Home
ಸುದ್ದಿಜಾಲ

ಇನ್ಮುಂದೆ ಈ ಬ್ಯಾಂಕ್‌ ಗ್ರಾಹಕರು ರಿಸ್ಟ್‌ಬ್ಯಾಂಡ್‌ ಮೂಲಕ ಹಣ ಡ್ರಾ ಮಾಡಬಹುದು!

ಟೆಕ್ನಾಲಜಿ ಮುಂದುವರೆದಂತೆ ಎಲ್ಲಾ ವಲಯದಲ್ಲೂ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿದೆ. ಇದಕ್ಕೆ ಬ್ಯಾಂಕಿಂಗ್‌ ವಲಯ ಕೂಡ ಹೊರತಾಗಿಲ್ಲ. ಇದರಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಆಕ್ಸಿಸ್‌ ಬ್ಯಾಂಕ್‌ ಭಾರತದಲ್ಲಿ ಸಂಪರ್ಕವಿಲ್ಲದ ಪಾವತಿಗಳನ್ನು ಉತ್ತೇಜಿಸಲು ಆಕ್ಸಿಸ್ ಬ್ಯಾಂಕ್ ಮೂರು NFC -ಶಕ್ತಗೊಂಡ ವೆರಿಯೆಬಲ್ಸ್‌ ತಂತ್ರಜ್ಞಾನವನ್ನು ಅನಾವರಣಗೊಳಿಸಿದೆ. ಇದನ್ನು ಆಕ್ಸಿಸ್ ಬ್ಯಾಂಕ್ ವೇರ್ ಎನ್ 'ಪೇ ಎಂದು ಹೆಸರಿಸಲಾಗಿದ್ದು, ಇದು ರಿಸ್ಟ್‌ಬ್ಯಾಂಡ್, ಕೀಚೈನ್ ಮತ್ತು ಲೂಪ್ ಮಾದರಿಯಲ್ಲಿದೆ.

ಆಕ್ಸಿಸ್‌ ಬ್ಯಾಂಕ್‌

ಹೌದು, ಆಕ್ಸಿಸ್‌ ಬ್ಯಾಂಕ್‌ ಕಂಟ್ಯಾಕ್ಟ್‌ ಲೇಸ್‌ ಪೇಮೆಂಟ್ಸ್‌ ಅನ್ನು ಉತ್ತೇಜಿಸುವುದಕ್ಕಾಗಿ ವೇರ್‌ ಎನ್‌ ಪೇ ವೆರಿಯೆಬಲ್ಸ್‌ ಬ್ಯಾಂಡ್‌ ಅನ್ನು ಪರಿಚಯಿಸಿದೆ. ಇದನ್ನು ಬಳಸಿ ಬಳಕೆದಾರರು ಫೋನ್ ಬ್ಯಾಂಕಿಂಗ್ ನಡೆಸಬಹುದು. ಇದರಲ್ಲಿ ಫೋನ್‌ ಬ್ಯಾಂಕಿಂಗ್‌ ಗೆ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಆಕ್ಸಿಸ್ ಬ್ಯಾಂಕ್ ಶಾಖೆಗೆ ಭೇಟಿ ನೀಡಬಹುದು. ಡಿವೈಸ್‌ಗಳು NFC ತಂತ್ರಜ್ಞಾನವನ್ನು ಬಳಸುವುದರಿಂದ, ಬಳಕೆದಾರರು POS ಯಂತ್ರದ ಬಳಿ ತೋರಿಸುವ ಮೂಲಕ ಪಾವತಿಗಳನ್ನು ಮಾಡಬಹುದು. ಹಾಗಾದ್ರೆ ಆಕ್ಸಿಸ್‌ ಬ್ಯಾಂಕ್‌ ವೇರ್‌ ಎನ್‌ಪೇ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಆಕ್ಸಿಸ್‌ ಬ್ಯಾಂಕ್‌

ಆಕ್ಸಿಸ್‌ ಬ್ಯಾಂಕ್‌ ವೇರ್‌ ಎನ್‌ ಪೇ ಕಂಟ್ಯಾಕ್ಟ್‌ ಲೇಸ್‌ ಪೇಮೆಂಟ್ಸ್‌ ಮಾಡುವುದಕ್ಕಾಗಿ ಪರಿಚಯಿಸಲಾಗಿದೆ. ಅಲ್ಲದೆ ಆಕ್ಸಿಸ್‌ ಬ್ಯಾಂಕ್‌ ವೇರ್‌ ಎನ್‌ ಪೇ ಇಂಟರ್‌ನೆಟ್ ಸಂಪರ್ಕವಿಲ್ಲದೆ ಹೊಂದಾಣಿಕೆಯ ಡಿವೈಸ್‌ಗಳ ನಡುವೆ ವಾಯರ್‌ಲೆಸ್ ಅಲ್ಪ-ವ್ಯಾಪ್ತಿಯ ಸಂವಹನವನ್ನು NFC ಶಕ್ತಗೊಳಿಸುತ್ತದೆ. ಜೊತೆಗೆ ಕಂಟ್ಯಾಕ್ಸ್‌ ಲೆಸ್‌ ಟ್ರಾನ್ಸಕ್ಷನ್‌ ನಡೆಸಲು ಬಳಕೆದಾರರು ವೇರ್ ಎನ್ ಪೇ ತಂತ್ರಜ್ಞಾನವನ್ನು ಡೆಬಿಟ್ ಕಾರ್ಡ್‌ನಂತೆ ಬಳಸಬಹುದು ಎಂದು ಬ್ಲಾಗ್ ಪೋಸ್ಟ್‌ನಲ್ಲಿ ಆಕ್ಸಿಸ್ ಬ್ಯಾಂಕ್ ವಿವರಣೆ ನೀಡಿದೆ.

