Home
ಸುದ್ದಿಜಾಲ

ಮಂಗಳೂರಿನ ಗ್ರಾಹಕರ ಹಣ ಹಾಸನದಲ್ಲಿ ಡ್ರಾ!...ಇದು ಸ್ಕಿಮ್ಮಿಂಗ್ ಕರಾಮತ್ತು!!

ಐಸಿಐಸಿಐ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಮಂಗಳೂರಿನ ವಿಜಯಾ ಬಿ ಎಂಬುವವರ ಖಾತೆಯಿಂದ ಹಾಸನದ ಎಟಿಎಂ ಒಂದರಲ್ಲಿ ಅ. 17ರಂದು ಬೆಳಗ್ಗೆ 9.45ಕ್ಕೆ 6,000 ರೂ. ವಿತ್‌ಡ್ರಾ ಆಗಿರುವ ಬಗ್ಗೆ ಅವರಿಗೆ ಸಂದೇಶ ಬಂದಿದೆ. ಆದರೆ, ವಿಜಯಾ ಬಿ ಅವರು ಹಾಸನಕ್ಕೆ ಹೋಗಿ ಎಷ್ಟೋ ವರ್ಷಗಳಾಗಿತ್ತು. ಆದರೂ ಅವರ ಖಾತೆಯಿಂದ ಹಣವನ್ನು ಅಲ್ಲಿ ತೆಗೆಯಲಾಗಿದೆ.!

ಹೌದು, ಇಂತಹ ಒಂದು ಘಟನೆ ಜರುಗಿದ ನಂತರ 'ನನ್ನ ಖಾತೆಯನ್ನು ಅಪರಿಚಿತರು ಹ್ಯಾಕ್ ಮಾಡಿ ವಂಚಿಸಿದ್ದಾರೆ' ಎಂದು ವಿಜಯಾ ಬಿ ಅವರು ಸೈಬರ್ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇಲ್ಲಿ ಮತ್ತೊಂದು ಆಶ್ಚರ್ಯವೆಂದರೆ, ಹೀಗೆಯೇ ಹಣ ಕಳೆದುಕೊಂಡಿರುವ ಸಂಬಂಧ ಈಗಾಗಲೇ ನಾಲ್ವರು ನಗರದ ಸೈಬರ್ ಕ್ರೈಮ್ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಮಂಗಳೂರಿನ ಗ್ರಾಹಕರ ಹಣ ಹಾಸನದಲ್ಲಿ ಡ್ರಾ!...ಇದು ಸ್ಕಿಮ್ಮಿಂಗ್ ಕರಾಮತ್ತು!!

ಇನ್ನು ಈ ಪ್ರಕರಣಗಳನ್ನು ಬೆನ್ನತ್ತಿದ ಪೊಲೀಸರಿಗೆ ಇದು ಸ್ಕಿಮ್ಮಿಂಗ್ ಜಾಲ ಎಂದು ತಿಳಿದುಬಂದಿದೆ. ಬೇರೆಡೆ ಕುಳಿತು ಹಣ ಲಪಟಾಯಿಸುವ ಈ ಜಾಲ ಈಗ ಮಂಗಳೂರು ಸೇರಿದಂತೆ ಹಲವು ಜಿಲ್ಲಾ ಕೇಂದ್ರಗಳಿಗೂ ವ್ಯಾಪಿಸಿರುವುದು ಬೆಳಕಿಗೆ ಬಂದಿದೆ. ಹಾಗಾದರೆ,ಏನಿದು ಸ್ಕಿಮ್ಮಿಂಗ್ ಜಾಲ? ಹಣವನ್ನು ಹೇಗೆ ಎಗರಿಸುತ್ತಾರೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ವಂಚನೆ ನಡೆದಿರುವುದು ನಿಜ

