ಟಿಕ್ ಟಾಕ್ ಆಪ್ ಬ್ಯಾನ್!..ಕೇಂದ್ರ ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್!!

|

ಯುವ ಜನಾಂಗವನ್ನು ಅತಿ ಹೆಚ್ಚು ಆಕರ್ಷಿಸುತ್ತಿರುವ ಜನಪ್ರಿಯ ಶಾರ್ಟ್ ವೀಡಿಯೋ ಸ್ಟ್ರೀಮಿಂಗ್ ಮೊಬೈಲ್ ಆಪ್ ಟಿಕ್ ಟಾಕ್ ಅನ್ನು ತಮಿಳುನಾಡಿನಲ್ಲಿ ನಿಷೇಧಿಸಲಾಗಿದೆ. ಸಾರ್ವಜನಿಕ ಹಿತಾಸಕ್ತಿಯಾಗಿ ದೂರೊಂದನ್ನು ಆಧರಿಸಿ ಇಂತಹ ಆಪ್‌ಗಳು ಯುವಕರ ಭವಿಷ್ಯ ಹಾಗೂ ಮಕ್ಕಳ ಮನೋಭಾವ ಹಾಳು ಮಾಡುತ್ತಿರುವುದರಿಂದ ದೇಶದಲ್ಲೂ ಕೂಡ ಟಿಕ್ ಟಾಕ್ ಡೌನ್‌ಲೋಡ್ ಮಾಡುವುದನ್ನು ತಡೆಯುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ನಿರ್ದೇಶನ ಮಾಡಿದೆ.

ಹೌದು, ಅಶ್ಲೀಲ, ಸ್ಥಳೀಯ ಸಂಸ್ಕೃತಿಗೆ ಧಕ್ಕೆಯಾಗುವ, ಮಕ್ಕಳ ಮೇಲಿನ ದೌರ್ಜನ್ಯದಂಥ ಸಂಗತಿಗಳು ಇರುವುದರಿಂದ ಟಿಕ್ ಟಾಕ್ ಆಪ್ ಅನ್ನು ನಿಷೆಧಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರೋರ್ವರು ನೀಡಿದ ದೂರಿನ ಮೇಲೆ ಟಿಕ್‌ ಟಾಕ್ ಅನ್ನು ನಿಷೇಧಿಸಲಗಿದ್ದು, ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿ ಎನ್ ಕಿರುಬಕರನ್ ಹಾಗೂ ನ್ಯಾಯಮೂರ್ತಿ ಎಸ್ ಸುಂದರ್ ಸೇರಿದ ವಿಭಾಗ ಪೀಠವು ಇಂತಹದೊಂದು ಮಹತ್ತರ ಆದೇಶವನ್ನು ಹೊರಡಿಸಿದೆ.

ಟಿಕ್ ಟಾಕ್ ಆಪ್ ಬ್ಯಾನ್!..ಕೇಂದ್ರ ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್!!

ಟಿಕ್ ಟಾಕ್ನಲ್ಲಿ ಅಶ್ಲೀಲ ಹಾಗೂ ಅಸಭ್ಯ ವೀಡಿಯೋಗಳು ಇವೆ. ಇಂತಹ ಆಪ್‌ಗಳು ಯುವಕರ ಭವಿಷ್ಯ ಹಾಗೂ ಮಕ್ಕಳ ಮನೋಭಾವ ಹಾಳು ಮಾಡುತ್ತಿದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದ್ದು, ಕೇಂದ್ರ ಸರ್ಕಾರ ಟಿಕ್ ಟಾಕ್ ಡೌನ್‌ಲೋಡ್ ಮಾಡುವುದನ್ನು ತಡೆಯಬೇಕಿದೆ ಎಂದು ಪೀಠ ಸ್ಪಷ್ಟಪಡಿಸಿದೆ. ಇದರಿಂದಾಗಿ ವಿಶ್ವದ್ಯಾಂತ 50 ಕೋಟಿಗೂ ಹೆಚ್ಚು ಡೌನ್‌ಲೋಡ್‌ಗಳನ್ನು ಪಡೆದು, ಭಾರತದಲ್ಲೇ 10 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಟಿಕ್‌ಟಾಕ್‌ಗೆ ಕಂಟಕ ಎದುರಾಗಿದೆ.