ಆಕ್ಸಿಸ್‌ ಬ್ಯಾಂಕ್‌

ಇನ್ನು ಆಕ್ಸಿಸ್‌ ಬ್ಯಾಂಕ್‌ ಗ್ರಾಹಕರ ಉಳಿತಾಯ ಖಾತೆಗೆ ಲಿಂಕ್ ಮಾಡಲಾದ ಪೂರಕ ಪಾವತಿ ಸಾಧನವಾಗಿ ಡಿವೈಸ್‌ಗಳನ್ನು ನೀಡಲಾಗುತ್ತಿದೆ. ಆಕ್ಸಿಸ್ ಬ್ಯಾಂಕ್ ಗ್ರಾಹಕರು ಇದಕ್ಕಾಗಿ ಸೇರ್ಪಡೆ ಶುಲ್ಕ 750 ರೂ (ಜೊತೆಗೆ ಜಿಎಸ್‌ಟಿ) ಮತ್ತು ವಾರ್ಷಿಕ 500 ರೂ (ಜೊತೆಗೆ ಜಿಎಸ್‌ಟಿ) ಪಾವತಿಸಬೇಕಾಗುತ್ತದೆ. ಈ ಚಂದಾದಾರಿಕೆ ಶುಲ್ಕದ ಅಡಿಯಲ್ಲಿ ಬಳಕೆದಾರರು ಕೀಚೈನ್, ಲೂಪ್ ಮತ್ತು ರಿಸ್ಟ್‌ಬ್ಯಾಂಡ್ ಮೂರು ಸಾಧನಗಳನ್ನು ಪಡೆಯುತ್ತಾರೆಯೇ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಇವೆಲ್ಲವೂ NFCಗೆ ಫ್ಲೆಕ್ಸಿ-ಚಿಪ್ ಅನ್ನು ಒಳಗೊಂಡಿರುತ್ತವೆ. ಇದು ಸಂಪರ್ಕವಿಲ್ಲದ ಪಾವತಿಗಳನ್ನು ಸಕ್ರಿಯಗೊಳಿಸುತ್ತದೆ.

ಆಕ್ಸಿಸ್‌ ಬ್ಯಾಂಕ್‌

ಇದಲ್ಲದೆ ಆಕ್ಸಿಸ್‌ ಬ್ಯಾಂಕ್‌ ವೇರ್ ಎನ್ 'ಪೇ ಜೊತೆ ದೈನಂದಿನ ಖರೀದಿ ಮಿತಿಯನ್ನು ಒಂದು ಲಕ್ಷ ರೂ.ಗೆ ನಿಗದಿಪಡಿಸಲಾಗಿದೆ. ಅಲ್ಲದೆ 5,000 ರೂ.ಗಳ ಮೌಲ್ಯದ ವಹಿವಾಟಿಗೆ ಪಿನ್ ಅಗತ್ಯವಿಲ್ಲ ಎಂದು ಆಕ್ಸಿಸ್ ಬ್ಯಾಂಕ್ ತಿಳಿಸಿದೆ. ಆದರೆ ಇದರಲ್ಲಿ ಪಿನ್ ಕೋಡ್ ಹಾಗೂ ಕಂಟ್ಯಾಕ್ಟ್‌ ಲೆಸ್‌ ಪಾವತಿ ಆಯ್ಕೆಯನ್ನು ಸಕ್ರಿಯಗೊಳಿಸಲು ಆಕ್ಸಿಸ್ ಮೊಬೈಲ್ ಅಪ್ಲಿಕೇಶನ್ ಅಗತ್ಯವಿದೆ. ಇನ್ನು ಸೇವೆಗಳ ಅಡಿಯಲ್ಲಿ ಡೆಬಿಟ್ ಕಾರ್ಡ್‌ಗಳಿಗೆ ಹೋಗಿ> Services > Set / Reset Pin > Select Wear N' Pay Device Number >Enter New Pin ಸೆಟ್‌ ಮಾಡಬಹುದಾಗಿದೆ. ಜೊತೆಗೆ ಬಳಕೆದಾರರು ವಹಿವಾಟಿನ ಮಿತಿಯನ್ನು ಅಪ್ಲಿಕೇಶನ್ ಮೂಲಕವೂ ಗ್ರಾಹಕೀಯಗೊಳಿಸಬಹುದು. ಇನ್ನು ಈ ಪ್ರಾಡಕ್ಟ್‌ಗಳನ್ನು ವಿನ್ಯಾಸಗೊಳಿಸಲು ಮತ್ತು ರಚಿಸಲು ಆಕ್ಸಿಸ್‌ ಬ್ಯಾಂಕ್ ಥೇಲ್ಸ್ ಮತ್ತು ಟ್ಯಾಪಿ ಟೆಕ್ನಾಲಜೀಸ್ ಜೊತೆ ಪಾಲುದಾರಿಕೆ ಹೊಂದಿದೆ.

Best Mobiles in India

English summary
Axis Bank launches Wear-N-Pay NFC Payment WristBand, SmartWatch, And Keychain.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+