಳ ವಿನ್ಯಾಸ ಹಾಗೂ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ROG ZEPHYRUS DUO 15

ROG ZEPHYRUS DUO 15

ಇನ್ನು ಅಸೂಸ್‌ ಕಂಪೆನಿ ಘೋಷಿಸಿರುವ ಲ್ಯಾಪ್‌ಟಾಪ್‌ ಸರಣಿಯಲ್ಲಿ ROG ಜೆಫೈರಸ್ ಸರಣಿಯಲ್ಲಿ ಅಸೂಸ್‌ ಜೆಫೈರಸ್ ಡ್ಯುವೋ 15 ಅನ್ನು ಘೋಷಿಸಿದೆ. ತನ್ನ ಡ್ಯುಯಲ್-ಡಿಸ್ಪ್ಲೇ ಪರಿಕಲ್ಪನೆಯನ್ನು ಈ ಲ್ಯಾಪ್‌ಟಾಪ್‌ನಲ್ಲಿ ಹೊರತಂದಿದೆ. ಈ ಹೊಸ ಗೇಮಿಂಗ್ ನೋಟ್‌ಬುಕ್‌ನಲ್ಲಿ ಇಂಟೆಲ್‌ ನ 10 ನೇ ತಲೆಮಾರಿನ ಕೋರ್‌ ಐ 9 ಪ್ರೊಸೆಸರ್ ಮತ್ತು ಹೊಸ ಎನ್ವಿಡಿಯಾ ಆರ್ಟಿಎಕ್ಸ್ 2080 ಸೂಪರ್ ಜಿಪಿಯು ಅನ್ನು ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್‌ 15-ಇಂಚಿನ ಡಿಸ್‌ಪ್ಲೇ ಹೊಂದಿದ್ದು, 300Hz FHD ರೆಸಲ್ಯೂಶನ್‌ ಅನ್ನು ಹೊಂದಿದೆ. ಜೊತೆಗೆ ROG ಜಿಪಿಯು ಸ್ವಿಚ್ ತಂತ್ರಜ್ಞಾನವು ಜಿ-ಸಿಎನ್‌ಸಿ ಮತ್ತು ಎನ್‌ವಿಡಿಯಾದ ಬ್ಯಾಟರಿ ಉಳಿಸುವ ಆಪ್ಟಿಮಸ್ ಮೋಡ್ ನಡುವೆ ವಿನಿಮಯ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.

ROG ZEPHYRUS S17 / S15

ROG ZEPHYRUS S17 / S15

ಇದಲ್ಲದೆ ROG ಯ ಜೆಫೈರಸ್ S17 ಮತ್ತು S15 ಸಹ ಹೊಸ 10 ನೇ ಜನ್ ಇಂಟೆಲ್ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. ಈ ಲ್ಯಾಪ್‌ಟಾಪ್‌ಗಳು ಕೂಡ ಇಂಟೆಲ್ ಕೋರ್ ಐ 7-10875 ಹೆಚ್ ಅಥವಾ ಐ 7-10750 ಹೆಚ್ ಆಯ್ಕೆಗಳೊಂದಿಗೆ ಬರುತ್ತದೆ. ಇನ್ನು ಈ ಲ್ಯಾಪ್‌ಟಾಪ್‌ ನ 17 ಇಂಚಿನ ರೂಪಾಂತರವು ಹೊಸ ಮಾದರಿಯ ಕೀಬೋರ್ಡ್ ಅನ್ನು ಸಹ ಹೊಂದಿದೆ. ಅಲ್ಲದೆ S15 ಕೀಬೋರ್ಡ್ ಬ್ಯಾಕ್ ಅಪ್ ಟಾಪ್ ಅನ್ನು ದೊಡ್ಡ ಟ್ರ್ಯಾಕ್‌ಪ್ಯಾಡ್‌ ಅನ್ನು ಹೊಂದಿದೆ. ಜೊತೆಗೆ ಈ ROG ಲೈಟಿಂಗ್ ಯುಎಸ್‌ಬಿ ಟೈಪ್-ಸಿ, ಥಂಡರ್ಬೋಲ್ಟ್ 3.0 ವೈ-ಫೈ 6 ಮತ್ತು ಯುಎಸ್‌ಬಿ-ಸಿ ಪಿಡಿ ಚಾರ್ಜಿಂಗ್‌ಗೆ ಉತ್ತಮ ಬೆಂಬಲ ನೀಡಲಿದೆ.