ಈ ಟಿಕ್‌ಟಾಕ್ ಆಪ್‌ಗಳಲ್ಲಿನ ವಿಡಿಯೋಗಳನ್ನು ನೋಡಿ ಕೆಲವರು ಎಂಜಾಯ್ ಮಾಡುತ್ತಿದ್ದರೆ, ಹಲವರು ಆಪ್‌ನಲ್ಲಿನ ಕೆಲ ವಿಶೇಷ ಫೀಚರ್ಸ್‌ಗಳಿಗೆ ಮನಸೂತು ತಾವೂ ವಿಡಿಯೋ ಮಾಡುತ್ತಿದ್ದಾರೆ. ಲೈಕ್ಸ್, ಕಮೆಂಟ್, ಶೇರ್‌ಗಳ ಲೆಕ್ಕಾಚಾರ ಹಾಕುತ್ತಾ ತಮ್ಮದೇ ಆದ ಫ್ಯಾಂಟಸಿ ಜಗತ್ತನ್ನು ಸೃಷ್ಟಿಸಿಕೊಂಡಿರುವವರು ಅದರ ಗೀಳಿಗೆ ಬಿದ್ದಿದ್ದಾರೆ. ಹಾಗಾಗಿ, ಈ ಟಿಕ್‌ಟಾಕ್ ಆಪ್‌ಗೆ ಅಡಿಕ್ಟ್ ಆಗಿದ್ದರೆ ಅದರಿಂದ ಹೊರಬರುವುದು ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಹಂತಹಂತವಾಗಿ ದೂರಾಗಬೇಕು.

ಹಂತಹಂತವಾಗಿ ದೂರಾಗಬೇಕು.

ಯಾವುದೇ ಗೀಳು ಅಥವಾ ಚಟದಿಂದ ಹೊರಕ್ಕೆ ಬರುವಾಗ ಮನಸ್ಸಿನಲ್ಲಿ ಆಗುವ ಏರಿಳಿತಗಳು ತಾತ್ಕಾಲಿಕ. ಹಾಗಾಗಿ, ಟಿಕ್‌ ಟಾಕ್ ಗೀಳಿಗೆ ಒಳಗಾದವರು ಒಂದೇ ಕ್ಷಣದಲ್ಲಿ ಅದರಿಂದ ಹೊರ ಬರಲು ಸಾಧ್ಯವಿಲ್ಲ. ಹಂತಹಂತವಾಗಿ ಅದರಿಂದ ದೂರಾಗಬೇಕು. ಇದು ಕೂಡ ಒಂದು ರೀತಿಯಲ್ಲಿ ಪೇಸ್‌ಬುಕ್ ರೀತಿಯಲ್ಲಿಯೇ, ಇಷ್ಟವಿಲ್ಲದಿದ್ದರೂ ಬಳಸಲೇಬೇಕಾದ ಪರಿಸ್ಥಿತಿ.

ವೇಳಾಪಟ್ಟಿಯನ್ನು ರಚಿಸಿಕೊಳ್ಳಿ!

ವೇಳಾಪಟ್ಟಿಯನ್ನು ರಚಿಸಿಕೊಳ್ಳಿ!

ಟಿಕ್‌ ಟಾಕ್, ಫೇಸ್‌ಬುಕ್ ಸೇರಿದಂತೆ ಯಾವುದಕ್ಕೇ ನೀವು ಅಡಿಕ್ಟ್ ಆಗಿದ್ದರೆ, ನೀವು ದಿನನಿತ್ಯ ಮಾಡಬೇಕಾದ ಕೆಲಸಗಳ ವೇಳಾಪಟ್ಟಿಯನ್ನು ರಚಿಸಿಕೊಳ್ಳಿ. ಒಮ್ಮೆ ನೀವು ಅದನ್ನು ಪಾಲಿಸುತ್ತಾ ಬಂದರೆ, ಓದು, ಬರಹ, ಊಟ, ಆಟ, ನಿದ್ದೆ ಮತ್ತು ಮನರಂಜನೆ ಹೀಗೆ ಪ್ರತಿಯೊಂದಕ್ಕೂ ಇಂತಿಷ್ಟೇ ಸಮಯ ಅಂತ ನಿಗದಿಯಾಗಿ ಟಿಕ್‌ಟಾಕ್‌ನಿಂದ ದೂರಾಗಬಹುದು.

ಗ್ಯಾಜೆಟ್ ಟೈಮ್‌ ನಿರ್ಧರಿಸಿ

ಗ್ಯಾಜೆಟ್ ಟೈಮ್‌ ನಿರ್ಧರಿಸಿ

ನೀವು ನಿಮ್ಮ ಮೊಬೈಲ್‌ನಿಂದ ಟಿಕ್‌ ಟಾಕ್ ಅನ್ನು ಡಿಲೀಟ್ ಮಾಡಬಹುದು. ಆದರೆ, ನೀವು ಅದಕ್ಕಿಂತಲೂ ಮಾಡಬೇಕಾದ ಕೆಲಸವೆಂದರೆ, ಸ್ಕ್ರೀನ್‌ಟೈಮ್‌ ಅಥವಾ ಗ್ಯಾಜೆಟ್ ಟೈಮ್‌ಗೆ ನಿಗದಿಯಾಗಿರುವ ಸಮಯದಲ್ಲಿ ಮಾತ್ರ ಮೊಬೈಲ್‌ ಬಳಸುವುದು. ಶುರುವಿನಲ್ಲಿ ಸ್ಕ್ರೀನ್‌ಟೈಮ್‌ಗೆ ಒಂದು ಗಂಟೆ ನಿಗದಿಸಿದ್ದರೆ, ಕ್ರಮೇಣ ಅದನ್ನು ಕಡಿಮೆ ಮಾಡುತ್ತಾ ಬರಬಹುದು.

ಜಾಗೃತಿ ಮೂಡಿಸಿಕೊಳ್ಳಿ

ಜಾಗೃತಿ ಮೂಡಿಸಿಕೊಳ್ಳಿ

ಮಕ್ಕಳೇನಾದರೂ ಈ ಟಿಕ್‌ ಟಾಕ್‌ಗೆ ಅಡಿಕ್ಟ್ ಆಗಿದ್ದರೆ ಹಿರಿಯರು ತಮ್ಮ ಮೊಬೈಲ್‌ ಅನ್ನು ಲಾಕ್‌ ಮಾಡಿ ಇಟ್ಟುಕೊಳ್ಳಬಹುದು. ಆದರೆ, ಇಂದಿನ ಬಹುತೇಕ ಯುವ ಜನಾಂಗವೇ ಈ ಟಿಕ್‌ಟಾಕ್‌ಗೆ ಅಡಿಕ್ಟ್ ಆಗಿರುವುದರಿಂದ ಅದರ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿಕೊಳ್ಳಿ. ಟಿಕ್‌ಟಾಕ್ ಜೊತೆಗೆ ಮೊಬೈಲ್‌ ಗೀಳು ತಪ್ಪಿಸಲು ಇತರೆ ಕಾರ್ಯಗಳತ್ತ ಗಮನಹರಿಸಿ.

ಪ್ರಚೋದನೆಗೆ ಒಳಗಾಗಬೇಡಿ

ಪ್ರಚೋದನೆಗೆ ಒಳಗಾಗಬೇಡಿ

ವಯಸ್ಸಿಗೆ ಮೀರಿದ ಕೆಲವು ಕಂಟೆಂಟ್‌ಗಳು ಮಕ್ಕಳ ಮನಸ್ಸಿನ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ. ಟಿಕ್‌ ಟಾಕ್ ವಿಡಿಯೊಗಳನ್ನು ನೋಡಿ, ನಕ್ಕು ಸುಮ್ಮನಾಗದೇ ಬೇರೆಯವರ ವಿಡಿಯೊಗಳನ್ನು ನೋಡಿ ಪ್ರಚೋದನೆಗೆ ಒಳಗಾಗುತ್ತಿದ್ದಾರೆ. ನೀವು ಯಾವುದೇ ಕಾರಣಕ್ಕೂ ಪ್ರಚೋದನೆಗೆ ಒಳಗಾಗಬೇಡಿ. ಸೆಲಬ್ರಿಟಿ ಭ್ರಮೆಯ ಬಲೂನಿಗೆ ಸೂಜಿ ಚುಚ್ಚಿದಂತೆ ಇರುತ್ತದೆ.

Best Mobiles in India

English summary
Ban TikTok, It's "Encouraging Pornography": Madras High Court To Centre. to know more viswit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X