ಆನ್‌ಲೈನಿನಲ್ಲಿ ಬಾಹುಬಲಿ 2 ಟಿಕೆಟ್ ಬುಕ್ ಮಾಡಿದ್ದಿರಾ..? ನಿಮ್ಮ ಹಣದಲ್ಲಿ ಅರ್ಧ ವಾಪಸ್ಸು ಬರಲಿದೆ.

Written By:

ನಾಳೆ ತೆರೆಗೆ ಬರಲಿರುವ ಬಾಹುಬಲಿ 2 ಚಿತ್ರವನ್ನು ಚಿತ್ರಮಂದಿರಗಳಲ್ಲಿ ನೋಡಲು ಅಭಿಮಾನಿಗಳು ಈಗಾಗಲೇ ಕಾತುರರಾಗಿದ್ದು, ಇದಕ್ಕಾಗಿ ಆನ್‌ಲೈನಿನಲ್ಲಿ ಹೆಚ್ಚು ಹಣಕೊಟ್ಟು ಟಿಕೆಟ್ ಬುಕ್ ಮಾಡಿದ್ದಾರೆ. ಆದರೆ ಅವರಿಗೆಲ್ಲ ಸಿಹಿ ಸುದ್ದಿಯೊಂದು ದೊರೆತಿದೆ. ಯಾರು ಅತೀ ಹೆಚ್ಚು ದುಡ್ಡು ಕೊಟ್ಟು ಟಿಕೆಟ್ ಬುಕ್ ಮಾಡಿದ್ದಾರೆಯೋ ಅವರಿಗೆಲ್ಲ ಅರ್ಧಕ್ಕೂ ಹೆಚ್ಚು ಹಣ ವಾಪಸ್ ಬರಲಿದೆ.

ಆನ್‌ಲೈನಿನಲ್ಲಿ ಬಾಹುಬಲಿ 2 ಟಿಕೆಟ್ ಬುಕ್ ಮಾಡಿದ್ದಿರಾ..?

ಕಾರಣ ರಾಜ್ಯದಾದ್ಯಂತ ಎಲ್ಲ ಚಿತ್ರಮಂದಿರಗಳಲ್ಲಿ ಟಿಕೆಟ್‌ ದರ ಗರಿಷ್ಠ ₹ 200ಕ್ಕೆ ನಿಗದಿ ಮಾಡಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ. ಏಪ್ರಿಲ್‌ 27ರಿಂದ ಏಕರೂಪ ಪ್ರವೇಶ ದರ ನೀತಿಯು ಅನುಷ್ಠಾನಕ್ಕೆ ಬರಲಿದೆ. ಹಾಗಾಗಿ ಹೆಚ್ಚಿನ ಟಿಕೆಟ್ ದರ ಪಡೆದವರು ಹೆಚ್ಚಿನ ಹಣವನ್ನು ಹಿಂತಿರುಗಿಸಬೇಕಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಂಗಳೂರಿಗರ ಜೇಬಿಗೆ ಕನ್ನ:

ಬೆಂಗಳೂರಿಗರ ಜೇಬಿಗೆ ಕನ್ನ:

ಬಾಹುಬಲಿ 2 ಟಿಕೆಟ್ ದರ ದಲ್ಲಿ ಬೆಂಗಳೂರಿಗರ ಜೇಬಿಗೆ ಕನ್ನ ಹಾಕಲಾಗುತ್ತಿದೆ. ರಾಜಧಾನಿಯಲ್ಲಿ ರೂ.500-600 ‘ಬಾಹುಬಲಿ-2' ಚಿತ್ರದ ಟಿಕೆಟ್ ಬೆಲೆ ಬೆಲೆಯಾಗಿದ್ದು, ಆದರೆ ಹೈದರಾಬಾದ್‌ ಮತ್ತು ಚೆನ್ನೈ ನಗರಗಳಲ್ಲಿ ಕೇವಲ ರೂ.120 250 ಮಾತ್ರ. ಅದುವೇ ಮಲ್ಟಿಪ್ಲೆಕ್ಸ್‌ಗಳಲ್ಲಿ.

 ತೆರಿಗೆಯೂ ಸೇರಿ 200 ರೂ ಮಾತ್ರ:

ತೆರಿಗೆಯೂ ಸೇರಿ 200 ರೂ ಮಾತ್ರ:

ಸದ್ಯ ಇತರೇ ರಾಜ್ಯಗಳಿಗೆ ಹೊಲಿಕೊಂಡರೆ ಬೆಂಗಳೂರಿನಲ್ಲಿ ಸಿನಿಮಾ ಟಿಕೆಟ್ ದರವೂ ಗರಿಷ್ಠವಾಗಿದ್ದು, ಇದಕ್ಕೆ ಕಡಿವಾಣ ಹಾಕುವ ಸಲುವಾಗಿ ರಾಜ್ಯ ಸರಕಾರ ಏಕರೂಪ ಟಿಕೆಟ್ ದರವನ್ನು ಜಾರಿಗೆ ತಂದಿದೆ. ಅಲ್ಲದೇ ಗರಿಷ್ಠ 200 ರೂ. ದರವು ತೆರಿಗೆಯನ್ನೂ ಒಳಗೊಂಡಿರುತ್ತದೆ ಎನ್ನಲಾಗಿದೆ.

ನಿಮ್ಮ ಹಣ ವಾಪಸ್ ಪಡೆಯಿರಿ:

ನಿಮ್ಮ ಹಣ ವಾಪಸ್ ಪಡೆಯಿರಿ:

ಈಗಾಗಲೇ ಬಾಹುಬಲಿ ಸಿನಿಮಾವನ್ನು ನೋಡಲು ಪ್ರೇಕ್ಷಕರು ರೂ.300 ರಿಂದ 500 ನೀಡಿ ಟಿಕೆಟ್ ಬುಕ್ ಮಾಡಿದ್ದಾರೆ. ಹಾಗಾಗಿ ರೂ. 200ಕ್ಕಿಂತ ಹೆಚ್ಚಿನ ಹಣ ನೀಡಿ ಟಿಕೆಟ್‌ ಬುಕ್ ಮಾಡಿದ್ದರೆ ನಿಮ್ಮ ಹೆಚ್ಚುವರಿ ಹಣವನ್ನು ವಾಪಸ್ ಪಡೆಯಬಹುದು.

ಹಣ ಕೊಡಲಿಲ್ಲ ಅಂದ್ರೆ ಕೇಸ್ ಹಾಕಬಹುದು:

ಹಣ ಕೊಡಲಿಲ್ಲ ಅಂದ್ರೆ ಕೇಸ್ ಹಾಕಬಹುದು:

ಈಗಾಗಲೇ ಆನ್‌ಲೈನಿನಲ್ಲಿ ಬಾಹುಬಲಿ 2 ಟಿಕೆಟ್ ಬುಕ್ ಮಾಡಿರುವವರು ತಮ್ಮ ಹಣವನ್ನು ವಾಪಸ್ ಪಡೆಯಬಹುದಾಗಿದ್ದು, ಹಣ ವಾಪಸ್ ಬರಲಿಲ್ಲ ಎಂದರೆ ಕೇಸ್ ಹಾಕಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
The Karnataka government has decided to cap all film ticket prices at Rs 200, and Baahubali 2 will be the first to implement this fee structure. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot