Home
ಸುದ್ದಿಜಾಲ

ಬೆಂಗಳೂರು ಐಟಿ ಕಂಪೆನಿಯ ಟೆಕ್ಕಿಗೆ 12.85 ಲಕ್ಷ ರೂ ಯಾಮಾರಿಸಿದ ವಂಚಕರು!

ಫಾರ್ಟ್‌ ಟೈಂ ಜಾಬ್‌ ಹೆಸರಿನಲ್ಲಿ ಹಣ ಪಡೆದು ವಂಚನೆ ಮಾಡುವ ಪ್ರಕರಣಗಳು ಹೊಸದೇನಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿ ವಂಚಿಸುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇಂತಹ ವಂಚಕರಿಂದ ವಂಚನೆ ಹೋಗುತ್ತಿರುವವರಲ್ಲಿ ಹೆಚ್ಚಿನ ಮಂದಿ ಟೆಕ್ಕಿಗಳು ಅನ್ನೊದು ವಿಪರ್ಯಾಸ ಸಂಗತಿಯಾಗಿದೆ.

ಹೌದು, ಆನ್‌ಲೈನ್‌ನಲ್ಲಿ ಪಾರ್ಟ್‌ ಟೈಂ ಜಾಬ್‌ ನೀಡುವುದಾಗಿ ವಂಚಿಸುವ ಪ್ರಕರಣಗಳು ದಿನನಿತ್ಯ ನಡೆಯುತ್ತಿವೆ. ಇದಕ್ಕೆ ಬೆಂಗಳೂರು ಕೂಡ ಹೊರತಾಗಿಲ್ಲ, ಬೆಂಗಳೂರು ಮೂಲದ ಐಟಿ ಕಂಪೆನಿಯಲ್ಲಿ ಕೆಸಲ ನಿರ್ವಹಿಸುತ್ತಿರುವ ಟೆಕ್ಕಿಯೊಬ್ಬ ಆನ್‌ಲೈನ್‌ ವಂಚಕರ ಜಾಲಕ್ಕೆ ಸಿಲುಕಿ 12.85 ಲಕ್ಷ ರೂ. ಕಳೆದುಕೊಂಡಿರುವ ಪ್ರಕರಣ ನಡೆದಿದೆ. ಹಾಗಾದ್ರೆ ಬೆಂಗಳೂರಿನ ಟೆಕ್ಕಿ ಹಣ ಕಳೆದುಕೊಂಡಿದ್ದು ಹೇಗೆ? ವಂಚಕರು ಇವರಿಂದ ಹಣ ಎಗರಿಸಿದ್ದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬೆಂಗಳೂರು ಐಟಿ ಕಂಪೆನಿಯ ಟೆಕ್ಕಿಗೆ 12.85 ಲಕ್ಷ ರೂ ಯಾಮಾರಿಸಿದ ವಂಚಕರು!

ಬೆಂಗಳೂರಿನ ಐಟಿ ಕಂಪೆನಿಯಲ್ಲಿ ಕೆಲಸ ಮಾಡುವ ಪುಣೆ ಮೂಲದ ಟೆಕ್ಕಿ ಸೈಬರ್‌ ಸ್ಕ್ಯಾಮ್‌ನಲ್ಲಿ 12.85 ಲಕ್ಷ ರೂ ಕಳೆದುಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ವಿವಿಧ ವಿಧಾನಗಳ ಮೂಲಕ ಹೆಚ್ಚುವರಿ ಆದಾಯಗಳಿಸಬಹುದು ಎಂಬ ವಂಚಕರ ಮಾತಿಗೆ ಮರುಳಾಗಿ ಟೆಕ್ಕಿ ಹಣ ಕಳೆದುಕೊಂಡಿದ್ದಾರೆ. ಪಾರ್ಟ್‌ ಟೈಂ ಜಾಬ್‌ ಹೆಸರಿನಲ್ಲಿ ವಂಚಿಸಿರುವ ವಂಚಕರು ಟೆಕ್ಕಿಗೆ ಗೂಗಲ್‌ನಲ್ಲಿ ಪಾಸಿಟಿವ್‌ ರಿವ್ಯೂ ಕಾಮೆಂಟ್‌ ನೀಡಿದರೆ ನಿಮಗೆ ಹೆಚ್ಚಿನ ಹಣ ಸಿಗಲಿದೆ ಎಂದು ಹೇಳಿ ವಂಚಿಸಿದ್ದಾರೆ ಎನ್ನಲಾಗಿದೆ.

