ಅಮೆರಿಕಾದಂತೆ ಆಸ್ಟ್ರೇಲಿಯಾದಲ್ಲಿಯೂ ಹುವಾವೆ ಬ್ಯಾನ್..! ಕಾರಣ ಶಾಕಿಂಗ್ ಆಗಿದೆ..!

|

ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕ ಕಂಪನಿ ಹುವಾವೆ ಭಾರೀ ದೊಡ್ಡ ಮಟ್ಟದ ಸಂಕಷ್ಟಕ್ಕೆ ಗುರಿಯಾಗಿದೆ. ಈ ಹಿಂದೆಯೂ ಬಳಕೆದಾರರ ಮಾಹಿತಿಯನ್ನು ಕದಿಯುತ್ತಿದೆ ಎನ್ನುವ ಆರೋಪಕ್ಕೆ ಗುರಿಯಾಗಿದ್ದ ಹುವಾವೆ, ಅಮೆರಿಕಾದ ಸರಕಾರಿ ಕಚೇರಿಗಳಿಂದ ಬ್ಯಾನ್ ಆಗಿತ್ತು. ಈಗ ಇದೇ ಮಾದರಿಯಲ್ಲಿ ಆಸ್ಟ್ರೇಲಿಯಾದಲ್ಲಿಯೂ ಬ್ಯಾನ್ ಆಗಿದೆ. ದೇಶದಲ್ಲಿ ವೈರಸ್ ಹರಡುವಲ್ಲಿ ಹುವಾವೆ ಪಾತ್ರ ಪ್ರಮುಖವಾಗಿದೆ ಎನ್ನುವುದೇ ಕಾರಣವಾಗಿದೆ.

ಅಮೆರಿಕಾದಂತೆ ಆಸ್ಟ್ರೇಲಿಯಾದಲ್ಲಿಯೂ ಹುವಾವೆ ಬ್ಯಾನ್..! ಕಾರಣ ಶಾಕಿಂಗ್ ಆಗಿದೆ..!

ಆಸ್ಟ್ರೇಲಿಯಾ ಸರ್ಕಾರವೂ ಚೀನಾದ ಪ್ರಮುಖ ಟೆಲಿಕಾಂ ಪರಿಕರಗಳ ನಿರ್ಮಾಣ ಮತ್ತು ಸ್ಮಾರ್ಟ್‌ಫೋನ್ ನಿರ್ಮಾಣದ ಕಂಪನಿಯಾಗಿರುವ ಹುವಾವೆ ಹೊಸದಾಗಿ ಅಭಿವೃದ್ಧಿ ಪಡಿಸಿರುವ ಟೆಕ್ನಾಲಜಿಯನ್ನು ಆಸ್ಟ್ರೇಲಿಯಾಕ್ಕೆ ಆಮದು ಮಾಡಿಕೊಳ್ಳದಂತೆ ನಿರ್ಭಂದವನ್ನು ವಿಧಿಸಿದ್ದು, ಇದು ಹುವಾವೆಗೆ ದೊಡ್ಡ ಮಟ್ಟದ ಹಿನ್ನಡೆಯಾಗಲಿದೆ.

5G ನೆಟ್‌ವರ್ಕ್:

5G ನೆಟ್‌ವರ್ಕ್:

ಆಸ್ಟ್ರೇಲಿಯಾದಲ್ಲಿ 5G ನೆಟ್‌ವರ್ಕ್ ಸೇವೆಯನ್ನು ಪ್ರಾರಂಭಿಸಲು ಚೀನಾದಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿತು. ಈಗಾಗಲೇ 5G ಸೇವೆಯನ್ನು ಆರಂಭಿಸಲು ತುದಿಗಾಲಿನಿಂದಿದ್ದ ಹುವಾವೆಗೆ ಅಲ್ಲಿನ ಸರಕಾರ ಬಿಸಿ ಮುಟ್ಟಿಸಿದೆ. ಚೀನಾದಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳುವುದನ್ನು ಬ್ಯಾನ್ ಮಾಡಿದೆ.

