Home
ಸುದ್ದಿಜಾಲ

ಆಸುಸ್‌ ಕಂಪೆನಿಯಿಂದ ಹೊಸ ಗೇಮಿಂಗ್‌ ಲ್ಯಾಪ್‌ಟಾಪ್‌ ಬಿಡುಗಡೆ: ಬೆಲೆ ಎಷ್ಟು?

ಭಾರತದ ಮಾರುಕಟ್ಟೆಯಲ್ಲಿ ಆಸುಸ್‌ ಕಂಪೆನಿಯ ಲ್ಯಾಪ್‌ಟಾಪ್‌ಗಳಿಗೆ ಭರ್ಜರಿ ಡಿಮ್ಯಾಂಡ್‌ ಇದೆ. ವಿಭಿನ್ನ ಶೈಲಿಯ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸುತ್ತಾ ಬಂದಿರುವ ಆಸುಸ್‌ ಕಂಪೆನಿ ಇದೀಗ ಹೊಸ ಉನ್ನತ ಮಟ್ಟದ ಗೇಮಿಂಗ್ ಲ್ಯಾಪ್‌ಟಾಪ್ ಅನ್ನು ಅನಾವರಣಗೊಳಿಸಿದೆ. ಇದನ್ನು ASUS ROG Zephyrus G16 ಲ್ಯಾಪ್‌ಟಾಪ್‌ ಎಂದು ಹೆಸರಿಸಲಾಗಿದೆ.

ಹೌದು, ASUS ROG Zephyrus G16 ಲ್ಯಾಪ್‌ಟಾಪ್‌ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಲ್ಯಾಪ್‌ಟಾಪ್‌ ಇಂಟೆಲ್ ಕೋರ್ ಅಲ್ಟ್ರಾ 9 ಪ್ರೊಸೆಸರ್‌ನೊಂದಿಗೆ ಬರಲಿದ್ದು, ಎಐ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದು Nvidia GeForce RTX 4090 ಗ್ರಾಫಿಕ್ಸ್ ಕಾರ್ಡ್‌ ಹೊಂದಿದೆ. ಹಾಗಾದ್ರೆ ಈ ಲ್ಯಾಪ್‌ಟಾಪ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಸುಸ್‌ ಕಂಪೆನಿಯಿಂದ ಹೊಸ ಗೇಮಿಂಗ್‌ ಲ್ಯಾಪ್‌ಟಾಪ್‌ ಬಿಡುಗಡೆ: ಬೆಲೆ ಎಷ್ಟು?

ASUS ROG ಜೆಫೈರಸ್ G16 ಫೀಚರ್ಸ್‌ ಹೇಗಿದೆ?
ASUS ROG ಜೆಫೈರಸ್ G16 ಗೇಮಿಂಗ್‌ ಲ್ಯಾಪ್‌ಟಾಪ್‌ 16 ಇಂಚಿನ OLED ಡಿಸ್‌ಪ್ಲೇಯನ್ನು ಹೊಂದಿದೆ. ಇದು ಸುಧಾರಿತ ಕೂಲಿಂಗ್‌ಗಾಗಿ ASUS ತನ್ನ 2ನೇ ಜನ್ ಆರ್ಕ್ ಫ್ಲೋ ಫ್ಯಾನ್‌ಗಳೊಂದಿಗೆ ಬರಲಿದೆ. ಇನ್ನು ಈ ಲ್ಯಾಪ್‌ಟಾಪ್‌ ಇಂಟೆಲ್ ಕೋರ್ ಅಲ್ಟ್ರಾ 9 ಪ್ರೊಸೆಸರ್ ವೇಗವನ್ನು ಹೊಂದಿದ್ದು, AI ಫೀಚರ್ಸ್‌ಗಳನ್ನು ಹೊಂದಿದೆ. ಇನ್ನು ಈ CPU ಅನ್ನು Nvidia GeForce RTX 4090 ಗ್ರಾಫಿಕ್ಸ್ ಕಾರ್ಡ್‌ನೊಂದಿಗೆ ಬರಲಿದೆ. ಜೊತೆಗೆ MUX ಸ್ವಿಚ್ ಮತ್ತು ಸುಧಾರಿತ ಆಪ್ಟಿಮಸ್ ಬೆಂಬಲವನ್ನು ಸಹ ಪಡೆದಿದೆ.

