ಹೆಂಡತಿಗೆ ಸಿಕ್ರೆಟಾಗಿ ಗಂಡನ ‘ಖಾಸಗಿ’ ಫೋಟೋ ಸೆಂಡ್ ಮಾಡಿದ ಗ್ಯಾಲೆಕ್ಸಿ ಸ್ಮಾರ್ಟ್ ಫೋನ್..! ಆಮೇಲೆ..?
ಸಾವಿರಾರು ರೂಪಾಯಿಗಳ ದುಬಾರಿ ಬೆಲೆಯ ಸ್ಮಾರ್ಟ್ ಫೋನ್ ಗಳನ್ನು ಖರೀಸಿವುದು ಅವುಗಳಿದ ಹೆಚ್ಚಿನ ಪ್ರಮಾಣದ ಸಹಾಯವನ್ನು ಪಡೆಯುವ ಸಲುವಾಗಿದೆ. ಆದರೆ ಆಂಡ್ರಾಯ್ಡ್ ಮಾರುಕಟ್ಟೆಯಲ್ಲಿ ಟಾಪ್ ಎಂಡ್ ಸ್ಮಾರ್ಟ ಪೋನ್ ಎನ್ನುವ ಖ್ಯಾತಿಯ ಪಡೆದುಕೊಂಡಿರುವ ಸ್ಯಾಮ್ ಸಂಗ್ ಗ್ಯಾಲಾಕ್ಸಿ ಸ್ಮಾರ್ಟ್ಫೋನ್ ಗಳು ತಮ್ಮ ಬಳಕೆದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ತೊಂದರೆಯನ್ನು ನೀಡುತ್ತಿವೆ.

ಬಳಕೆದಾರರು ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಿದೆ. ಅಲ್ಲದೇ ಬಳಕೆದಾರರಿಗೆ ತಿಳಿಯದೆ ಇನ್ನೊಬ್ಬರಿಗೆ ಮಾಹಿತಿಗಳನ್ನು ವಿನಿಮಯ ಮಾಡುತ್ತಿದೆ ಎನ್ನಲಾಗಿದೆ. ಈ ಸ್ಮಾರ್ಟ್ ಫೋನ್ ಗಳನ್ನು ಬಳಕೆ ಮಾಡುತ್ತಿರುವವರೇ ಈ ಕುರಿತು ಮಾಹಿತಿಯನ್ನು ಸಾಮಾಹಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಹಲವು ಮಾಧ್ಯಮಗಳು ವರದಿ ಮಾಡಿವೆ.

ಗ್ಯಾಲೆಕ್ಸಿ ಫೋನ್ ಗಳು:
ಸ್ಯಾಮ್ ಸಂಗ್ ಬಿಡುಗಡೆ ಮಾಡಿರುವ ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಮತ್ತು ಗ್ಯಾಲೆಕ್ಸಿ S8 ಸ್ಮಾರ್ಟ್ ಫೋನ್ ಗಳು ಬಳಕೆದಾರರ ಗ್ಯಾಲೆರಿಯಲ್ಲಿ ಫೋಟೋಗಳನ್ನು ಮತ್ತು ಖಾಸಗಿ ವಿಷಯಗಳನ್ನು ಬಳಕೆದಾರರ ಗಮನಗೆ ಬಾರದ ರೀತಿಯಲ್ಲಿ ಕಡಿಯುತ್ತಿವೆ ಎನ್ನಲಾಗಿದ್ದು, ಖಾಸಗಿ ಮಾಹಿತಿಗಳನ್ನು ಇನ್ನೊಬ್ಬರಿಗೆ ಅಗತ್ಯವಿಲ್ಲದಿದ್ದರೂ ಕಳುಹಿಸುತ್ತಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ಫೋಟೋಗಳನ್ನು ಕಳುಹಿಸುವ ಫೋನ್:
ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಮತ್ತು ಗ್ಯಾಲೆಕ್ಸಿ S8 ಸ್ಮಾರ್ಟ್ ಫೋನ್ ದುಬಾರಿ ಬೆಲೆಯಾಗಿದ್ದು, ಬಳಕೆದಾರರು ಹೆಚ್ಚಿನ ಬೆಲೆ ಕೊಟ್ಟು ಗುಣಮಟ್ಟದ ಫೋನ್ ಅನ್ನು ಖರೀದಿ ಮಾಡುತ್ತಿದ್ದಾರೆ. ಆದರೆ ಈ ಫೋನ್ ಗಳು ಬಳಕೆದಾರರಿಗೆ ತಿಳಿಯದಂತೆ ಅವರ ಕಾಂಟೆಕ್ಟಿನಲ್ಲಿ ಇರುವ ನಂಬರ್ ಗಳಿಗೆ ತಿಳಿದಂತೆ ಫೋಟೋಗಳನ್ನು ಸೆಂಡ್ ಮಾಡುತ್ತಿವೆ ಎನ್ನಲಾಗಿದೆ. ಈ ಅನುಭವು ಹಲವು ಮಂದಿಗೆ ಆಗಿದ್ದು, ಇದರಿಂದ ತೊಂದರೆಯನ್ನು ಅನುಭವಿಸಿದ್ದಾರೆ.

