Home
ಸುದ್ದಿಜಾಲ

ವಿಶ್ವವನ್ನೇ ತನ್ನತ್ತ ಸೆಳೆದ ಜಪಾನಿನ 'ಅವತಾರ್ ಎಕ್ಸ್'!..ಇದು ಸಿನಿಮಾ ಅಲ್ಲ!!

2009ರಲ್ಲಿ ತೆರೆಕಂಡ ಹಾಲಿವುಡ್‌ನ ಅವತಾರ್ ಸಿನಿಮಾ ನೋಡಿದ್ದವರಿಗೆ ಮಾನವರು ಇತರ ಗ್ರಹಕ್ಕೆ ಹೋಗುವ ಕಲ್ಪನೆ ಮೂಡುತ್ತದೆ. ಈಗ ಜಪಾನ್‌ನಲ್ಲಿ ಇದೇ ರೀತಿಯ 'ಅವತಾರ್ ಎಕ್ಸ್' ಎಂಬ ಯೋಜನೆಯನ್ನು ಸಿದ್ಧವಾಗಿದೆ. ಆದರೆ, ಇದು ಸಿನಿಮಾ ಮಾತ್ರವಲ್ಲ, ನಿಜ ಜೀವನದಲ್ಲಿಯೂ ಇತರ ಗ್ರಹಗಳ ಮೇಲೆ ಮಾನವ ತನ್ನ ಹಿಡಿತ ಸಾಧಿಸಲು ಹೊರಟಿರುವ ಕಥೆ.!

ಹೌದು, ಜಪಾನ್ ದೇಶದ ವಿಮಾನಯಾನ ಸಂಸ್ಥೆಯಾದ ಆಲ್ ನಿಪ್ಪಾನ್ ಏರ್‌ವೇಸ್ಹಾಗೂ ಏರೋಸ್ಪೇಸ್ ಎಕ್ಸ್‌ಪ್ಲೊರೇಷನ್ ಏಜೆನ್ಸಿ ಸೇರಿ ಈ 'ಅವತಾರ್ ಎಕ್ಸ್' ಯೋಜನೆ ರೂಪಿಸಿವೆ. ಈ ಯೋಜನೆ ಅವತಾರ್ ಸಿನಿಮಾದ ಕಥಾವಸ್ತುವನ್ನೇ ಹೋಲುತ್ತದೆಯಾದರೂ, ಮಾನವನ ಬದಲಾಗಿ ರೊಬೊಟ್ ಅನ್ನು ಬೆರೆ ಗ್ರಹಗಳ ಅಂಗಳಕ್ಕೆ ಕಳುಹಿಸುವ ನೈಜ ಯೋಜನೆ ಇದಾಗಿದೆ.

ವಿಶ್ವವನ್ನೇ ತನ್ನತ್ತ ಸೆಳೆದ ಜಪಾನಿನ 'ಅವತಾರ್ ಎಕ್ಸ್'!..ಇದು ಸಿನಿಮಾ ಅಲ್ಲ!!

ಭವಿಷ್ಯದಲ್ಲಿ ಮನುಷ್ಯನನ್ನು ಇತರ ಗ್ರಹಗಳಿಗೆ ಕಳುಹಿಸುವ ಆಲೋಚನೆಗಳಿದ್ದರೂ, ಅವು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿವೆ ಎಂಬುದು ಕೂಡ ಪ್ರಶ್ನೆಯಾಗಿ ಉಳಿದಿರುವುದರಿಂದ ಜಪಾನಿನ ಸಂಸ್ಥೆಗಳು, ಈ ಸಾಹಸಕ್ಕೆ ಮುಂದಾಗಿವೆ. ಹಾಗಾದರೆ, ಏನಿದು ಈ 'ಅವತಾರ್ ಎಕ್ಸ್' ಯೋಜನೆ? ಮೊದಲು ತಯಾರಾಗಿರುವ ಅವತಾರ್ ರೊಬೊಟ್ ಯಾವುದು ಎಂಬುದನ್ನು ಮುಂದೆ ಓದಿ.

ಏನಿದು ಅವತಾರ್ ಎಕ್ಸ್?

ಏನಿದು ಅವತಾರ್ ಎಕ್ಸ್?

ಭವಿಷ್ಯದಲ್ಲಿ ಮನುಷ್ಯನನ್ನು ಇತರ ಗ್ರಹಗಳಿಗೆ ಕಳುಹಿಸುವ ಆಲೋಚನೆಗಳಿದ್ದರೂ, ಅವು ಯಶಸ್ವಿಯಾಗಲಿವೆ ಎಂಬುದು ಪ್ರಶ್ನೆಯಾಗಿ ಉಳಿದಿರುವುದರಿಂದ ಜಪಾನಿನ ಸಂಸ್ಥೆಗಳು ಇದಕ್ಕಾಗಿ ಮೆಲ್ಟ್ಯಾಂಟ್ ಎಂಬ ಅವತಾರ್ ರೊಬೊಟ್ ಅಭಿವೃದ್ಧಿಪಡಿಸಿವೆ. ಇತರೆ ಗ್ರಹಗಳಿಗೆ ನೇರವಾಗಿ ಮನುಷ್ಯನನ್ನು ಕಳುಹಿಸುವ ಬದಲು ರೋಬೊ ಬಳಸಿಕೊಳ್ಳಲು ಕಂಪೆನಿಗಳು ಯೋಚಿಸುತ್ತಿವೆ.

ಅತ್ಯಾಧುನಿಕ ಪ್ರಯೋಗಾಲಯ

ಅತ್ಯಾಧುನಿಕ ಪ್ರಯೋಗಾಲಯ

ಅವತಾರ್ ಎಕ್ಸ್‌ ಪ್ರಯೋಗಕ್ಕಾಗಿ ಜಪಾನ್‌ ದೇಶದ ಕ್ಯೂಷೂ ದ್ವೀಪದ ಒಯಿಟಾ ಪ್ರಾಂತ್ಯದಲ್ಲಿ ದೊಡ್ಡ ಪ್ರಯೋಗಾಲಯ ನಿರ್ಮಾಣವಾಗಲಿದೆ. ಈ ಯೋಜನೆಗೆ ಸಂಬಂಧಿಸಿದ ಹೊಸ ಸಂಶೋಧನೆಗಳೆಲ್ಲವೂ ಅಲ್ಲೇ ನಡೆಯಲಿವೆ ಎಂದು ಸಂಸ್ಥೆಗಳು ತಿಳಿಸಿವೆ. ಇನ್ನು ಈ ತಂತ್ರಜ್ಞಾನವನ್ನು 2020-25ರ ವೇಳೆಗೆ ಅಂತರಿಕ್ಷದಲ್ಲಿ ಪ್ರಾಯೋಗಿಕವಾಗಿ ಪರೀಕ್ಷಿಸಲಾಗುತ್ತದೆ.

ಕಾರ್ಯನಿರ್ವಹಣೆ ಹೇಗಿರಲಿದೆ?

ಕಾರ್ಯನಿರ್ವಹಣೆ ಹೇಗಿರಲಿದೆ?

ಮನುಷ್ಯನು ಆರಾಮವಾಗಿ ಜೀವಿಸಲು ಬೇಕಾದ ಎಲ್ಲ ತಂತ್ರಜ್ಞಾನಗಳನ್ನು ಈ ಅವತಾರ್ ಎಕ್ಸ್‌ನಲ್ಲಿ ಅಭಿವೃದ್ಧಿಪಡಿಸಲಿದ್ದಾರೆ. ಈ ರೋಬೊಗಳನ್ನು ಭೂಮಿಯಿಂದಲೇ ನಿಯಂತ್ರಣ ಮಾಡುವ ತಂತ್ರಜ್ಞಾನ ಇರಲಿದೆ. , ಅನ್ಯಗ್ರಹಗಳ ಮೇಲೆ ಹಾರುವ ವಿಮಾನಗಳನ್ನು ವರ್ಚುವಲ್ ರಿಯಾಲಿಟಿ ತಂತ್ರಜ್ಞಾನದ ನಿಯಂತ್ರಿಸುವ ತಂತ್ರಜ್ಞಾನಗಳ ಅಭಿವೃದ್ಧಿ ಮಾಡಲಾಗುತ್ತದೆ.

ಹ್ಯಾಪ್ಟಿಕ್ ಟೆಕ್ನಾಲಜಿ ಬಳಕೆ!

ಹ್ಯಾಪ್ಟಿಕ್ ಟೆಕ್ನಾಲಜಿ ಬಳಕೆ!

ವರ್ಚುವಲ್ ರಿಯಾಲಿಟಿ ಜೊತೆಗೆ ಇತ್ತೀಚಿಗೆ ಗಮನ ಸೆಳೆದಿರುವ ಹ್ಯಾಪ್ಟಿಕ್ ಟೆಕ್ನಾಲಜಿ ಬಳಕೆ ಮಾಡಲು ಅವತಾರ್ ಎಕ್ಸ್‌ ಪ್ರಯೋಗಾಲಯ ತಯಾರಾಗಿದೆ. ಈ ಹ್ಯಾಪ್ಟಿಕ್ ಟೆಕ್ನಾಲಜಿ ಸ್ಪರ್ಶ, ರುಚಿ, ವಾಸನೆ ಮುಂತಾದ ಅನುಭವ ಉಂಟುಮಾಡುವ ತಂತ್ರಜ್ಞಾನವಾಗಿದ್ದು, ಈಗ ಅವನ್ನು ಕಾರ್ಯರೂಪಕ್ಕೆ ತರಲು ಅವತಾರ್ ಎಕ್ಸ್‌ ಪ್ರಯೋಗಾಲಯ ಮುಂದಾಗಿದೆ.

ಅಂತರಿಕ್ಷ ಕೇಂದ್ರ ನಿಯಂತ್ರಣ!

ಅಂತರಿಕ್ಷ ಕೇಂದ್ರ ನಿಯಂತ್ರಣ!

ಮಾನವ ಚಂದ್ರ, ಮಂಗಳನ ಅಂಗಳದಲ್ಲಿ ಅಂತರಿಕ್ಷ ಕೇಂದ್ರಗಳನ್ನು ಸ್ಥಾಪಿಸಿದರೆ ಅವುಗಳನ್ನು ನಿಯಂತ್ರಿಸುವುದು ಹೇಗೆ ಎಂಬುವ ಅಂಶಗಳು ಕೂಡ ಅವತಾರ್ ಎಕ್ಸ್ ಯೋಜನೆಯ ಭಾಗವಾಗಿವೆ. ಇದೇ ರೀತಿ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸ ಸಹ ಚಂದ್ರನ ಮೇಲೆ ಇಂತಹ ಪ್ರಯೋಗಗಳನ್ನು ಮಾಡಲು ಹೊಸ ಯೋಜನೆಗಳನ್ನು ರೂಪಿಸುತ್ತಿದೆ.

Best Mobiles in India

English summary
The two organisations have announced the launch of ‘AVATAR X’, a programme that they hope will “revolutionise space exploration and development with the use of real-world Avatars”.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+