ಅಸುಸ್‌ನಿಂದ ಎರಡು ಹೊಸ ಗೇಮಿಂಗ್ ಲ್ಯಾಪ್‌ಟಾಪ್ ಬಿಡುಗಡೆ! ಬೆಂಕಿ ಫೀಚರ್ಸ್!
ಅಸುಸ್ ಕಂಪೆನಿ ತನ್ನ ವೈವಿಧ್ಯಮಯ ಲ್ಯಾಪ್‌ಟಾಪ್‌ಗಳಿಗೆ ಹೆಸರುವಾಸಿಯಾಗಿದೆ. ಗೇಮಿಂಗ್ ಲ್ಯಾಪ್‌ಟಾಪ್‌ಗಳ ಮೂಲಕ ಭಾರಿ ಸೌಂಡ್ ಮಾಡ್ತಿದೆ. ಇದೀಗ ಭಾರತದಲ್ಲಿ ಹೊಸ ಅಸುಸ್ ಸ್ಟ್ರಿಕ್ಸ್ ಸ್ಕಾರ್ 16 ಮತ್ತು ಸ್ಟ್ರಿಕ್ಸ್ ಸ್ಕಾರ್ 18 ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟಾಪ್‌ಗಳು ತಮ್ಮ ಆಕರ್ಷಕ ಫೀಚರ್ಸ್‌ಗಳ ಮೂಲಕ ಗಮನಸೆಳೆದಿವೆ.
ಹೌದು, ಅಸುಸ್ ಕಂಪೆನಿ ಭಾರತದಲ್ಲಿ ಎರಡು ಹೊಸ ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿದೆ. ಈ ಲ್ಯಾಪ್‌ಟಾಪ್‌ಗಳನ್ನು CES 2023ರಲ್ಲಿ ಅನಾವರಣಗೊಳಿಸಲಾಗಿತ್ತು. ಇದೀಗ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಹಾಗಾದ್ರೆ ಈ ಎರಡು ಲ್ಯಾಪ್‌ಟಾಪ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಸುಸ್ ROG ಸ್ಟ್ರಿಕ್ಸ್ ಸ್ಕಾರ್ 16 ಮತ್ತು ಸ್ಟ್ರಿಕ್ಸ್ ಸ್ಕಾರ್ 18 ಫೀಚರ್ಸ್ ಹೇಗಿದೆ?
ಅಸುಸ್ ROG ಸ್ಟ್ರಿಕ್ಸ್ ಸ್ಕಾರ್ 16 ಮತ್ತು ROG ಸ್ಟ್ರಿಕ್ಸ್ ಸ್ಕಾರ್ 18 ಲ್ಯಾಪ್‌ಟಾಪ್‌ಗಳು ಹೆಚ್ಚು ಕಡಿಮೆ ಒಂದೇ ಮಾದರಿಯ ಡಿಸೈನ್ ಹೊಂದಿವೆ. ಈ ಲ್ಯಾಪ್‌ಟಾಪ್‌ಗಳು ಅಡಾಪ್ಟಿವ್ ಸಿಂಕ್‌ನೊಂದಿಗೆ 240Hz ರಿಫ್ರೆಶ್ ರೇಟ್ ಬೆಂಬಲಿಸುವ QHD ರೆಸಲ್ಯೂಶನ್ ಡಿಸ್‌ಪ್ಲೇಯನ್ನು ಹೊಂದಿವೆ. ಇದು ಕಸ್ಟಮೈಸ್ ಮಾಡಬಹುದಾದ 'ಆರ್ಮರ್ ಕ್ಯಾಪ್ಸ್' ಅನ್ನು ಒಳಗೊಂಡಿದೆ. ಇನ್ನು ಆರ್ಮರ್ ಕ್ಯಾಪ್ಸ್ ಮೂಲಕ 3D ಪ್ರಿಂಟ್ ತೆಗೆಯುವುದಕ್ಕೆ ಅವಕಾಶ ಸಿಗಲಿದೆ.
ಈ ಎರಡು ಲ್ಯಾಪ್‌ಟಾಪ್‌ಗಳು ಇಂಟೆಲ್ 13ನೇ ತಲೆಮಾರಿನ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಎನ್‌ವಿಡಿಯಾ ಜಿಫೋರ್ಸ್ RTX 4000 ಸರಣಿಯ GPUಗಳನ್ನು MUX ಅನ್ನು ಒಳಗೊಂಡಿವೆ. ಇನ್ನು ಈ ಎರಡೂ ಮಾದರಿಗಳು ಔರಾ ಸಿಂಕ್ accentsಗಳನ್ನು ಹೊಂದಿವೆ.

