ವಿಶ್ವದ ಮೊದಲ ಇಸ್ಪೋರ್ಟ್‌ ಡಿಸ್‌ಪ್ಲೇ ಬಿಡುಗಡೆ ಮಾಡಿದ ಆಸಸ್!

|

ಟೆಕ್‌ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಮಾರ್ಟ್‌ ಬ್ರಾಂಡ್‌ಗಳಿಂದ ಜನಪ್ರಿಯವಾಗಿರೋ ಆಸುಸ್‌ ಕಂಪೆನಿ ವಿಶ್ವದ ಮೊದಲ ಇಸ್ಪೋರ್ಟ್‌ ಡಿಸ್ಪ್ಲೇಯನ್ನ ಬಿಡುಗಡೆ ಮಾಡಿದೆ. ಆಸಸ್ ROG SWIFT 360HZ ಎಂದು ಹೆಸರಿಸಲಾದ ಈ ಡಿಸ್ಪ್ಲೇ 360Hz ರಿಫ್ರೆಶ್ ರೇಟ್‌ನೊಂದಿಗೆ ವಿಶ್ವದ ಅತಿ ವೇಗದ ಮತ್ತು ಮೊದಲ ಎನ್ವಿಡಿಯಾ ಜಿ-ಸಿಎನ್‌ಸಿ ಗೇಮಿಂಗ್ ಮಾನಿಟರ್ ಆಗಿದೆ.

ಹೌದು

ಹೌದು, ಟೆಕ್‌ ಮಾರುಕಟ್ಟೆಯಲ್ಲಿ ಆಸಸ್‌ ತನ್ನ ಇಸ್ಪೋರ್ಟ್‌ ಡಿಸ್‌ಪ್ಲೇ ಮೂಲಕ ಸಖತ್‌ ಸೌಂಡ್‌ ಮಾಡ್ತಿದೆ. ವಿಶ್ವದ ಮೊದಲ ಇಸ್ಪೋರ್ಟ್‌ ಡಿಸ್‌ಪ್ಲೇ ಎಂಬ ಖ್ಯಾತಿಯನ್ನ ಪಡೆದುಕೊಂಡಿರುವ ROG SWIFT 360HZ ಈಗಾಗ್ಲೆ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಲಭ್ಯವಿರುವ 240Hz ಗೇಮಿಂಗ್ ಮಾನಿಟರ್‌ಗಳಿಗಿಂತ ಪ್ರತಿ ಸೆಕೆಂಡಿಗೆ 50 ಪ್ರತಿಶತದಷ್ಟು ಹೆಚ್ಚಿನ ಫ್ರೇಮ್‌ಗಳನ್ನು ಉತ್ಪಾದಿಸಬಹುದು ಎಂದು ಕಂಪೆನಿ ಹೇಳಿಕೊಂಡಿದೆ.

ಸದ್ಯ

ಸದ್ಯ 24.5-ಇಂಚಿನ ಡಿಸ್‌ಪ್ಲೇ ಹೊಂದಿರುವ ROG SWIFT 360HZ ಡಿಸ್‌ಪ್ಲೇ 1920 x 1080 ಪಿಕ್ಸೆಲ್‌ಗಳ ಪೂರ್ಣ ಎಚ್‌ಡಿ ರೆಸಲ್ಯೂಶನ್ ಅನ್ನು ನೀಡುತ್ತದೆ. ಈ ಡಿಸ್‌ಪ್ಲೇ ಆನ್‌ಲೈನ್‌ನಲ್ಲಿ ಗೇಮ್‌ಗಳ ಅನ್ವೇಷಣೆಯಲ್ಲಿ ಎಸ್‌ಪೋರ್ಟ್ಸ್ ಮತ್ತು ಸ್ಪರ್ಧಾತ್ಮಕ ಆಟಗಳಿಗೆ ಹೆಚ್ಚುವರಿ ಅಂಚನ್ನು ನೀಡುತ್ತದೆ. ಅಲ್ಲದೆ ಈ ಡಿಸ್‌ಪ್ಲೇ ಉನ್ನತ-ಮಟ್ಟದ ROG ಗೇಮಿಂಗ್ ಮಾನಿಟರ್‌ಗಳ ವಿನ್ಯಾಸವನ್ನು ಹೊಂದಿದೆ.

