Subscribe to Gizbot

ಟೆನ್ನೀಸ್‌ ಪ್ರಿಯರಿಗಾಗಿ ಹೊಸ ಸ್ಮಾರ್ಟ್‌ ಟೆನ್ನೀಸ್‌ ರ್‍ಯಾಕೆಟ್‌

Posted By:

ಟೆನ್ನೀಸ್‌ ಆಡುವ ಮಂದಿಗೆ ಗುಡ್‌‌ನ್ಯೂಸ್‌. ಇನ್ನು ಮುಂದೆ ನಿಮ್ಮ ಪ್ರತಿ ಆಟದ ಮಾಹಿತಿಗಳನ್ನು ಆಟ ಮಗಿದ ಬಳಿಕ ಸ್ಮಾರ್ಟ್‌ಫೋನಲ್ಲೇ ನೋಡಬಹುದು.

ಹೌದು .ಟೆನ್ನೀಸ್‌ ರ್‍ಯಾಕೆಟ್‌‌ಗಳನ್ನು ತಯಾರಿಸುವ ಬಾಬೊಲ್ಯಾಟ್ ಕಂಪೆನಿ ಹೊಸ ಸ್ಮಾರ್ಟ್‌‌ರ್‍ಯಾಕೆಟ್‌ನ್ನು ಅಭಿವೃದ್ಧಿ ಪಡಿಸಿದೆ. ಈ ರ್‍ಯಾಕೆಟ್‌ನಲ್ಲಿ ನಿಮ್ಮ ಪ್ರತಿಯೊಂದು ಶಾಟ್‌,ನೀವು ಎಷ್ಟು ಸ್ಟ್ರೋಕ್‌ ಹೊಡೆದಿದ್ದಿರಿ,ಸ್ಪಿನ್‌ ಮಾಡಿದ್ದಿರಿ‌‌‌‌ ಎಲ್ಲಾ ಮಾಹಿತಿಗಳು ಸ್ಮಾರ್ಟ್‌‌‌‌ಫೋನಲ್ಲಿ ದಾಖಲಾಗುತ್ತದೆ.ಬ್ಲೂಟೂತ್‌‌,ಅಪ್ಲಿಕೇಶನ್‌ ಮೂಲಕ ಕಾರ್ಯ‌‌ನಿರ್ವ‌ಹಿಸುವ ಈ ರ್‍ಯಾಕೆಟ್‌‌ ತಂತ್ರಜ್ಞಾನ ಟೆನ್ನೀಸ್‌ ಪ್ರಿಯರಿಗೆ ಇಷ್ಟವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ರ್‍ಯಾಕೆಟ್‌‌ನಲ್ಲಿ ಸೆನ್ಸರ್‌:

1


ರ್‍ಯಾಕೆಟ್‌‌‌‌ನಲ್ಲಿ ಕೆಲವು ಸೆನ್ಸರ್‌ಗಳಿದ್ದುಈ ಸೆನ್ಸರ್‌ ಆಟಗಾರ ಪ್ರತಿಯೊಂದು ಸರ್ವಿಸ್‌,ಸ್ಮಾಷ್‌,ಬ್ಯಾಕ್‌ಹ್ಯಾಂಡ್‌ ಎಲ್ಲಾ ಮಾಹಿತಿಗಳು ದಾಖಲಾಗುತ್ತದೆ.

 ಆರು ಗಂಟೆ:

2


‌ಒಮ್ಮೆ ಫುಲ್‌ಚಾರ್ಜ್‌ ಮಾಡಿದ್ದಲ್ಲಿ ನಿರಂತರವಾಗಿ ಆರು ಗಂಟೆಗಳ ಕಾಲ ಆಟದ ಮಾಹಿತಿಯನ್ನು ದಾಖಲಿಸುವ ಸಾಮರ್ಥ್ಯ ಈ ರ್‍ಯಾಕೆಟ್‌ಗಿದೆ.

 ಗಾತ್ರ ಮತ್ತು ತೂಕ:

3


ರ್‍ಯಾಕೆಟ್‌ 300 ಗ್ರಾಂ ತೂಕವಿದ್ದು,27 ಇಂಚು ಉದ್ದವಿದೆ.

ಅಪ್ಲಿಕೇಶನ್‌:

4


ಆಟದ ಮಾಹಿತಿ ತಿಳಿಯಲು ಕಂಪೆನಿ ಆಂಡ್ರಾಯ್ಡ್ ಮತ್ತು ಐಓಎಸ್‌ ಆಪ್‌ ಅಭಿವೃದ್ಧಿ ಪಡಿಸಿದೆ.

ಅನುಮತಿ:

5

ಅಂತರಾಷ್ಟ್ರೀಯ ಟೆನ್ನೀಸ್‌ ಫೆಡರೇಶನ್ ಕೆಲವು ನಿಯಮಗಳನ್ನು ಸಡಿಲಿಸಿ ಆಟಗಾರರು ಈ ರ್‍ಯಾಕೆಟ್‌ನ್ನು ಆಟದಲ್ಲಿ ಬಳಸುವುದಕ್ಕೆ ಅನುಮತಿ ನೀಡಿದೆ.

6

ವಿಡಿಯೋ ವೀಕ್ಷಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot