ಆಸೂಸ್‌ ROG 3 ಗೇಮಿಂಗ್ ಫೋನ್‌ ಬೆಲೆಯಲ್ಲಿ ಶಾಶ್ವತ ಇಳಿಕೆ!

|

ತೈವಾನ್‌ ಮೂಲದ ಆಸೂಸ್‌ ಟೆಕ್ ಕಂಪನಿಯು ROG ಸರಣಿಯಲ್ಲಿ ಹಲವು ಗೇಮಿಂಗ್ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಸಿದೆ. ಅವುಗಳಲ್ಲಿ ಆಸೂಸ್‌ ROG 3 ಸ್ಮಾರ್ಟ್‌ಫೋನ್‌ ದೈತ್ಯ ಫೀಚರ್ಸ್‌ಳಿಂದ ಗೇಮ್‌ ಪ್ರಿಯರನ್ನು ಆಕರ್ಷಿಸಿದೆ. ಆಸೂಸ್‌ ಇದೀಗ ಈ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಶಾಶ್ವತ ಭರ್ಜರಿ ಇಳಿಕೆ ಮಾಡಿದೆ.

ಆಸೂಸ್‌

ಹೌದು, ಆಸೂಸ್‌ ಸಂಸ್ಥೆಯು ಆಸೂಸ್‌ ROG 3 ಗೇಮಿಂಗ್ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಈಗ 3000ರೂ. ಇಳಿಕೆ ಮಾಡಿದೆ. ಇನ್ನು ಈ ದೈತ್ಯ ಫೋನ್‌ ಎರಡು ವೇರಿಯಂಟ್‌ ಮಾದರಿಗಳನ್ನು ಒಳಗೊಂಡಿದ್ದು, ಅವುಗಳು ಕ್ರಮವಾಗಿ 8GB RAM + 128GB ಮತ್ತು 12GB RAM + 256GB ಸಾಮರ್ಥ್ಯದಲ್ಲಿವೆ. ಬೇಸ್‌ ವೇರಿಯಂಟ್‌ 46,999 ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಈ ಫೋನಿನ ಬೆಲೆ ಎಷ್ಟು ಹಾಗೂ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಹೇಗಿದೆ

ಡಿಸ್‌ಪ್ಲೇ ಹೇಗಿದೆ

ಆಸೂಸ್‌ ROG 3 ಗೇಮಿಂಗ್ ಸ್ಮಾರ್ಟ್‌ಫೋನ್‌ 1,080x2,340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.59 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ AMOLED ಮಾದರಿಯ ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯ ಅನುಪಾತವು 19.5:9 ಆಗಿದ್ದು, 144Hz ರಿಫ್ರೇಶ್‌ ರೇಟ್ ಪಡೆದಿದೆ. ಇನ್ನು ಇದರೊಂದಿಗೆ HDR10+ ಸಪೋರ್ಟ್‌ ಹೊಂದಿದೆ ಜೊತೆಗೆ 2.5D ಗ್ಲಾಸ್‌ ಹಾಗೂ ಗೊರಿಲ್ಲಾ ಗ್ಲಾಸ್‌ 6 ಪಡೆದಿದೆ.

ಪ್ರೊಸೆಸರ್‌ ಬಲ

ಪ್ರೊಸೆಸರ್‌ ಬಲ

ಆಸೂಸ್‌ ROG 3 ಗೇಮಿಂಗ್ ಸ್ಮಾರ್ಟ್‌ಫೋನ್‌ ಕ್ವಾಲ್ಕಮ್ ಸ್ಯಾಮ್‌ಡ್ರಾಗನ್ 865+ SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 10 ಓಎಸ್‌ ಬೆಂಬಲ ಪಡೆದಿದೆ. ಇದರೊಂದಿಗೆ ಆಡ್ರೆನೊ 650 GPU ಸಹ ಹೊಂದಿದೆ. 8GB RAM + 128GB ಮತ್ತು 12GB RAM + 256GB ಸ್ಟೋರೇಜ್‌ನ ಎರಡು ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ.

ಕ್ಯಾಮೆರಾ ರಚನೆ

ಕ್ಯಾಮೆರಾ ರಚನೆ

ಆಸೂಸ್‌ ROG 3 ಗೇಮಿಂಗ್ ಸ್ಮಾರ್ಟ್‌ಫೋನ್‌ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ನಲ್ಲಿದೆ. ಹಾಗೆಯೇ ಸೆಕೆಂಡರಿ ಕ್ಯಾಮೆರಾವು 13ಎಂಪಿ ಸೆನ್ಸಾರ್‌ ಹಾಗೂ ತೃತೀಯ ಕ್ಯಾಮೆರಾವು 5ಎಂಪಿ ಸೆನ್ಸಾರ್‌ನಲ್ಲಿದೆ. ಇದರೊಂದಿಗೆ ಸೆಲ್ಫಿಗಾಗಿ 24ಎಂಪಿ ಸೆನ್ಸಾರ್‌ ಕ್ಯಾಮೆರಾ ಒದಗಿಸಲಾಗಿದೆ.

ಬ್ಯಾಟರಿ ಲೈಫ್‌

ಬ್ಯಾಟರಿ ಲೈಫ್‌

ಆಸೂಸ್‌ ROG 3 ಗೇಮಿಂಗ್ ಸ್ಮಾರ್ಟ್‌ಫೋನ್‌ 6000mAh ಬ್ಯಾಟರಿ ಸಪೋರ್ಟ್‌ ಪಡೆದಿದೆ. ಇದರೊಂದಿಗೆ 30W ಫಾಸ್ಟ್‌ ಚಾರ್ಜಿಂಗ್‌ ಸಪೋರ್ಟ್‌ ಅನ್ನು ಒಳಗೊಂಡಿದೆ. ಇದರೊಂದಿಗೆ Hi-Res ಆಡಿಯೊ ಬೆಂಬಲ ಇದೆ ಹಾಗೂ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5 ಜಿ, 4 ಜಿ ಎಲ್ ಟಿಇ, ವೈ-ಫೈ 6, ಬ್ಲೂಟೂತ್ ವಿ 5.1, ಜಿಪಿಎಸ್ / ಎ-ಜಿಪಿಎಸ್ / ನ್ಯಾವಿಕ್, ಯುಎಸ್ಬಿ ಟೈಪ್-ಸಿ, ಮತ್ತು 48-ಪಿನ್ ಸೈಡ್ ಪೋರ್ಟ್ ಸೇರಿವೆ.

Best Mobiles in India

English summary
ASUS has announced a price cut for its popular gaming smartphone, the ROG Phone 3.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X