ದೇಶಿಯ ಮಾರುಕಟ್ಟೆಯಲ್ಲಿ 'ಆಸುಸ್ ಝೆನ್‌ಬುಕ್ 14 OLED' ಲ್ಯಾಪ್‌ಟಾಪ್ ಲಾಂಚ್..ಬೆಲೆ ಎಷ್ಟು?
ಟೆಕ್ ಮಾರುಕಟ್ಟೆಯಲ್ಲಿ ಆಸುಸ್ ಕಂಪೆನಿ ತನ್ನ ಲ್ಯಾಪ್‌ಟಾಪ್ ಶ್ರೇಣಿಗಳಿಂದ ಹೆಸರು ಮಾಡಿದೆ. ಸಂಸ್ಥೆಯು ಈಗಾಗಲೇ ಝೆನ್‌ಬುಕ್ (Zenbook) ಸರಣಿಯಲ್ಲಿ ಹಲವು ಲ್ಯಾಪ್‌ಟಾಪ್ ಮಾದರಿಗಳನ್ನು ಪರಿಚಯಿಸಿದೆ. ಇದೀಗ ಸಂಸ್ಥೆಯು ಅದೇ ಸರಣಿಯ ಮುಂದುವರಿದ ಭಾಗವಾಗಿ ಆಸುಸ್ ಝೆನ್‌ಬುಕ್ 14 OLED 2024 ಲ್ಯಾಪ್‌ಟಾಪ್ ಮಾಡೆಲ್ ಅನ್ನು ಬಿಡುಗಡೆ ಮಾಡಿದೆ.
ಹೌದು, ಆಸುಸ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಇದೀಗ ಆಸುಸ್ ಝೆನ್‌ಬುಕ್ 14 OLED 2024 ಲ್ಯಾಪ್‌ಟಾಪ್ ಅನ್ನು ಲಾಂಚ್ ಮಾಡಿದೆ. ಈ ಲ್ಯಾಪ್‌ಟಾಪ್ ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್ ಸೌಲಭ್ಯ ಪಡೆದಿದ್ದು, ಡಾಲ್ಬಿ ಅಟ್ಮೋಸ್ ಸ್ಟಿರಿಯೋ ಸ್ಪೀಕರ್ ಆಯ್ಕೆಗಳನ್ನು ಒಳಗೊಂಡಿರುವ ಮೂಲಕ ಗ್ರಾಹಕರ ಗಮನ ಸೆಳೆದಿದೆ.

ವಿಂಡೋಸ್ 11 ಹೋಮ್ ಸಾಫ್ಟ್‌ವೇರ್ ಒಳಗೊಂಡಿರುವ ಈ ಲ್ಯಾಪ್‌ಟಾಪ್ 65W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಅಲ್ಲದೇ ಇದು 32GB RAM + 1TB SSD ವರೆಗೂ ಸ್ಟೋರೇಜ್ ಆಯ್ಕೆಯನ್ನು ಪಡೆದಿದೆ. ಹಾಗಾದರೇ ಇನ್ನುಳಿದಂತೆ ಆಸುಸ್ ಝೆನ್‌ಬುಕ್ 14 OLED 2024 ಲ್ಯಾಪ್‌ಟಾಪ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಆಸುಸ್ ಝೆನ್‌ಬುಕ್ 14 OLED 2024 - ಫೀಚರ್ಸ್
ಈ ನೂತನ ಲ್ಯಾಪ್‌ಟಾಪ್ 14 ಇಂಚಿನ ಸ್ಕ್ರೀನ್ ಗಾತ್ರ ಪಡೆದಿದ್ದು, OLED ಪ್ಯಾನೆಲ್‌ಗಳನ್ನು ಹೊಂದಿದೆ. ಅಲ್ಲದೇ 87% ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ 16:10 ರ ಒಂದೇ ಆಕಾರ ಅನುಪಾತವನ್ನು ಪಡೆದಿದೆ. ಬೇಸ್ ವೇರಿಯಂಟ್‌ಗಳು 60Hz ರೆಸಲ್ಯೂಶನ್ ಹೊಂದಿರುವ 1080p ಸ್ಕ್ರೀನ್ ಅನ್ನು ಹೊಂದಿವೆ. ಟಾಪ್-ಎಂಡ್ ವೇರಿಯಂಟ್‌ಗಳು 120Hz ರಿಫ್ರೆಶ್ ರೇಟ್ ಮತ್ತು ಟಚ್‌ಸ್ಕ್ರೀನ್ ಬೆಂಬಲದೊಂದಿಗೆ 2880 x 1800 ಪಿಕ್ಸೆಲ್‌ಗಳ 3K ರೆಸಲ್ಯೂಶನ್ ಸ್ಕ್ರೀನ್ ಸೌಲಭ್ಯವನ್ನು ಪಡೆದಿದೆ.

ಆಸುಸ್ ಝೆನ್‌ಬುಕ್ 14 OLED 2024 ಲ್ಯಾಪ್‌ಟಾಪ್ ಪ್ರಮುಖ ಅಂಶವೆಂದರೆ ಇತ್ತೀಚಿನ ಇಂಟೆಲ್ ಕೋರ್ ಅಲ್ಟ್ರಾ ಪ್ರೊಸೆಸರ್ ಸೌಲಭ್ಯ ಪಡೆದಿರುವುದು ಹಾಗೆಯೇ AI ಪ್ರಕ್ರಿಯೆಗಾಗಿ ಮೀಸಲಾದ NPU ಆಯ್ಕೆ ಕೂಡಾ ಪಡೆದಿರುವುದು. ಆಸುಸ್ ಸಂಸ್ಥೆಯು ಎರಡು ಚಿಪ್‌ಸೆಟ್ ಆಯ್ಕೆಗಳನ್ನು ನೀಡುತ್ತಿದ್ದು, ಅವುಗಳು ಕ್ರಮವಾಗಿ ಇಂಟೆಲ್ ಕೋರ್ ಅಲ್ಟ್ರಾ 5 125 ಹೆಚ್ ಮತ್ತು ಇಂಟೆಲ್ ಕೋರ್ ಅಲ್ಟ್ರಾ 7 155 ಹೆಚ್ ಆಗಿವೆ.
ಈ ಲ್ಯಾಪ್‌ಟಾಪ್ 32GB ವರೆಗಿನ RAM ಜೊತೆಗೆ PCIe 4.0-ಆಧಾರಿತ NVMe SSD ಯ 1TB ಸಾಮರ್ಥ್ಯದವರೆಗೆ ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. ಈ ಲ್ಯಾಪ್‌ಟಾಪ್ ಮಾಡೆಲ್‌ಗಳು ತೆಳುವಾದ ಮತ್ತು ಹಗುರವಾದ ರಚನೆ ಅನ್ನು ಹೊಂದಿವೆ. ಇನ್ನು ಲ್ಯಾಪ್‌ಟಾಪ್ ತೂಕ ಕೇವಲ 1.2 ಕೆಜಿ ಆಗಿದ್ದು, ಗರಿಷ್ಠ ದಪ್ಪ 15 ಮಿಮೀ ಆಗಿದೆ.
ಈ ಹೊಸ ಲ್ಯಾಪ್‌ಟಾಪ್ ಒಂದು USB-A 3.2 ಪೋರ್ಟ್, ಒಂದು HDMI ಪೋರ್ಟ್ ಹಾಗೂ 3.5mm ಹೆಡ್‌ಫೋನ್ ಜ್ಯಾಕ್ ಸೌಲಭ್ಯ ಪಡೆದಿದೆ. ಜೊತೆಗೆ ಇದು ಇನ್‌ಫ್ರಾರೆಡ್ ವೆಬ್‌ಕ್ಯಾಮ್ ಮತ್ತು ಡಾಲ್ಬಿ ಅಟ್ಮಾಸ್ ಸ್ಟೀರಿಯೋ ಸ್ಪೀಕರ್ ಸೌಲಭ್ಯ ಒಳಗೊಂಡಿದೆ. ಇನ್ನು ಈ ಸರಣಿಯ ಎಲ್ಲಾ ಮಾದರಿಗಳು ವಿಂಡೋಸ್ 11 ಹೋಮ್ ಆವೃತ್ತಿ ಅನ್ನು ಪಡೆದಿವೆ.
ಬೆಲೆ ಎಷ್ಟು ಹಾಗೂ ಲಭ್ಯತೆ
ಝೆನ್‌ಬುಕ್ 14 OLED (UX3405MA-PZ552WS) ಮಾಡೆಲ್ ಬೆಲೆ 99,990ರೂ. ಆಗಿದೆ
ಝೆನ್‌ಬುಕ್ 14 OLED (UX3405MA-QD752WS) ಮಾಡೆಲ್ ಬೆಲೆ 1,09,990ರೂ. ಆಗಿದೆ
ಇನ್ನು ಈ ಲ್ಯಾಪ್‌ಟಾಪ್‌ಗಳು ಅಮೆಜಾನ್, ಫ್ಲಿಪ್‌ಕಾರ್ಟ್, ಆಸುಸ್ ಆನ್‌ಲೈನ್ ಸ್ಟೋರ್, ರಿಲಯನ್ಸ್ ಡಿಜಿಟಲ್ ಮತ್ತು ಇತರ ಆಫ್‌ಲೈನ್ ರಿಟೇಲ್ ಸ್ಟೋರ್‌ಗಳಲ್ಲಿ ಜನವರಿ 31, 2024 ರಿಂದ ಖರೀದಿಗೆ ಲಭ್ಯ ಆಗಲಿದೆ.


Click it and Unblock the Notifications