ಇನ್ನು ಈ ಗೇಮಿಂಗ್ ಲ್ಯಾಪ್‌ಟಾಪ್‌ 240Hz ರಿಫ್ರೆಶ್ ರೇಟ್‌, 0.2ms ನ ಅಲ್ಟ್ರಾ ಲೋ ಲೇಟೆನ್ಸಿ ಮತ್ತು 2.5K ರೆಸಲ್ಯೂಶನ್ ಸ್ಕ್ರೀನ್‌ ಬೆಂಬಲಿಸಲಿದೆ. ಇದು 90Wh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದರಿಂದ ನೀವು ಕೇವಲ 30 ನಿಮಿಷಗಳಲ್ಲಿ 0 ರಿಂದ 50% ಚಾರ್ಜ್‌ ಮಾಡಲಿದೆ. ಇದಲ್ಲದೆ ಲ್ಯಾಪ್‌ಟಾಪ್‌ ಮೇಲಿನ ಮುಚ್ಚಳವು ಹೆಚ್ಚುವರಿ ವೈಯಕ್ತೀಕರಣಕ್ಕಾಗಿ ಸ್ಲ್ಯಾಶ್ ಲೈಟಿಂಗ್ ಅರೇ ಅನ್ನು ಸಹ ಹೊಂದಿದೆ.

ಆಸುಸ್‌ ಕಂಪೆನಿಯಿಂದ ಹೊಸ ಗೇಮಿಂಗ್‌ ಲ್ಯಾಪ್‌ಟಾಪ್‌ ಬಿಡುಗಡೆ: ಬೆಲೆ ಎಷ್ಟು?

ASUS ROG ಜೆಫೈರಸ್ G16 ಬೆಲೆ ಮತ್ತು ಲಭ್ಯತೆ
ASUS ROG Zephyrus G16 ಲ್ಯಾಪ್‌ಟಾಪ್‌ ಭಾರತದಲ್ಲಿ 1,89,990ರೂ ಬೆಲೆಯಲ್ಲಿ ಬರಲಿದೆ. ಇದು ಬ್ರ್ಯಾಂಡ್‌ನ ಅಧಿಕೃತ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಮತ್ತು ರಿಲಯನ್ಸ್ ಡಿಜಿಟಲ್, ROG ಸ್ಟೋರ್ಸ್, ಕ್ರೋಮಾ, ವಿಜಯ್ ಸೇಲ್ಸ್ ಮತ್ತು ಎಲ್ಲಾ ASUS ಅಧಿಕೃತ ಡೀಲರ್‌ಗಳಂತಹ ಆಫ್‌ಲೈನ್ ಚಿಲ್ಲರೆ ವ್ಯಾಪಾರಿಗಳ ಮೂಲಕ ಖರೀದಿಗೆ ಲಭ್ಯವಾಗಲಿದೆ.

ಇನ್ನು ಆಸುಸ್‌ ಕಂಪೆನಿ ಇತ್ತೀಚಿಗೆ ಆಸುಸ್‌ ಕ್ರೋಮ್‌ಬುಕ್‌ CM14 ಲ್ಯಾಪ್‌ಟಾಪ್‌ ಪರಿಚಯಿಸಿದೆ. ಇನ್ನು ಈ ಲ್ಯಾಪ್‌ಟಾಪ್‌ 14 ಇಂಚಿನ ಫುಲ್‌ ಹೆಚ್‌ಡಿ ಆಂಟಿ-ಗ್ಲೇರ್ ನಾನ್-ಟಚ್ LCD ಸ್ಕ್ರೀನ್ ಹೊಂದಿದೆ. ಈ ಡಿಸ್‌ಪ್ಲೇಯು 1,920 x 1,080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ 60Hz ರಿಫ್ರೆಶ್ ರೇಟ್, 220 nits ಬ್ರೈಟ್‌ನೆಸ್ ಮತ್ತು 16:9 ರಚನೆಯ ಅನುಪಾತವನ್ನು ಹೊಂದಿದೆ. ಅಲ್ಲದೆ 45% NTSC ಕಲರ್ ಗ್ಯಾಮಟ್ ಹಾಗೂ 77% ಸ್ಕ್ರೀನ್ ಟು ಬಾಡಿ ಅನುಪಾತವನ್ನು ನೀಡಲಿದೆ.

ಇದು MediaTek Kompanio 520 CPU ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ARM Mali G52 MP2 GPU ಸಪೋರ್ಟ್‌ ಅನ್ನು ಪಡೆದುಕೊಂಡಿದೆ. ಇನ್ನು ಲ್ಯಾಪ್‌ಟಾಪ್‌ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದೊಂದಿಗೆ ಬರಲಿದೆ. ಈ ಲ್ಯಾಪ್‌ಟಾಪ್‌ ಪ್ರೈವೆಸಿ ಶಟರ್ ಮತ್ತು ಅಂತರ್ಗತ ಫೇಸ್ AE ಫೀಚರ್ಸ್‌ನೊಂದಿಗೆ 720p ವೆಬ್‌ಕ್ಯಾಮ್ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ಟಚ್‌ಪ್ಯಾಡ್ ಬೆಂಬಲಿಸುವ ಗೆಸ್ಚರ್ ಇನ್‌ಪುಟ್‌ನೊಂದಿಗೆ 405cc ವರೆಗಿನ ದಕ್ಷತಾಶಾಸ್ತ್ರದ ಸ್ಪಿಲ್-ರೆಸಿಸ್ಟೆಂಟ್ ಕೀಬೋರ್ಡ್‌ ಅನ್ನು ಸಹ ನೀಡಲಾಗಿದೆ.

ಈ ಲ್ಯಾಪ್‌ಟಾಪ್‌ ಮೆಟಾಲಿಕ್ ಚಾಸಿಸ್ 180-ಡಿಗ್ರಿ 'ಲೇ-ಫ್ಲಾಟ್' ಹಿಂಗ್ಡ್ ಡಿಸ್‌ಪ್ಲೇಯನ್ನು ಹೊಂದಿರುವುದರಿಂದ ಸುಲಭವಾಗಿ ಬೆಂಡ್‌ ಮಾಡಬಹುದು. ಅಲ್ಲದೆ ಬಳಕೆದಾರರರು ಸ್ನೇಹಿತರು ಮತ್ತು ಗೆಳೆಯರೊಂದಿಗೆ ಸುಲಭವಾದ ವಿಷಯ ಮತ್ತು ಕಲ್ಪನೆಯನ್ನು ಹಂಚಿಕೊಳ್ಳುವ ಅವಕಾಶಗಳನ್ನು ನೀಡಲಿದೆ. ಇದಲ್ಲದೆ ಭದ್ರತೆಗಾಗಿ, ಫೇಸ್ ಅನ್‌ಲಾಕ್ ಫೀಚರ್ಸ್‌, ಕೆನ್ಸಿಂಗ್ಟನ್ ನ್ಯಾನೋ ಸೆಕ್ಯುರಿಟಿ ಸ್ಲಾಟ್ ಮತ್ತು ಟೈಟಾನ್ ಸಿ ಸೆಕ್ಯುರಿಟಿ ಚಿಪ್ ಅನ್ನು ಅಳವಡಿಸಲಾಗಿದೆ.

Best Mobiles in India

English summary
ASUS ROG Zephyrus G16 with Intel Core Ultra 9 launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+