ROG ZEPHYRUS M15

ROG ZEPHYRUS M15

ಜೆಫೈರಸ್ ಶ್ರೇಣಿಯಲ್ಲಿ M15 ಕೂಡ ಉತ್ತಮ ಲ್ಯಾಪ್‌ಟಾಪ್‌ ಮಾದರಿ ಇದಾಗಿದೆ. ಇನ್ನು ಈ ನೋಟ್‌ಬುಕ್‌ 240Hz ಮತ್ತು 144Hz FHD ಪ್ಯಾನಲ್‌ಗಳು ಹಾಗೂ 4K UHD ಪ್ಯಾನಲ್ ಸೇರಿದಂತೆ ವಿವಿಧ ಡಿಸ್‌ಪ್ಲೇ ಆಯ್ಕೆಗಳನ್ನು ಹೊಂದಿದೆ. ಇದರಲ್ಲದೆ NVIDIAದ ಜಿಫೋರ್ಸ್ GTX 1660 T ಯಿಂದ RTX 2070 ವರೆಗಿನ ವಿವಿಧ ಗ್ರಾಫಿಕ್ಸ್ ಆಯ್ಕೆಗಳನ್ನ ಹೊಂದಿದೆ. ಇದಲ್ಲದೆ ಜೆಫೈರಸ್ ಎಂ 15 ಅನ್ನು 10 ನೇ ಜನ್ ಇಂಟೆಲ್ ಕೋರ್ ಪ್ರೊಸೆಸರ್ ಹೊಂದಿದ್ದು, ಇಂಟೆಲ್ ಕೋರ್ ಐ 7-10875 ಹೆಚ್ ಅಥವಾ ಐ 7-10750 ಹೆಚ್ ಆಯ್ಕೆಗಳನ್ನ ನೀಡಲಾಗಿದೆ.

ROG STRIX SCAR 15/17

ROG STRIX SCAR 15/17

ಇನ್ನು ROGಯ ಸ್ಟ್ರಿಕ್ಸ್ ಸ್ಕಾರ್ ಸರಣಿಯು 300hz ಐಪಿಎಸ್-ಮಟ್ಟದ ಪ್ಯಾನಲ್ ಅನ್ನು ಹೊಂದಿದೆ, ಜೊತೆಗೆ ಇಂಟೆಲ್ ಕೋರ್ ಐ 9-10980-ಎಚ್‌ಕೆ ಪ್ರೊಸೆಸರ್ ಅನ್ನು ಒಳಗೊಂಡಿದೆ. ಅಲ್ಲದೆ ಈ ಮಾದರಿಯ ಲ್ಯಾಪ್‌ಟಾಪ್‌ಗಳಲ್ಲಿ ಕೀಬೋರ್ಡ್ ಬ್ಯಾಕ್‌ಲೈಟಿಂಗ್ ಅನ್ನು ನೀಡಲಾಗಿದೆ. ಈ ನೋಟ್ಬುಕ್ ಹೊಸ ROG ಕೀಸ್ಟೋನ್ II ​​ಅನ್ನು ಸಹ ಒಳಗೊಂಡಿದೆ. ಇದಲ್ಲದೆ ಇದು ಸಣ್ಣ NFC- ಇನ್‌ಸ್ಟಾಲ್‌ ಡಿವೈಸ್‌ ಆಗಿದ್ದು, ಆರ್ಮರಿ ಕ್ರೇಟ್ ಗೇಮ್ ಲೈಬ್ರರಿ, ನಿರ್ದಿಷ್ಟ ಆಪರೇಟಿಂಗ್ ಮೋಡ್ ಅನ್ನು ಪ್ರಾರಂಭಿಸಲು ಇದನ್ನು ಕಸ್ಟಮೈಸ್ ಮಾಡಬಹುದಾಗಿದೆ.

Best Mobiles in India

English summary
Asus ROG Announces New Laptop Range With 10th-Gen Intel Processors, Nvidia RTX Super GPUs.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+