ಅಸೂಸ್ ಅತ್ಯಾಕರ್ಷಕ ಡಿವೈಸ್ ಜೆನ್‌ಫೋನ್ 4 ಸದ್ಯದಲ್ಲಿಯೇ ಬಿಡುಗಡೆ
ಸದ್ಯದಲ್ಲಿಯೇ ಅಸೂಸ್ ಜೆನ್‌ಫೋನ್ 4 ಶ್ರೇಣೀಯ ಡಿವೈಸ್‌ಗಳನ್ನು ಲಾಂಚ್ ಮಾಡಲಿದ್ದು ಮಾಧ್ಯಮ ಆಹ್ವಾನವನ್ನು ಈಗಾಗಲೇ ಅದು ಕಳುಹಿಸಿದೆ.
ಅಸೂಸ್ ಜೆನ್‌ಫೋನ್ 4 ಮ್ಯಾಕ್ಸ್ ಅನ್ನು ಲಾಂಚ್ ಮಾಡಿದ್ದು ಮುಂಬರುವ ದಿನಗಳಲ್ಲಿ ಕಂಪೆನಿಯು ಇನ್ನಷ್ಟು ಡಿವೈಸ್‌ಗಳನ್ನು ಲಾಂಚ್ ಮಾಡುವುದು ಖಚಿತವಾಗಿದೆ. ಅಸೂಸ್ ಜೆನ್‌ಫೋನ್4, ಜೆನ್‌ಫೋನ್ 4 ಸೆಲ್ಫಿ, ಜೆನ್‌ಫೋನ್ 4 ಪ್ರೊ ಮತ್ತು ಜೆನ್‌ಫೋನ್ 4 ವಿಯನ್ನು ಈ ವರ್ಷ ಲಾಂಚ್ ಮಾಡಲಿದೆ.

ಸಪ್ಟೆಂಬರ್ 21 ರಂದು ನಡೆಯುವ ಲಾಂಚ್ ಈವೆಂಟ್‌ಗಾಗಿ ಅಸೂಸ್ ಮಾಧ್ಯಮ ಆಮಂತ್ರಣಗಳನ್ನು ಈಗಾಗಲೇ ನೀಡಿದೆ. ಇದೇ ಈವೆಂಟ್‌ನಲ್ಲಿ ಜೆನ್‌ಫೋನ್ 4ವಿ ಯನ್ನು ಕಂಪೆನಿ ಲಾಂಚ್ ಮಾಡಲಿದೆ. ಡ್ಯುಯಲ್ ಲೆನ್ಸ್ ರಿಯರ್ ಕ್ಯಾಮೆರಾವನ್ನು ಹೊಂದಿರುವ ಡಿವೈಸ್ ಇದಾಗಿದ್ದು ಇದಕ್ಕೂ ಮುನ್ನ ಆಗಸ್ಟ್ 19 ರಂದು ನಡೆಯುವ ಈವೆಂಟ್ ಆಹ್ವಾನವನ್ನು ಕಳುಹಿಸಿದೆ.
ಈ ಹಿಂದೆ ತೋರಿಸಿರುವ ಟೀಸರ್ ಚಿತ್ರಗಳಂತೆಯೇ ಜೆನ್‌ಫೋನ್ 4 ಶ್ರೇಣಿಯ ಫೋನ್‌ಗಳು ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ಪಡೆದುಕೊಳ್ಳಲಿವೆ. ಮುಂಬರಲಿರುವ ಜೆನ್‌ಫೋನ್ 4 ಶ್ರೇಣಿಯ ಡಿವೈಸ್‌ಗಳಲ್ಲಿ ಈ ಡ್ಯುಯಲ್ ರಿಯರ್ ಕ್ಯಾಮೆರಾಗಳೇ ಹೆಚ್ಚು ಆಕರ್ಷಣೀಯ ಅಂಶ ಎಂದೆನಿಸಿದೆ.
ಅಸೂಸ್ ಲಾಂಚ್ ಮಾಡಿರುವ ಜೆನ್‌ಫೋನ್ 4 ಪ್ರೊ ಡ್ಯುಯಲ್ ರಿಯರ್ ಕ್ಯಾಮೆರಾವನ್ನು ಹೊಂದಿದ್ದು ಆಪ್ಟಿಕಲ್ ಝೂಮ್ ಇದರಲ್ಲಿದೆ. ಜೆನ್‌ಫೋನ್ 3 ಜೂಮ್ ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿರುವ ಡಿವೈಸ್‌ನಂತೆಯೇ ಇದು ಹೋಲುತ್ತಿದೆ. ಪ್ರೊ ಮಾಡೆಲ್ ಅತ್ಯಾಕರ್ಷಕ ವಿಶೇಷತೆಗಳನ್ನು ಒಳಗೊಂಡಿದ್ದು ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 835 ಸಾಕ್ ಪೇರ್ ಆಗಿರುವ 6 ಜಿಬಿ RAM ಮತ್ತು 64 ಜಿಬಿ ಸಂಗ್ರಹಣೆಯನ್ನು ಫೋನ್ ಹೊಂದಿದೆ.
ಸದ್ಯಕ್ಕೆ ನಮಗೆ ಇಷ್ಟೇ ಮಾಹಿತಿ ಲಭ್ಯವಿದ್ದು ಮುಂಬರಲಿರುವ ಜೆನ್‌ಫೋನ್ 4 ಸಿರೀಸ್ ಸ್ಮಾರ್ಟ್‌ಫೋನ್‌ಗಳ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ನಮಗೆ ಸಾಕಷ್ಟು ಮಾಹಿತಿ ದೊರಕುತ್ತಿದ್ದಂತೆಯೇ ನಾವು ನಿಮಗೆ ಅಪ್‌ಡೇಟ್ ಮಾಡುತ್ತಿರುತ್ತೇವೆ.


Click it and Unblock the Notifications