ವರದಿಗಳ ಪ್ರಕಾರ ವಂಚಕರು ಟೆಕ್ಕಿಗೆ ನೀವು ಗೂಗಲ್‌ ರಿವ್ಯೂನಲ್ಲಿ ಪಾಸಿಟಿವ್‌ ಕಾಮೆಂಟ್‌ಗಳನ್ನು ಪೋಸ್ಟ್‌ ಮಾಡಿದರೆ ಹಣ ಸಿಗಲಿದೆ ಎಂದು ಹೇಳಿದ್ದಾರೆ. ನೀವು ಹೆಚ್ಚಿನ ಪೋಸ್ಟ್‌ ಮಾಡುತ್ತಾ ಹೋದಂತೆ ಹೆಚ್ಚುವರಿ ಹಣ ಸಿಗಲಿದೆ ಎಂದು ವಂಚಕರು ನಂಬಿಸಿದ್ದಾರೆ. ಅಲ್ಲದೆ ರಿವ್ಯೂ ಪೋಸ್ಟ್‌ ಮಾಡುವುದಕ್ಕಾಗಿ ಮೆಸೇಜ್‌ ಅನ್ನು ಕಳುಹಿಸಿ ಅದನ್ನು ಕ್ಲಿಕ್‌ ಮಾಡಲು ಸೂಚಿಸಿದ್ದಾರೆ. ಸಂದೇಶವನ್ನು ಕ್ಲಿಕ್‌ ಮಾಡಿ ರಿವ್ಯೂ ನೀಡಿದ ನಂತರ ಅವರ ಖಾತೆಗೆ 150ರೂ. ಬಂದಿದೆ. ಇದರಿಂದ ಟೆಕ್ಕಿ ಇನ್ನು ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ವಂಚಕರನ್ನು ಮತ್ತೆ ಸಂಪರ್ಕಿಸಿದ್ದಾರೆ. ಆದರೆ ನಂತರ ನಡೆದಿರುವುದು ಭಾರಿ ಮೋಸ.

ಬೆಂಗಳೂರು ಐಟಿ ಕಂಪೆನಿಯ ಟೆಕ್ಕಿಗೆ 12.85 ಲಕ್ಷ ರೂ ಯಾಮಾರಿಸಿದ ವಂಚಕರು!

ಸೈಬರ್‌ ವಂಚಕರು ಟೆಕ್ಕಿಯ ವಿಶ್ವಾಸವನ್ನು ಗಳಿಸಿದ್ದಾರೆ. ನಂತರ ತಮ್ಮ ಕೈ ಚಳಕ ತೋರಲು ಮುಂದಾಗಿದ್ದಾರೆ. ಅದರಂತೆ ಟೆಕ್ಕಿಗೆ ನೀವು ಹೆಚ್ಚಿನ ಆಧಾರ ಗಳಿಸಬೇಕಾದರೆ ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕು, ಅಲ್ಲದೆ ನೀವು ನಿಮ್ಮ ರಿವ್ಯೂಗಳನ್ನು ನೀಡಿದ ನಂತರ ನಿಮ್ಮ ಹಣವನ್ನು ವಾಪಾಸ್‌ ಮಾಡಲಾಗುತ್ತದೆ ಎಂದು ಭರವಸೆಯನ್ನು ಸಹ ನೀಡಿದ್ದಾರೆ. ಸುಲಭವಾಗಿ ಹಣಗೊಳಿಸುವ ಆಸೆ ಇಟ್ಟುಕೊಂಡ ಟೆಕ್ಕಿ ವಂಚಕರು ಹೇಳಿದ್ದಂತೆ ಹಲವು ವಹಿವಾಟುಗಳ ಮೂಲಕ 12.85 ಲಕ್ಷ ರೂ. ತನಕ ವರ್ಗಾಯಿಸಿದ್ದಾರೆ.

ಹಣವನ್ನು ಪಾವತಿ ಮಾಡಿದ ನಂತರ ಟೆಕ್ಕಿ ಸೈಬರ್‌ ವಂಚಕರನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ ಅವರು ಸಂಪರ್ಕಕ್ಕೆ ಬಂದಿಲ್ಲ. ಆಗ ಟೆಕ್ಕಿಗೆ ತಾನು ಮೋಸ ಹೋಗಿರುವುದು ತಿಳಿದಿದೆ. ಕೂಡಲೇ ಟೆಕ್ಕಿ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಇತ್ತ ಹಣವೂ ಇಲ್ಲ, ಅತ್ತ ಪಾರ್ಟ್‌ ಟೈಂ ಜಾಬ್‌ ಕೂಡ ಇಲ್ಲ ಎನ್ನುವಂತಾಗಿದೆ ಟೆಕ್ಕಿಯ ಪರಿಸ್ಥಿತಿ.

ಬೆಂಗಳೂರು ಐಟಿ ಕಂಪೆನಿಯ ಟೆಕ್ಕಿಗೆ 12.85 ಲಕ್ಷ ರೂ ಯಾಮಾರಿಸಿದ ವಂಚಕರು!

ಇತ್ತೀಚಿಗೆ ಇಂತಹದ್ದೇ ಪ್ರಕರಣದಲ್ಲಿ ಗುರುಗ್ರಾಮದ ನ್ಯೂ ಕಾಲೋನಿ ನಿವಾಸಿಯಾಗಿರುವ ಮೀರಾ ಎಂಬ ಮಹಿಳೆ ಕೂಡ ಹಣ ಕಳೆದುಕೊಂಡ ಘಟನೆ ವರದಿಯಾಗಿದೆ. ಇಲ್ಲಿಯೂ ಸಹ ಮಹಿಳೆ ಪಾರ್ಟ್‌ ಟೈಂ ಜಾಬ್‌ಗಾಗಿ ಟೆಲಿಗ್ರಾಮ್‌ನಲ್ಲಿ ಸರ್ಚ್‌ ಮಾಡಿದ್ದಾಳೆ. ಇದನ್ನೇ ಆಧಾರವಾಗಿಟ್ಟುಕೊಂಡ ತೇಜಸ್ವಿ ಎಂಬ ಮಹಿಳೆ ಮೀರಾಳಿಗೆ ವಾಟ್ಸಾಪ್‌ನಲ್ಲಿ ಉದ್ಯೋಗ ಸಂಬಂಧಿತ ಸಂದೇಶ ಕಳುಹಿಸಿದ್ದಾಳೆ. ಅಲ್ಲದೆ Bitmaxfilm.com ಅಪ್ಲಿಕೇಶನ್‌ನಲ್ಲಿ ನೀವು ಸಿನಿಮಾದ ರಿವ್ಯೂ ಹಾಗೂ ರೇಟಿಂಗ್‌ ನೀಡಿದರೆ ನಿಮಗೆ ಹಣ ಸಿಗಲಿದೆ ಎಂದು ಹೇಳಿದ್ದಾಳೆ. ಪ್ರತಿ ದಿನ ಒಂದು ಸೆಟ್‌ ಪೂರ್ಣಗೊಳಿಸಿದರೆ ಹಣ ಸಿಗಲಿದೆ ಎಂದು ಹೇಳಿದ್ದಾರೆ. ಅಲ್ಲದೆ ಪ್ರತಿ ಸೆಟ್‌ಗೆ 28 ಚಲನಚಿತ್ರಗಳನ್ನು ರಿವ್ಯೂ ಮತ್ತು ರೇಟಿಂಗ್‌ ಮಾಡಬೇಕಾಗಿದೆ. ಅಲ್ಲದೆ ಇದಕ್ಕಾಗಿ ನಿಮ್ಮ ಅಕೌಂಟ್‌ ಕ್ರಿಯೆಟ್‌ ಮಾಡಲು 10,500 ರೂಪಾಯಿಗಳೊಂದಿಗೆ ರೀಚಾರ್ಜ್ ಮಾಡಬೇಕು ಎಂದಿದ್ದಾರೆ. ಅಲ್ಲದೆ ನೀವು ನಂತರ ನಿಮ್ಮ ಹಣವನ್ನು ನೀವು ಹಿಂದಕ್ಕೆ ಪಡೆಯಬಹುದು ಎಂಬ ಭರವಸೆಯನ್ನು ಸಹ ನೀಡಲಾಗಿದೆ. ಇದನ್ನು ನಂಬಿದ ಸಂತ್ರಸ್ಥೆ ಹಣವನ್ನು ಕಳೆದುಕೊಂಡಿದ್ದಾಳೆ..

Best Mobiles in India

English summary
IT professional lost Rs 12.85 lakh while trying to generate extra income through different methods.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+