Ayodhya Shri Ram Mandir: ಅಯೋಧ್ಯಾ ಪ್ರಸಾದ್ ಹೆಸರಿನಲ್ಲಿ ಲಡ್ಡು ಮಾರಾಟ ಮಾಡಿದ್ದ ಅಮೆಜಾನ್ ಮೇಲೆ ಕೇಸ್!
ದೇಶದೆಲ್ಲೆಡೆ ಶ್ರೀ ರಾಮ ಮಂದಿರ ಉದ್ಘಾಟನೆಯ ಸಂಭ್ರಮ ಜೋರಾಗಿದೆ. ಭಕ್ತಿ ಭಾವದಿಂದ ಕೂಡಿರುವ ಈ ಸಮಯವನ್ನು ಸಹ ತನ್ನ ಉಪಯೋಗಕ್ಕೆ ಬಳಸಿಕೊಳ್ಳಲು ಮುಂದಾದ ಅಮೆಜಾನ್ ಸೈಟ್ ಮೇಲೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಕ್ರಮಕ್ಕೆ ಮುಂದಾಗಿದೆ. www.amazon.in ನಲ್ಲಿ 'ಶ್ರೀ ರಾಮಮಂದಿರ ಅಯೋಧ್ಯಾ ಪ್ರಸಾದ್' ಹೆಸರಿನಲ್ಲಿ ಸಿಹಿತಿಂಡಿಗಳನ್ನು ಮಾರಾಟ ಮಾಡುವ ಮೂಲಕ ಭಕ್ತರಿಗೆ ಮೋಸ ಮಾಡಿದೆ.
ಹೌದು, ಅಯೋಧ್ಯಾ ರಾಮಮಂದಿರದ ಪ್ರಸಾದ (Ayodhya Shri Ram Mandir) ಎಂದು ಲಡ್ಡು ಮಾರಾಟ ಮಾಡುತ್ತಿದ್ದ ಅಮೆಜಾನ್ ವಿರುದ್ದ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಕ್ರಮವನ್ನು ಪ್ರಾರಂಭಿಸಿದೆ. 'ಶ್ರೀರಾಮ ಮಂದಿರ ಅಯೋಧ್ಯಾ ಪ್ರಸಾದ್' ನೆಪದಲ್ಲಿ ಅಮೆಜಾನ್ ಮೋಸದ ವ್ಯಾಪಾರ ಮಾಡುತ್ತಿದೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ಆರೋಪ ಮಾಡಿತ್ತು, ಇದರ ಆಧಾರದ ಮೇಲೆ ಈ ಕ್ರಮವನ್ನು ಪ್ರಾರಂಭಿಸಲಾಗಿದೆ. ಹಾಗಾದ್ರೆ ಅಮೆಜಾನ್ ಅಯೋಧ್ಯಾ ರಾಮ ಮಂದಿರದ ಹೆಸರಿನಲ್ಲಿ ಏನೆಲ್ಲಾ ಮೋಸ ಮಾಡಿತ್ತು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶ್ರೀ ರಾಮಮಂದಿರ ಅಯೋಧ್ಯಾ ಪ್ರಸಾದ್ ಹೆಸರಿನಲ್ಲಿ ಸಿಹಿ ತಿಂಡಿಗಳನ್ನು ಮಾರಾಟ ಮಾಡುತ್ತಿದ್ದ ಅಮೆಜಾನ್‌ಗೆ ಇದೀಗ ಕಾನೂನ ಸಂಕಷ್ಟ ಎದುರಾಗಿದೆ. ಜನಪ್ರಿಯ ಇ-ಕಾಮರ್ಸ್ ತಾಣವಾಗಿರುವ ಅಯೋಧ್ಯಾ ಪ್ರಸಾದ್, ರಘುಪತಿ ತುಪ್ಪದ ಲಡ್ಡು, ಖೋಯಾ ಖೋಬಿ ಲಡ್ಡು ಮುಂತಾದ ಹೆಸರುಗಳಲ್ಲಿ ಪ್ರಸಾದವನ್ನು ಮಾರಟ ಮಾಡಲಾಗುತ್ತಿತ್ತು. ಇದರ ವಿರುದ್ದ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ (ಸಿಎಐಟಿ) ದೂರು ದಾಖಲಿಸಿದೆ. ಇದೇ ಕಾರಣಕ್ಕೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಕ್ರಮಕ್ಕೆ ಮುಂದಾಗಿದೆ.
ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಪರಿಶೀಲನೆ ನಡೆಇದ್ದು, ಅಮೆಜಾನ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ (www.amazon.in) ನಲ್ಲಿ "ಶ್ರೀ ರಾಮಮಂದಿರ ಅಯೋಧ್ಯಾ ಪ್ರಸಾದ್" ಎಂದು ಹೇಳಿಕೊಳ್ಳುವ ವಿವಿಧ ಸಿಹಿತಿಂಡಿಗಳು / ಆಹಾರ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿವೆ ಎಂದು CCPA ಹೇಳಿದೆ. ಇದು ಗ್ರಾಹಕರನ್ನು ತಪ್ಪುದಾರಿಗೆ ಎಳೆಯಲಿದ್ದು, ಅಮೆಜಾನ್ ಮಾಡಿರುವುದು ಮೋಸದ ವ್ಯಾಪಾರ ಎಂದು ಹೇಳಿದೆ. ಅಲ್ಲದೆ ಸೂಕ್ತ ಉತ್ತರ ನೀಡುವಂತೆ ಅಮೆಜಾನ್‌ಗೆ ನೋಟಿಸ್ ಕೂಡ ನೀಡಿದೆ.