ವಂಚನೆ ನಡೆದಿರುವುದು ನಿಜ

ಮಂಗಳೂರು ನಗರದಲ್ಲಿ ಎಟಿಎಂಗಳನ್ನು ಗುರುತಿಸಿ ನಕಲಿ ಚಿಪ್‌ ಹಾಗೂ ಸ್ಪೈ ಕೆಮರಾ ಇರಿಸಿ ಗ್ರಾಹಕರ ಮಾಹಿತಿ ಕದ್ದಿರುವುದು ಹಾಗೂ ಬಳಿಕ ಬೇರೆಡೆಯಿಂದ ಹಣ ಡ್ರಾ ಮಾಡಿರುವುದು ಗಮನಕ್ಕೆ ಬಂದಿದೆ. ಎಲ್ಲ ಕಡೆಯೂ ಮುಂಜಾನೆ ಹೊತ್ತಿನಲ್ಲಿಯೇ ಖದೀಮರು ಚಿಪ್‌ ಮತ್ತು ಸ್ಪೈ ಕೆಮರಾ ಅಳವಡಿಸಿರುವುದು ಬೆಳಕಿಗೆ ಬಂದಿದೆ ಎಂದು ಮಂಗಳೂರು ಸೈಬರ್ ಠಾಣೆಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಹಾಗಾದರೆ ಸ್ಕಿಮ್ಮಿಂಗ್ ಎಂದರೇನು?

ಹಾಗಾದರೆ ಸ್ಕಿಮ್ಮಿಂಗ್ ಎಂದರೇನು?

ಸ್ಕಿಮ್ಮಿಂಗ್ ಒಂದು ಬಗೆಯ ಬಿಳಿ ಕಾಲರ್ ಅಪರಾಧ. ಶ್ರಮವಿಲ್ಲದೆ ದೂರದಲ್ಲಿ ಕುಳಿತು ಯಾರ ಗಮನಕ್ಕೂ ಬಾರದೆ ಇನ್ನೊಬ್ಬರ ಹಣವನ್ನು ದೋಚುವುದು ಈ ಅಪರಾಧದ ವೈಶಿಷ್ಟ್ಯ.ಎಟಿಎಂ ಯಂತ್ರಕ್ಕೆ ರಹಸ್ಯವಾಗಿ ಮಾಹಿತಿ ಸೋರಿಕೆ ಮಾಡುವ ಉಪಕರಣ ಅಳವಡಿಸಿ ಬೇರೆ ಕಡೆ ಕುಳಿತು ಗ್ರಾಹಕರ ಖಾತೆಯಿಂದ ಹಣ ಲಪಟಾಯಿಸುವ ವಂಚನೆಯನ್ನು ಸೈಬರ್ ಅಪರಾಧ ಪರಿಭಾಷೆಯಲ್ಲಿ 'ಸ್ಕಿಮ್ಮಿಂಗ್' ಎಂದು ಕರೆಯುತ್ತಾರೆ.

ಸ್ಕಿಮ್ಮಿಂಗ್ ಒಂದು ಉಪಕರಣ.

ಸ್ಕಿಮ್ಮಿಂಗ್ ಒಂದು ಉಪಕರಣ.

ಸ್ಕಿಮ್ಮಿಂಗ್ ಒಂದು ಕಾರ್ಡ್‌ ರೀಡರ್‌ ಉಪಕರಣವಾಗಿದ್ದು, ಆಧುನಿಕ ತಂತ್ರಜ್ಞಾನದ ಮೂಲಕ ಡೆಬಿಟ್ ಅಥವಾ ಕ್ರೆಡಿಟ್‌ ಕಾರ್ಡ್‌ ಬಳಕೆದಾರರ ಡೇಟಾಗೆ ಕನ್ನ ಹಾಕಲಾಗುತ್ತಿದೆ. ಸ್ಕಿಮ್ಮಿಂಗ್ ಉಪಕರಣದ ಸಹಾಯದಿಂದ ಕಾರ್ಡ್‌ ಮಾಹಿತಿ ಪಡೆದು ಅದೇ ರೀತಿಯ ಡ್ಯೂಪ್ಲಿಕೇಟ್ ಎಟಿಎಂ ಕಾರ್ಡ್ ತಯಾರಿಸಿ ಹಣ ಎಗರಿಸಲಾಗುತ್ತದೆ. ಬ್ಯಾಂಕ್‌ ಎಟಿಎಂ ಮೆಶಿನ್‌ಗೆ ರಹಸ್ಯವಾಗಿ ಅಳವಡಿಸುವ ಕ್ಯಾಮೆರಾ ಅವರಿಗೆ ನಿಮ್ಮ ಪಿನ್ ಮಾಹಿತಿಯನ್ನು ಕದಿಯುತ್ತಾರೆ.

ಸ್ಕಿಮ್ಮಿಂಗ್ ಉಪಕರಣ ಹೇಗಿರುತ್ತದೆ?

ಸ್ಕಿಮ್ಮಿಂಗ್ ಉಪಕರಣ ಹೇಗಿರುತ್ತದೆ?

ನೀವು ಎಟಿಎಂಗೆ ಹೋಗಿ ಹಣ ಡ್ರಾ ಮಾಡಿದರೂ ಸಹ ನಿಮಗೆ ಅಲ್ಲಿ ಸ್ಕಿಮ್ಮಿಂಗ್ ಉಪಕರಣ ಇದೆ ಎಂಬುದೇ ಗೊತ್ತಾಗುವುದಿಲ್ಲ. ಏಕೆಂದರೆ, ನೀವು ಎಟಿಎಂ ಮಷಿನ್‌ನಲ್ಲಿ ಕಾರ್ಡ್ ಹಾಕುವ ಜಾಗದಲ್ಲಿಯೇ ಈ ಉಪಕರಣವನ್ನು ಅಳವಡಿಸಿರುತ್ತಾರೆ. (ಮೇಲಿನ ಚಿತ್ರದಲ್ಲಿ ಹೇಗೆ ಎಂಬುದನ್ನು ಒಮ್ಮೆ ನೋಡಿ.)ಇದರಲ್ಲಿರುವ ಮೆಮೊರಿ ಕಾರ್ಡ್‌ ಸ್ವೆಪ್‌ ಆಗುವ ಪ್ರತಿ ಎಟಿಎಂ ಕಾರ್ಡಿನ ವಿವರಗಳನ್ನು ದಾಖಲಿಸಿಕೊಳ್ಳುತ್ತದೆ. ಎಟಿಎಂ ಮೆಶಿನ್ ಕೀ ಬೋರ್ಡ್‌ನ ಮೇಲ್ಭಾಗದಲ್ಲಿ ಪಿನ್‌ ಕ್ಯಾಮೆರಾ ಇರುವ ಮೌಲ್ಡಿಂಗ್ ಅನ್ನು ಕಳ್ಳರು ಅಳವಡಿಸುತ್ತಾರೆ.

ಮೋಷನ್ ಸೆನ್ಸರ್ ಇರಬಹುದು.!

ಮೋಷನ್ ಸೆನ್ಸರ್ ಇರಬಹುದು.!

ಎಟಿಎಂ ನಂಬರ್ ಒತ್ತುವ ನ್ಯೂಮರಿಕ್ ಪ್ಯಾಡ್‌ ಮೇಲೆ ಪಾಸ್‌ವರ್ಡ್‌ ಎಂಟ್ರಿ ಮಾಡುವುದನ್ನು ಗ್ರಹಿಸಲು ಅದರ ಮೇಲ್ಭಾಗದಲ್ಲೇ ಟೇಪ್‌ ಅಂಟಿಸಿರುವ ಕ್ಯಾಮರಾ ಸಹಿತ ಮತ್ತೊಂದು ಉಪಕರಣವನ್ನು ಅಳವಡಿಸಿರುವ ಬಗ್ಗೆ ಕೂಡ ಮಾಹಿತಿ ಇದೆ. ಇದು ನಿಮ್ಮ ಪಾಸ್‌ವರ್ಡ್ ಅನ್ನು ನೆನಪಿಟ್ಟುಕೊಳ್ಳುತ್ತದೆ. ಇದರಿಂದ ವಂಚಕರು ಕ್ಯಾಮೆರಾವೊಮದನ್ನು ಅಳವಡಿಸದೇ ಇದ್ದರೂ ನಿಮ್ಮ ಪಾಸ್‌ವರ್ಡ್ ಅವರ ಪಾಲಾಗಬಹುದು.

ಸ್ಕಿಮ್ಮಿಂಗ್‌ನಿಂದ ಬಚಾವಾಗುವುದು ಹೇಗೆ?

ಸ್ಕಿಮ್ಮಿಂಗ್‌ನಿಂದ ಬಚಾವಾಗುವುದು ಹೇಗೆ?

ಸ್ಕಿಮ್ಮಿಂಗ್ ಉಪಕರಣದ ಸಹಾಯದಿಂದ ಕಾರ್ಡ್‌ ಮಾಹಿತಿ ಪಡೆದರೂ ಕೂಡ ಪಾಸ್‌ವರ್ಡ್‌ ಇಲ್ಲದೇ ಖದೀಮರಿಗೆ ಹಣ ಡ್ರಾ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಅವರು ಕ್ಯಾಮೆರಾವನ್ನು ಎಲ್ಲಾದರೂ ಮುಚ್ಚಿಟ್ಟಿರಬಹುದು. ಹಾಗಾಗಿ, ಯಾವುದೇ ಕಾರಣಕ್ಕೂ ಪಾಸ್‌ವರ್ಡ್‌ ಎಂಟ್ರಿ ಮಾಡುವ ವೇಳೆ ಇನ್ನೊಂದು ಹಸ್ತವನ್ನು ಅಡ್ಡ ಹಿಡಿದು ಪಿನ್ ಒತ್ತಿರಿ.ಎಟಿಎಂನಲ್ಲಿ ಕಾರ್ಡ್‌ ಹಾಕುವಾಗ ಕಾರ್ಡ್‌ ರೀಡರ್‌ ಗಡುಸಾಗಿರುವುದು ಅನುಭವಕ್ಕೆ ಬಂದರೆ ಹತ್ತಿರದ ಅಧಿಕಾರಿಗಳ ಗಮನಕ್ಕೆ ತನ್ನಿ.

ಅನುಮಾನಾಸ್ಪದವಾಗಿದ್ದರೆ ಚೆಕ್‌ ಮಾಡಿ!

ಅನುಮಾನಾಸ್ಪದವಾಗಿದ್ದರೆ ಚೆಕ್‌ ಮಾಡಿ!

ಎಟಿಎಂ ಯಂತ್ರದ ಮೇಲೆ ಅಥವಾ ಸುತ್ತ ಮುತ್ತ ಏನಾದರೂ ಅನುಮಾನಾಸ್ಪದ ವಸ್ತುಗಳು ಕಂಡು ಬಂದಲ್ಲಿ ಕೂಡಲೇ ಆ ಬಗ್ಗೆ ಎಚ್ಚರಿಕೆ ವಹಿಸಿ. ಅಲ್ಲಿರುವ ಸೆಕ್ಯುರಿಟಿ ಗಾರ್ಡ್ ಅನ್ನು ಕರೆದು ಈ ಬಗ್ಗೆ ಮಾಹಿತಿ ತಿಳಿಸಿ. ಮತ್ತು ಯಾವುದೇ ಕಾರಣಕ್ಕೂ ಅಲ್ಲಿ ಹಣ ತೆಗೆಯುವ ಸಾಹಸಕ್ಕೆ ಮುಂದಾಗಬೇಡಿ. ಸಿಸಿ ಕ್ಯಾಮೆರಾ ಕಾರ್ಯ ನಿರ್ವಹಿಸದಿರುವ ಎಟಿಎಂಗಳಲ್ಲಿ ಈ ರೀತಿ ನಕಲಿ ಕಾರ್ಡ್‌ ರೀಡರ್‌ ಮತ್ತು ಪಿನ್‌ ಕೆಮರಾ ಡಿವೈಸ್‌ ಅಳವಡಿಸಿ ತಮ್ಮ ಕರಾಮತ್ತು ನಡೆಸುತ್ತಾರೆ ಎಂಬುದನ್ನು ಮರೆಯದಿರಿ.

Best Mobiles in India

English summary
ATM skimming is a theft of card information, where a small device, known as a..to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+