ಆಡಿಯೋ ವಿಜ್ಞಾನಿ, ಬೋಸ್‌ ಕಂಪೆನಿಯ ಸಂಸ್ಥಾಪಕ ಅಮರ್‌ ಬೋಸ್‌ ನಿಧನ

By Ashwath
|

ಉತ್ತಮ ಧ್ವನಿ ಹೊರಡಿಸಲು ಸ್ಪೀಕರುಗಳು ದೊಡ್ಡದಾಗಿರಬೇಕೆಂಬ ತಪ್ಪುಕಲ್ಪನೆಯನ್ನುತೆಗೆದು ಹಾಕಿ ಸಣ್ಣ ಸ್ಪೀಕರ್‌ಗಳಿಂದಲೇ ಗುಣಮಟ್ಟದ ಧ್ವನಿಯನ್ನು ಆಲಿಸಬಹುದು ಎಂದು ಜಗತ್ತಿಗೆ ತೋರಿಸಿಕೊಟ್ಟ ಬೋಸ್ ಕಂಪೆನಿಯ ಮಾಜಿ ಮುಖ್ಯಸ್ಥ ಭಾರತೀಯ ಸಂಜಾತ ಅಮರ್‌ ಬೋಸ್‌ ಅಮೆರಿಕದಲ್ಲಿ ನಿಧನರಾಗಿದ್ದಾರೆ.

ಅಮರ್‌ ಬೋಸ್‌ ಅಮೆರಿಕದ ಫಿಲಡೆಲ್ಫಿಯಾದಲ್ಲಿ 1929, ನವೆಂಬರ್‌ 2ರಂದು ಜನಿಸಿದ್ದರು. ಅಮರ್ ಬೋಸ್‌ರವರ ತಂದೆ ಬಂಗಾಳ ಮೂಲದ ನಾನಿ ಗೋಪಾಲ್ ಬೋಸ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಬ್ರಿಟಿಷರಿಂದ ತಪ್ಪಿಸಿಕೊಳ್ಳಲು ಅಮೆರಿಕದ ಫಿಲಡೆಲ್‌ಫಿಯಾಗೆ ಹೋದವರು ಅಲ್ಲಿಯೇ ನೆಲೆಸಿದರು.

ಆಡಿಯೋ  ವಿಜ್ಞಾನಿ, ಬೋಸ್‌ ಕಂಪೆನಿಯ ಸಂಸ್ಥಾಪಕ ಅಮರ್‌ ಬೋಸ್‌ ನಿಧನ

ಎಳೆಯ ವಯಸ್ಸಿನಲ್ಲೇ ರೇಡಿಯೋ ರಿಪೇರಿ ಮಾಡಿ ದುಡಿಯಲು ಪ್ರಾರಂಭಿಸಿದ ಅಮರ್‌ ಬೋಸ್‌,ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಎಂ ಐ ಟಿ) ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಅಧ್ಯಯನ ಮಾಡಿ ಅಲ್ಲಿಯೇ ಸಹಾಯಕ ಅಧ್ಯಾಪಕರಾಗಿ ತಮ್ಮ ವೃತ್ತಿಯನ್ನು ಆರಂಭಿಸಿದರು. ಸಂಗೀತಾ ಪ್ರಿಯರಾಗಿದ್ದ ಬೋಸ್‌ 1956 ಇಸವಿಯಲ್ಲಿ ಒಂದು ಸ್ಟೀರಿಯೋ ಖರೀದಿಸಿದ್ದರು. ಅದರ ಕಳಪೆ ಧ್ವನಿ ಬೋಸ್‌ರನ್ನು ನಿರಾಶೆಗೊಳಿಸಿತು. ಅದೇ ಅವರ ಸಂಶೋಧನೆಗಳಿಗೆ ಪ್ರೇರಣೆಯಾಗಿ 1964ರಲ್ಲಿ ಬೋಸ್ ಕಂಪೆನಿಯನ್ನು ಸ್ಥಾಪಿಸಿದರು.