ಗ್ರಾಹಕ ರಕ್ಷಣೆ (ಇ-ಕಾಮರ್ಸ್) ನಿಯಮಗಳು, 2020 ರ ನಿಯಮ 4(3) ರ ಅಡಿಯಲ್ಲಿ ಯಾವುದೇ ಇ-ಕಾಮರ್ಸ್ ಯೂನಿಟ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮೋಸದ ವ್ಯಾಪಾರ ಕ್ರಮವನ್ನು ಅಳವಡಿಸಿಕೊಳ್ಳುವುದಿಲ್ಲ ಎಂದು ನಮೂದಿಸಬೇಕು. ಇದಲ್ಲದೆ, ಗ್ರಾಹಕ ಸಂರಕ್ಷಣಾ ಕಾಯಿದೆ, 2019 ರ ಸೆಕ್ಷನ್ 2(28) ರ ಅಡಿಯಲ್ಲಿ ವ್ಯಾಖ್ಯಾನಿಸಲಾದ ' Misleading advertisement' ಎಂದರೆ ಯಾವುದೇ ರೀತಿಯ ಜಾಹೀರಾತು, ಅಂತಹ ಉತ್ಪನ್ನ ಅಥವಾ ಸೇವೆಯನ್ನು ತಪ್ಪಾಗಿ ವಿವರಿಸುವುದರ ವಿರುದ್ದ ಕ್ರಮ ತೆಗೆದುಕೊಳ್ಳಬಹುದು.
ಸದ್ಯ CCPA ಅಮೆಜಾನ್‌ಗೆ ನೋಟಿಸ್ ಜಾರಿ ಮಾಡಿದ್ದು, ಏಳು ದಿನಗಳೊಳಗೆ ಪ್ರತಿಕ್ರಿಯೆಯನ್ನು ನೀಡುವಂತೆ ಹೇಳಿದೆ. ಒಂದು ವೇಳೆ ಅಮೆಜಾನ್ ಸೂಕ್ತ ಉತ್ತರವನ್ನು ನೀಡುವುದಕ್ಕೆ ವಿಫಲವಾದರೆ ಗ್ರಾಹಕರ ಸಂರಕ್ಷಣಾ ಕಾಯ್ದೆ, 2019 ರ ನಿಬಂಧನೆಗಳ ಅಡಿಯಲ್ಲಿ ಅವರ ವಿರುದ್ಧ ಅಗತ್ಯ ಕ್ರಮವನ್ನು ಪ್ರಾರಂಭಿಸಬಹುದು ಎಂದು ಅದು ಹೇಳಿದೆ.

ಅಮೆಜಾನ್ ಅಯೋಧ್ಯೆ ರಾಮಮಂದಿರ ಪ್ರಸಾದ್ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದ ಉತ್ಪನ್ನಗಳ ವಿವರ
* ಶ್ರೀ ರಾಮಮಂದಿರ ಅಯೋಧ್ಯಾ ಪ್ರಸಾದ್ 250ಗ್ರಾಂಗಳು
* ರಘುಪತಿ ತುಪ್ಪದ ಲಾಡೂ 250gm ಪ್ಯಾಕ್
* ಖೋಯಾ ಖೋಬಿ ಲಾಡೂ (3 ಪ್ರಸಾದ್- 1x250 ಗ್ರಾಂ ಪ್ಯಾಕ್)
* ತುಪ್ಪದ ಬೂಂದಿ ಲಾಡೂ - (ಟೈಪ್ 4 ಪ್ರಸಾದ್- 1x250 ಗ್ರಾಂ ಪ್ಯಾಕ್)
* ಶ್ರೀ ರಾಮ ಮಂದಿರ ಅಯೋಧ್ಯಾ ಪ್ರಸಾದ್ - 250 ಗ್ರಾಂ
* ದೇಸಿ ಹಸುವಿನ ಹಾಲು ಪೇಡಾ - (ಟೈಪ್ 5 ಪ್ರಸಾದ್- 1x250 ಗ್ರಾಂ ಪ್ಯಾಕ್)
ಅಮೆಜಾನ್ ಹೇಳಿದ್ದೇನು?
ಅಮೆಜಾನ್ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರದಿಂದ (CCPA) ಸ್ವೀಕರಿಸಿರುವ ನೋಟಿಸ್ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇವೆ. ನಮ್ಮ ಪ್ಲಾಟ್‌ಫಾರ್ಮ್‌ನಲ್ಲಿ ಆಗಿರುವ ಕಾನೂನು ಉಲ್ಲಂಘನೆಗಳಿಗಾಗಿ ತನಿಖೆ ನಡೆಸುತ್ತೇವೆ. ನಮ್ಮ ನೀತಿಗಳ ಪ್ರಕಾರ ನಾವು ಅಂತಹ ಪಟ್ಟಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಅಮೆಜಾನ್ ವಕ್ತಾರರು ತಿಳಿಸಿದ್ದಾರೆ.


Click it and Unblock the Notifications








