Just In
- 18 hrs ago
ಒನ್ಪ್ಲಸ್ ಬ್ಯಾಂಡ್ ವಿಮರ್ಶೆ: ಮಿ ಬ್ಯಾಂಡ್ಗೆ ಟಾಂಗ್ ಕೊಡುವಂತಿದೆ ಈ ಬ್ಯಾಂಡ್!
- 1 day ago
ಅಗ್ಗದ ದರದಲ್ಲಿ ರಿಯಲ್ಮಿ C20 ಸ್ಮಾರ್ಟ್ಫೋನ್ ಅನಾವರಣ: ಫೀಚರ್ಸ್ ಏನು?
- 1 day ago
ಏರ್ಟೆಲ್ 449ರೂ. ಮತ್ತು ವಿ 449ರೂ. ಪ್ಲ್ಯಾನ್: ರೀಚಾರ್ಜ್ಗೆ ಯಾವುದು ಓಕೆ!
- 1 day ago
ಸ್ಮಾರ್ಟ್ಫೋನಿನಲ್ಲಿ ಗೂಗಲ್ ಸರ್ಚ್ ಹಿಸ್ಟರಿ ಆಫ್ ಮಾಡಲು ಈ ಕ್ರಮ ಅನುಸರಿಸಿ!
Don't Miss
- News
ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021
- Movies
ರಾಮ ಮಂದಿರ ನಿರ್ಮಾಣಕ್ಕೆ ಭಾರಿ ಮೊತ್ತ ದೇಣಿಗೆ ನೀಡಿದ ಅಮೂಲ್ಯ ದಂಪತಿ
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಸುಸ್ ಸಂಸ್ಥೆಯಿಂದ TUF ಸರಣಿಯ ಎರಡು ಹೊಸ ಲ್ಯಾಪ್‌ಟಾಪ್ ಬಿಡುಗಡೆ!
ಟೆಕ್ನಾಲಜಿ ಮುಂದುವರೆದಂತೆ ಸಾಕಷ್ಟು ವಿಭಿನ್ನ ಮಾದರಿಯ ಸ್ಮಾರ್ಟ್ ಪ್ರಾಡಕ್ಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈಗಾಗಲೇ ಹಲವು ವೈವಿಧ್ಯಮಯ ಸ್ಮಾರ್ಟ್ ಪ್ರಾಡಕ್ಟ್‌ಗಳನ್ನ ಹಲವು ಕಂಪೆನಿಗಳು ಪರಿಚಯಿಸಿವೆ. ಇವುಗಳಲ್ಲಿ ಲ್ಯಾಪ್‌ಟಾಪ್‌ಗಳು ಕೂಡ ಸೇರಿದ್ದು, ವೈವಿಧ್ಯಮಯ ಲ್ಯಾಪ್‌ಟಾಪ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಸದ್ಯ ಹಲವು ಕಂಪೆನಿಗಳು ತಮ್ಮ ಹೊಸ ವಿನ್ಯಾಸದ ಲ್ಯಾಪ್‌ಟಾಪ್‌ಗಳನ್ನ ಪರಿಚಯಿಸಿವೆ. ಇವುಗಳಲ್ಲಿ ಆಸುಸ್ ಕಂಪೆನಿ ಕೂಡ ಒಂದಾಗಿದೆ. ಈಗಾಗಲೇ ತನ್ನ ವಿವಿಧ ಮಾದರಿಯ ಲ್ಯಾಪ್‌ಟಾಪ್‌ಗಳನ್ನ ಪರಿಚಯಿಸಿರುವ ಆಸುಸ್ ಇದೀಗ ತನ್ನ ಹೊಸ ಮಾದರಿಯ ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನ ಪರಿಚಯಿಸಿದೆ.

ಹೌದು, ಆಸುಸ್ ಕಂಪೆನಿ ತನ್ನTUF ಬ್ರಾಂಡ್ ಅಡಿಯಲ್ಲಿ ಎರಡು ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸಿದೆ. ಅಲ್ಲದೆ ತನ್ನ ROG ಬ್ರಾಂಡ್ ಅಡಿಯಲ್ಲಿ ಎರಡು ಗೇಮಿಂಗ್ ಡೆಸ್ಕ್‌ಟಾಪ್‌ಗಳನ್ನು ಪರಿಚಯಿಸಿದೆ. ಸದ್ಯ ಆಸುಸ್ TUF ಸರಣಿಯಲ್ಲಿ A15 ಮತ್ತು A17 AMD ರೈಜೆನ್ 4000 ಸರಣಿಯ ಸಿಪಿಯು ಚಾಲಿತ ಲ್ಯಾಪ್‌ಟಾಪ್‌ಗಳನ್ನ ಪರಿಚಯಿಸಿದೆ. ಇನ್ನು ಈ ಲ್ಯಾಪ್‌ಟಾಪ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸದ್ಯ ಹೆಸರೇ ಸೂಚಿಸುವಂತೆ, ಆಸುಸ್ TUF A15 ಲ್ಯಾಪ್‌ಟಾಪ್ 15 ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಅಲ್ಲದೆ TUF A17 ಲ್ಯಾಪ್‌ಟಾಪ್ 17 ಇಂಚಿನ ಡಿಸ್‌ಪ್ಲೇಯನ್ನ ಒಳಗೊಂಡಿದೆ. ಇನ್ನು ಈ ಎರಡೂ ಲ್ಯಾಪ್‌ಟಾಪ್‌ಗಳು AMD ರೈಜೆನ್ 9 4900 ಹೆಚ್ ಪ್ರೊಸೆಸರ್ ಅನ್ನು ಹೊಂದಿದ್ದು, ವಿಂಡೋಸ್ 10 ಅನ್ನು ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿವೆ. ಇನ್ನು ಈ ಲ್ಯಾಪ್‌ಟಾಪ್‌ಗಳು IPS ಪ್ಯಾನೆಲ್‌ಗಳನ್ನು ಹೊಂದಿವೆ. ಇನ್ನು TUF A15 ಲ್ಯಾಪ್‌ಟಾಪ್‌ನಲ್ಲಿ 60Hz ಅಥವಾ 144Hz ರಿಫ್ರೆಶ್ ರೇಟ್ ಅನ್ನು ನೀಡಲಾಗಿದೆ. ಅಲ್ಲದೆ TUF A17 ನಲ್ಲಿ 60Hz / 120Hz ಆಯ್ಕೆಗಳನ್ನ ನೀಡಲಾಗಿದೆ.

ಇನ್ನು ಲ್ಯಾಪ್‌ಟಾಪ್‌ಗಳಲ್ಲಿನ ಗ್ರಾಫಿಕ್ಸ್ ಆಯ್ಕೆಗಳಲ್ಲಿ ಎನ್‌ವಿಡಿಯಾ ಜೀಫೋರ್ಸ್ ಆರ್‌ಟಿಎಕ್ಸ್ 2060 ವರೆಗೆ ನೀಡಲಾಗಿದೆ. ಅಲ್ಲದೆ TUF A15 ಲ್ಯಾಪ್‌ಟಾಪ್ 6GB RAM ಮತ್ತು ಎನ್‌ಯುಡಿಯಾ ಜಿಫೋರ್ಸ್ ಜಿಟಿಎಕ್ಸ್ 1660 ಟಿಐ ವರೆಗೆ ನೀಡಲಾಗಿದೆ. ಇನ್ನು TUF A17 ಲ್ಯಾಪ್‌ಟಾಪ್‌ನಲ್ಲಿ 6GB RAM ಅನ್ನು ನೀಡಲಾಗಿದೆ. ಇನ್ನು ಈ ಎರಡೂ ಲ್ಯಾಪ್‌ಟಾಪ್‌ಗಳು ಡ್ಯುಯಲ್-ಚಾನೆಲ್‌ನಲ್ಲಿ 32GB ಡಿಡಿಆರ್ 4 ಎಸ್‌ಡಿಆರ್ಎಎಂ ಅನ್ನು ಬೆಂಬಲಿಸುತ್ತವೆ. ಇದಲ್ಲದೆ ಹಾರ್ಡ್ ಡಿಸ್ಕ್ ವಿಭಾಗದಲ್ಲಿ 1TB 5400rpm SATA HDD ವರೆಗೆ ಮತ್ತು ಶೇಖರಣಾ ವಿಭಾಗದಲ್ಲಿ 1TB PCIe Gen3 SSD ವರೆಗೆ ಸಾಮರ್ಥ್ಯವನ್ನ ನೀಡಲಾಗಿದೆ.

ಸದ್ಯ ಆಸುಸ್ TUF A15 ಲ್ಯಾಪ್‌ಟಾಪ್ ಬೆಲೆ 60,990 ರೂ ಆಗಿದ್ದು, ಅಮೆಜಾನ್, ರಿಲಯನ್ಸ್ ಮತ್ತು ಆಫ್‌ಲೈನ್ ಮಳಿಗೆಗಳಲ್ಲಿ ಲಬ್ಯವಾಗಲಿದೆ. ಇನ್ನು ಈ ಲ್ಯಾಪ್‌ಟಾಪ್ ಬಾನ್ಫೈರ್ ಬ್ಲ್ಯಾಕ್ ಮತ್ತು ಫೋರ್ಟ್ರೆಸ್ ಗ್ರೇ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದಲ್ಲದೆ ಆಸುಸ್ TUF A17 ಲ್ಯಾಪ್‌ಟಾಪ್ ಬಾನ್ಫೈರ್ ಬ್ಲ್ಯಾಕ್ ಕಲರ್ ಆಯ್ಕೆಯಲ್ಲಿ ಲಬ್ಯವಾಗಲಿದ್ದು, ಇದರ ಬೆಲೆ 60,990 ರೂ. ಆಗಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190