ಇನ್ನು

ಇನ್ನು ROG SWIFT 360HZ ಡಿಸ್‌ಪ್ಲೇ ನಲ್ಲಿ ಎಚ್‌ಡಿಆರ್ ವೈಶಿಷ್ಟ್ಯಗಳನ್ನು ಸಕ್ರಿಯಗೊಳಿಸಲು ಸುಧಾರಿತ G-SYNC ಅಲ್ಟಿಮೇಟ್ ಪ್ರೊಸೆಸರ್ ಅನ್ನು ಹೊಂದಿದೆ. ಇನ್ನು 16: 9 ಡಿಸ್‌ಪ್ಲೇ ಭಾಗದಲ್ಲಿ 1152 ಮಿನಿ ಎಲ್ಇಡಿ ವಲಯಗಳ ಜೊತೆಗೆ ಪೂರ್ಣ-ಶ್ರೇಣಿಯ ಸ್ಥಳೀಯ ಮಬ್ಬಾಗಿಸುವ ಬ್ಯಾಕ್‌ಲೈಟ್‌ನಿಂದ ಪ್ರಕಾಶಿಸಲ್ಪಟ್ಟಿದೆ. ಮಿನಿ-ಎಲ್ಇಡಿ ಬ್ಯಾಕ್ಲೈಟಿಂಗ್ ತಂತ್ರಜ್ಞಾನವಾಗಿದ್ದು, ಉನ್ನತ-ಮಟ್ಟದ ಟೆಲಿವಿಷನ್ ಮತ್ತು ಮಾನಿಟರ್‌ಗಳಲ್ಲಿ ಇದು ಸಾಮಾನ್ಯವಾಗಲಿದೆ. ಇದು ಉತ್ತಮ ಬಣ್ಣ ನಿಖರತೆಯನ್ನು ಹೊಂದಿದ್ದು, ಒಎಲ್ಇಡಿ ಪ್ಯಾನೆಲ್‌ಗಳಲ್ಲಿ ಸ್ಕ್ರೀನ್ ಬರ್ನ್-ಇನ್ ಹೊಂದಿಲ್ಲ ಎನ್ನಲಾಗಿದೆ.

ನಿಟ್‌ಗಳ

ಆಸಸ್ ROG SWIFT 360HZ ಡಿಸ್‌ಪ್ಲೇ ಮಾನಿಟರ್‌ PG32UQX 1400 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್‌ ಹೊಂದಿದೆ. ಇನ್ನು G-SYNC ಪ್ರೊಸೆಸರ್ ಆಗಿರುವುದರಿಂದ ಇದು 144Hz ವರೆಗೆ ವೇರಿಯಬಲ್ ರಿಫ್ರೆಶ್ ರೇಟ್‌ ಅನ್ನ ನೀಡುತ್ತದೆ ಮತ್ತು ರಿಫ್ರೆಶ್ ರೇಟ್‌ನಲ್ಲಿ 10-ಬಿಟ್ ಕಲರ್‌ ಅನ್ನ ಬೆಂಬಲಿಸಲಿದೆ. ಅಲ್ಲದೆ "ಎನ್ವಿಡಿಯಾ G-SYNC ತಂತ್ರಜ್ಞಾನದೊಂದಿಗೆ, ಫ್ರೇಮ್ ರೇಟ್ ಪಿಜಿ 32 ಯುಕ್ಯೂಎಕ್ಸ್‌ನ 144HZ ರಿಫ್ರೆಶ್ ರೇಟ್‌ ಗರಿಷ್ಠ ಮಟ್ಟಕ್ಕಿಂತ ಕಡಿಮೆಯಾದಾಗಲೂ ಬಳಕೆದಾರರು ಸುಗಮ, ಗೇಮಿಂಗ್‌ ಅನುಭವವನ್ನ ಆನಂದಿಸುತ್ತಾರೆ" ಎಂದು ಕಂಪನಿ ಹೇಳಿದೆ.

ಪಿಜಿ

ಇನ್ನು ಗೇಮಿಂಗ್‌ಗೆ ಇದು ಉತ್ತಮವಾಗಿದ್ದರೂ ROG SWIFT 360HZ, ಪಿಜಿ 32 ಯುಕ್ಯೂಎಕ್ಸ್ ಡಿಸ್ಪ್ಲೇ ಎಚ್‌ಡಿಆರ್ 1400 ಮಾಧ್ಯಮ ಬಳಕೆಗೆ ಸೂಕ್ತವಾಗಿದೆ. ಇದರಲ್ಲಿ RGB ಎಲ್ಇಡಿ ROG ಲೋಗೊ ಸಹ ಇದೆ, ಇನ್ನು ಡಿಸ್‌ಪ್ಲೇ ಸ್ಟ್ಯಾಂಡ್‌ನ ತಳದಲ್ಲಿ ಮಾನಿಟರ್ ಲೋಗೋ ಪ್ರೊಜೆಕ್ಟರ್ ಅನ್ನು ಸಹ ಹೊಂದಿದೆ, ಇದು ರಿಪಬ್ಲಿಕ್ ಆಫ್ ಗೇಮರ್ಸ್ ಲೋಗೊವನ್ನು ಪ್ರದರ್ಶಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಸದ್ಯ ಇದರ ಬೆಲೆ ಕುರಿತು ಕಂಪೆನಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

Most Read Articles
Best Mobiles in India

Read more about:
English summary
Asus has launched the world’s first Esports display with 360Hz refresh rate at CES 2020. Called Asus ROG Swift 360Hz, the display is the world’s fastest and first NVIDIA G-SYNC gaming monitor with 360Hz refresh rate. In comparison to widely available 240Hz gaming monitors, Asus claims that ROG Swift 360Hz can output 50 percent more frames every second. We are looking at a 24.5-inch display that outputs Full HD resolution of 1920 x 1080 pixels.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X