ರಿಡಿಟ್ ನಲ್ಲಿ ಮಾಹಿತಿ:
ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಮತ್ತು ಗ್ಯಾಲೆಕ್ಸಿ S8 ಸ್ಮಾರ್ಟ್ ಫೋನ್ ಗಳು ಈ ರೀತಿಯಲ್ಲಿ ಕದ್ದು ಮುಚ್ಚಿ ಫೋಟೋವನ್ನು ಕಳುಹಿಸುತ್ತಿರುವ ಕುರಿತು ರಿಡಿಟ್ ನಲ್ಲಿ ಮಾಹಿತಿಯನ್ನು ಹಂಚಿಕೊಂಡಿರುವ ಹಲವು ಮಂದಿ ತಮ್ಮ ಅನುಭವಗಳನ್ನು ದಾಖಲಿಸಿದ್ದಾರೆ. ಈ ಫೋನ್ ಗಳು ಮಾಡಿರುವ ಅವಾಂತರಗಳಿಂದ ಸಾಕಷ್ಟು ತೊಂದರೆಯನ್ನು ಅನುಭವಿಸಿರುವ ಬಗ್ಗೆ ನೋವನ್ನು ಹಂಚಿಕೊಂಡಿದ್ದಾರೆ.

ಯಾವುದೇ ರೆಕಾರ್ಡ್ ಇರುವುದಿಲ್ಲ:
ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಮತ್ತು ಗ್ಯಾಲೆಕ್ಸಿ S8 ಸ್ಮಾರ್ಟ್ ಫೋನ್ ಗಳು ಸಿಕ್ರೇಟ್ ಆಗಿ ಸೆಂಡ್ ಮಾಡುತ್ತಿರುವ ಫೋಟೋಗಳ ಬಗ್ಗೆ ಕಳುಸಿದವರಿಗೆ ಯಾವುದೇ ಮಾಹಿತಿ ಇಲ್ಲ. ಆದರೆ ಸ್ವೀಕರಿಸಿದವರಿಗೆ ಮಾತ್ರವೇ ತಿಳಿಯುತ್ತಿದೆ. ಅಲ್ಲದೇ ಕಳುಹಿಸಿದವರಿಗೆ ಯಾವುದೇ ರೆಕಾರ್ಡ್ ಇರುವುದಿಲ್ಲ ಎನ್ನಲಾಗಿದೆ. ಈ ಬಗ್ಗೆ ಹಲವರು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

ಹೆಂಡತಿಗೆ ಸಿಕ್ರೆಟ್ ಫೋಟೋ ಕಳುಹಿಸಿದ ಫೋನ್:
ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಮತ್ತು ಗ್ಯಾಲೆಕ್ಸಿ S8 ಸ್ಮಾರ್ಟ್ ಫೋನ್ ಮಾಡುತ್ತಿರುವ ಅವಂತರದ ಬಗ್ಗೆ ಹಂಚಿಕೊಂಡಿರುವ ಓರ್ವರು, ತಮ್ಮ ಸ್ಯಾಮ್ ಸಂಗ್ ಗ್ಯಾಲೆಕ್ಸಿ ಫೋನಿನಲ್ಲಿ ತೆಗೆದ ಪೋಟೋವನ್ನು ತನ್ನ ಹೆಂಡತಿಗೆ ಕಳುಹಿಸಿದ್ದು, ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ, ಇದೇ ಮಾದರಿಯಲ್ಲಿ ಆವರ ಪತ್ನಿ ಸಹ ಸ್ಯಾಮ್ ಸಂಗ್ ಗ್ಯಾಲೆಕ್ಸಿ ಸ್ಮಾರ್ಟ್ ಫೋನ್ ಬಳಸುತ್ತಿದ್ದು, ಅವರಿಗೂ ತಿಳಿದಂತೆ ತಮಗೆ ಪಿಚ್ಚರ್ ಗಳು ಬಂದಿದೆ ಎಂದಿದ್ದಾರೆ. ನಮ್ಮಿಬ್ಬರ ನಡುವೆ ಉತ್ತಮ ಬಾಂಧವ್ಯ ಇರುವುದರಿಂದ ಯಾವುದೇ ತೊಂದೆಗಳಾಗಿಲ್ಲ ಎಂದಿದ್ದಾರೆ.

ಎಚ್ಚರ:
ನೀವು ಸಹ ಸ್ಯಾಮ್ ಸಂಗ್ ಗ್ಯಾಲೆಕ್ಸಿ S9 ಮತ್ತು ಗ್ಯಾಲೆಕ್ಸಿ S8 ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿದ್ದರೇ ಎಚ್ಚರ ವಹಿಸುವುದು ಅಗತ್ಯ. ಇಲ್ಲವಾದರೆ ಮುಂದಿನ ದಿನಗಳಲ್ಲಿ ನೀವು ಸಹ ತೊಂದರೆಗೆ ಸಿಲುಕಬೇಕಾಗುತ್ತದೆ, ಸ್ಯಾಮ್ ಸಂಗ್ ಸಹ ಈ ಬಗ್ಗೆ ಎಚ್ಚರ ವಹಿಸಲು ಮುಂದಾಗಿದ್ದು, ಶೀಘ್ರವೇ ಈ ತೊಂದರೆಯನ್ನು ಬಗೆಹರಿಸುವುದಾಗಿ ತಿಳಿಸಿದೆ.


Click it and Unblock the Notifications








