Asus : ಆಸೂಸ್ ಮ್ಯಾಕ್ಸ್ ಪ್ರೊ M1 ಈಗ ಆಂಡ್ರಾಯ್ಡ್10 ಓಎಸ್ ಗೆ ಬಡ್ತಿ!
ಈಗಾಗ್ಲೆ ಸ್ಮಾರ್ಟ್‌ಫೋನ್ ವಲಯದಲ್ಲೂ ಸೈ ಎನಿಸಿಕೊಂಡಿರುವ ಆಸೂಸ್ ಕಂಪೆನಿ ತನ್ನ ಮ್ಯಾಕ್ಸ್‌ಪ್ರೊ M1 ಸ್ಮಾರ್ಟ್‌ಫೋನ್ ಅನ್ನು ಆಂಡ್ರಾಯ್ಡ್10 ಗೆ ಆಪ್‌ಡೇಟ್ ಮಾಡಿದ್ದು, ಹೊಸ ಆಪ್‌ಡೇಟ್ ಬೀಟಾ ವರ್ಷನ್ ನಲ್ಲಿ ಲಭ್ಯವಿದೆ. ಸದ್ಯ ಈ ಹೊಸ ನವೀಕರಣವು ಇತ್ತೀಚಿನ ಆಂಡ್ರಾಯ್ಡ್ 10 ಆಪರೇಟಿಂಗ್ ಸಿಸ್ಟಮ್ ಅನ್ನು ಆಧರಿಸಿದ್ದು, ಇತ್ತೀಚೆಗೆ ಆಸೂಸ್ ROG ಫೋನ್ 2 ನಲ್ಲೂ ಆಂಡ್ರಾಯ್ಡ್ 10 ಬೀಟಾ 6 ಆಪ್‌ಡೇಟ್ ಅನ್ನ ಹೊರತಂದಿದೆ.

ಹೌದು, ತೈವಾನ್ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್ ಕಂಪೆನಿ ಆಸೂಸ್ ತನ್ನ ಮ್ಯಾಕ್ಸ್ ಪ್ರೊ M1 ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಆಂಡ್ರಾಯ್ಡ್ 10 ಬೀಟಾ ಅಪ್‌ಡೇಟ್ ಸಾಫ್ಟ್‌ವೇರ್ ಅನ್ನು WW-17.2017.1911.407 ಗೆ ಹೆಚ್ಚಿಸಿದ್ದು, ಇದರ ಫರ್ಮ್‌ವೇರ್ ಗಾತ್ರವು 1.6GB ಆಗಿದೆ. ಈ ಬೀಟಾ ಆವೃತ್ತಿಯ ನವೀಕರಣವು ಆಂಡ್ರಾಯ್ಡ್ 9 ಓಎಸ್ ಆವೃತ್ತಿಯೊಂದಿಗೆ WW SKU ಡಿವೈಸ್‌ಗೆ ಮಾತ್ರ ಅನ್ವಯವಾಗಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಇನ್ನು ಮ್ಯಾಕ್ಸ್ ಪ್ರೊ ಎಂ 1 ಸ್ಮಾರ್ಟ್‌ಫೋನ್ ನಲ್ಲಿ ಆಂಡ್ರಾಯ್ಡ್ 10 ಆಧಾರಿತ ಬೀಟಾ ಅಪ್‌ಡೇಟ್ ನಂತರ ಯುಐ ವಿನ್ಯಾಸದಲ್ಲಿ ಬದಲಾವಣೆಯಾಗಲಿದೆ. ಇದಲ್ಲದೆ ಹೊಸ ಸಾಫ್ಟ್‌ವೇರ್ ಆಪ್‌ಡೇಟ್ ವರ್ಷನ್‌ನಿಂದ ಸಿಸ್ಟಮ್-ವೈಡ್ ಡಾರ್ಕ್ ಮೋಡ್, ರಿ ಕ್ರಿಯೆಷನ್ ಐಕಾನ್, ಅನಿಮೇಷನ್ ಮತ್ತು ಗೆಸ್ಚರ್ ನ್ಯಾವಿಗೇಷನ್ ಬೆಂಬಲವನ್ನು ನೀಡಲಿದೆ. ಜೊತೆಗೆ ಸ್ಮಾರ್ಟ್‌ಫೋನ್‌ನಲ್ಲಿ ಹೊಸ ವಿನ್ಯಾಸದ ಫೀಚರ್ಸ್‌ಗಳು ಲಭ್ಯವಾಗಲಿದೆ.

ಸದ್ಯ ಮ್ಯಾಕ್ಸ್ ಪ್ರೊ M1, 1080 × 2160 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರುವ 5.99-ಇಂಚಿನ ಐಪಿಎಸ್ ಎಲ್‌ಸಿಡಿ ಹೊಂದಿರುವ ಫೂಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 636 SoC ಪ್ರೊಸೆಸರ್ ಹೊಂದಿದ್ದು, ಇನ್ಮುಂದೆ ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್ 13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಆಳದ ಸಂವೇದಕವನ್ನು ಹೊಂದಿರುವ ಡ್ಯುಯಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನ ಹೊಂದಿದೆ.

ಈ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿ ಪ್ಯಾಕ್‌ಆಪ್ ಹೊಂದಿದೆ. ಇದಲ್ಲದೆ ಇದು ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಹೊಂದಿದ್ದು,ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 802.11 ಬಿ / ಜಿ / ಎನ್, ಬ್ಲೂಟೂತ್ 5.0, ಜಿಪಿಎಸ್, 4 ಜಿ ಎಲ್ ಟಿಇ ಮತ್ತು ಮೈಕ್ರೋ-ಯುಎಸ್ಬಿ 2.0 ಪೋರ್ಟ್ ಅನ್ನು ಬೆಂಬಲಿಸುತ್ತದೆ. ಸದ್ಯ ಆಂಡ್ರಾಯ್ಡ್10 ಗೆ ಆಪ್ಡೇಟ್ ಆದ ಸ್ಮಾರ್ಟ್‌ಫೋನ್ ಭಾರತ ಮತ್ತು ಪ್ರಾನ್ಸ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಬಜೆಟ್ ಬೆಲೆಯಲ್ಲಿ ಖರೀದಿಸಬಹುದಾಗಿದೆ.


Click it and Unblock the Notifications