1968ರಲ್ಲಿ ಇವರು ಅಭಿವೃದ್ದಿಪಡಿಸಿದ 901 ಮಾಲಿಕೆಯ ಧ್ವನಿವರ್ಧಕಗಳು ಇಡೀ ಉದ್ಯಮಕ್ಕೇ ಮಾದರಿಯಾಯಿತು. ಮು೦ದೆ wave, auditioner, lifestyle, noise killer ಮು೦ತಾದ ಹೆಸರಿನಲ್ಲಿ ಹೊಸ ಹೊಸ ರೀತಿಯ ವಿಶ್ವದರ್ಜೆಯ ಧ್ವನಿವರ್ಧಕ, ಸ್ಪೀಕರ್, ಹೆಡ್ ಫೋನ್, ಹೋ೦ ಥಿಯೇಟರ್, ಕಾರ್ ಸ್ಟೀರಿಯೋ...ಧ್ವನಿ ಮಾದ್ಯಮದಲ್ಲಿ ಏನಿದೆಯೋ ಎಲ್ಲ ರೀತಿಯ ಉಪಕರಣಗಳನ್ನು ಶ್ರೇಷ್ಠ ಗುಣಮಟ್ಟದಲ್ಲಿ ಉತ್ಪಾದಿಸಿ ಉದ್ಯಮದಲ್ಲಿ ಅತೀ ಎತ್ತರಕ್ಕೆ ಏರಿದರು. ಎತ್ತರಕ್ಕೆ ಏರಿದ ಪರಿಣಾಮ 2007ರಲ್ಲಿ ಫೋರ್ಬ್ಸ್ ಸ೦ಸ್ಥೆ ಇವರನ್ನು ವಿಶ್ವದ 271ನೆಯ ಅತೀ ಶ್ರೀಮ೦ತ ವ್ಯಕ್ತಿ ಬಿರುದು ನೀಡಿ ಗೌರವಿಸಿತು.

ಅಮರ್‌ ಬೋಸ್‌ ಅಧ್ಯಾಪನ ವೃತ್ತಿಯನ್ನು ತುಂಬಾ ಇಷ್ಟಪಟ್ಟಿದ್ದರು, ಬೋಸ್ ಕಂಪೆನಿಯ ಅಧ್ಯಕ್ಷರಾಗಿದ್ದಾಗಲೂ ಎಂ ಐ ಟಿ ವಿದ್ಯಾರ್ಥಿ‌ಗಳಿಗೆ ಅವರು ಪಾಠ ಮಾಡುತ್ತಿದ್ದರು, 2001ರಲ್ಲಿ ಪಾಠ ಮಾಡುವುದನ್ನು ನಿಲ್ಲಿಸಿದ ಬೋಸ್‌,2011ರಲ್ಲಿ ತನ್ನ ಕಂಪೆನಿಯ ಶೇರುಗಳನ್ನು ಸಹ ಎಂಐಟಿಗೆ ದಾನವಾಗಿ ನೀಡಿದ್ದರು.

ಅಮರ್‌ ಬೋಸ್‌ ನಿಧನಕ್ಕೆ ಟಾಟ ಕಂಪೆನಿಯ ಮಾಜಿ ಮುಖ್ಯಸ್ಥ ರತನ್‌ ರತನ್‌ ಟಾಟಾ ಟ್ವೀಟರ್‌ನಲ್ಲಿ ತಮ್ಮ ಕಂಬನಿ ಮಿಡಿದಿದ್ದಾರೆ.

<blockquote class="twitter-tweet blockquote"><p>My good friend Dr Amar Bose passed away today. He was respected for his sharp mind and for his humility. The world has lost a great leader.</p>— Ratan N. Tata (@RNTata2000) <a href="https://twitter.com/RNTata2000/statuses/355896273481637888">July 13, 2013</a></blockquote> <script async src="//platform.twitter.com/widgets.js" charset="utf-8"></script>

ಅಮರ್‌ ಬೋಸ್‌ರವರ ಬಾಲ್ಯ,ಸಾಧನೆಗಳ ಬಗ್ಗೆ ಮತ್ತಷ್ಟು ತಿಳಿಯಲು 2009 ಏಪ್ರಿಲ್‌ನಲ್ಲಿ ಬರಹಗಾರ ವೆಂಕಟೇಶ್ ದೊಡ್ಡಮನೆವರು ಒನ್‌ಇಂಡಿಯಾ ಕನ್ನಡದಲ್ಲಿ ಒಂದು ವಿಶೇಷವಾದ ಲೇಖನವನ್ನು ಬರೆದಿದ್ದಾರೆ. ಈ ಬರಹದ ಲಿಂಕ್‌ನ್ನು ಇಲ್ಲಿ ನೀಡಲಾಗಿದ್ದು ನೀವು ಅಮರ್‌ ಬೋಸ್‌ ರವರ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿಯಬಹುದು: ಜೀವ೦ತ ದ೦ತಕತೆ 'ಬೋಸ್' ಗೊತ್ತಾ ಬಾಸ್?

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X