ಅಸುಸ್ ROG ಜೆಫೈರಸ್ M16 ಫೀಚರ್ಸ್ ಹೇಗಿದೆ?
ಅಸುಸ್ ROG ಜೆಫೈರಸ್ M16 ಲ್ಯಾಪ್‌ಟಾಪ್ 16 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು 16:10 ರಚನೆಯ ಅನುಪಾತವನ್ನು ಪಡೆದಿದೆ. ಈ ಲ್ಯಾಪ್‌ಟಾಪ್ ಇಂಟೆಲ್ ಕೋರ್ i9-13900H CPU ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಎನ್‌ವಿಡಿಯಾ ಜಿಫೋರ್ಸ್ RTX 4090 GPU ವರೆಗೆ ಕಾನ್ಫಿಗರ್ ಮಾಡಬಹುದು.
ಅಸುಸ್ ROG ಜೆಫೈರಸ್ ಡ್ಯುವೋ 16 ಫೀಚರ್ಸ್ ಹೇಗಿದೆ?
ಅಸುಸ್ ROG ಜೆಫೈರಸ್ ಡ್ಯುವೋ 16 ಲ್ಯಾಪ್‌ಟಾಪ್ 15 ಇಂಚಿನ ಫಾರ್ಮ್ ಫ್ಯಾಕ್ಟರ್‌ನಲ್ಲಿ 16 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಲ್ಯಾಪ್‌ಟಾಪ್ ಹೊಸ ಝೆನ್ 4 ಆರ್ಕಿಟೆಕ್ಚರ್‌ನ ಆಧಾರದ ಮೇಲೆ AMD ಯ ರೈಜೆನ್ 7000 ಸರಣಿಯ ಡ್ರ್ಯಾಗನ್ ಶ್ರೇಣಿಯ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 90WHr ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 330W ಅಡಾಪ್ಟರ್ ಚಾರ್ಜಿಂಗ್ ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ
ಅಸುಸ್ ROG ಸ್ಟ್ರಿಕ್ಸ್ ಸ್ಕಾರ್ 16 ಭಾರತದಲ್ಲಿ 2,79,990ರೂ. ಆರತಂಭಿಕ ಬೆಲೆಯನ್ನು ಹೊಂದಿದೆ. ಆದರೆ ಅಸುಸ್ ROG ಸ್ಟ್ರಿಕ್ಸ್ ಸ್ಕಾರ್ 18 ಲ್ಯಾಪ್‌ಟಾಪ್ 2,79,990ರೂ. ಬೆಲೆಯನ್ನು ಹೊಂದಿದೆ. ಇನ್ನು ಅಸುಸ್ ROG ಸ್ಟ್ರಿಕ್ಸ್ ಸ್ಕಾರ್ 17 ಆರಂಭಿಕ ಬೆಲೆ 2,69,990ರೂ.ಆಗಿದೆ. ಇದರ ಹೊಸ ಅಸುಸ್ ROG ಜೆಫೈರಸ್ M16 ಆರಂಭಿಕ ಬೆಲೆ 2,99,990ರೂ. ಆಗಿದೆ. ಅಸುಸ್ ROG ಜೆಫೈರಸ್ ಡ್ಯುವೋ 16 ಲ್ಯಾಪ್‌ಟಾಪ್ ಭಾರತದಲ್ಲಿ 4,29,990ರೂ. ಬೆಲೆಯಲ್ಲಿ ಬರಲಿದೆ. ಇನ್ನು ಈ ಎಲ್ಲಾ ಹೊಸ ಲ್ಯಾಪ್‌ಟಾಪ್‌ಗಳು ಪ್ರಮುಖ ಆನ್‌ಲೈನ್ ಮತ್ತು ಆಫ್‌ಲೈನ್ ಚಿಲ್ಲರೆ ವ್ಯಾಪಾರಿಗಳ ಮೂಲಕ ಖರೀದಿಸಲು ಲಭ್ಯವಿದೆ. ಇವುಗಳು ಯಾವೆಲ್ಲಾ ಬಣ್ಣದ ಆಯ್ಕೆಯಲ್ಲಿ ದೊರೆಯಲಿದೆ ಎಂಬುದು ತಿಳಿದುಬಂದಿಲ್ಲ.


Click it and Unblock the Notifications








