Home
ಸುದ್ದಿಜಾಲ

ಆಸುಸ್ ನಿಂದ ಶೀಘ್ರವೇ ಡ್ಯುಯಲ್ ಕ್ಯಾಮೆರಾ ಫೋನ್ ಬಿಡುಗಡೆ

ಈ ಫೋನಿನ ಹಿಂಭಾಗದಲ್ಲಿ 16MP+8MP ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಜೊತೆಗೆ LED ಫ್ಲಾಷ್ ಲೈಟ್ ಅನ್ನು ಸಹ ನೀಡಲಾಗಿದೆ. ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ಅಳವಡಿಸಲಾಗಿದೆ.

By Lekhaka

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಡ್ಯುಯಲ್ ಲೆನ್ಸ್ ಕ್ಯಾಮೆರಾಗಳ ಭರಾಟೆಯೂ ಅಧಿಕವಾಗಿದ್ದು, ಪ್ರತಿ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿಗಳು ಡ್ಯುಯಲ್ ಲೆನ್ಸ್ ಕ್ಯಾಮೆರಾ ಹೊಂದಿರುವ ಫೋನ್ ಗಳನ್ನು ಲಾಂಚ್ ಮಾಡಲು ಮುಂದಾಗಿವೆ. ಇದೇ ಸಾಲಿಗೆ ಸೇರಲಿದೆ ಆಸುಸ್.

ಆಸುಸ್ ನಿಂದ ಶೀಘ್ರವೇ ಡ್ಯುಯಲ್ ಕ್ಯಾಮೆರಾ ಫೋನ್ ಬಿಡುಗಡೆ

HD+ ರೆಸಲ್ಯೂಷನ್ ಹೊಂದಿರುವ ಈ ಡ್ಯುಯಲ್ ಕ್ಯಾಮೆರಾ ಫೋನಿನ ಹೆಸರು ಇನ್ನು ಇಟ್ಟಿಲ್ಲ. ಈ ಫೊನಿನಲ್ಲಿ 18:9 ಅನುಪಾತದ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, 1.5GHz ವೇಗದ ಆಕ್ಟಾ ಕೋರ್ ಪ್ರೋಸೆಸರ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಆದರೆ ಯಾವ ಪ್ರೋಸೆಸರ್ ಎಂಬುದನ್ನು ತಿಳಿಸಿಲ್ಲ.

ಅಲ್ಲದೇ ಮೂಲಗಳ ಪ್ರಕಾರ ಈ ಫೋನ್ ಎರಡು ಆವೃತ್ತಿಯಲ್ಲಿ ದೊರೆಯಲಿದ್ದು, 3GB RAM ಮತ್ತು 32GB ಇಂಟರ್ನಲ್ ಮೆಮೊರಿಯಲ್ಲಿ ಹಾಗೂ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯೊಂದಿಗೆ ಈ ಫೋನ್ ಲಭ್ಯವಿರಲಿದೆ. ಅಲ್ಲದೇ ಎರಡು ಆವೃತ್ತಿಗಳಲ್ಲಿ ಮೊಮೊರಿ ವಿಸ್ತರಿಸಿಕೊಳ್ಳುವ ಅವಕಾಶವು ಇರಲಿದೆ.

ಈ ಫೋನಿನ ಹಿಂಭಾಗದಲ್ಲಿ 16MP+8MP ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಜೊತೆಗೆ LED ಫ್ಲಾಷ್ ಲೈಟ್ ಅನ್ನು ಸಹ ನೀಡಲಾಗಿದೆ. ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಇನ್ನು ಈ ಫೋನ್ ಆಂಡ್ರಾಯ್ಡ್ 7.0ದಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದ್ದು, 4,030 mAh ಬ್ಯಾಟರಿಯನ್ನು ಇದರಲ್ಲಿದೆ. ಗೋಲ್ಡ್, ಸ್ಟಾರ್ ಬ್ಲಾಕ್, ಲೈಟ್ ಪಿಂಕ್ ಬಣ್ಣಗಳಲ್ಲಿ ಈ ಫೋನ್ ದೊರೆಯಲಿದೆ. ಅಲ್ಲದೇ ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ನೀಡಲಾಗಿದೆ.

Source

Best Mobiles in India

English summary
The Asus smartphone is listed on TENAA with a 5.7-inch display with HD+ resolution of 1440×720 pixels.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+