ವಿಶ್ವದ ಮೊದಲ ಮೊಬೈಲ್ 5G ಚಿಪ್‌ಸೆಟ್ ಬಿಡುಗಡೆ!!..ಡೇಟಾ ಸ್ಪೀಡ್ ಎಷ್ಟು ಗೊತ್ತಾ?

ಮುಂದಿನ ತಲೆಮಾರಿನ ಸಂಪರ್ಕ ವ್ಯವಸ್ಥೆಗೆ ‍ಪೂರಕವಾದ ‘ಬಾಲಾಂಗ್ 5ಜಿ01 ಚಿಪ್‌’ ಅನ್ನು ಚೀನಾದ ಪ್ರಖ್ಯಾತ ಮೊಬೈಲ್ ತಯಾರಿಕ ಸಂಸ್ಥೆ ಹುವಾವೇ ಸಿದ್ಧಪಡಿಸಿರುವುದಾಗಿ ಘೋಷಿಸಿದೆ.!!

|

2020ರ ವೇಳೆಗೆ ಭಾರತ ದೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ 5ಜಿ ಸಂಪರ್ಕ ಪೂರೈಕೆ ಪ್ರಾರಂಭವಾಗಲಿದ್ದು, ಅದಕ್ಕೆ ಪೂರಕವಾಗಿ 5Gಯ ಮುಂದಿನ ತಲೆಮಾರಿನ ಸಂಪರ್ಕ ವ್ಯವಸ್ಥೆಗೆ ‍ಪೂರಕವಾದ 'ಬಾಲಾಂಗ್ 5ಜಿ01 ಚಿಪ್‌' ಅನ್ನು ಚೀನಾದ ಪ್ರಖ್ಯಾತ ಮೊಬೈಲ್ ತಯಾರಿಕ ಸಂಸ್ಥೆ ಹುವಾವೇ ಸಿದ್ಧಪಡಿಸಿರುವುದಾಗಿ ಘೋಷಿಸಿದೆ.!!

ವಿಶ್ವದ ಮೊದಲ ಮೊಬೈಲ್ 5G ಚಿಪ್‌ಸೆಟ್ ಬಿಡುಗಡೆ!!..ಡೇಟಾ ಸ್ಪೀಡ್ ಎಷ್ಟು ಗೊತ್ತಾ?

ಬಾಲಾಂಗ್ '5ಜಿ01 ಚಿಪ್‌' ಮುಂದಿನ ತಲೆಮಾರಿನ(5G) ಸಂಪರ್ಕ ವ್ಯವಸ್ಥೆಗೆ ‍ಪೂರಕವಾಗಿದ್ದು, ಮೊಬೈಲ್‌ ಹಾಗೂ ಇತರೆ ಸಂಪರ್ಕ ಸಾಧನಗಳಲ್ಲಿ 5ಜಿಗೆ ಅಗತ್ಯವಿರುವ ವ್ಯವಸ್ಥೆ ಕಲ್ಪಿಸುವುದಾಗಿ ಹುವಾವೇ ಸಂಸ್ಥೆ ಹೇಳಿದೆ. ಹಾಗಾದರೆ, ಹುವಾವೆ ಸಿದ್ದಪಡಿಸಿರುವ '5ಜಿ01 ಚಿಪ್‌' ತಂತ್ರಜ್ಞಾನ ಹೇಗಿದೆ? '5ಜಿ01 ಚಿಪ್‌' ಡೇಟಾ ಸ್ಪೀಡ್ ಎಷ್ಟು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಹುವಾವೇ ‘5ಜಿ01 ಚಿಪ್‌’ !!

ಹುವಾವೇ ‘5ಜಿ01 ಚಿಪ್‌’ !!

ಬಾರ್ಸಿಲೋನಾದಲ್ಲಿ ನಡೆದ 2018ನೇ ಸಾಲಿನ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಹುವಾವೇ ಕಂಪೆನಿ ‘5ಜಿ01 ಚಿಪ್‌'ತಯಾರಿಸಿರುವುದಾಗಿ ಘೋಷಿಸಿಕೊಂಡಿದೆ. ಈ ಚಿಪ್‌ಸೆಟ್ 5Gಯ ಮುಂದಿನ ಪೀಳಿಗೆಯ ಸೆಲ್ಯುಲರ್ ನೆಟ್‌ವರ್ಕ್‌ಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ ಎಂದು ಕಂಪೆನಿ ತಿಳಿಸಿದೆ.!!

ಹುವಾವೇಗೆ ಮೊದಲ ಯಶಸ್ಸು!!

ಹುವಾವೇಗೆ ಮೊದಲ ಯಶಸ್ಸು!!

5ಜಿ ಚಿಪ್‌ ತಯಾರಿಕೆಯಲ್ಲಿ ಇಂಟೆಲ್‌, ಕ್ವಾಲ್‌ಕಾಮ್‌ ಹಾಗೂ ಹುವೈ ಕಂಪೆನಿಗಳ ನಡುವೆ ಏರ್ಪಟ್ಟಿರುವ ಪೈಪೋಟಿಯಲ್ಲಿ ಹುವಾವೇ ಸಂಸ್ಥೆ ಮೊದಲಯಶಸ್ಸನ್ನು ಗಳಿಸಿದೆ. ವಿಶ್ವ ಮಾರುಕಟ್ಟೆಗೆ 5G ಸಪೋರ್ಟೆಡ್ ಚಿಪ್‌ಸೆಟ್ ಒದಗಿಸುವಲ್ಲಿ ಮುಂಚೂಣಿಗೆ ಬರಬೇಕು ಎನ್ನುವ ಹುವಾವೆ ಆಸೆ ಕೈಗೂಡಿದೆ.!!

ವಿಶ್ವದ ಮೊದಲ ಕಮರ್ಶಿಯಲ್ 5G ಚಿಪ್‌ಸೆಟ್?

ವಿಶ್ವದ ಮೊದಲ ಕಮರ್ಶಿಯಲ್ 5G ಚಿಪ್‌ಸೆಟ್?

5Gಯ ಮುಂದಿನ ತಲೆಮಾರಿನ ಸಂಪರ್ಕ ವ್ಯವಸ್ಥೆಗೆ ‍ಪೂರಕವಾದ ‘ಬಾಲಾಂಗ್ 5ಜಿ01 ಚಿಪ್‌' ವಿಶ್ವದ ಮೊದಲ 3GPP 5G ಕಮರ್ಶಿಯಲ್ ಚಿಪ್‌ಸೆಟ್ ಆಗಿದೆ. ಬಹುಬೇಗ ಗ್ರಾಹಕ ಸೇವೆಗೆ ಲಭ್ಯವಿರುವ ಮೊದಲ ಕಮರ್ಶಿಯಲ್ 5G ಚಿಪ್‌ಸೆಟ್ ಇದಾಗಿದೆ ಎಂದು ಹುವಾವೆ ಕಂಪೆನಿ ಹೇಳಿಕೊಂಡಿದೆ!!

5G ಡೌನ್‌ಲೋಡ್ ವೇಗ ಎಷ್ಟು?

5G ಡೌನ್‌ಲೋಡ್ ವೇಗ ಎಷ್ಟು?

ಹುವಾವೇ ಕಂಪೆನಿ 'ತಯಾರಿಸಿರುವ ‘5ಜಿ01 ಚಿಪ್‌ ಸೆಟ್ ಮೂಲಕ ಪ್ರತಿ ಸೆಕೆಂಡ್‌ಗೆ 2.3 ಜಿಬಿ ವೇಗದಲ್ಲಿ ಮಾಹಿತಿ ಡೌನ್‌ಲೋಡ್‌ ಮಾಡಿಕೊಳ್ಳಲು ಸಾಧ್ಯ ಎಂದು ಹುವಾವೇ ಕಂಪೆನಿ ಕಂಪೆನಿ ತಿಳಿಸಿದೆ. ಪ್ರಸ್ತುತ 4G ಗಿಂತ ಹಲವು ಪಟ್ಟು ಹೆಚ್ಚು ವೇಗದಲ್ಲಿ ಇಂಟರ್‌ನೆಟ್ ಬಳಕೆ ವೇಗ ಸಾಧ್ಯವಾಗಲಿದೆ ಎಂದು ಹೇಳಲಾಗಿದೆ.!!

How to find out where you can get your Aadhaar card done (KANNADA)
ಇಂಡಿಯಾದಲ್ಲಿ 5G ಲೋಕ?

ಇಂಡಿಯಾದಲ್ಲಿ 5G ಲೋಕ?

ಕೆಲವೇ ದಿನಗಳ ಹಿಂದಷ್ಟೆ ಭಾರತದಲ್ಲಿ 5G ತಂತ್ರಜ್ಞಾನದ ಯಶಸ್ವಿ ಪರೀಕ್ಷೆಯಲ್ಲಿ ಏರ್‌ಟೆಲ್ ಜತೆ ಭಾಗಿಯಾಗಿದ್ದ ಹುವಾವೆ ಕಂಪೆನಿ ಇದೀಗ ಯಶಸ್ವಿ 5G ಚಿಪ್ಸೆಟ್ ತಯಾರಿಸಿರುವುದು ಇಂಡಿಯಾದಲ್ಲಿ ಬಹುಬೇಗ 5G ಬರುವ ವಿಶ್ವಾಸವನ್ನು ಮೂಡಿಸಿದೆ. ಹುವಾವೆ ಮತ್ತು ಏರ್‌ಟೆಲ್ ಸೇರಿ ಭಾರತದಲ್ಲಿ 5G ಬಾಗಿಲನ್ನು ತೆರೆಯುವ ನಿರೀಕ್ಷೆ ಇದೆ.!!

ಒಮ್ಮೆ ಚಾರ್ಜ್‌ ಮಾಡಿದರೆ 25 ದಿನ ಚಾರ್ಜ್ ನೀಡಲಿದೆಯಂತೆ 'ನೋಕಿಯಾ 8110' 4G ಪೋನ್!!ಒಮ್ಮೆ ಚಾರ್ಜ್‌ ಮಾಡಿದರೆ 25 ದಿನ ಚಾರ್ಜ್ ನೀಡಲಿದೆಯಂತೆ 'ನೋಕಿಯಾ 8110' 4G ಪೋನ್!!

Best Mobiles in India

English summary
Chinese electronic device and smartphone maker Huawei has unveiled Balong 5G01.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X