ಹುವಾವೆಗೆ ಹಿನ್ನಡೆ:

ಹುವಾವೆಗೆ ಹಿನ್ನಡೆ:

ಹೊಸದಾಗಿ 5G ಸೇವೆಯನ್ನು ನೀಡುವ ಸಲುವಾಗಿ ನೆಟ್‌ವರ್ಕ್ ನಿರ್ಮಾಣ ಸಮಯದಲ್ಲಿ ಬೇರೆ ದೇಶದಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಸಂದರ್ಭದಲ್ಲಿ ತೀವ್ರ ತಪಾಸಣೆಯನ್ನು ಮಾಡಬೇಕಾಗುತ್ತದೆ. ಕಾರಣ ಈ ಸಂದರ್ಭದಲ್ಲಿ ಪ್ರಮುಖ ನೆಟ್ ವರ್ಕ್ಗಳು ಹ್ಯಾಕ್ ಆಗುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ಸಲಕರಣೆಗಳು ದೇಶಕ್ಕೆ ಪೂರೈಕೆ ಮಾಡಿಕೊಳ್ಳದಿರಲು ಆಸ್ಟ್ರೇಲಿಯಾ ನಿರ್ಧರಿಸಿದೆ.

ಹುವಾವೆ ಕನಸಿಗೆ ತಡೆ:

ಹುವಾವೆ ಕನಸಿಗೆ ತಡೆ:

ಈಗಾಗಲೇ ಪ್ರಮುಖ ದೇಶಗಳಲ್ಲಿ 5G ಸೇವೆಯನ್ನು ಆರಂಭಿಸುವ ತುರಾತುರಿಯಲ್ಲಿರುವ ಹುವಾವೆಗೆ ಆಸ್ಟ್ರೇಲಿಯಾದ ಈ ಹೊಸ ನಿರ್ಧಾರದಿಂದ ಆಘಾತವಾಗಿದೆ. ಆಸ್ಟ್ರೇಲಿಯಾ ಸರಕಾರವು ಈ ಬಗ್ಗೆ ಈಗಾಗಲೇ ಈ ಮೇಲ್ ಮೂಲಕ ಹುವಾವೆಗೆ ತಿಳಿದ್ದು, ಯಾವುದೇ ವಸ್ತುಗಳನ್ನು ಆಮದು ಮಾಡಿಕೊಳ್ಳದಿರಲು ಸೂಚಿಸಿದೆ.

ಭದ್ರತೆಯ ದೃಷ್ಠಿ:

ಭದ್ರತೆಯ ದೃಷ್ಠಿ:

ದೇಶದಲ್ಲಿನ ಭದ್ರತಾ ದೃಷ್ಟಿಕೋನದಿಂದ ಕೆಲ ಕಟ್ಟು ಪಾಡುಗಳನ್ನು ವಿಧಿಸಲಾಗುತ್ತಿರುವುದಾಗಿ ಎಂದು ಹುವಾವೆಗೆ ತಿಳಿಸಲಾಗಿದೆ. ರಾಷ್ಟ್ರೀಯ ನೆಟ್ವರ್ಕ್ ವ್ಯವಸ್ಥೆಗೆ ಯಾವುದೇ ಸಮಸ್ಯೆಯಾಗಬಾರದು ಎನ್ನುವುದರಿಂದ ಹುವಾವೆ 5G ನೆಟ್ವರ್ಕ್ ವ್ಯವಸ್ಥೆಗೆ ತಡೆ ಒಡ್ಡಲಾಗುತ್ತಿದೆ. ಮುಂದಿನ ದಿನದಲ್ಲಿ ಈ ಕುರಿತು ಯೋಜನೆಯೊಂದನ್ನು ಆಸ್ಟ್ರೇಲಿಯಾ ತಯಾರಿಸುತ್ತಿದೆ.

Best Mobiles in India

English summary
Australia bans Huawei over security concerns. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X