ಬಳಕೆದಾರರಿಗೆ ಮತ್ತೊಂದು ಹೊಸ ಫೀಚರ್ಸ್‌ ಪರಿಚಯಿಸಿದ ಕ್ಲಬ್‌ಹೌಸ್‌!

|

ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ಗಳಲ್ಲಿ ಕ್ಲಬ್‌ಹೌಸ್‌ ಕೂಡ ಸೇರಿದೆ. ಆಡಿಯೋ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ ಆಗಿರುವ ಕ್ಲಬ್‌ಹೌಸ್‌ ಸಾಕಷ್ಟು ಗಮನ ಸೆಳೆದಿದೆ. ಈ ವರ್ಷದ ಆರಂಭದಲ್ಲಿ ಆಂಡ್ರಾಯ್ಡ್‌ ವರ್ಷನ್‌ನಲ್ಲಿ ಲಭ್ಯವಾದ ನಂತರ ಕ್ಲಬ್‌ಹೌಸ್‌ ಪ್ರಖ್ಯಾತಿ ಗಗನದೆತ್ತರಕ್ಕೆ ಹಾರಿದೆ. ಸದ್ಯ ಬಳಕೆದಾರರ ನೆಚ್ಚಿನ ಆಡಿಯೋ ಅಪ್ಲಿಕೇಶನ್‌ ಆಗಿರುವ ಕ್ಲಬ್‌ಹೌಸ್‌ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಕ್ಲಬ್‌ಹೌಸ್‌

ಹೌದು, ಕ್ಲಬ್‌ಹೌಸ್‌ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಲೈವ್ ಕ್ಯಾಪ್ಶನ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ಈ ಹೊಸ ಫೀಚರ್ಸ್‌ ಐಒಎಸ್ ಆವೃತ್ತಿಗೆ ಮಾತ್ರ ಲಭ್ಯವಿದ್ದು, ಇದು ಆಂಡ್ರಾಯ್ಡ್‌ ಬಳಕೆದಾರರಿಗೆ ಶೀಘ್ರದಲ್ಲೇ ಲಭ್ಯವಾಗಲಿದೆ ಎನ್ನಲಾಗಿದೆ. ಸದ್ಯ ಕ್ಲಬ್‌ಹೌಸ್‌ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಈ ಫೀಚರ್ಸ್‌ ಸೇರ್ಪಡೆಯನ್ನು ಪ್ರಕಟಿಸಿದೆ. ಇನ್ನು ಈ ಹೊಸ ಫೀಚರ್ಸ್‌ ಆಡಿಯೊ ಸೆಶನ್‌ನಲ್ಲಿ ಆಟೋಮ್ಯಾಟಿಕ್‌ ಲೈವ್‌ ಟ್ರಾನ್ಸ್‌ಕ್ರಿಪ್ಶನ್‌ಗಳನ್ನು ಸೇರಿಸಲು ಅವಕಾಶ ನೀಡಲಿದೆ. ಹಾಗಾದ್ರೆ ಕ್ಲಬ್‌ಹೌಸ್‌ ಪರಿಚಯಿಸಿರುವ ಹೊಸ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಕ್ಲಬ್‌ಹೌಸ್‌

ಕ್ಲಬ್‌ಹೌಸ್‌ನ ಹೊಸ ಕ್ಲೋಸ್ಡ್ ಕ್ಯಾಪ್ಶನ್‌ ಫೀಚರ್ಸ್‌ ಆಡಿಯೊ ಸೆಶನ್‌ನಲ್ಲಿ ಆಟೋಮ್ಯಾಟಿಕ್‌ ಲೈವ್ ಟ್ರಾನ್ಸ್‌ಕ್ರಿಪ್ಶನ್‌ಗಳನ್ನು ಸೇರಿಸಲು ಅವಕಾಶ ನೀಡಲಿದೆ. ಈ ಫೀಚರ್ಸ್‌ ಸ್ಪೀಕರ್ ಅನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಬಳಕೆದಾರರಿಗೆ ಸುಲಭವಾಗಿಸುತ್ತದೆ. ಅಂದರೆ ಈ ಫೀಚರ್ಸ್‌ ವಿಕಲಚೇತನರಿಗೆ ತುಂಬಾನೆ ಸಹಕಾರಿಯಾಗಲಿದೆ. ಟ್ವಿಟರ್‌ ಸ್ಪೇಸ್‌ಗಳಲ್ಲಿ ಈಗಾಗಲೇ ಲೈವ್ ಕ್ಯಾಪ್ಶನ್‌ ಫೀಚರ್ಸ್‌ ಕಾಣಬಹುದಾಗಿದೆ.

ಕ್ಲಬ್‌ಹೌಸ್‌

ಇನ್ನು ಕ್ಲಬ್‌ಹೌಸ್‌ ಈಗಾಗಲೇ 13 ವಿವಿಧ ಭಾಷೆಗಳಿಗೆ ಬೆಂಬಲವನ್ನು ಸೇರಿಸಿದೆ. ಆದ್ದರಿಂದ, ಜನರು ವಿವಿಧ ಭಾಷೆಗಳಲ್ಲಿ ಲೈವ್ ಸಬ್‌ಟೈಟಲ್‌ ಫೀಚರ್ಸ್‌ ಬಳಸಲು ಸಾಧ್ಯವಾಗಲಿದೆ. ಈ ಭಾಷೆಗಳಲ್ಲಿ ಇಂಗ್ಲಿಷ್, ಕ್ಯಾಂಟೋನೀಸ್, ಮ್ಯಾಂಡರಿನ್ ಚೈನೀಸ್, ಯು ಚೈನೀಸ್, ಫ್ರೆಂಚ್, ಜರ್ಮನ್, ಇಟಾಲಿಯನ್, ಜಪಾನೀಸ್, ಕೊರಿಯನ್, ಸ್ಪ್ಯಾನಿಷ್, ಅರೇಬಿಕ್, ರಷ್ಯನ್ ಮತ್ತು ಟರ್ಕಿಶ್ ಭಾಷೆಗಳು ಸೇರಿವೆ. ಆದರೆ ಈ ಭಾಷೆಗಳು ಬೀಟಾ ಆವೃತ್ತಿಯಲ್ಲಿ ಲಭ್ಯವಿವೆ ಎಂದು ವರದಿಯಾಗಿದೆ. ಆದ್ದರಿಂದ ಕ್ಲಬ್‌ಹೌಸ್ ಎಂಜಿನಿಯರ್ ಪ್ರಕಾರ, ಕೆಲವು ಇಂಗ್ಲಿಷ್ ಅಲ್ಲದ ಭಾಷೆಗಳನ್ನು ಅರ್ಥಮಾಡಿಕೊಳ್ಳಲು ಅಪ್ಲಿಕೇಶನ್ ತಡಕಾಡುವ ಸಾದ್ಯತೆ ಇದೆ.

ಕ್ಲಬ್‌ಹೌಸ್‌

ಇದಲ್ಲದೆ, ಕ್ಲಬ್‌ಹೌಸ್‌ ಅಪ್ಲಿಕೇಶನ್ ನಲ್ಲಿ ಕನ್ನಡ ಭಾಷೆಗೂ ಕೂಡ ಅವಕಾಶ ಸಿಕ್ಕಿದೆ. ಇದರಿಂದ ಸ್ಥಳೀಯ ಭಾಷೆಗಳಲ್ಲಿ ಮುಕ್ತ ಸಂವಾದ ನಡೆಸಲು ಸಾಧ್ಯವಾಗಲಿದೆ. ಇನ್ನು ಕ್ಲಬ್‌ಹೌಸ್‌ ಇತ್ತೀಚಿಗಷ್ಟೆ ತನ್ನ ಪಬ್ಲಿಕ್‌ ರೂಮ್ಸ್‌ನಲ್ಲಿ 30 ಸೆಕೆಂಡುಗಳ ಕ್ಲಿಪ್‌ಗಳನ್ನು ಹಂಚಿಕೊಳ್ಳಲು ಬಳಕೆದಾರರಿಗೆ ಅವಕಾಶ ನೀಡಲು ಮುಂದಾಗಿದೆ. ಇದಕ್ಕಾಗಿ ಕ್ಲಿಪ್ಸ್ ಎಂಬ ಫೀಚರ್ಸ್‌ ಅನ್ನು ಸೇರಿಸುವುದಾಗಿ ಕಂಪನಿಯು ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಘೋಷಿಸಿದೆ. ಇದರಿಂದ ಇಂಟರ್‌ನೆಟ್‌ನಲ್ಲಿ ಹೆಚ್ಚಿನ ಜನರನ್ನು ಪತ್ತೆಹಚ್ಚಲು ಮತ್ತು ಕ್ಲಬ್‌ಗೆ ಸೇರಲು ಸಾಧ್ಯವಾಗುತ್ತದೆ. ಇನ್ನು ನೀವು ರೂಮ್ಸ್‌ ಅನ್ನು ಪ್ರಾರಂಭಿಸಿದಾಗ, ನೀವು ಕ್ಲಿಪ್‌ಗಳನ್ನು ಸಕ್ರಿಯಗೊಳಿಸಬೇಕೆ ಎಂದು ಆಯ್ಕೆ ಸಿಗಲಿದೆ. ಇದು ಪಬ್ಲಿಕ್‌ ರೂಮ್ಸ್‌ಗಳಿಗೆ ಮಾತ್ರ ಲಭ್ಯವಿದ್ದು ನೀವು ಯಾವಾಗ ಬೇಕಾದರೂ ಇದನ್ನು ಟಾಗಲ್ ಮಾಡಬಹುದು. ಈ ಆಯ್ಕೆಯನ್ನು ಖಾಸಗಿ, ಸಾಮಾಜಿಕ ಅಥವಾ ಕ್ಲಬ್ ರೂಮ್ಸ್‌ಗಳಿಗೆ ನೀಡಿಲ್ಲ. ಇದರಲ್ಲಿ ಹೋಸ್ಟ್ ಕ್ಲಿಪ್‌ಗಳನ್ನು ಸಕ್ರಿಯಗೊಳಿಸಿದ ನಂತರ, ಪಬ್ಲಿಕ್‌ ರೂಮ್ಸ್‌ ಗಳಲ್ಲಿ ಲೈವ್ ಕೇಳುಗರು ಹೊಸ ಕತ್ತರಿ ಐಕಾನ್ ಲಬ್ಯವಾಗಲಿದೆ. ಇದರಿಂದ 30 ಸೆಕೆಂಡುಗಳ ಕ್ಲಿಪ್ ಅನ್ನು ರೆಕಾರ್ಡ್ ಮಾಡಲು ಯಾವಾಗ ಬೇಕಾದರೂ ಟ್ಯಾಪ್ ಮಾಡಬಹುದು.

ಕ್ಲಬ್‌ಹೌಸ್

ಇದಲ್ಲದೆ ಮುಂಬರುವ ದಿನಗಳಲ್ಲಿ, ಕ್ಲಬ್‌ಹೌಸ್ ಜನರು ತಮ್ಮ ಲೈವ್ ರೂಮ್‌ಗಳನ್ನು ಇನ್ನಷ್ಟು ನೂತನವಾಗಿ ಅನುಭವಿಸಲು ಹೊಸ ಫಿಚರ್ಸ್‌ ನೀಡಲು ಮುಂದಾಗಿದೆ. ಇದಕ್ಕಾಗಿ ಈವೆಂಟ್‌ ಕ್ರಿಯೆಟರ್ಸ್‌ಗೆ ರಿಪ್ಲೇಸ್‌ ಫೀಚರ್ಸ್‌ ನೀಡಲು ಯೋಜಿಸುತ್ತಿದೆ. ಇದು ಕ್ರಿಯೆಟರ್ಸ್‌ಗೆ ಒಂದು ರೂಮ್ಸ್‌ಅನ್ನು ರೆಕಾರ್ಡ್ ಮಾಡಲು, ಅವರ ಪ್ರೊಫೈಲ್‌ ನಲ್ಲಿ ಸೇವ್‌ ಮಾಡಲು ಅಥವಾ ಆಡಿಯೋವನ್ನು ಬಾಹ್ಯವಾಗಿ ಹಂಚಿಕೊಳ್ಳಲು ಡೌನ್‌ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ. ನೀವು ರೂಮ್ಸ್‌ ಪ್ರಾರಂಭಿಸಿದಾಗ ರಿಪ್ಲೇಗಳನ್ನು ಸಕ್ರಿಯಗೊಳಿಸಬೇಕೆ ಎಂದು ನೀವು ಆಯ್ಕೆ ಮಾಡಬಹುದು. ನಿಮಗೆ ಬೇಕಿದ್ದಲ್ಲಿ ಇದನ್ನು ಆಯ್ಕೆ ಮಾಡಬಹುದು.

Best Mobiles in India

Read more about:
English summary
The newly added closed captioning functionality can automatically add live transcriptions during an audio session.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X